
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮದಿನ ದಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ-ನೃತ್ಯ ವಿಭಾಗದ ವರ್ಧಂತ್ಯುತ್ಸವವಿರುತ್ತದೆ. ಈ ನಿಮಿತ್ತ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಗುರುದೇವರ ಚರಣಗಳಲ್ಲಿ ಸಂಗೀತ ಮತ್ತು ನೃತ್ಯ ಸೇವೆಯನ್ನು ಅರ್ಪಿಸಲಾಯಿತು. ಮಹೋತ್ಸವದ ಉದ್ಘಾಟನೆಯ ದಿನದಂದು ‘ಶಕ್ತಿಸ್ತವನ’, ಎರಡನೇ ದಿನ ‘ಸನಾತನ ರಾಷ್ಟ್ರ ಶೌರ್ಯಗೀತೆ’ ಮತ್ತು ಮೂರನೇ ದಿನ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಆರತಿಯಾದ ನಂತರ ‘ಸನಾತನ ರಾಷ್ಟ್ರ ಮಹೋತ್ಸವ ಕೃತಜ್ಞತಾಗೀತೆ’ಯನ್ನು ಅರ್ಪಿಸಲಾಯಿತು. ನೃತ್ಯಸೇವೆಯಲ್ಲಿ ೧೪ ಸಾಧಕಿಯರು ಭಾಗವಹಿಸಿದ್ದರು. ಸಮಾಜದಲ್ಲಿ ಸಂಗೀತ ಮತ್ತು ನೃತ್ಯವನ್ನು ಕೇವಲ ಮನೋರಂಜನೆಗಾಗಿ ಬಳಸಲಾಗುತ್ತದೆ. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಈಶ್ವರಪ್ರಾಪ್ತಿಗಾಗಿ ಕಲೆ’ ಈ ಉದ್ದೇಶವನ್ನಿಟ್ಟುಕೊಂಡು ಕಲೆಯ ಮಾಧ್ಯಮ ದಿಂದ ಸಾಧನೆಯನ್ನು ಕಲಿಸುತ್ತಿದೆ. ವಿದ್ಯಾಲಯದ ನೃತ್ಯ ವಿಭಾಗದ ಸಾಧಕಿಯರು ಗುರುಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ನೃತ್ಯವನ್ನು ಪ್ರಸ್ತುತಪಡಿಸಿದರು.


ಸಂಕಲನಕಾರರು : ಸುಶ್ರೀ (ಕು.) ತೇಜಲ ಅಶೋಕ ಪಾತ್ರೀಕರ, ಸಂಗೀತ ವಿಶಾರದ ಮತ್ತು ಸೌ. ಸಾವಿತ್ರಿ ವೀರೇಂದ್ರ ಇಚಲಕರಂಜೀಕರ, ನೃತ್ಯ ಅಭ್ಯಾಸಕಿ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.

ಹರಿ ಔರ ಗುರು ದೊ ರೂಪ ಸಮಾನ |
ಅರ್ಥ : ಶ್ರೀವಿಷ್ಣು ಮತ್ತು ಗುರು ಈ ಎರಡೂ ರೂಪಗಳು ಒಂದೇ ಆಗಿವೆ.
ಗುರು ಶಿವ, ಗುರು ವಿಷ್ಣು, ಗುರು ಬ್ರಹ್ಮಾ |
ತ್ರಿಮುಖಿ ದರಸ ಗುರು ಪಾಯ ಪಖಾರು ||
ಅರ್ಥ : ಗುರುವೇ ಶಿವ, ಗುರುವೇ ವಿಷ್ಣು ಮತ್ತು ಗುರುವೇ ಬ್ರಹ್ಮಾ ಆಗಿದ್ದಾರೆ. ಮೂರೂ ತತ್ತ್ವಗಳಿರುವ ಗುರುಗಳ ಚರಣಗಳನ್ನು ನಾವು ಪೂಜಿಸುತ್ತೇವೆ.
‘ಧ್ಯಾನಮೂಲಂ ಗುರೋರ್ಮೂರ್ತಿಃ ಪೂಜಾಮೂಲಂ ಗುರೋಃ ಪದಮ್ |
ಮಂತ್ರಮೂಲಂ ಗುರೋರ್ವಾಕ್ಯಂ ಮೋಕ್ಷಮೂಲಂ ಗುರೋಃ ಕೃಪಾ || – ಗುರುಗೀತಾ, ಶ್ಲೋಕ ೭೬
ಅರ್ಥ : ಧ್ಯಾನದ ಆಧಾರಸ್ಥಾನ ಗುರುಮೂರ್ತಿ, ಪೂಜೆಯ ಮೂಲಸ್ಥಾನ ಗುರುಚರಣ, ಮಂತ್ರದ ಉಗಮಸ್ಥಾನ ಗುರುವಾಕ್ಯ ಮತ್ತು ಮೋಕ್ಷದ ಮೂಲಾಧಾರ ಗುರುಗಳ ಕೃಪೆಯಾಗಿದೆ.
ನಾವು ‘ನೃತ್ಯ ಸೇವೆಯ ಮಾಧ್ಯಮದಿಂದ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುತ್ತಿದ್ದೇವೆ’, ಎಂಬ ಭಾವವನ್ನಿಟ್ಟುಕೊಂಡಿದ್ದೆವು….

ಆರಂಭದಲ್ಲಿ ‘ಅಖಂಡಮಂಡಲಾಕಾರಂ…’, ಈ ಶ್ರೀ ಗುರುಗಳ ಶ್ಲೋಕ ಮತ್ತು ನಂತರ ‘ಗುರುಚರಣನಪರ ಶೀಶ ನಮಾವುಂ, ಹರಿಚರಣನ ಪರ ಶೀಶ ಝುಕಾವುಂ…’, ಈ ಗೀತೆಯ ಮೇಲೆ ಆಧರಿಸಿದ ನೃತ್ಯವನ್ನು ಪ್ರಸ್ತುತ ಪಡಿಸಲಾಯಿತು. ಅದರಲ್ಲಿ ‘ಸಂಪೂರ್ಣ ಚರಾಚರದಲ್ಲಿ ವ್ಯಾಪಿಸಿದ ಗುರುತತ್ತ್ವಕ್ಕೆ ನಮಸ್ಕರಿಸಿ ಅವರ ಚರಣಗಳಲ್ಲಿ ಕೋಟಿಶಃ ಕೃತಜ್ಞರಾಗಿದ್ದೇವೆ’, ಎಂದು ಹೇಳುತ್ತಾ ನಾವು ಕೃತಜ್ಞತೆಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸಿದೆವು. ಈ ನೃತ್ಯದ ಸಂಕಲ್ಪನೆ ಮುಂದಿನಂತಿದೆ.


ಆರಂಭದಲ್ಲಿ ಗಾಯಕನು ಆಲಾಪನೆಯನ್ನು ಹೇಳಿದ್ದಾನೆ. ಆಗ ಎಲ್ಲರ ಹೃದಯದಿಂದ ಒಂದು ಜ್ಯೋತಿಯು ಹೊರ ಬರುತ್ತದೆ ಮತ್ತು ಅದು ಮತ್ತೇ ಒಂದು ಸ್ಥಳದಲ್ಲಿ, ಅಂದರೆ ಗುರುಗಳ ಚರಣಗಳಲ್ಲಿ ಏಕರೂಪವಾಗುತ್ತದೆ. ಇದರಲ್ಲಿ ಆರಂಭದಲ್ಲಿ ‘ಗುರು ಮತ್ತು ಹರಿ ಇವರಿಬ್ಬರೂ ಒಂದೇ ಆಗಿದ್ದಾರೆ’, ಎಂದು ದರ್ಶಿಸಲಾಗಿತ್ತು. ಅನಂತರ ‘ನಾವು ಗೋವುಗಳನ್ನು ಪೋಷಿಸುವ ಶ್ರೀಕೃಷ್ಣನನ್ನು ಸ್ಮರಿಸೋಣ’, ಎಂದು ಹೇಳುತ್ತಾ ಗೋಕುಲದ ದೃಶ್ಯವನ್ನು ತೋರಿಸಲಾಗಿತ್ತು. ‘ಗುರುವೇ ಶಿವ, ವಿಷ್ಣು ಮತ್ತು ಬ್ರಹ್ಮಾ ಆಗಿದ್ದಾರೆ’, ಎಂದು ಹೇಳುತ್ತಾ ಡಮರು ಬಾರಿಸುವ ಗಂಗಾಧರ ಶಿವ; ಕಮಲ, ಗದೆ, ಚಕ್ರ ಮತ್ತು ಶಂಖವನ್ನು ಧಾರಣೆ ಮಾಡಿದ ವಿಷ್ಣು ಮತ್ತು ಕಮಲಾಸನಸ್ಥಿತ ಬ್ರಹ್ಮಾ ಇವರ ರೂಪಗಳನ್ನು ಸಾಕಾರಗೊಳಿಸಲಾಗಿತ್ತು.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !