ಭಾರತ ಎಂದಿಗೂ ‘ಹಿಂದೂ ರಾಷ್ಟ್ರ’ ಅಥವಾ ‘ಇಸ್ಲಾಮಿಕ್ ರಾಷ್ಟ್ರ’ ಆಗುವುದಿಲ್ಲ! – ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಝ್ವಿ ಬರೇಲವಿ

ಪಾಟಲೀಪುತ್ರ (ಬಿಹಾರ): ಸನಾತನ ಮಹಾಕುಂಭದಲ್ಲಿ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಮತ್ತು ಸ್ವಾಮಿ ರಾಮಭದ್ರಾಚಾರ್ಯರ ಹಿಂದೂ ರಾಷ್ಟ್ರ ಘೋಷಣೆಯ ಪ್ರಸಂಗ

ಬರೇಲಿ (ಉತ್ತರ ಪ್ರದೇಶ) – ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ. ಭಾರತವು ‘ಭಗವಾ-ಎ-ಹಿಂದ್’ ಆಗುವುದಿಲ್ಲ, ಅಥವಾ ‘ಗಜವಾ-ಎ-ಹಿಂದ್’ (ಕಾಫಿರರ ಮೇಲೆ ವಿಜಯ ಸಾಧಿಸಿ ಅವರನ್ನು ಇಸ್ಲಾಮೀಕರಣಗೊಳಿಸುವ ಯುದ್ಧ) ಆಗುವುದಿಲ್ಲ. ಭಾರತ ಎಂದಿಗೂ ‘ಹಿಂದೂ ರಾಷ್ಟ್ರ’ ಅಥವಾ ‘ಇಸ್ಲಾಮಿಕ್ ರಾಷ್ಟ್ರ’ ಆಗುವುದಿಲ್ಲ, ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಈ ಎರಡು ವಿಷಯಗಳ ಬಗೆಗಿನ ಹೇಳಿಕೆಗಳಿಂದ ದೇಶದಲ್ಲಿ ಸಮಸ್ಯೆಗಳು ಉಂಟಾಗಬಹುದು ಮತ್ತು ಉಗ್ರವಾದಿ ಚಿಂತನೆಗೆ ಪ್ರೋತ್ಸಾಹ ಸಿಗಬಹುದು ಎಂದು ‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಝ್ವಿ ಬರೇಲವಿ ಪ್ರತಿಕ್ರಿಯಿಸಿದ್ದಾರೆ. ಬಿಹಾರದ ರಾಜಧಾನಿ ಪಾಟಲೀಪುತ್ರದಲ್ಲಿ ಆಯೋಜಿಸಿದ್ದ ಸನಾತನ ಕುಂಭಮೇಳದಲ್ಲಿ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಮತ್ತು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ ಅವರು ಹಿಂದೂ ರಾಷ್ಟ್ರದ ಬೇಡಿಕೆ ಇಟ್ಟಿದ್ದರು. ಆ ಬಗ್ಗೆ ಬರೇಲವಿ ಮಾತನಾಡುತ್ತಿದ್ದರು.

ಮೌಲಾನಾ ಶಹಾಬುದ್ದೀನ್ ರಝ್ವಿ ಅವರು ಮಾತು ಮುಂದುವರೆಸಿ,

೧. ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಮತ್ತು ಸ್ವಾಮಿ ರಾಮಭದ್ರಾಚಾರ್ಯ ಮಹಾರಾಜ ಇಬ್ಬರೂ ವಾತಾವರಣ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಹೇಳಿಕೆ ನೀಡುತ್ತಾರೆ. ಬಿಹಾರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಆದ್ದರಿಂದ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಅಖಾಡಕ್ಕೆ ಇಳಿದಿವೆ. ಇಂತಹ ರಾಜಕೀಯ ವಾತಾವರಣದಲ್ಲಿ ಇವರಿಬ್ಬರೂ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಹೇಳಿಕೆ ನೀಡಿದ್ದಾರೆ.

2. ಧೀರೇಂದ್ರಕೃಷ್ಣ ಶಾಸ್ತ್ರಿ ಅವರು, ‘ಭಾರತ ಹಿಂದೂ ರಾಷ್ಟ್ರವಾಗುವುದಾದರೆ, ಅದು ಬಿಹಾರದಿಂದಲೇ ಪ್ರಾರಂಭವಾಗುತ್ತದೆ’ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯು ಸಂಪೂರ್ಣವಾಗಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನೀಡಲಾಗಿದೆ. ಈ ಹೇಳಿಕೆಯ ಉದ್ದೇಶ ಧಾರ್ಮಿಕ ಧ್ರುವೀಕರಣ ಮಾಡುವುದು, ಹಿಂದೂಗಳು ಮತ್ತು ಮುಸ್ಲಿಮರನ್ನು ಪರಸ್ಪರರಿಂದ ಬೇರ್ಪಡಿಸುವುದು. ಇದು ಅವರ ತಂತ್ರವಾಗಿದ್ದು, ಒಟ್ಟಾರೆ ಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷಕ್ಕೆ ಲಾಭವಾಗಬೇಕು ಎಂಬುದು ಅವರ ಪೂರ್ವಯೋಜಿತ ನಡೆಯಾಗಿದೆ.

3. ಅವರ ಎರಡನೆಯ ಹೇಳಿಕೆ ಏನೆಂದರೆ, ‘ಭಾರತದಲ್ಲಿ ಶೇ. ೮೦% ರಷ್ಟು ಹಿಂದೂ ಜನಸಂಖ್ಯೆ ಬಂದಾಗ, ಭಾರತವನ್ನು ‘ಭಗವಾ-ಎ-ಹಿಂದ್’ ಎಂದು ಘೋಷಿಸಲಾಗುವುದು’; ಆದರೆ ಅವರಿಗೆ ಗೊತ್ತಿಲ್ಲ, ಭಾರತ ಸರಕಾರದ ಅಂಕಿ-ಅಂಶಗಳ ಪ್ರಕಾರ, ಪ್ರಸ್ತುತ ದೇಶದಲ್ಲಿ ಶೇ.೧೯% ಮುಸ್ಲಿಂ ಜನಸಂಖ್ಯೆಯಿದೆ ಮತ್ತು ಶೇ. ೮೧% ಮುಸ್ಲಿಮೇತರ ಜನಸಂಖ್ಯೆಯಿದೆ. ಅವರು ‘ಭಗವಾ-ಎ-ಹಿಂದ್’ ಘೋಷಣೆಯನ್ನು ‘ಗಜವಾ-ಎ-ಹಿಂದ್’ ಗೆ ಪ್ರತಿಯಾಗಿ ನೀಡಿದ್ದಾರೆ; ಆದರೆ ಭಾರತದ ಮುಸ್ಲಿಮರು ಈಗಾಗಲೇ ‘ಗಜವಾ-ಎ-ಹಿಂದ್’ ಘೋಷಣೆಯನ್ನು ನಿರಾಕರಿಸಿದ್ದಾರೆ.

4. ಈ ಇಬ್ಬರೂ ಕಥಾ ವಾಚಕರು ಇಂತಹ ಹೇಳಿಕೆಗಳನ್ನು ನೀಡಿದರೆ ದೇಶದಲ್ಲಿ ಉಗ್ರವಾದಿ ವಿಚಾರಗಳಿಗೆ ಬಲ ಸಿಗಬಹುದು. ಈ ಇಬ್ಬರ ಘೋಷಣೆಗಳಿಗೂ ಮತ್ತು ಇತರ ಉಗ್ರವಾದಿಗಳ ಘೋಷಣೆಗಳಿಗೂ ಏನು ವ್ಯತ್ಯಾಸವಿದೆ? ಇಂತಹ ವಿಷಯಗಳಿಂದ ಭಾರತದ ಪ್ರತಿಷ್ಠೆ ಹಾಳಾಗುತ್ತದೆ ಮತ್ತು ಉಗ್ರವಾದಿ ವಿಚಾರಧಾರೆ ಹರಡುತ್ತದೆ.

ಸಂಪಾದಕೀಯ ನಿಲುವು

  • ‘ಭಾರತ ಇಸ್ಲಾಮಿಕ್ ದೇಶವಾಗಬೇಕು’ ಎಂದು ಬಯಸದ ಒಬ್ಬ ಮೌಲಾನಾ (ಇಸ್ಲಾಂ ವಿದ್ವಾಂಸ) ಕೂಡ ಇಲ್ಲ; ಆದರೆ ಜನರ ಮುಂದೆ ಮುಗ್ಧರಂತೆ ನಟಿಸಿ, ಇಸ್ಲಾಮಿಕ್ ದೇಶದ ಬೇಡಿಕೆಯನ್ನು ನಿರಾಕರಿಸುವಾಗ ಹಿಂದೂ ರಾಷ್ಟ್ರವನ್ನು ವಿರೋಧಿಸುವುದು ಅವರ ಕುತಂತ್ರದ ಆಟ ಎಂಬುದನ್ನು ಗಮನಿಸಬೇಕು.
  • ‘ಭಾರತ ಇಸ್ಲಾಮಿಕ್ ರಾಷ್ಟ್ರವಾಗುವುದಿಲ್ಲ’ ಎಂಬುದು ಎಷ್ಟು ಸತ್ಯವೋ, ‘ಭಾರತ ಹಿಂದೂ ರಾಷ್ಟ್ರವಾಗುತ್ತದೆ’ ಎಂಬುದು ಕೂಡ ಅಷ್ಟೇ ಸತ್ಯ!