ಕೇಂದ್ರ ತನಿಖಾ ದಳದಿಂದ ನ್ಯಾಯಾಲಯಕ್ಕೆ ಮಾಹಿತಿ

ಅಮರಾವತಿ (ಆಂಧ್ರಪ್ರದೇಶ) – ತಿರುಮಲ ತಿರುಪತಿ ದೇವಾಲಯದಲ್ಲಿ ಲಡ್ಡು ಪ್ರಸಾದ ತಯಾರಿಸಲು ನಕಲಿ ತುಪ್ಪ ಬಳಸಿದ ಪ್ರಕರಣದಲ್ಲಿ, ಭೋಲೆಬಾಬಾ ಡೈರಿಯ ನಿರ್ದೇಶಕರಾದ ಪೊಮಿಲ್ ಜೈನ್ ಮತ್ತು ವಿಪಿನ್ ಜೈನ್ ಅವರು ಲಡ್ಡು ಪ್ರಸಾದ ತಯಾರಿಸಲು 60 ಲಕ್ಷ ಕಿಲೋ ಕಲಬೆರಕೆ ತುಪ್ಪ ಪೂರೈಸಿ 240 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಆಂಧ್ರಪ್ರದೇಶ ಹೈಕೋರ್ಟ್‌ಗೆ ತಿಳಿಸಿದೆ.
ಕೇಂದ್ರ ತನಿಖಾ ದಳದ ನಿರ್ದೇಶಕರ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡವು ಈ ಪ್ರಕರಣದ ತನಿಖೆ ನಡೆಸುತ್ತಿದೆ. ನಿಜವಾದ ಹಸುವಿನ ತುಪ್ಪದ ಬದಲಿಗೆ ರಾಸಾಯನಿಕ ಮಿಶ್ರಿತ ಪಾಮ್ ಆಯಿಲ್ ಅನ್ನು ತುಪ್ಪದ ರೂಪದಲ್ಲಿ ಪೂರೈಸಲಾಗುತ್ತಿತ್ತು ಎಂದು ಈ ತಂಡವು ಹೈಕೋರ್ಟ್‌ಗೆ ತಿಳಿಸಿದೆ. ಉತ್ತರಾಖಂಡದಿಂದ ತಂದ ಈ ನಕಲಿ ತುಪ್ಪವನ್ನು ಟ್ಯಾಂಕರ್‌ಗಳಲ್ಲಿ ತುಂಬಿ ಎ.ಆರ್. ಡೈರಿ ಮತ್ತು ವೈಷ್ಣವಿ ಡೈರಿ ಮೂಲಕ ದೇವಾಲಯಕ್ಕೆ ಸಾಗಿಸಲಾಗುತ್ತಿತ್ತು. ಕಾಗದದಲ್ಲಿ ಅವರನ್ನು ‘ಅಧಿಕೃತ ಗುತ್ತಿಗೆದಾರರು’ ಎಂದು ನಮೂದಿಸಲಾಗಿತ್ತು, ಆದರೆ ಭೋಲೆಬಾಬಾ ಡೈರಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿತ್ತು.
ಹಲವು ದೇವಾಲಯಗಳಿಗೆ ನಕಲಿ ತುಪ್ಪ ಪೂರೈಸಲಾಗುತ್ತಿತ್ತು!
ಕೇಂದ್ರ ತನಿಖಾ ದಳದ ತಂಡವು ಈ ಜಾಲವು ತಿರುಮಲವನ್ನು ಮೀರಿ ವಿಸ್ತರಿಸಿದೆ ಎಂದು ಬಹಿರಂಗಪಡಿಸಿದೆ. ಆಂಧ್ರಪ್ರದೇಶದ 6 ಪ್ರಮುಖ ದೇವಾಲಯಗಳಿಗೂ ಇದೇ ರೀತಿಯ ಕಲಬೆರಕೆ ತುಪ್ಪ ಸಿಗುತ್ತಿತ್ತು. ಇವುಗಳಲ್ಲಿ ಕನಿಪಕಂ, ಶ್ರೀಕಾಳಹಸ್ತಿ, ದ್ವಾರಕಾ ತಿರುಮಲ, ಪೆನುಗಂಚಿಪ್ರೋಲು ತಿರುಪಥಮ್ಮ ಅಮ್ಮವರ ದೇವಸ್ಥಾನ, ಶ್ರೀಶೈಲಂ ಮತ್ತು ಕನಕ ದುರ್ಗಾ ದೇವಸ್ಥಾನ (ವಿಜಯವಾಡ) ಸೇರಿವೆ.
ತನಿಖಾ ತಂಡವು ನ್ಯಾಯಾಲಯಕ್ಕೆ ನೀಡಿದ ಮಾಹಿತಿ
1. ಎ.ಆರ್. ಡೈರಿ ಮತ್ತು ವೈಷ್ಣವಿ ಡೈರಿಗಳ ನಿರ್ದೇಶಕರು ನಕಲಿ ತುಪ್ಪ ಪೂರೈಸಲು ಭೋಲೆಬಾಬಾಗೆ ಸಹಾಯ ಮಾಡಿದ್ದಕ್ಕಾಗಿ ಪ್ರತಿ ಕಿಲೋಗೆ 3 ರೂಪಾಯಿ ದಲ್ಲಾಳಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
2. ತನಿಖೆಯಿಂದ, ಹಗರಣದ ಸಮಯದಲ್ಲಿ ಭೋಲೆಬಾಬಾದ ನಿರ್ದೇಶಕರು ವೈಷ್ಣವಿ ಡೈರಿಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
3. ಆರೋಪಿಗಳು ಮತ್ತು ಅವರ ಪ್ರತಿನಿಧಿಗಳು ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಿದ್ದರು. ಈ ಸಂಬಂಧ ಹಲವು ಅಪರಾಧಗಳು ದಾಖಲಾಗಿವೆ.
4. ವೈ.ಎಸ್.ಆರ್. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ತುಪ್ಪ ಪೂರೈಕೆ ಟೆಂಡರ್ ಪಡೆಯಲು ದೇವಸ್ಥಾನದ ಅಧಿಕಾರಿಗಳಿಗೆ ಲಂಚ ನೀಡಲಾಗಿದೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !