
ಭಗವಂತನು `ಸುಶ್ರೋತೃ’ ಆಗಿದ್ದಾನೆ. `ಸು’ ಎಂದರೆ ಉತ್ತಮ ಮತ್ತು `ಶ್ರೋತೃ’ ಎಂದರೆ ಕೇಳುವವನು. ಭಗವಂತನಿಗೆ ಭಕ್ತನು ತನ್ನ ಜೀವನದ ಸಣ್ಣಪುಟ್ಟ ವಿಷಯಗಳನ್ನು, ಎಷ್ಟೇ ಬಾರಿ ಮತ್ತು ಯಾವುದೇ ಸಮಯದಲ್ಲಿ ಹೇಳುತ್ತಾನೆ ಮತ್ತು ಭಗವಂತ ಅದನ್ನು ಕೇಳುತ್ತಾನೆ. ಅದೇ ರೀತಿ, ಕಳೆದ 25 ವರ್ಷಗಳಿಂದ ವಿವಿಧ ವಯೋಮಾನದ ಜಿಜ್ಞಾಸುಗಳು, ಹಿತಚಿಂತಕರು, ಹಿಂದುತ್ವನಿಷ್ಠರು ಮತ್ತು ಸಾಧಕರು ತಮ್ಮ ಜೀವನದ ಸುಖ-ದುಃಖದ ಪ್ರಸಂಗಗಳು, ಸಾಧನೆ ಮಾಡುವಾಗ ಎದುರಾಗುವ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟದ ತೊಂದರೆಗಳು ಹಾಗೂ ಅನುಭೂತಿಗಳು ಹೀಗೆ ಅಸಂಖ್ಯ ವಿಷಯಗಳನ್ನು ಪರಾತ್ಪರ ಗುರು ಡಾಕ್ಟರರಿಗೆ ಹೇಳುತ್ತಾ ಬಂದಿದ್ದಾರೆ. ಪರಾತ್ಪರ ಗುರು ಡಾಕ್ಟರರೂ ಈ ಎಲ್ಲಾ ವಿಷಯಗಳನ್ನು ಮನಃಪೂರ್ವಕವಾಗಿ ಕೇಳಿದ್ದಾರೆ ಮತ್ತು ಅವರಿಗೆ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ. ಪರಾತ್ಪರ ಗುರು ಡಾಕ್ಟರರ ವಯಸ್ಸು ಹೆಚ್ಚಿದರೂ, ಅವರ ಈ ಪ್ರಕ್ರಿಯೆಯು ಆಯಾಸವಿಲ್ಲದೆ ಮತ್ತು ನಿರಂತರವಾಗಿ ಈಗಲೂ ಮುಂದುವರಿದಿದೆ. ಇದರಿಂದ ಭಗವಂತ ಮತ್ತು ಪರಾತ್ಪರ ಗುರು ಡಾಕ್ಟರರ ನಡುವಿನ ಈ ಸಮಾನ ಗುಣವು ಎದ್ದು ಕಾಣುತ್ತದೆ.
– ಶ್ರೀ. ರಾಮ ಹೋನಪ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.5.2025)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !