|

ನವದೆಹಲಿ – ರಾಜಧಾನಿಯಲ್ಲಿ ಸಕ್ರಿಯವಾಗಿರುವ ಇಸ್ಲಾಮಿಕ್ ಗುಂಪೊಂದು ಇಸ್ಲಾಂ ಧರ್ಮವನ್ನು ಸ್ವೀಕರಿಸದ ಹಿಂದೂ ಯುವತಿಯರ ಮೇಲೆ ಬಲಾತ್ಕಾರ ನಡೆಸುತ್ತಿದೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಈ ಗುಂಪಿನ ಮುಖ್ಯ ಕೇಂದ್ರ ದೆಹಲಿಯ ಶಾಹೀನ್ ಬಾಗ್ ನಲ್ಲಿದ್ದು, ಅಲ್ಲಿ ಯುವತಿಯರ ಮೇಲೆ ಬಲಾತ್ಕಾರ ಮಾಡಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತದೆ. ಅಬ್ದುಲ್ ರೆಹಮಾನ್ ಖುರೇಶಿ ಈ ಗುಂಪಿನ ನಾಯಕನಾಗಿದ್ದಾನೆ. ಹರಿಯಾಣದ ಒಬ್ಬ ಸಂತ್ರಸ್ತ ಹಿಂದೂ ಯುವತಿಯನ್ನು ಅವನ ವಶದಿಂದ ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
1. 2019 ರಲ್ಲಿ, ಹರಿಯಾಣದ ಸಂತ್ರಸ್ತ ಹಿಂದೂ ಯುವತಿಗೆ ‘ಫೇಸ್‌ಬುಕ್’ ಮೂಲಕ ಜುನೈದ್ ಎಂಬ ವ್ಯಕ್ತಿ ಪರಿಚಯವಾಗಿದ್ದನು. ಜುನೈದ್ ಅವಳನ್ನು ಭಾವನಾತ್ಮಕವಾಗಿ ವಂಚಿಸಿದ್ದನು. ಜುನೈದ್ ನ ಮಾತಿಗೆ ಮರುಳಾಗಿ, ಸಂತ್ರಸ್ತ ಯುವತಿ ಮನೆಯಿಂದ ಓಡಿಹೋಗಿ ದೆಹಲಿಗೆ ಬಂದಿದ್ದಳು.
2. ದೆಹಲಿಯ ಶಾಹೀನ್ ಬಾಗ್ ನಲ್ಲಿರುವ ಹಾಸ್ಟೆಲ್‌ನಲ್ಲಿ ಅವಳ ಮೇಲೆ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಒತ್ತಡ ಹೇರಲಾಗುತ್ತಿತ್ತು. ಮೌಲಾನಾ (ಇಸ್ಲಾಂ ವಿದ್ವಾಂಸ) ಅಲ್ಲಿಗೆ ಬಂದು ಹಿಂದೂ ಧರ್ಮದ ವಿರುದ್ಧ ಮಾತನಾಡುತ್ತಿದ್ದನು ಮತ್ತು ಇಸ್ಲಾಂ ಬಗ್ಗೆ ವೀಡಿಯೊಗಳನ್ನು ತೋರಿಸಿ ಅವಳನ್ನು ದಾರಿತಪ್ಪಿಸುತ್ತಿದ್ದನು.
3. ಏಪ್ರಿಲ್ 2025 ರಲ್ಲಿ, ಖುರೇಶಿ ಅವಳನ್ನು ತನ್ನ ಮನೆಗೆ ಕರೆದೊಯ್ದು ಬಲವಂತವಾಗಿ ಮತಾಂತರ ಮಾಡಿ, ಅವಳಿಗೆ ‘ಶಿಫಾ’ ಎಂದು ಹೆಸರಿಟ್ಟನು. ನಂತರ ಖುರೇಶಿ ಅವಳನ್ನು ಗುಂಪಿನ ಸದಸ್ಯನಾದ ಜುನೈದ್ ನೊಂದಿಗೆ ವಿವಾಹ ಮಾಡಿಸಿದನು.
4. ಸಂತ್ರಸ್ತ ಹಿಂದೂ ಯುವತಿಯ ಕುಟುಂಬ ಸದಸ್ಯರು ಹರಿಯಾಣದಲ್ಲಿ ತಮ್ಮ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಬ್ದುಲ್ ರೆಹಮಾನ್ ಖುರೇಶಿಯನ್ನು ಬಂಧಿಸಿದ್ದಾರೆ. ಖುರೇಶಿಗೆ 14 ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.
5. ಪೊಲೀಸ್ ತಂಡವು ದೆಹಲಿ, ಗೋವಾ, ಬಂಗಾಳ, ಉತ್ತರಾಖಂಡ, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ದಾಳಿ ನಡೆಸಿದೆ. ಈ ಗುಂಪಿನ 10 ಆರೋಪಿಗಳನ್ನು ಬಂಧಿಸಲಾಗಿದೆ.

6. ಈ ಗುಂಪಿಗೆ ನಿಷೇಧಿತ ‘ಪಾಪುಲರ್ ಫ್ರಂಟ್ ಆಫ್ ಇಂಡಿಯಾ’ (ಪಿ.ಎಫ್. ಐ.), ‘ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ’ (ಎಸ್. ಡಿ.ಪಿ.ಆಯ್.) ಮತ್ತು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧವಿರುವುದು ಬಹಿರಂಗವಾಗಿದೆ.
ಸಂಪಾದಕೀಯ ನಿಲುವುಭಾರತದಲ್ಲಿ ಹಿಂದೂ ಯುವತಿಯರ ಜೀವನವನ್ನು ಹಾಳುಮಾಡಲು ವಿವಿಧ ಗುಂಪುಗಳು ಸಕ್ರಿಯವಾಗಿರುವಾಗ, ಅವರ ರಕ್ಷಣೆಗಾಗಿ ಸರಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕು, ಹಾಗೆಯೇ ಪೋಷಕರು ಅವರಿಗೆ ಚಿಕ್ಕ ವಯಸ್ಸಿನಿಂದಲೇ ಧರ್ಮ ಶಿಕ್ಷಣ ನೀಡುವ ಆವಶ್ಯಕತೆ ಇದೆ. |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!