
ಬಾರಾಬಂಕಿ (ಉತ್ತರ ಪ್ರದೇಶ) – ಇಲ್ಲಿನ ಔಸನೇಶ್ವರ ಮಹಾದೇವ ದೇವಸ್ಥಾನದಲ್ಲಿ ಜುಲೈ 27ರಂದು ರಾತ್ರಿ 2 ಗಂಟೆಗೆ ಜಲಾಭಿಷೇಕದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ವಿದ್ಯುತ್ ಪ್ರವಾಹ ಹಠಾತ್ತಾಗಿ ಹರಡಿದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಗಾಯಗೊಂಡ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲಾಧಿಕಾರಿ ಶಶಾಂಕ ತ್ರಿಪಾಠಿ ಅವರು ಮಾತನಾಡಿ, ಕೆಲವು ಕೋತಿಗಳು ವಿದ್ಯುತ್ ತಂತಿಯ ಮೇಲೆ ಹಾರಿದವು. ಇದರಿಂದ ತಂತಿ ಕಡಿದು ದೇವಸ್ಥಾನದ ಆವರಣದಲ್ಲಿನ ತಗಡಿನ ಛಾವಣಿಯ ಮೇಲೆ ಬಿದ್ದಿದೆ. ಪರಿಣಾಮವಾಗಿ ವಿದ್ಯುತ್ ಪ್ರವಾಹ ಹರಡಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು ಎಂದು ತಿಳಿಸಿದ್ದಾರೆ.
ಈ ಹಿಂದೆ ಜುಲೈ 27ರಂದು ಉತ್ತರಾಖಂಡದ ಹರಿದ್ವಾರದಲ್ಲಿರುವ ಶ್ರೀ ಮನಸಾದೇವಿ ದೇವಸ್ಥಾನದ ಹೊರಗೆ ವಿದ್ಯುತ್ ಪ್ರವಾಹದ ವದಂತಿ ಹರಡಿದ್ದರಿಂದ ಕಾಲ್ತುಳಿತ ಉಂಟಾಗಿ 8 ಮಂದಿ ಸಾವನ್ನಪ್ಪಿ 30 ಮಂದಿ ಗಾಯಗೊಂಡಿದ್ದರು.
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News
ಗೋಹತ್ಯೆ ಪ್ರಕರಣದಲ್ಲಿ ೩ ಮುಸ್ಲಿಮರಿಗೆ ತಲಾ ೧೦ ವರ್ಷಗಳ ಜೈಲು ಶಿಕ್ಷೆ
ಸರಯೂ ನದಿಯಲ್ಲಿ ಮಾಂಸ-ಮದ್ಯ ಸೇವನೆ; ಮೂವರು ಬಂಧನ : Saryu River Case
ರಾಜ್ಯದಲ್ಲಿ ಶಾಲೆಗಳ ಹತ್ತಿರ ಪಿಜ್ಜಾ-ಬರ್ಗರ್ ಮಾರಾಟಕ್ಕೆ ಶೀಘ್ರದಲ್ಲೇ ನಿಷೇಧ !
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !