
ಸನಾತನ ಸಂಸ್ಥೆಯ ಅದ್ವಿತೀಯ ವೈಶಿಷ್ಟ್ಯ ಹೇಗಿದೆಯೆಂದರೆ, ತೀರಾ ಸಣ್ಣ ಒಂದು ಹಳ್ಳಿಯ ಸಾಧಕ ಕೂಡ ಸಂಸ್ಥೆಯೊಂದಿಗೆ ತನ್ನ ಕುಟುಂಬ ಎನ್ನುವ ಭಾವನೆಯಲ್ಲಿ ಜೋಡಿಸಲ್ಪಟ್ಟಿದ್ದಾನೆ. ಇನ್ನಿತರ ಅನೇಕ ಸಂಘಟನೆಗಳ ವಿಚಾರ ಮಾಡಿದರೆ ಕಾಲಾಂತರದಲ್ಲಿ ಅದರಿಂದ ಅನೇಕ ಜನರು ಹೊರಗೆ ಹೋಗಿ ಸಂಘಟನೆಯನ್ನು ವಿರೋಧಿಸುತ್ತಾರೆ, ಕೆಲವರು ದ್ವೇಷ ಮಾಡುತ್ತಾರೆ. ಕೆಲವರಿಗೆ ಆ ಸಂಘಟನೆಯಲ್ಲಿ ಸಮಾಧಾನ ಸಿಗುವುದಿಲ್ಲ. ‘ಸನಾತನದ ಸಾಧಕರು ಒಂದು ಪ್ರೇಮ ಬಂಧನದಲ್ಲಿ ಬಂಧಿಸಲ್ಪಟ್ಟಿದ್ದಾರೆ, ಇದರ ಕಾರಣವೇನೆಂಬುದು ಎಲ್ಲ ಸಂಘಟನೆಗಳಿಗೆ ಒಂದು ರಹಸ್ಯವೇ ಆಗಿದೆ. ಅದರ ಅನೇಕ ಕಾರಣಗಳಲ್ಲಿ ಕೆಲವು ಕಾರಣಗಳನ್ನು ಇಲ್ಲಿ ಕೊಡಲಾಗಿದೆ.
೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಕಲಿಸಿದ ಗುರುಕೃಪಾಯೋಗವೆಂಬ ನಿರಪೇಕ್ಷ ಸಾಧನೆ !
೧ ಅ. ಗುರುದೇವರು ಸಾಧಕರಿಗೆ ನಿರಪೇಕ್ಷಭಾವದಿಂದ ಸಾಧನೆಯನ್ನು ಕಲಿಸಿರುವುದು : ಗುರುದೇವರು ಆರಂಭದಿಂದಲೇ ಸಾಧಕರಿಗೆ ಐಹಿಕ ಸುಖದ ಅಪೇಕ್ಷೆಯಿಂದಲ್ಲ; ನಿರಪೇಕ್ಷ ಭಾವದಿಂದ ಸಾಧನೆ ಮಾಡಬೇಕೆಂಬ ಮಂತ್ರವನ್ನು ನೀಡಿದ್ದಾರೆ. ಆದ್ದರಿಂದ ಸಾಧಕರು ಏನಾದರೂ ಪಡೆಯಬೇಕೆಂಬ ಉದ್ದೇಶದಿಂದಲ್ಲ,
ಕೇವಲ ಆನಂದಪ್ರಾಪ್ತಿಗಾಗಿ ಸಾಧನೆ ಮಾಡುತ್ತಿದ್ದಾರೆ.
೧ ಆ. ಸಾಧಕರಲ್ಲಿ ಸರ್ವಸ್ವವನ್ನೂ ತ್ಯಾಗ ಮಾಡುವ ಸಂಸ್ಕಾರ ಮೂಡಿಸುವುದು : ಅವರು ಸಾಧಕರಿಗೆ ಸರ್ವಸ್ವವನ್ನೂ ತ್ಯಾಗ ಮಾಡುವ ಸಂಸ್ಕಾರ ಮಾಡಿದರು. ಆದ್ದರಿಂದ ‘ತನಗೆ ಏನಾದರೂ ಸಿಗಬೇಕೆಂಬ ಅಪೇಕ್ಷೆಯನ್ನಲ್ಲ, ತನಗೆ ಎಲ್ಲವನ್ನೂ ತ್ಯಾಗ ಮಾಡಲಿಕ್ಕಿದೆ’, ಎಂಬುದನ್ನು ಅವರು ಸಾಧಕರ ಮನಸ್ಸಿನಲ್ಲಿ ಬಿಂಬಿಸಿದ್ದಾರೆ.
೧ ಇ. ಗುರುದೇವರು ದೇವರಿಂದ ದೇವರನ್ನೇ ಬೇಡಿಕೊಳ್ಳುವ ದೃಷ್ಟಿಕೋನವನ್ನು ನೀಡುವುದು : ದೇವರು ಪ್ರತ್ಯಕ್ಷ ದರ್ಶನ ನೀಡಿ ಏನು ಬೇಕೆಂದು ಕೇಳಿದರೆ ‘ಜಾಗರೂಕರಾಗಿದ್ದು ದೇವರನ್ನೇ ಬೇಡಿಕೊಳ್ಳಿ; ಏಕೆಂದರೆ ದೇವರು ಸಿಕ್ಕಿದರೆ ಎಲ್ಲವೂ ಸಿಗುತ್ತದೆ’, ಎನ್ನುವ ಬೋಧನೆಯನ್ನು ಗುರುದೇವರು ನೀಡಿದ್ದಾರೆ. ಆದ್ದರಿಂದ ‘ದೇವರಿಂದಲೂ ಅಪೇಕ್ಷೆಯನ್ನಿಡದೇ ಅವರನ್ನೇ ಬೇಡಿಕೊಳ್ಳಿ’, ಎನ್ನುವ ದೃಷ್ಟಿಕೋನ ಸಾಧಕರಾದ ನಮಗೆಲ್ಲ ರಿಗೆ ಸಿಕ್ಕಿದೆ. ನಮಗೆ ಎಲ್ಲವನ್ನೂ ತ್ಯಾಗ ಮಾಡಲಿಕ್ಕಿದೆ’,
೧ ಈ. ಯಾವುದೇ ಸೇವೆ ಮಾಡುವಾಗ ‘ಈಶ್ವರಪ್ರಾಪ್ತಿ’ಯ ಉದ್ದೇಶ ಸಮಾನ ವಾಗಿರುವುದು : ಸಾಧಕರು ಪ್ರತಿ ಯೊಂದು ಸೇವೆಯನ್ನೂ ಉದಾ. ಅದು ಶೌಚಾಲಯದ ಸ್ವಚ್ಛತೆ ಇರಲಿ ಅಥವಾ ವ್ಯಾಸಪೀಠದಲ್ಲಿ ನಿಂತು ಪ್ರವಚನ ಮಾಡುವ ಸೇವೆ ಇರಲಿ, ಅವರು ಅದನ್ನು ಸಮಭಾವದಿಂದ ಮಾಡುತ್ತಾರೆ. ಆದ್ದರಿಂದ ಸೇವೆ ಬೌದ್ಧಿಕ ಅಥವಾ ಶಾರೀರಿಕ ಯಾವುದೇ ಆಗಿದ್ದರೂ ಮೂಲ ಉದ್ದೇಶ ‘ಈಶ್ವರಪ್ರಾಪ್ತಿ’ಯೇ ಆಗಿದೆ. ಈ ಬೋಧನೆಯಿಂದಲೇ ಎಲ್ಲ ಸಾಧಕರು ಆಧ್ಯಾತ್ಮಿಕ ಬೆಸುಗೆಯಿಂದ ಬದ್ಧರಾಗಿದ್ದಾರೆ. ಇನ್ನಿತರ ಕೆಲವು ಸಂಘಟನೆಗಳಲ್ಲಿ ಬಿರುಕು ಬಿದ್ದು ಅನೇಕ ಹೊಸ ಸಂಘಟನೆಗಳು ಸ್ಥಾಪನೆಯಾಗಿರುವ ಉದಾಹರಣೆಗಳಿವೆ.

೧ ಉ. ಸಾಧಕರಿಂದ ತಪ್ಪಾದರೂ, ಅವರಿಗೆ ಯೋಗ್ಯ ಮಾರ್ಗದರ್ಶನ ನೀಡಿ ಸಾಧನೆಯಲ್ಲಿ ಉಳಿಸಿಕೊಳ್ಳುವುದು : ಯಾವುದೇ ಸಂಘಟನೆಯಲ್ಲಿ ಕಾರ್ಯಕರ್ತರಿಂದ ತಪ್ಪಾದರೂ ಅದನ್ನು ದುರ್ಲಕ್ಷಿಸ ಲಾಗುತ್ತದೆ ಅಥವಾ ಅದನ್ನು ಮಾನಸಿಕ ಹಂತದಲ್ಲಿ ಸಂಭಾಳಿಸ ಲಾಗುತ್ತದೆ. ಇದರಿಂದ ಅವರಿಗೆ ತಾತ್ಕಾಲಿಕ ಸಮಾಧಾನ ಸಿಗುತ್ತದೆ. ಆದರೆ ಸನಾತನದ ಯಾವುದಾದರೂ ಸಾಧಕನಿಂದ ಆಧ್ಯಾತ್ಮಿಕ ದೃಷ್ಟಿಯಲ್ಲಿ (ಸ್ವಭಾವದೋಷ ಮತ್ತು ಅಹಂನಿಂದ) ತಪ್ಪಾದರೆ, ಅವನನ್ನು ದುರ್ಲಕ್ಷಿಸದೆ ಅವನಿಂದ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆ (ಟಿಪ್ಪಣಿ) ಮಾಡಿಸಿಕೊಂಡು ಅವನನ್ನು ಸುಧಾರಿಸಲಾಗುತ್ತದೆ. ಅದರಿಂದ ಅವನಿಗೆ ನವಚೈತನ್ಯ ಸಿಗುತ್ತದೆ. ಇದರಿಂದ ಎದೆಗುಂದಿರುವ ಅನೇಕ ಸಾಧಕರು ಹೊಸ ಉತ್ಸಾಹದಿಂದ ಸಾಧನೆ ಮಾಡುತ್ತಾರೆ.
(ಟಿಪ್ಪಣಿ : ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ-ತನ್ನಲ್ಲಿನ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡಲು ಪ್ರತಿದಿನ ತನ್ನಿಂದಾಗುವ ಅಯೋಗ್ಯ ಕೃತಿ ಮತ್ತು ಅಯೋಗ್ಯ ವಿಚಾರಗಳನ್ನು ಪುಸ್ತಕದಲ್ಲಿ ಬರೆದು ಅದರ ಮುಂದೆ ಯೋಗ್ಯ ಕೃತಿ ಮತ್ತು ವಿಚಾರಗಳನ್ನು ಬರೆಯುವುದು ಹಾಗೂ ಅದಕ್ಕೆ ಸಂಬಂಧಿಸಿ ದಿನದಲ್ಲಿ ೧೦ ರಿಂದ ೧೨ ಬಾರಿ ಮನಸ್ಸಿಗೆ ಯೋಗ್ಯ ಕೃತಿ ಮಾಡುವ ಸೂಚನೆ ಕೊಡುವುದು)
೨. ಸಾಧಕರನ್ನು ಅಪಾರವಾಗಿ ಪ್ರೀತಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
೨ ಅ. ಗುರುದೇವರಿಗೆ ಸಾಧಕರ ಮೇಲಿರುವ ಅಪಾರ ಪ್ರೀತಿ ! : ಗುರುದೇವರ ಪ್ರೀತಿಯು ಎಲ್ಲ ಗುಣಗಳ ಮುಕುಟಮಣಿ ಯಾಗಿದೆ. ಒಮ್ಮೆ ಅವರು ಹೀಗೆ ಹೇಳಿದ್ದರು, ‘ಸಂತ ತುಕಾರಾಮ ಮಹಾರಾಜ ರನ್ನು ಕರೆದೊಯ್ಯಲು ಪುಷ್ಪಕ ವಿಮಾನ ಬಂತು, ಅದೇ ರೀತಿ ನನ್ನನ್ನು ಕರೆದೊಯ್ಯಲು ವಿಷ್ಣು ಲೋಕದಿಂದ ಪುಷ್ಪಕ ವಿಮಾನ ಬಂದರೆ, ನಾನು ಮೊದಲು ‘ಎಲ್ಲ ಸಾಧಕರು ಅದರಲ್ಲಿ ಕುಳಿತುಕೊಂಡಿದ್ದಾರೆಯೆ ? ಎಂದು ದೃಡಪಡಿಸಿ ಕೊಂಡೇ ನಾನು ಕುಳಿತು ಕೊಳ್ಳುವೆನು.’ ಈ ಒಂದು ವಾಕ್ಯದಲ್ಲಿ ಗುರುದೇವರಿಗೆ ಸಾಧಕರ ಮೇಲಿರುವ ಅಪಾರ ಪ್ರೀತಿಯ ಅನುಭವವಾಗುತ್ತದೆ.
೨ ಆ. ಸಾಧಕರನ್ನು ಸಿದ್ಧಪಡಿಸಿ ಅವರಿಂದ ಸಾಧನೆ ಮತ್ತು ಸೇವೆ ಮಾಡಿಸಿಕೊಳ್ಳುವುದು ಸಹ ಭಗವಂತನ ಒಂದು ಲೀಲೆಯೇ ಆಗಿದೆ : ಈ ರೀತಿ ಸಾಧಕರನ್ನು ಸಿದ್ಧಪಡಿಸಿ ಅವರಿಂದ ಸಾಧನೆ ಮತ್ತು ಸೇವೆ ಮಾಡಿಸಿಕೊಳ್ಳುವುದೆಂದರೆ ಭಗವಂತನ ಲೀಲೆಯೆ ಆಗಿದೆ. ಒಂದೇ ವಾಕ್ಯದಲ್ಲಿ ಹೇಳುವುದಾದರೆ, ಹೇಗೆ ತಾಯಿ ತನ್ನ ಮಗುವಿಗೆ ಯಾವುದೇ ತರಹದ ಕಷ್ಟವಾಗಬಾರದೆಂದು ಹಗಲಿರುಳು ಶ್ರಮಿಸುತ್ತಾಳೆಯೋ, ಹಾಗೆಯೆ ನಮ್ಮ ಗುರುದೇವರು ಎಲ್ಲ ಸಾಧಕರನ್ನು ಕಾಪಾಡುತ್ತಿದ್ದಾರೆ. ಸಾಧಕರನ್ನು ಜೀವಕ್ಕಿಂತಲೂ ಹೆಚ್ಚು ಜೋಪಾಸನೆ ಮಾಡುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ನಾವೆಲ್ಲ ಸಾಧಕರು ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ.’ – ಶ್ರೀ. ಪ್ರಶಾಂತ ಹರಿಹರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೪.೨೦೨೫)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !