
ಕೋಲಕತಾ (ಪ.ಬಂಗಾಳ) – ಭಾರತ-ಬಾಂಗ್ಲಾದೇಶ ಗಡಿ ಸಮೀಪ ಗೋಕಳ್ಳಸಾಗಾಣಿಕೆಗಾಗಿ ನುಸುಳುತ್ತಿದ್ದ 2 ಬಾಂಗ್ಲಾದೇಶಿ ಪ್ರಜೆಗಳನ್ನು ಗಡಿ ಭದ್ರತಾ ದಳದ (ಬಿಎಸ್‌ಎಫ್) ಸೈನಿಕರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಬಾಂಗ್ಲಾದೇಶದ ಠಾಕೂರಗಾಂವ್ ನಿಂದ ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದ 7-8 ಜನರ ಗುಂಪಿನ ಮೇಲೆ ಸೈನಿಕರು ಗುಂಡು ಹಾರಿಸಿದ್ದರು. ಸೈನಿಕರು ಮೊದಲು ಅವರಿಗೆ ತಿಳಿ ಹೇಳಲು ಮತ್ತು ಎಚ್ಚರಿಕೆ ನೀಡಲು ಪ್ರಯತ್ನಿಸಿದ್ದರು; ಆದರೆ ಅಕ್ರಮ ವಲಸಿಗರು ಸೈನಿಕರ ಮಾತನ್ನು ಕೇಳದ ಕಾರಣ ಗುಂಡು ಹಾರಿಸಲಾಯಿತು. ಈ ಘಟನೆ ಜುಲೈ 12 ರ ಮುಂಜಾನೆ ಸಂಭವಿಸಿದೆ.
🚨 Intrusion Meets the Iron Wall! 🚨🇮🇳
Two Bangladeshi cattle smugglers shot dead by BSF in separate incidents near the India-Bangladesh border ⚠️
🇧🇩 Bangladesh urges India to avoid firing, but BSF acted in self-defense after being attacked.
🛑 Time to deal firmly with every… pic.twitter.com/NzKFQ2CdhE
— Sanatan Prabhat (@SanatanPrabhat) July 14, 2025
ಇಂತಹ ಇನ್ನೊಂದು ಘಟನೆಯಲ್ಲಿ ಒಬ್ಬನ ಸಾವು
ಎರಡನೇ ಘಟನೆ ಸುನಾಮ್ ಗಂಜ್ ಗಡಿ ಸಮೀಪ ಸಂಭವಿಸಿದೆ. ಇಲ್ಲಿ ಶಫೀಕುಲ್ ಇಸ್ಲಾಂ ಎಂಬ ಬಾಂಗ್ಲಾದೇಶಿ ಪ್ರಜೆ ಭಾರತದಿಂದ ಗೋವುಗಳನ್ನು ಕಳ್ಳಸಾಗಣೆ ಮಾಡಿ ಹಿಂತಿರುಗುತ್ತಿದ್ದಾಗ, ಸೈನಿಕರು ಅವನನ್ನು ಮತ್ತು ಅವನ 10-12 ಸಹಚರರನ್ನು ತಡೆದರು. ತಡೆದ ನಂತರ, ಈ ನುಸುಳುಕೋರರು ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದರು. ಇದರಿಂದ ಸೈನಿಕರು ನಡೆಸಿದ ಗುಂಡಿನ ದಾಳಿಯಲ್ಲಿ ಶಫೀಕುಲ್ ಇಸ್ಲಾಂ ಹತನಾಗಿದ್ದಾನೆ.
ಗುಂಡು ಹಾರಿಸದಂತೆ ಬಾಂಗ್ಲಾದೇಶದ ಮನವಿ
ಗಡಿ ಭದ್ರತಾ ಪಡೆಗಳು ಹತ್ಯೆಯಾದ ಇಬ್ಬರೂ ವಲಸಿಗರ ಮೃತದೇಹಗಳನ್ನು ಬಾಂಗ್ಲಾದೇಶ ಸರ್ಕಾರಕ್ಕೆ ಹಸ್ತಾಂತರಿಸಿದೆ. ಬಾಂಗ್ಲಾದೇಶದ ಅಧಿಕಾರಿಗಳು ಗಡಿಯಲ್ಲಿ ಗುಂಡು ಹಾರಿಸದಂತೆ ಭಾರತಕ್ಕೆ ಮನವಿ ಮಾಡಿದ್ದಾರೆ. ನಾವು ಮೊದಲು ಈ ಅಕ್ರಮ ವಲಸಿಗರಿಗೆ ತಿಳಿ ಹೇಳಲು, ಎಚ್ಚರಿಕೆ ನೀಡಲು ಪ್ರಯತ್ನಿಸಿದೆವು; ಆದರೆ ನುಸುಳುಕೋರರು ಆಕ್ರಮಣ ಮಾಡಿದ ಕಾರಣ ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂದು ಗಡಿ ಭದ್ರತಾ ಪಡೆಗಳು ತಿಳಿಸಿವೆ.
ಸಂಪಾದಕೀಯ ನಿಲುವುಈಗ ಕೇವಲ ಗೋಕಳ್ಳಸಾಗಾಣಿಕೆಗಾರರನ್ನು ಮಾತ್ರವಲ್ಲದೆ, ಪ್ರತಿಯೊಬ್ಬ ನುಸುಳುಕೋರನನ್ನೂ ಸಹ ಇದೇ ರೀತಿ ಹೊಡೆದುರುಳಿಸುವುದು ಅವಶ್ಯಕವಾಗಿದೆ. |
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಅಂಡಮಾನ್ ನ ‘ಶಾಲೋ ಆಫ್ಶೋರ್ ಬ್ಲಾಕ್’ನಲ್ಲಿ ಎರಡನೇ ಅತಿ ದೊಡ್ಡ ನೈಸರ್ಗಿಕ ಅನಿಲದ ನಿಕ್ಷೇಪ ಪತ್ತೆ
ಅಮೆರಿಕದ ‘ಬ್ಲೂಮ್ ಬರ್ಗ್’ ಸುದ್ದಿ ಸಂಸ್ಥೆಯು ತನ್ನ ಭಾರತ ವಿರೋಧಿ ಲೇಖನ ಹಿಂಪಡೆಯಿತು!
ಭಾರತೀಯರು ಜಗತ್ತಿನ ಅತ್ಯಂತ ಪ್ರತಿಭಾವಂತ ಜನರಲ್ಲಿ ಒಬ್ಬರಾಗಿದ್ದಾರೆ! – ವ್ಲಾದಿಮಿರ್ ಪುಟಿನ್, ಅಧ್ಯಕ್ಷರು, ರಷ್ಯಾ
ಇರಾನ್ನ ಕ್ಷಿಪಣಿ ಸಾಮರ್ಥ್ಯಕ್ಕೆ ಭಾರಿ ಪ್ರಮಾಣದ ಹಾನಿ! – ಡೊನಾಲ್ಡ್ ಟ್ರಂಪ್
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!