ಗುರುಪೂರ್ಣಿಮೆ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ

‘ಗುರುಪೂರ್ಣಿಮೆಯಂದು ಸಾಧಕರಿಗೆ ಮತ್ತು ಶಿಷ್ಯರಿಗೆ ಆಧ್ಯಾತ್ಮಿಕ ಉನ್ನತಿಗಾಗಿ ಆವಶ್ಯಕವಿರುವ ಸಾಧನೆ ಮಾಡಲು ಗುರುಗಳು ಆಶೀರ್ವಾದ ನೀಡುತ್ತಿರುತ್ತಾರೆ. ಸದ್ಯ ಆಪತ್ಕಾಲವಿರುವುದರಿಂದ ಸಾಧನೆಯನ್ನು ಮಾಡಲು ಪ್ರತಿಕೂಲವಿದೆ. ಮುಂದಿನ ಕೆಲವು ತಿಂಗಳಲ್ಲಿ ಆಪತ್ಕಾಲದ ತೀವ್ರತೆ ಹೆಚ್ಚುತ್ತ ಹೋಗುವುದು. ನೈಸರ್ಗಿಕ ಆಪತ್ತು, ಯುದ್ಧ ಮತ್ತು ಗೃಹಯುದ್ಧಗಳಿಂದ ಜನಜೀವನವು ಹದಗೆಡುವುದು. ಇಂತಹ ಆಪತ್ಕಾಲದಲ್ಲಿ ಜೀವಂತವಾಗಿದ್ದರೆ, ಮುಂದೆ ದೇಹದಿಂದ ಸಾಧನೆ ಮಾಡಬಹುದು. `ಶರೀರಮಾದ್ಯಂ ಖಲು ಧರ್ಮಸಾಧನಮ್ |’ ಅಂದರೆ `ಧರ್ಮಾಚರಣೆಗಾಗಿ ದೇಹವೇ ಮೊದಲ ಸಾಧನವಾಗಿದೆ’ ಅಂದರೆ ಸಾಧನೆಗಾಗಿ ದೇಹವು ಉತ್ತಮವಾಗಿರುವುದು ಆವಶ್ಯಕವಾಗಿದೆ, ಇದು ಸುವಚನವಾಗಿದೆ. ಆದ್ದರಿಂದ ಆಪತ್ಕಾಲದಲ್ಲಿ ಸಾಧಕರು ಮತ್ತು ಶಿಷ್ಯರು ಜೀವಂತವಾಗಿರುವುದು ಆವಶ್ಯಕವಾಗಿದೆ. ಭಕ್ತಿಯೋಗಕ್ಕನುಸಾರ `ನ ಮೇ ಭಕ್ತಃ ಪ್ರಣಶ್ಯತಿ |’ (ಶ್ರೀಮದ್ಭಗವದ್ಗೀತೆ, 9 ನೆಯ ಅಧ್ಯಾಯ ಶ್ಲೋಕ .31), ಅಂದರೆ `ನನ್ನ ಭಕ್ತನ ನಾಶವಾಗುವುದಿಲ್ಲ’, ಎಂದು ಭಗವಂತನ ವಚನವಾಗಿದೆ. ಕರ್ಮಯೋಗಕ್ಕನುಸಾರ ಮಾತ್ರ ತನ್ನ ನಾಶವಾಗಬಾರದೆಂದು ಕೃತಿ ಮಾಡುವುದು ಆವಶ್ಯಕವಾಗಿರುತ್ತದೆ; ಆದ್ದರಿಂದಲೇ ಹಿಂದೂಗಳು ಆಪತ್ಕಾಲದಲ್ಲಿ ಜೀವದ ರಕ್ಷಣೆಗಾಗಿ ಭಕ್ತಿಯೋಗ ಮತ್ತು ಕರ್ಮಯೋಗ, ಹೀಗೆ ಎರಡು ರೀತಿಯಿಂದ ಪ್ರಯತ್ನಿಸ ಬೇಕಾಗುತ್ತದೆ. ಸದ್ಯದ ಆಪತ್ಕಾಲದಲ್ಲಿ ಈಶ್ವರನ ಭಕ್ತಿ ಮಾಡುವುದೊಂದಿಗೆ ಕರಾಟೆ, ಲಾಠಿ ಬೀಸುವುದು ಮುಂತಾದ ಸ್ವರಕ್ಷಣೆಯ ಶಿಕ್ಷಣ ಪಡೆಯುವುದು ಆವಶ್ಯಕವಾಗಿದೆ.
ಅದಕ್ಕಾಗಿ ಹಿಂದೂಗಳೇ, ಇಂದಿನಿಂದಲೇ ಸ್ವರಕ್ಷಣೆಯ ವಿದ್ಯೆ ಅಳವಡಿಸಿ ಅದನ್ನು ಆಪತ್ಕಾಲದಲ್ಲಿ ಜೀವಂತವಿರಲು ಉಪಯೋಗಿಸಿ. ಆಪತ್ಕಾಲದ ನಂತರ ಹಿಂದೂ ರಾಷ್ಟ್ರ ಸ್ಥಾಪಿಸಿದ ನಂತರ ಹಿಂದೂಗಳಿಗೆ ದೇಹದಿಂದ ಒಳ್ಳೆಯ ಸಾಧನೆ ಮಾಡುವುದು ಮತ್ತು ಶೀಘ್ರ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !