ಜನವರಿ 19,2026 ರೊಳಗೆ ‘ಪನೂನ್ ಕಾಶ್ಮೀರ’ ಎಂಬ ಕೇಂದ್ರಾಡಳಿತ ಪ್ರದೇಶವನ್ನು ರಚಿಸಿ

ಜಮ್ಮು: ರಾಷ್ಟ್ರಮಟ್ಟದ ‘ಕಾಶ್ಮೀರಿ ಹಿಂದೂ ಅಧಿವೇಶನ’ದ ಒಮ್ಮತದ ಬೇಡಿಕೆ

(ಪನೂನ್ ಕಾಶ್ಮೀರ ಎಂದರೆ ನಮ್ಮ, ಹಿಂದೂಗಳ ಕಾಶ್ಮೀರ)

ಜಮ್ಮು (ಜಮ್ಮು-ಕಾಶ್ಮೀರ) – ‘ಯೂತ್ ಫಾರ್ ಪನೂನ್ ಕಾಶ್ಮೀರ’ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ ‘ಕಾಶ್ಮೀರಿ ಹಿಂದೂ ಅಧಿವೇಶನ’ವು ಜುಲೈ 13ರಂದು ಯಶಸ್ವಿಯಾಗಿ ನಡೆಯಿತು. ಈ ಐತಿಹಾಸಿಕ ಒಂದು ದಿನದ ಅಧಿವೇಶನವು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ‘ಜಮ್ಮು ಘೋಷಣೆ’ಯೊಂದಿಗೆ ಮುಕ್ತಾಯಗೊಂಡಿತು. ಇದರಲ್ಲಿ ‘ಪನೂನ್ ಕಾಶ್ಮೀರ’ ಕೇಂದ್ರಾಡಳಿತ ಪ್ರದೇಶದ ರಚನೆಗೆ 2026ರ ಜನವರಿ 19ನ್ನು ಅಂತಿಮ ಗಡುವಾಗಿ ನಿಗದಿಪಡಿಸಲಾಗಿದ್ದು, ಭಾರತ ಸರಕಾರವು ಈ ನಿಟ್ಟಿನಲ್ಲಿ ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ‘ಪನೂನ್ ಕಾಶ್ಮೀರ’ದ ಸ್ಥಾಪನೆಯು ಹಿಂದೂ ರಾಷ್ಟ್ರದ ಕಡೆಗೆ ಮೊದಲ ಹೆಜ್ಜೆಯಾಗಿದೆ ಎಂಬ ಬಲವಾದ ನಂಬಿಕೆಯನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು. 2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಾಶ್ಮೀರಿ ಹಿಂದೂಗಳ ಇದು ಮೊದಲ ಅಧಿವೇಶನವಾಗಿದೆ.

1. ಅಧಿವೇಶನದಲ್ಲಿ ಭಾರತದಾದ್ಯಂತದ ಸಂತರು, ಕಾನೂನು ತಜ್ಞರು, ವಿದ್ವಾಂಸರು, ಯುವ ನಾಯಕರು ಮತ್ತು ವಿವಿಧ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಒಗ್ಗೂಡಿದ್ದರು. ಅವರು ಕಾಶ್ಮೀರಿ ಹಿಂದೂ ಸಮುದಾಯದ ನ್ಯಾಯಯುತ ಪುನರ್ ಸ್ಥಾಪನೆ, ಅವರ ಗೌರವ ಮತ್ತು ಸಾಂಸ್ಕೃತಿಕ ಹಕ್ಕುಗಳಿಗಾಗಿ ಅವರು ಒಗ್ಗಟ್ಟಿನ ಧ್ವನಿ ಎತ್ತಿದರು.

2. ದೀಪ ಬೆಳಗಿಸುವುದು ಮತ್ತು ಭವ್ಯ ಸನ್ಮಾನ ಸಮಾರಂಭದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.

3. ಅಧಿವೇಶನದಲ್ಲಿ ಜುಲೈ13, 1931ರಂದು ಕಾಶ್ಮೀರಿ ಹಿಂದೂ ಹತ್ಯಾಕಾಂಡದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ಶ್ರದ್ಧಾಂಜಲಿ ಸಲ್ಲಿಸಲಾಯಿತು.

400 ಹಿಂದೂಪರ ಸಂಘಟನೆಗಳ ಶಕ್ತಿಶಾಲಿ ಸಂಘಟನೆ ‘ಏಕ್ ಭಾರತ್ ಅಭಿಯಾನ್ 2’ಕ್ಕೆ ಚಾಲನೆ!

ಇಂದಿನಿಂದ ‘ಏಕ್ ಭಾರತ್ ಅಭಿಯಾನ್ 2’ ಎಂಬ ಐತಿಹಾಸಿಕ ಸಾಂಸ್ಕೃತಿಕ ಆಂದೋಲನ ಪ್ರಾರಂಭವಾಗಲಿದೆ ಎಂದು ‘ಯೂತ್ ಫಾರ್ ಪನೂನ್ ಕಾಶ್ಮೀರ’ ಘೋಷಿಸಿತು. ಈ ಅಭಿಯಾನದಲ್ಲಿ ಭಾರತದ 400ಕ್ಕೂ ಹೆಚ್ಚು ಹಿಂದೂ ಸಂಸ್ಥೆಗಳು, ಯುವ ಸಂಘಟನೆಗಳು ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳು ಒಂದಾಗಿವೆ ಎಂದು ಸಂಘಟನೆ ತಿಳಿಸಿದೆ. ಈ ಅಭಿಯಾನವು ಭಾರತದ ಪ್ರತಿಯೊಂದು ಗ್ರಾಮ, ಜಿಲ್ಲೆ ಮತ್ತು ರಾಜ್ಯದ ರಾಜಧಾನಿಯನ್ನು ತಲುಪಲಿದೆ ಮತ್ತು ಕಾಶ್ಮೀರಿ ಹಿಂದೂಗಳಿಗಾಗಿ ಒಂದು ಸ್ವತಂತ್ರ ಮಾತೃಭೂಮಿ ಮತ್ತು ಧರ್ಮದ ಪುನರ್ ಸ್ಥಾಪನೆಗಾಗಿ ಏಕೀಕೃತ ಶಕ್ತಿಯನ್ನು ನಿರ್ಮಿಸುವುದು.

ಅಧಿವೇಶನದಲ್ಲಿ ಉಪಸ್ಥಿತರಿದ್ದ ಗಣ್ಯರು!

ಡಾ. ಅಗ್ನಿಶೇಖರ್, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ, ನ್ಯಾಯವಾದಿ (ಪೂ.) ರವೀಂದ್ರ ಘೋಷ, ಸ್ವಾಮಿ ಕುಮಾರಜಿ, ನ್ಯಾಯವಾದಿ ವಿಷ್ಣು ಶಂಕರ್ ಜೈನ್ನ, ಡಾ. ಕೊನರಾಡ ಎಲ್ಸ್ಟ್, ಸರ್ವಶ್ರೀ ರಣಜಿತ್ ಸಾವರಕರ್, ಅರ್ಜುನ್ ಸಂಪತ್, ಪ್ರಮೋದ್ ಮುತಾಲಿಕ್, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ, ರಾಹುಲ ಕೌಲ್, ಅರುಣ ಗುಪ್ತಾ ಮತ್ತು ರಾಜೇಶ ಗುಪ್ತಾ, ಹಾಗೂ ಶ್ರೀ ಗಂಗಾಧರ ಕುಲಕರ್ಣಿ, ಪುನ್ನು ಸ್ವಾಮಿ, ಅಶ್ವಿನಿ ಭಟ್, ಕುಂದನ ಕಾಶ್ಮೀರಿ, ಮೋತಿಲಾಲ ಮಲ್ಲಾ, ರಾಜೀವ ಪಂಡಿತಾ, ಶಮಾ ರೈನಾ, ಆರ್.ಕೆ. ವಾಂಗಣೂ, ಡಾ. ಸುಶೀಲ್ ವತ್ತಲ, ರೋಹಿತ್ ರವಿ ಭಟ್ ಮತ್ತು ದಿಗಂಬರ ರೈನಾ.

‘ಪನೂನ್ ಕಾಶ್ಮೀರ’ ರಾಜಕೀಯ ಚೌಕಾಶಿ ಅಲ್ಲ, ಬದಲಿಗೆ ನ್ಯಾಯೋಚಿತ ಮತ್ತು ಸಾಂಸ್ಕೃತಿಕ ಆದೇಶ!

ಡಾ. ಅಗ್ನಿಶೇಖರ್, ಶ್ರೀ ರಂಜಿತ್ ಸಾವರಕರ್ ಮತ್ತು ವಕೀಲ ವಿಷ್ಣು ಶಂಕರ್ ಜೈನ್ ಅವರು ‘ಪನೂನ್ ಕಾಶ್ಮೀರ’ ಯಾವುದೇ ರಾಜಕೀಯ ಚೌಕಾಶಿ ಅಲ್ಲ, ಬದಲಿಗೆ ಭಾರತವು ಧರ್ಮ ಮತ್ತು ನ್ಯಾಯದ ರಕ್ಷಣೆಗಾಗಿ ನಿರ್ವಹಿಸಬೇಕಾದ ಸಾಂಸ್ಕೃತಿಕ ಆದೇಶ ಎಂದು ದೃಢವಾಗಿ ಹೇಳಿದರು.

‘ಪನೂನ್ ಕಾಶ್ಮೀರ: ಹಿಂದೂ ರಾಷ್ಟ್ರದ ಅಡಿಪಾಯ’ ಕುರಿತು ಸಂವಾದ!

‘ಪನೂನ್ ಕಾಶ್ಮೀರ: ಹಿಂದೂ ರಾಷ್ಟ್ರದ ಅಡಿಪಾಯ’ ಎಂಬ ವಿಷಯದ ಬಗ್ಗೆ ‘ಯೂತ್ ಫಾರ್ ಪನೂನ್ ಕಾಶ್ಮೀರ’ದ ಶ್ರೀ ವಿಠ್ಠಲ ಚೌಧರಿ ಅವರ ಅಧ್ಯಕ್ಷತೆಯಲ್ಲಿ ಸಂವಾದ ನಡೆಯಿತು. ಇದರಲ್ಲಿ ಶ್ರೀ ಪ್ರಮೋದ್ ಮುತಾಲಿಕ್, ರಮೇಶ ಶಿಂಧೆ, ಅರ್ಜುನ್ ಸಂಪತ್, ರಾಹುಲ್ ಕೌಲ್, ಹಾಗೂ ಡಾ. ರಾಜಸಿಂಗ್ ಶೇಖಾವತ ಭಾಗವಹಿಸಿದ್ದರು.

‘ಹಿಂದೂ ಸಂಸ್ಕೃತಿ ಸಂಘರ್ಷ ಮತ್ತು ಅದಕ್ಕೆ ಪರಿಹಾರಗಳು’ ಎಂಬ ವಿಷಯದ ಕುರಿತ ಸಂವಾದದಲ್ಲಿ ಡಾ. ಕೊನರಾಡ ಎಲ್ಸ್ಟ್ ಮತ್ತು ಸದ್ಗುರು ಡಾ. ಚಾರುದತ್ತ ಪಿಂಗಳೆ ಭಾಗವಹಿಸಿದ್ದರು. ಆಶಿಶ್ ಧರ್ ಈ ಸಂವಾದದ ಅಧ್ಯಕ್ಷರಾಗಿದ್ದರು.

‘ಜಮ್ಮುವಿನ ಪ್ರಾದೇಶಿಕ ಸಮಸ್ಯೆ ಮತ್ತು ಮಾತೃಭೂಮಿಯ ಸಮನ್ವಯ’ ಎಂಬ ವಿಷಯದ ಬಗ್ಗೆಯೂ ಸಂವಾದ ಆಯೋಜಿಸಲಾಗಿತ್ತು.

ಜಮ್ಮು ಘೋಷಣೆಯಲ್ಲಿನ ಮಹತ್ವದ ಬೇಡಿಕೆಗಳು!

ಅಧಿವೇಶನವು ‘ಜಮ್ಮು ಘೋಷಣಾಪತ್ರ’ದ ವಾಚನದೊಂದಿಗೆ ಮುಕ್ತಾಯಗೊಂಡಿತು:

1. ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡಕ್ಕೆ ಕಾನೂನು ಮತ್ತು ಸಾಂವಿಧಾನಿಕ ಮಾನ್ಯತೆ.

2. ಪನೂನ ಕಾಶ್ಮೀರ ಎಂಬ ಕೇಂದ್ರಾಡಳಿತ ಪ್ರದೇಶದ ತಕ್ಷಣ ರಚನೆ.

3. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿನ ಸಂತ್ರಸ್ತ ಹಿಂದೂಗಳಿಗೆ ಸಂಪೂರ್ಣ ರಕ್ಷಣೆ ಮತ್ತು ಆಧಾರ.

ಈ ಬೇಡಿಕೆಗಳು ಈಡೇರದಿದ್ದರೆ, ರಾಷ್ಟ್ರವಾದಿ ಶಕ್ತಿಗಳು ದೇಶಾದ್ಯಂತ ಸಂಘಟಿತರಾಗಿ ಜಮ್ಮುವಿನಲ್ಲಿ ಒಗ್ಗೂಡುತ್ತವೆ. ಇದರ ಮೂಲಕ ರಾಷ್ಟ್ರ ಪುನಃಪ್ರಾಪ್ತಿಯ ಅಂತಿಮ ಹಂತವು ಪ್ರಾರಂಭವಾಗುತ್ತದೆ ಎಂಬ ಎಚ್ಚರಿಕೆಯನ್ನು ಘೋಷಣಾ ಪತ್ರದ ಮೂಲಕ ನೀಡಲಾಯಿತು.

ಅಧಿವೇಶನದಿಂದ ವ್ಯಕ್ತಪಡಿಸಲಾದ ಪ್ರಖರವಾದ ವಿಚಾರಗಳು!

1. ಇಸ್ಲಾಮಿಕ್ ಭಯೋತ್ಪಾದನೆಯ ಮೊದಲ ಬಲಿಪಶುಗಳಾದ ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ನೀಡುವುದು, ಇದು ಭವಿಷ್ಯದ ಹಿಂದೂ ರಾಷ್ಟ್ರದ ಮೂಲ ಅಡಿಪಾಯವಾಗುತ್ತದೆ.

2. ಕಾಶ್ಮೀರ ಕಣಿವೆಯ ಅಸ್ತಿತ್ವದಲ್ಲಿರುವ ಭೌಗೋಳಿಕ ಪ್ರದೇಶದಿಂದ ‘ಪನೂನ್ ಕಾಶ್ಮೀರ’ವನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಸ್ಥಾಪಿಸಬೇಕು ಎಂಬುದು ನಮ್ಮ ಸ್ಪಷ್ಟ ಬೇಡಿಕೆ. ಹಿಂದೂ ರಾಷ್ಟ್ರವು ನಿರ್ಭಯವಾಗಿ, ದೃಢವಾಗಿ ಮತ್ತು ಸ್ವ ಸ್ವರೂಪದಲ್ಲಿ ಉದಯಿಸಲೇಬೇಕು.

3. ಜಮ್ಮುವು ಕಳೆದ ಅನೇಕ ದಶಕಗಳಿಂದ ಅನ್ಯಾಯ ಮತ್ತು ರಾಜಕೀಯ ದಮನವನ್ನು ಸಹಿಸಿಕೊಂಡಿದೆ ಮತ್ತು ಅಲ್ಲಿನ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ. ನಾವು ಜಮ್ಮುವಿನ ಪ್ರತ್ಯೇಕ ಗುರುತು, ಅದರ ಹಕ್ಕುಗಳು ಮತ್ತು ಅಲ್ಲಿ ನಡೆಯುತ್ತಿರುವ ಅಭಿವೃದ್ಧಿಯನ್ನು ರಕ್ಷಿಸಲು ಸಂವಿಧಾನದಿಂದ ಶಾಸನಬದ್ಧ ಮತ್ತು ಆಡಳಿತಾತ್ಮಕ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ಸಂಪಾದಕೀಯ ನಿಲುವು

ಕಾಶ್ಮೀರಿ ಹಿಂದೂಗಳ ಪುನರ್ವಸತಿ ಸಾಧ್ಯವಾದರೆ ಮಾತ್ರ, ಭವಿಷ್ಯದಲ್ಲಿ ಬಂಗಾಳ, ಕೇರಳದಂತಹ ರಾಜ್ಯಗಳಲ್ಲಿ ಹಿಂದೂಗಳು ಉಳಿಯಬಹುದು ಎಂಬ ಸಂದೇಶವನ್ನು ಇದು ನೀಡಬಹುದು. ಇಲ್ಲವಾದರೆ, ಕಾಶ್ಮೀರದಂತೆಯೇ ಕೆಲವೇ ದಶಕಗಳಲ್ಲಿ ಈ ರಾಜ್ಯಗಳು ಕೂಡ ಹಿಂದೂಗಳ, ಅಂದರೆ ಭಾರತದ ಕೈಯಿಂದ ಜಾರಿ ಹೋಗುತ್ತವೆ ಎಂಬ ಕಠೋರ ಸತ್ಯವನ್ನು ತಿಳಿದುಕೊಳ್ಳಿ.