ಪ್ರಧಾನಿ ನೆತನ್ಯಾಹು ಅವರಿಂದ ಸಂತಾಪ ವ್ಯಕ್ತ

ಟೆಲ್ ಅವಿವ್ (ಇಸ್ರೇಲ್) – ಗಾಜಾದ ಏಕೈಕ ಹೋಲಿ ಫ್ಯಾಮಿಲಿ ಕ್ಯಾಥೊಲಿಕ್ ಚರ್ಚ್ ಮೇಲೆ ಜುಲೈ 17 ರಂದು ನಡೆದ ಟ್ಯಾಂಕ್ ದಾಳಿಯಲ್ಲಿ 3 ಜನರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ದಾಳಿಯಲ್ಲಿ ಓರ್ವ ಪಾದ್ರಿ ಮತ್ತು 9 ಜನರು ಗಾಯಗೊಂಡಿದ್ದಾರೆ.

ಈ ಚರ್ಚ್‌ನಲ್ಲಿ 600 ಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯ ಪಡೆದಿದ್ದರು. ಈ ವಿಷಯವಾಗಿ ನೆತನ್ಯಾಹು ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ್ದಾರೆ. ಈ ದಾಳಿ ಆಕಸ್ಮಿಕವಾಗಿ ನಡೆದಿದ್ದು, ಚರ್ಚ್ ಮೇಲೆ ಒಂದು ಶೆಲ್ ಬಿದ್ದಿದೆ ಎಂದು ನೆತನ್ಯಾಹು ಹೇಳಿದ್ದಾರೆ. ಇಸ್ರೇಲ್ ಸೇನೆಯು ತಾನು ನಾಗರಿಕರು ಮತ್ತು ಧಾರ್ಮಿಕ ಸ್ಥಳಗಳಿಗೆ ಹಾನಿಯಾಗದಂತೆ ರಕ್ಷಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ, ಎಂದು ಹೇಳಿಕೊಂಡಿದೆ.
ಪೋಪ ಲಿಯೋ (14ನೇ) ಅವರಿಂದ ಸಂತಾಪ ವ್ಯಕ್ತ
ವ್ಯಾಟಿಕನ್ ಈ ದಾಳಿಯನ್ನು ಸೇನಾ ದಾಳಿ ಎಂದು ಬಣ್ಣಿಸಿದೆ ಮತ್ತು ಪೋಪ್ ಲಿಯೋ (14ನೇ) ಅವರ ವತಿಯಿಂದ ಸಂತಾಪ ವ್ಯಕ್ತಪಡಿಸಿದೆ. ಪೋಪ್ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಗಾಯಗೊಂಡವರಿಗೆ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದ್ದಾರೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !