2 ಪಕ್ಷಗಳಿಂದ ಸರಕಾರಕ್ಕೆ ನೀಡಲಾಗಿದ್ದ ಬೆಂಬಲ ವಾಪಸ್ !

ಟೆಲ್ ಅವೀವ್ (ಇಸ್ರೇಲ್) – ಇಸ್ರೇಲ್‌ನಲ್ಲಿ 2 ಪಕ್ಷಗಳು ಸರಕಾರದ ಬೆಂಬಲವನ್ನು ಹಿಂತೆಗೆದುಕೊಂಡಿರುವುದರಿಂದ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಸರಕಾರ ಪತನಗೊಳ್ಳುವ ಭೀತಿ ಎದುರಿಸುತ್ತಿದೆ. ‘ಯುನೈಟೆಡ್ ತೋರಾಹ್ ಜುಡಾಯಿಸಂ’ ಪಕ್ಷವು ಜುಲೈ 15 ರಂದು ಮತ್ತು ಅತಿ-ರೂಢಿವಾದಿ ‘ಶಾಸ್’ ಪಕ್ಷವು ಜುಲೈ 16 ರಂದು ಸರಕಾರದ ಬೆಂಬಲವನ್ನು ಹಿಂಪಡೆದಿವೆ. “ಹೀಗಿದ್ದರೂ ಕೂಡ, ನಾವು ವಿವಿಧ ಕಾನೂನುಗಳಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತೇವೆ” ಎಂದು ಎರಡೂ ಪಕ್ಷಗಳು ಭರವಸೆ ನೀಡಿವೆ. ಇದರಿಂದ ಸದ್ಯಕ್ಕೆ ಸರಕಾರಕ್ಕೆ ಅಪಾಯ ಇಲ್ಲವಾದರೂ, ಸರಕಾರದ ಮೇಲೆ ಅಸ್ಥಿರತೆಯ ತೂಗುಗತ್ತಿ ಮುಂದುವರಿದಯಲಿದೆ. 120 ಸದಸ್ಯರಿರುವ ಇಸ್ರೇಲಿ ಸಂಸತ್ತಿನಲ್ಲಿ ಸರಕಾರ ರಚಿಸಲು ಕನಿಷ್ಠ 61 ಸ್ಥಾನಗಳು ಬೇಕು. ಎರಡೂ ಪಕ್ಷಗಳು ಬೆಂಬಲ ಹಿಂತೆಗೆದುಕೊಂಡಿರುವುದರಿಂದ ಆಡಳಿತ ಮೈತ್ರಿಕೂಟದ ಬಳಿ ಕೇವಲ 50 ಸ್ಥಾನಗಳು ಮಾತ್ರ ಉಳಿದಿವೆ.

ಬೆಂಬಲ ವಾಪಸ್ ಪಡೆಯಲು ಕಾರಣವೇನು ?
ಈ ವಿವಾದಕ್ಕೆ ಮುಖ್ಯ ಕಾರಣವೆಂದರೆ, ‘ಇಸ್ರೇಲ್ ನಲ್ಲಿನ ಧಾರ್ಮಿಕ ವಿದ್ಯಾರ್ಥಿಗಳಿಗೆ ಕಡ್ಡಾಯ ಸೇನಾ ಸೇವೆಯಿಂದ ನೀಡಲಾದ ವಿನಾಯಿತಿ’. ನೆತನ್ಯಾಹು ಸರಕಾರವು ಈ ವಿನಾಯಿತಿಯನ್ನು ಸೀಮಿತಗೊಳಿಸಲು ಮಸೂದೆಯನ್ನು ತಂದಿದೆ. ಸರಕಾರದ ಬೆಂಬಲ ಹಿಂತೆಗೆದುಕೊಂಡಿರುವ ಎರಡೂ ಪಕ್ಷಗಳ ಪ್ರಕಾರ, ಧಾರ್ಮಿಕ ವಿದ್ಯಾರ್ಥಿಗಳನ್ನು ಸೇನೆಗೆ ಸೇರಿಸುವುದರಿಂದ ಅವರ ಧಾರ್ಮಿಕ ಜೀವನಶೈಲಿಗೆ ಅಪಾಯ ಉಂಟಾಗುತ್ತದೆ. ಮತ್ತೊಂದೆಡೆ, ಅನೇಕ ಇಸ್ರೇಲಿ ಜನರು ವಿದ್ಯಾರ್ಥಿಗಳಿಗೆ ನೀಡಲಾದ ಈ ವಿನಾಯಿತಿಯು ಒಂದು ವಿಶೇಷಾಧಿಕಾರ ಎಂದು ಆರೋಪಿಸಿ ಅದನ್ನು ವಿರೋಧಿಸುತ್ತಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಇಲ್ಲಿಯವರೆಗೆ 888 ಇಸ್ರೇಲಿ ಸೈನಿಕರು ಸಾವನ್ನಪ್ಪಿರುವ ಕಾರಣ, ಈ ಕಾನೂನು ಜಾರಿಗೆ ತರಲು ತೀವ್ರ ಒತ್ತಾಯ ಕೇಳಿಬರುತ್ತಿದೆ.
ಧಾರ್ಮಿಕ ವಿದ್ಯಾರ್ಥಿಗಳ ಆಮೂಲಾಗ್ರ ನಿಲುವು !
ಈ ಮಸೂದೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೂಢಿವಾದಿ ಧಾರ್ಮಿಕ ವಿದ್ಯಾರ್ಥಿಗಳು ತಾವು ಜೈಲಿಗೆ ಹೋಗಲು ಸಿದ್ಧರಿದ್ದೇವೆ; ಆದರೆ ಸೇನೆಗೆ ಸೇರಲು ಇಷ್ಟಪಡುವುದಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಪಿಒಕೆ ಪ್ರತಿಭಟನಾಕಾರರ ದಬ್ಬಾಳಿಕೆ; ವಿಶ್ವಸಂಸ್ಥೆ ಕಳವಳ : UN Concern PoK
ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಅನ್ಯಾಯದ ಬಂಧನದ ವಿರುದ್ಧ ಅಲ್ಪಸಂಖ್ಯಾತರಿಂದ ಪ್ರತಿಭಟನೆ !
ಪಾಕಿಸ್ತಾನದ ಕ್ರಿಕೆಟಿಗ ಮಹಮ್ಮದ್ ನವಾಜ್ ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ೩ ತಿಂಗಳು ನಿಷೇಧ !
ರಾಜ್ಯದಲ್ಲಿ ಶಾಲೆಗಳ ಹತ್ತಿರ ಪಿಜ್ಜಾ-ಬರ್ಗರ್ ಮಾರಾಟಕ್ಕೆ ಶೀಘ್ರದಲ್ಲೇ ನಿಷೇಧ !
ಅಮೆರಿಕಾ ೧೮ ಸಾವಿರ ಭಾರತೀಯ ನಾಗರಿಕರನ್ನು ದೇಶದಿಂದ ಹೊರಹಾಕಲಿದೆ !
ಇರಾನ್ ದಾಳಿ; ಜೋರ್ಡಾನ್ನಲ್ಲಿದ್ದ ಇಬ್ಬರು ಅಮೆರಿಕನ್ ಸೈನಿಕರ ಸಾವು – ಅಮೆರಿಕ ತಿರುಗೇಟು !