NCERT New Book : ಬಾಬರ, ಔರಂಗಜೇಬ ಮುಂತಾದ ಮೊಘಲರು ಹಿಂದೂಗಳ ದೇವಸ್ಥಾನಗಳನ್ನು ಕೆಡವಿ, ಹಿಂದೂಗಳನ್ನು ಮತಾಂತರಗೊಳಿಸಿದರು !

ಎನ್‌.ಸಿ.ಇ.ಆರ್‌.ಟಿ.ಯ 8ನೇ ತರಗತಿಯ ಸಮಾಜವಿಜ್ಞಾನದ ಹೊಸ ಪಠ್ಯಪುಸ್ತಕದಲ್ಲಿರುವ ಮಾಹಿತಿ

(ಎನ್‌.ಸಿ.ಇ.ಆರ್‌.ಟಿ. ಅಂದರೆ ನ್ಯಾಷನಲ್ ಕೌನ್ಸಿಲ್ ಆಫ್ ಎಜ್ಯುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಅಂದರೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು)

ನವ ದೆಹಲಿ: ಎನ್‌.ಸಿ.ಇ.ಆರ್‌.ಟಿ.ಯ 8ನೇ ತರಗತಿಯ ಸಮಾಜ ವಿಜ್ಞಾನದ ಹೊಸ ಪಠ್ಯಪುಸ್ತಕದಲ್ಲಿ, `ಮೊಘಲ ದೊರೆ ಬಾಬರನು ಅತ್ಯಂತ ಕ್ರೂರಿ ಮತ್ತು ನಿರ್ದಯಿಯಾಗಿದ್ದನು. ಅವನು ಅನೇಕ ನಗರಗಳಲ್ಲಿ ಅತ್ಯಂತ ಕ್ರೂರವಾಗಿ ಹಿಂದೂಗಳ ಹತ್ಯೆ ಮಾಡಿದನು ಮತ್ತು ಅವರನ್ನು ಮತಾಂತರಗೊಳಿಸಿದನು. ಅಕ್ಬರನ ಆಳ್ವಿಕೆಯಲ್ಲಿ ಕ್ರೌರ್ಯ ಮತ್ತು ಸಹಿಷ್ಣುತೆ ಎರಡೂ ಇದ್ದವು, ಆದರೆ ಔರಂಗಜೇಬನು ದೇವಸ್ಥಾನಗಳು ಮತ್ತು ಗುರುದ್ವಾರಗಳನ್ನು ಕೆಡವಿದನು’ ಎಂಬಂತಹ ಹೊಸ ಮಾಹಿತಿಯನ್ನು ನೀಡಲಾಗಿದೆ. ಮೊಘಲರು ಮತ್ತು ಮರಾಠರ ಇತಿಹಾಸವನ್ನು ಇದರಲ್ಲಿ ಸೇರಿಸಲಾಗಿದೆ. ‘ಇತಿಹಾಸದ ಕರಾಳ ಅಧ್ಯಾಯಗಳು’ ಎಂದು ಉಲ್ಲೇಖಿಸಿ ಈ ಮಾಹಿತಿಯನ್ನು ನೀಡಲಾಗಿದೆ. ಇದರಲ್ಲಿ ‘ಇತಿಹಾಸದಲ್ಲಿ ಸಂಭವಿಸಿದ ಘಟನೆಗಳಿಗೆ ಇಂದು ಯಾರನ್ನೂ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ’ ಎಂದು ಸಹ ಸ್ಪಷ್ಟಪಡಿಸಲಾಗಿದೆ.

13ನೇ ಶತಮಾನದಿಂದ 17ನೇ ಶತಮಾನದವರೆಗಿನ ಇತಿಹಾಸದ ಮಾಹಿತಿ.

Reshaping India’s Political Map (ಭಾರತದ ರಾಜಕೀಯ ನಕ್ಷೆ ಬದಲಾಗುತ್ತಿದೆ) ಎಂಬ ಭಾಗವು ಈ ಪುಸ್ತಕದಲ್ಲಿದೆ. ಇದರಲ್ಲಿ 13ನೇ ಶತಮಾನದಿಂದ 17 ಶತಮಾನದವರೆಗೆ ಏನು ನಡೆದಿದೆಯೋ ಆ ಪ್ರಮುಖ ಘಟನೆಗಳ ಉಲ್ಲೇಖವಿದೆ. ದೆಹಲಿ ಸಾಮ್ರಾಜ್ಯ, ವಿಜಯನಗರ ಸಾಮ್ರಾಜ್ಯ, ಮೊಘಲ ಆಳ್ವಿಕೆ, ಸಿಖ್ಖರ ಆಗಮನದಂತಹ ಎಲ್ಲಾ ವಿಷಯಗಳನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ‘ಆಗ ಹಳ್ಳಿಗಳ ಮತ್ತು ನಗರಗಳ ರಚನೆ ಹೇಗಿತ್ತು ?’ ಎಂಬುದರ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಮೊಘಲರ ಸೈನ್ಯವು ಅನೇಕ ಗ್ರಾಮಗಳು ಮತ್ತು ನಗರಗಳನ್ನು ಹೇಗೆ ದೋಚಿತು, ದೇವಸ್ಥಾನಗಳು, ಧಾರ್ಮಿಕ ಸ್ಥಳಗಳನ್ನು ಹೇಗೆ ಕೆಡವಿತು? ಎಂಬುದನ್ನು ಸಹ ಇದರಲ್ಲಿ ಹೇಳಲಾಗಿದೆ.

ಪುಸ್ತಕದಲ್ಲಿರುವ ಕೆಲವು ಪ್ರಮುಖ ಮಾಹಿತಿ

1. ಬಾಬರ್ ಅತ್ಯಂತ ಕ್ರೂರ ದೊರೆಯಾಗಿದ್ದನು. ಅವನು ನಗರಗಳ ಮೇಲೆ ಆಕ್ರಮಣ ಮಾಡಿ ಸಾವಿರಾರು ಜನರನ್ನು ಕೊಂದನು, ಮಹಿಳೆಯರು ಮತ್ತು ಮಕ್ಕಳನ್ನು ಸೆರೆಮನೆಗೆ ಹಾಕಿದನು.

2. ಅಲ್ಲಾವುದ್ದೀನ್ ಖಿಲ್ಜಿಯ ಸೇನಾಪತಿ ಮಲಿಕ ಕಾಫೂರನು ಶ್ರೀರಂಗಂ, ಮಧುರೈ, ಚಿದಂಬರಂ, ರಾಮೇಶ್ವರಂ ಮುಂತಾದ ದೇವಾಲಯಗಳ ಮೇಲೆ ಆಕ್ರಮಣ ಮಾಡಿದನು.

3. ಔರಂಗಜೇಬನು ಮಥುರಾ, ಸೋಮನಾಥದಲ್ಲಿರುವ ಹಿಂದೂ ದೇವಾಲಯಗಳು, ಹಾಗೂ ಜೈನ ದೇವಸ್ಥಾನಗಳನ್ನು ಕೆಡವಿದನು. ಅವನು ಸಿಖ್ಖರ ಗುರುದ್ವಾರಗಳ ಮೇಲೂ ದಾಳಿ ಮಾಡಿದನು.

4. ಮೊಘಲರು ಹಿಂದೂ, ಬೌದ್ಧ ಮತ್ತು ಜೈನ ಧರ್ಮೀಯರ ದೇವಸ್ಥಾನಗಳು, ಅಲ್ಲಿನ ವಿಗ್ರಹಗಳನ್ನು ಒಡೆದು ಹಾಕಿ ಲೂಟಿ ಮಾಡಿದರು.

5. ಹಿಂದೂಗಳ ಮೇಲೆ ಜಿಜಿಯಾ ತೆರಿಗೆಯನ್ನು ವಿಧಿಸಲಾಗಿತ್ತು. ಮೊಘಲರು ಹಿಂದೂಗಳನ್ನು ಅವಮಾನಿಸಿ ‘ನೀವು ಮತಾಂತರವಾಗಿ, ಇಸ್ಲಾಂ ಧರ್ಮವನ್ನು ಸ್ವೀಕರಿಸಿ’ ಎಂದು ಹೇಳುತ್ತಿದ್ದರು.

ಸಂಪಾದಕೀಯ ನಿಲುವು

ಇದು ಇತಿಹಾಸದ ‘ಕೇಸರಿಕರಣ’ವಲ್ಲದೇ ಇತಿಹಾಸದ ‘ಹಸಿರುಕರಣ’ವನ್ನು ತೆಗೆದು ಸತ್ಯ ಇತಿಹಾಸವನ್ನು ಹೇಳುವ ಪ್ರಯತ್ನವಾಗಿದೆ. ಇದು ಕೇವಲ ಆರಂಭವಾಗಿದ್ದು ಇನ್ನೂ ಅನೇಕ ಸಂಗತಿಗಳ ಮಾಹಿತಿ ನೀಡುವುದು ಬಾಕಿ ಇದೆ, ಎಂದೇ ಹೇಳಬೇಕಾಗುವುದು !