
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶ ಸರಕಾರವು ‘ನಂದ ಬಾಬಾ ದುಗ್ಧ ಮಿಷನ್’ ಅಡಿಯಲ್ಲಿ ‘ಮುಖ್ಯಮಂತ್ರಿ ಸ್ವದೇಶಿ ಗೋಸಂವರ್ಧನ ಯೋಜನೆ’ಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಉದ್ದೇಶ ‘ರಾಜ್ಯದಲ್ಲಿ ಹಾಲು ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಪ್ರತಿ ವ್ಯಕ್ತಿಗೆ ಹಾಲಿನ ಲಭ್ಯತೆಯನ್ನು ಹೆಚ್ಚಿಸುವುದು’ ಆಗಿದೆ. ಈ ಯೋಜನೆಯ ಅಡಿಯಲ್ಲಿ, ರಾಜ್ಯದ ಹೊರಗಿನಿಂದ ಸ್ಥಳೀಯ ಸುಧಾರಿತ ತಳಿಗಳ ಹಸುಗಳನ್ನು ಖರೀದಿಸಲು ಹಾಲು ಉತ್ಪಾದಕರಿಗೆ ಮತ್ತು ಗೋಪಾಲಕರಿಗೆ ಪ್ರೋತ್ಸಾಹ ನೀಡಲಾಗುವುದು. ಈ ಯೋಜನೆಯ ಅಡಿಯಲ್ಲಿ, ಸರಕಾರವು ಎರಡು ಹಸುಗಳ ಗುಂಪಿಗೆ ತಗಲುವ ಒಟ್ಟು ವೆಚ್ಚದ 40% ಅಥವಾ ಗರಿಷ್ಠ $80,000 ವರೆಗೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತದೆ. ಉತ್ತರ ಪ್ರದೇಶ ಸರಕಾರದ ಮಹತ್ವಾಕಾಂಕ್ಷೆಯ ‘ನಂದ ಬಾಬಾ ದುಗ್ಧ ಮಿಷನ್’ ಯೋಜನೆಯು ರಾಜ್ಯದಲ್ಲಿ ಹಾಲಿನ ಕ್ರಾಂತಿಯನ್ನು ತರಲು ಜಾರಿಗೆ ತರಲಾಗುತ್ತಿದೆ.
ಉತ್ತರ ಪ್ರದೇಶದ ನಿವಾಸಿಯಾಗಿರುವ ಅರ್ಜಿದಾರರು ಗಿರ್, ಸಾಹಿವಾಲ್, ಹರಿಯಾಣ, ಥಾರ್ಪಾರ್ಕರ್ ಈ ಸ್ಥಳೀಯ ಸುಧಾರಿತ ತಳಿಗಳ ಹಸುಗಳನ್ನು ರಾಜ್ಯದ ಹೊರಗಿನಿಂದ ಖರೀದಿಸಬೇಕು.
ಸಂಪಾದಕೀಯ ನಿಲುವುಕನಿಷ್ಠ ಭಾಜಪ ಆಡಳಿತವಿರುವ ರಾಜ್ಯಗಳಾದರೂ ಇದನ್ನು ಮಾಡಿದರೆ, ಬಹುತೇಕ ಗೋಹತ್ಯೆಗಳು ನಿಲ್ಲುತ್ತವೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!