Wakf Temple Equal Rights : ವಕ್ಫ್‌ಗೆ ಅಸಾಂವಿಧಾನಿಕ ಸವಲತ್ತು; ದೇವಸ್ಥಾನಗಳು ಮತ್ತು ವಕ್ಫ್ ಮಂಡಳಿಗೆ ಸಮಾನ ಕಾನೂನು ಬೇಕು! – ಅಡ್ವೊಕೇಟ್ ವೀರೇಂದ್ರ ಇಚಲಕರಂಜಿ‍ಕರ್, ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ

ಹಿಂದೂ ವಿಧಿಜ್ಞ ಪರಿಷತ್‌ನಿಂದ ಮಹಾರಾಷ್ಟ್ರ ರಾಜ್ಯ ಸರಕಾರಕ್ಕೆ ದೂರು!

ಮುಂಬಯಿ – ವಕ್ಫ್ ಮಂಡಳಿಯಲ್ಲಿ ನೋಂದಾಯಿತ ವಕ್ಫ್ ಕಟ್ಟಡಗಳ ಮೇಲಿನ ಅತಿಕ್ರಮಣಗಳನ್ನು ತೆರವುಗೊಳಿಸಲು ಸರಕಾರಿ ವ್ಯವಸ್ಥೆಗಳನ್ನು ಬಳಸಲು ಕಾಂಗ್ರೆಸ್ ಸರಕಾರವು ಅವಕಾಶ ನೀಡಿತ್ತು. ಇದಕ್ಕಾಗಿ 2008 ರಲ್ಲಿ, ಕಾಂಗ್ರೆಸ್ ‘ಮಹಾರಾಷ್ಟ್ರ ಸರಕಾರಿ ಕಟ್ಟಡಗಳು (ತೆರವು) ಕಾಯಿದೆ (ಮಹಾರಾಷ್ಟ್ರ ಗವರ್ನಮೆಂಟ್ ಪ್ರಿಮಿಸಸ್ (ಎವಿಕ್ಷನ್) ಆಕ್ಟ್, 1956)’ ಗೆ ತಿದ್ದುಪಡಿ ತಂದಿತು. ವಕ್ಫ್ ಮಂಡಳಿಗೆ ಸರಕಾರಿ ವ್ಯವಸ್ಥೆಗಳನ್ನು ಬಳಸಲು ಅನುಕೂಲವಾಗುವಂತೆ ಕಾನೂನಿನಲ್ಲಿ ಬದಲಾವಣೆ ಮಾಡಿದ ಕಾಂಗ್ರೆಸ್, ದೇವಸ್ಥಾನಗಳಿಗೆ ಈ ಪ್ರಯೋಜನವನ್ನು ನೀಡಲಿಲ್ಲ. ಮುಸಲ್ಮಾನರ ಧಾರ್ಮಿಕ ಸ್ಥಳಗಳಿಗೆ ಸವಲತ್ತು; ಆದರೆ ದೇವಸ್ಥಾನಗಳಿಗೆ ವಿಚಿತ್ರ ನ್ಯಾಯ, ಈ ನಿಲುವು ಸಂವಿಧಾನ ವಿರೋಧಿಯಾಗಿದೆ. ಒಂದೋ ವಕ್ಫ್ ಮಂಡಳಿಗೆ ಇರುವಂತೆ ದೇವಸ್ಥಾನಗಳಿಗೂ ಸರಕಾರಿ ವ್ಯವಸ್ಥೆಗಳನ್ನು ಬಳಸಲು ಅವಕಾಶ ನೀಡಬೇಕು, ಇಲ್ಲವೇ ವಕ್ಫ್ ಮಂಡಳಿಗೆ ನೀಡಲಾದ ವಿಶೇಷ ಸವಲತ್ತನ್ನು ನಿಲ್ಲಿಸಬೇಕು ಎಂದು ಹಿಂದೂ ವಿಧಿಜ್ಞ ಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷ ಅಡ್ವೊಕೇಟ್ ವೀರೇಂದ್ರ ಇಚಲಕರಂಜಿ ಅವರು ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದು, ಇದರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಪತ್ರದಲ್ಲಿ ಹಿಂದೂ ವಿಧಿಜ್ಞ ಪರಿಷತ್ ಎತ್ತಿರುವ ಪ್ರಶ್ನೆಗಳು!

1. ದೇವಸ್ಥಾನಗಳು ಮತ್ತು ವಕ್ಫ್ ಎರಡೂ ಧಾರ್ಮಿಕ ಸ್ಥಳಗಳಾಗಿದ್ದರೂ, ಕೇವಲ ವಕ್ಫ್ ಮಂಡಳಿಗೆ ಮಾತ್ರ ಸರಕಾರಿ ವ್ಯವಸ್ಥೆಗಳ ಸಂಪೂರ್ಣ ಬೆಂಬಲ ಲಭ್ಯವಿದ್ದರೆ, ದೇವಸ್ಥಾನಗಳಿಗೆ ಟ್ರಸ್ಟಿಗಳು ನ್ಯಾಯಾಲಯದ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ.

2. ಸರಕಾರಿ ಕಟ್ಟಡಗಳು ಅಥವಾ ಭೂಮಿಯಲ್ಲಿ ಯಾರಾದರೂ ಅನಧಿಕೃತವಾಗಿ ವಾಸಿಸುತ್ತಿದ್ದರೆ, ಅವರನ್ನು ಅಲ್ಲಿಂದ ಹೊರಹಾಕಲು ಮತ್ತು ಅವರಿಂದ ಬಾಡಿಗೆ ಅಥವಾ ಸಂಬಂಧಿತ ವೆಚ್ಚಗಳನ್ನು ವಸೂಲಿ ಮಾಡಲು ಆಗಿನ ಕಾಂಗ್ರೆಸ್ ಸರಕಾರವು ಕಾನೂನನ್ನು ಮಾಡಿತು. ವಕ್ಫ್ ಮಂಡಳಿ ಸರಕಾರದ ಅಳಿಯನಂತೆ ಈ ಸೌಲಭ್ಯವನ್ನು ಕಾಂಗ್ರೆಸ್ ಕೇವಲ ವಕ್ಫ್ ಮಂಡಳಿಗೆ ಮಾತ್ರ ಅನ್ವಯಿಸಿತು.

3. ಇದರರ್ಥ, ವಕ್ಫ್ ಮಂಡಳಿಯ ಭೂಮಿಯ ಮೇಲೆ ಅತಿಕ್ರಮಣವಾಗಿದ್ದರೆ, ಅದನ್ನು ತೆರವುಗೊಳಿಸಲು ನ್ಯಾಯಾಲಯಕ್ಕೆ ಹೋಗುವ ಅಗತ್ಯವಿಲ್ಲ. ಸರಕಾರಿ ವ್ಯವಸ್ಥೆಗಳು ಆ ಅತಿಕ್ರಮಣವನ್ನು ತೆರವುಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದಕ್ಕೆ ವ್ಯತಿರಿಕ್ತವಾಗಿ, ದೇವಾಲಯಗಳು ಸಿವಿಲ್ ನ್ಯಾಯಾಲಯಗಳಿಗೆ ಹೋಗಬೇಕಾಗುತ್ತದೆ.

4. ವಕ್ಫ್ ತನ್ನ ಸ್ವಂತ ಆಸ್ತಿಯನ್ನು ಬೇರೆ ಯಾವುದೇ ಕೆಲಸಕ್ಕೆ ಬಳಸಬೇಕಿದ್ದರೆ, ಸಿವಿಲ್ ನ್ಯಾಯಾಲಯಕ್ಕೆ ಹೋಗುವ ಅಗತ್ಯವಿಲ್ಲ. ಅವರು ಸರಕಾರಕ್ಕೆ ದೂರು ನೀಡಬೇಕು. ಆ ದೂರಿನ ಮೇಲೆ ಸರಕಾರಿ ವ್ಯವಸ್ಥೆಗಳು ಕ್ರಮ ಕೈಗೊಳ್ಳುತ್ತವೆ ಮತ್ತು ಈ ಭೂಮಿ ಅಥವಾ ಕಟ್ಟಡವನ್ನು ವಕ್ಫ್ ಮಂಡಳಿಗೆ ಖಾಲಿ ಮಾಡಿ ಕೊಡುತ್ತವೆ. ವಕ್ಫ್ ಮಂಡಳಿಯ ಯಾವುದೇ ಬಾಡಿಗೆ ಬಾಕಿ ಇದ್ದರೆ, ಅದನ್ನು ಭೂ ಕಂದಾಯ ವಸೂಲಿ ಪದ್ಧತಿಯಂತೆಯೇ ವಸೂಲಿ ಮಾಡಬಹುದು ಎಂದು ಈ ಕಾನೂನಿನಲ್ಲಿ ಅವಕಾಶವಿದೆ.

5. ಧರ್ಮದಾಯ ಆಯುಕ್ತರ ಕಚೇರಿಯಲ್ಲಿ ನೋಂದಾಯಿತ ದೇವಾಲಯಗಳ ಭೂಮಿಯ ಮೇಲೆ ಯಾರಾದರೂ ಆಕ್ರಮಣ ಮಾಡಿದರೆ, ದೇವಾಲಯಗಳ ಟ್ರಸ್ಟಿಗಳು ತಮ್ಮ ಸ್ವಂತ ಭೂಮಿಯನ್ನು ಪಡೆಯಲು ಸರಕಾರಕ್ಕೆ ಬದಲಾಗಿ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ವಕ್ಫ್ ಮತ್ತು ದೇವಸ್ಥಾನಗಳಿಗೆ ಇಂತಹ ವಿಭಿನ್ನ ನಿಯಮ ಏಕೆ? ವಕ್ಫ್‌ಗೆ ಇರುವಂತೆ ದೇವಸ್ಥಾನಗಳಿಗೆ ಏಕೆ ಪ್ರಯೋಜನ ಸಿಗುತ್ತಿಲ್ಲ? ಒಂದೋ ಈ ಕಾನೂನಿನ ಕಲಂ 2 ರಲ್ಲಿ ವಕ್ಫ್‌ನಂತೆಯೇ ದೇವಸ್ಥಾನಗಳ ಭೂಮಿ ಮತ್ತು ಕಟ್ಟಡಗಳನ್ನು ಸೇರಿಸಬೇಕು ಅಥವಾ ವಕ್ಫ್ ಮಂಡಳಿಯನ್ನು ಇದರಿಂದ ಹೊರಗಿಡಬೇಕು.