
ಶಾಸಕ ಪ್ರೊ. (ಡಾ.) ವೀರೇಂದ್ರ ಯಾದವ, ಶಾಸಕ ಕುಮಾರ ನಾಗೇಂದ್ರ, ಶಾಸಕ ಸರ್ವೇಶ ಕುಮಾರ ಅವರೊಂದಿಗೆ ನ್ಯಾಯವಾದಿ ವಸಿಷ್ಠ ಯಾದವ ಇವರ ಉಪಸ್ಥಿತಿ
ರಾಮನಾಥಿ (ಫೊಂಡಾ) – ಬಿಹಾರದ ಜನತಾ ದಳ (ಯುನೈಟೆಡ್) ಪಕ್ಷದ ಶಾಸಕ ಪ್ರೊ. (ಡಾ.) ವೀರೇಂದ್ರ ಯಾದವ, ಅವರ ಸಹೋದರ ನ್ಯಾಯವಾದಿ ವಸಿಷ್ಠ ಯಾದವ, ರಾಷ್ಟ್ರೀಯ ಜನತಾ ದಳದ ಶಾಸಕ ಕುಮಾರ ನಾಗೇಂದ್ರ ಮತ್ತು ಪಕ್ಷೇತರ ಶಾಸಕ ಸರ್ವೇಶ ಕುಮಾರ ಹಾಗೆಯೇ ಅವರ ಕುಟುಂಬ ಸದಸ್ಯರು ಜುಲೈ 1 ರಂದು ಇಲ್ಲಿನ ಸನಾತನ ಆಶ್ರಮಕ್ಕೆ ಸೌಹಾರ್ದ ಭೇಟಿ ನೀಡಿದರು. ಇವರೆಲ್ಲರೂ ಬಿಹಾರದ ವಿಧಾನ ಪರಿಷತ್ತಿನ ಶಾಸಕರಾಗಿದ್ದಾರೆ. ಸನಾತನದ ಸಾಧಕರಾದ ಶ್ರೀ. ನಿಷಾದ ದೇಶಮುಖ ಅವರು ಆಶ್ರಮದಲ್ಲಿ ನಡೆಯುವ ರಾಷ್ಟ್ರ, ಧರ್ಮ, ಆಧ್ಯಾತ್ಮ ಮತ್ತು ಸಂಶೋಧನೆ ಮೊದಲಾದ ಕಾರ್ಯಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದರು. ಎಲ್ಲರೂ ಆಶ್ರಮದ ಕಾರ್ಯಗಳ ಬಗ್ಗೆ ಕುತೂಹಲದಿಂದ ತಿಳಿದುಕೊಂಡರು.
ಈ ಸಂದರ್ಭದಲ್ಲಿ, ಧರ್ಮಪ್ರಚಾರಕ ಸಂತ ಸದ್ಗುರು ನೀಲೇಶ ಸಿಂಗಬಾಳ ಅವರು ಪ್ರೊ. (ಡಾ.) ವೀರೇಂದ್ರ ಯಾದವ ಅವರನ್ನು ಶಾಲು, ಶ್ರೀಫಲ ಮತ್ತು ಉಡುಗೊರೆ ನೀಡಿ ಸತ್ಕರಿಸಿದರು. ಆಗ ಅವರೊಂದಿಗೆ ಇತರ ಗಣ್ಯರು ವಿನಮ್ರವಾಗಿ, “ನಾವು ದೇವರ ದ್ವಾರಕ್ಕೆ ಬಂದಿದ್ದೇವೆ. ವಾಸ್ತವವಾಗಿ, ನಮ್ಮ ತನು-ಮನಗಳನ್ನು ಅರ್ಪಿಸಿ ನಾವು ನಿಮಗೆ ಸಹಾಯ ಮಾಡಬೇಕು, ಆದರೆ ನೀವು ನಮ್ಮನ್ನು ಗೌರವಿಸುತ್ತಿದ್ದೀರಿ” ಎಂದು ಭಾವನೆ ವ್ಯಕ್ತಪಡಿಸಿ ಆಶ್ರಮದ ಪ್ರಸಾದ ಮತ್ತು ಗ್ರಂಥಗಳನ್ನು ಮಾತ್ರ ಸ್ವೀಕರಿಸಿದರು.
Bihar MLAs Visit Sanatan Ashram in Goa – A Spiritually Enriching Experience! 🙏
MLAs Dr. Virendra Yadav @ProfDrVirendra , Kumar Nagendra @RinkuYadavMLC , Sarvesh Kumar @SarveshKumarMLC & Adv. Vashisht Yadav paid a heartfelt visit to @SanatanSanstha‘s ashram dedicated to… pic.twitter.com/wo61Yz5JnK
— Sanatan Prabhat (@SanatanPrabhat) July 3, 2025
ಆಶ್ರಮವನ್ನು ನೋಡಿದ ನಂತರ ಗಣ್ಯರು, “ನಾವೆಲ್ಲರೂ ಒಂದೇ ಕಾಲೋನಿ (ಸಂಕೀರ್ಣ) ನಲ್ಲಿ ವಾಸಿಸುತ್ತೇವೆ. ಅಲ್ಲಿ ನಮ್ಮ ಮನೆಗಳಲ್ಲಿ ಒಂದನ್ನು ನಿಮ್ಮ ಆಶ್ರಮವನ್ನಾಗಿ ಮಾಡಿಕೊಳ್ಳಿ. ಇದಕ್ಕಾಗಿ ನಾವು ಸಾಧ್ಯವಾದಷ್ಟು ಸಹಾಯ ಮಾಡುತ್ತೇವೆ. ಆಶ್ರಮ ಮತ್ತು ಸನಾತನ ಸಂಸ್ಥೆಯ ಕಾರ್ಯಗಳನ್ನು ಹೇಳಿ ನೀವು ನಮ್ಮನ್ನು ಕ್ರಿಯಾಶೀಲರನ್ನಾಗಿ ಮಾಡಿದ್ದೀರಿ” ಎಂದು ಹೇಳಿದರು ಮತ್ತು ವಾರಣಾಸಿಯ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಹಾಗೆಯೇ, ಅವರು ಬಿಹಾರದಲ್ಲಿ ವಾಸಿಸುವ ಪ್ರದೇಶದಲ್ಲಿ ಉಪನ್ಯಾಸಗಳನ್ನು ಆಯೋಜಿಸಲು ಕೇಳಿಕೊಂಡರು.
ಭೂಮಿಯ ಮೇಲೆ ಇಂತಹ ಆಶ್ರಮ ಇರಬಹುದು ಎಂದು ನಾವು ಎಂದಿಗೂ ಊಹಿಸಿರಲಿಲ್ಲ! – ಸ್ವಯಂಪ್ರೇರಿತ ಅಭಿಪ್ರಾಯ

ಆಶ್ರಮವನ್ನು ನೋಡಿದ ನಂತರ, “ಭೂಮಿಯ ಮೇಲೆ ಇಂತಹ ಆಶ್ರಮ ಇರಬಹುದು ಎಂದು ನಾವು ಎಂದಿಗೂ ಊಹಿಸಿರಲಿಲ್ಲ” ಎಂದು ಅವರು ಈ ಸಮಯದಲ್ಲಿ ಸ್ವಯಂಪ್ರೇರಿತವಾಗಿ ಉದ್ಗರಿಸಿದರು. ಆಶ್ರಮದ ನೆಲಹಾಸಿನ ಮೇಲೆ ಮೂಡಿಬಂದಿರುವ ‘ಓಂ’ ಎಂಬ ದೈವೀ ಚಿಹ್ನೆಯನ್ನು ನೋಡಿದಾಗ, “ಇದು ದಿವ್ಯ ಅನುಭೂತಿ” ಎಂದೂ ಅವರು ಹೇಳಿದರು.
ಗಣ್ಯರು ನೀಡಿದ ಅಭಿಪ್ರಾಯಗಳು
1. ಶಾಸಕ ಪ್ರೊ. (ಡಾ.) ವೀರೇಂದ್ರ ಯಾದವ: ಆಶ್ರಮವನ್ನು ನೋಡಿ ಹೃದಯದಿಂದ ಪ್ರಭಾವಿತನಾದೆ. ಜಗತ್ತನ್ನು ಸುಂದರಗೊಳಿಸುವ ಸಾಧನೆ ಇಲ್ಲಿ ಹೇಳಲಾಗುತ್ತದೆ. ಆಶ್ರಮದ ನಿರ್ವಹಣೆ ಅತ್ಯುತ್ತಮ ಮತ್ತು ಅನುಕರಣೀಯವಾಗಿದೆ.
2. ಶಾಸಕ ಕುಮಾರ ನಾಗೇಂದ್ರ: ಇಲ್ಲಿಗೆ ಬಂದಾಗ ಒಂದು ವಿಭಿನ್ನ ರೀತಿಯ ಅನುಭೂತಿ ಆಯಿತು. ಗೋವಾದಲ್ಲಿ ಸನಾತನ (ಧರ್ಮದ) ಸಂಬಂಧವಾಗಿ ನಡೆಯುತ್ತಿರುವ ಕಾರ್ಯವು ಪ್ರೇರಣಾದಾಯಕವಾಗಿದೆ. ವೈಜ್ಞಾನಿಕ ವಿಧಾನದಿಂದ ಗ್ರಂಥಗಳು ಮತ್ತು ಘಟನೆಗಳ ಬಗ್ಗೆ ಸಂಶೋಧನೆಯ ಮೂಲಕ ನಡೆಯುತ್ತಿರುವ ಕೆಲಸವು ತುಂಬಾ ಪ್ರಭಾವಶಾಲಿಯಾಗಿದೆ.
3. ಸೌ. ಮಿನ್ಟಿ ಕುಮಾರಿ (ಶಾಸಕ ಕುಮಾರ ನಾಗೇಂದ್ರ ಅವರ ಪತ್ನಿ): ಆಶ್ರಮವನ್ನು ನೋಡಿ ಆನಂದದ ಅನುಭೂತಿ ಆಯಿತು. ಸರಳತೆ, ಸ್ವಚ್ಛತೆ ಮತ್ತು ಸಕಾರಾತ್ಮಕತೆಯನ್ನು ಅನುಭವಿಸಿದೆ. ಸೂಕ್ಷ್ಮ ಜಗತ್ತಿನ ಪ್ರದರ್ಶನವು ತುಂಬಾ ಚೆನ್ನಾಗಿದೆ.
4. ನ್ಯಾಯವಾದಿ ವಸಿಷ್ಠ ಯಾದವ: ಆಶ್ರಮಕ್ಕೆ ಬಂದಾಗ ಮನಸ್ಸಿನಲ್ಲಿ ಪವಿತ್ರತೆಯ ಭಾವ ಮೂಡಿತು. ಇಲ್ಲಿನ ನಿರ್ವಹಣೆ ಮತ್ತು ಇಲ್ಲಿ ವಾಸಿಸುವವರ ಆಧ್ಯಾತ್ಮದ ಮೇಲಿನ ಸಮರ್ಪಣೆಯನ್ನು ನೋಡಿ ನನಗೆ ಪ್ರೇರಣೆ ಸಿಕ್ಕಿತು. ಸೂಕ್ಷ್ಮ ಜಗತ್ತಿನ ಪ್ರದರ್ಶನವನ್ನು ನೋಡಿ ತಮ್ಮ ಆಚರಣೆಯಲ್ಲಿ ಪವಿತ್ರತೆಯನ್ನು ತರಲು ಪ್ರೇರಣೆ ಸಿಕ್ಕಿತು. ಇಂತಹ ಆಶ್ರಮ ಬಿಹಾರ ಮತ್ತು ಇತರ ರಾಜ್ಯಗಳಲ್ಲಿ ಆದರೆ ಒಳ್ಳೆಯದಾಗುವುದು.
5. ಶಾಸಕ ಸರ್ವೇಶ ಕುಮಾರ: ‘ಅಲೌಕಿಕ! ಜೀವನವನ್ನು ಪರಿವರ್ತಿಸುವ ಸಂಸ್ಥೆ! ಸ್ವಚ್ಛತೆ, ಸಂಸ್ಕಾರ ಮತ್ತು ಜೀವನಕ್ಕೆ ದಿಕ್ಕನ್ನು ನೀಡುವ ಸಮರ್ಥ ಸಂಸ್ಥೆ ಇದಾಗಿದೆ.
6. ಅಮಿತಾ ಸಿನ್ಹಾ (ಶಾಸಕ ಸರ್ವೇಶ ಕುಮಾರ ಅವರ ಪತ್ನಿ): ನನಗೆ ಆಶ್ರಮವನ್ನು ನೋಡಿ ತುಂಬಾ ಒಳ್ಳೆಯದೆನಿಸಿತು. ನಾನು ಇಲ್ಲಿಂದ ತುಂಬಾ ಏನನ್ನಾದರೂ ಕಲಿತುಕೊಂಡು ಹೋಗುತ್ತಿದ್ದೇನೆ. ನಾನು ಸ್ವತಃ (ಸಾಧನೆಯ) ಪ್ರಯತ್ನ ಮಾಡುತ್ತೇನೆ. ಮತ್ತೆ ಗೋವಾಕ್ಕೆ ಬಂದಾಗ ಇಲ್ಲಿಗೆ ಖಂಡಿತ ಬರುತ್ತೇನೆ. ಆಶ್ರಮದ (ಸಾಧಕರ) ಸೇವಾಭಾವ ನನಗೆ ತುಂಬಾ ಒಳ್ಳೆಯದೆನಿಸಿತು.

ಕ್ಷಣಚಿತ್ರಗಳು
1. ಮಿತವ್ಯಯದಿಂದ ಜೀವನ ನಡೆಸಲು ನಿರ್ಧರಿಸಿದರು: ‘ಆಶ್ರಮದ ಸಾಧಕರು ಪಾಲಿಸುವ ಸುವ್ಯವಸ್ಥೆ, ಸ್ವಚ್ಛತೆ ಮತ್ತು ಸಾಧನೆಯ ಪ್ರಯತ್ನಗಳನ್ನು ನಾವು ನಮ್ಮ ಜೀವನದಲ್ಲಿಯೂ ತರಲು ಪ್ರಯತ್ನಿಸುತ್ತೇವೆ. ಆಶ್ರಮವನ್ನು ನೋಡಿದಾಗ ‘ಮಿತವ್ಯಯ ಮಾಡುವುದು ದೇವರ ಗುಣವಾಗಿದೆ; ಏಕೆಂದರೆ ಉಪಭೋಗಕ್ಕೆ ಯಾವುದೇ ಮಿತಿಯಿಲ್ಲ’ ಎಂಬ ಸ್ಪಷ್ಟ ಅರಿವು ಆಯಿತು. ಆದ್ದರಿಂದ ನಾವು ಸಹ ಮಿತವ್ಯಯದಿಂದ ಜೀವನ ನಡೆಸಲು ಪ್ರಯತ್ನಿಸುತ್ತೇವೆ. ಆಶ್ರಮದಲ್ಲಿ ಪೂರ್ಣವೇಳೆ ಸಾಧನೆ ಮಾಡುವ ಸಾಧಕರು ಮಹಾತ್ಮರೇ ಎಂದು ಅನಿಸುತ್ತದೆ’ ಎಂದೂ ಆಶ್ರಮವನ್ನು ನೋಡುತ್ತಾ ಅವರು ಹೇಳಿದರು.
2. ಗೋವಾದಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಕಾಪಾಡುವಷ್ಟು ಉತ್ತಮ ಆಶ್ರಮ: ಶಾಸಕ ಪ್ರೊ. (ಡಾ.) ವೀರೇಂದ್ರ ಯಾದವ, ಶಾಸಕ ಕುಮಾರ ನಾಗೇಂದ್ರ, ಶಾಸಕ ಸರ್ವೇಶ ಕುಮಾರ ಮತ್ತು ನ್ಯಾಯವಾದಿ ವಸಿಷ್ಠ ಯಾದವ ಹಾಗೆಯೇ ಅವರ ಕುಟುಂಬ ಸದಸ್ಯರು 3 ದಿನ ಗೋವಾಕ್ಕೆ ಬಂದಿದ್ದರು. ಅವರು, “ಮೊದಲ 2 ದಿನ ಬೀಚ್‌ಗಳು ಮತ್ತು ಚರ್ಚ್‌ಗಳನ್ನು ನೋಡಿ ನಮಗೆ ಬೇಸರವಾಗಿತ್ತು. ‘ಮೂರನೇ ದಿನವನ್ನು ಗೋವಾದಲ್ಲಿ ಹೇಗೆ ಕಳೆಯುವುದು?’ ಎಂಬ ಪ್ರಶ್ನೆ ನಮಗೆ ಕಾಡಿತ್ತು; ಆದರೆ ಆಶ್ರಮಕ್ಕೆ ಬಂದ ನಂತರ ನಮಗೆ ತುಂಬಾ ಒಳ್ಳೆಯದೆನಿಸಿತು. ದೇವರು ನಮ್ಮನ್ನು ಅಗತ್ಯವಿದ್ದ ವಾತಾವರಣಕ್ಕೆ, ಅಂದರೆ ಆಶ್ರಮಕ್ಕೆ ಕರೆತಂದನು. ಗೋವಾ ಎಂದರೆ ಬಾಹ್ಯವಾಗಿ ಕಡಲತೀರಗಳು ಇತ್ಯಾದಿ ಆಗಿವೆ; ಆದರೆ ಗೋವಾದಲ್ಲಿ ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಕಾಪಾಡುವಷ್ಟು ಉತ್ತಮ ಆಶ್ರಮವಿದೆ ಎಂದು ಇಲ್ಲಿಗೆ ಬಂದ ನಂತರ ತಿಳಿಯಿತು” ಎಂದೂ ಆಶ್ರಮವನ್ನು ನೋಡಿದ ನಂತರ ಗಣ್ಯರು ಹೇಳಿದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ