
‘ಒಮ್ಮೆ ಅಗಸ್ತಿಋಷಿಗಳು ತಮ್ಮ ಶಿಷ್ಯರೊಂದಿಗೆ ಯಾತ್ರೆಗೆ ಹೊರಟಿದ್ದರು. ಶಿಷ್ಯರು ಮಾರ್ಗದಲ್ಲಿ ಅನೇಕ ವಿಷಯಗಳನ್ನು ನೋಡಿದರು ಮತ್ತು ಅನೇಕ ಪ್ರಶ್ನೆಗಳನ್ನೂ ಕೇಳಿದರು. ‘ಗುರುಗಳೆ, ನಗರದಲ್ಲಿ ದೊಡ್ಡ ದೊಡ್ಡ ಭವನಗಳಿವೆ, ಬಹಳಷ್ಟು ಸೌಲಭ್ಯಗಳಿವೆ ಹಾಗೂ ಸುಖೋಪಭೋಗಗಳ ದೊಡ್ಡ ದೊಡ್ಡ ಸಾಧನಗಳಿವೆ. ಹೀಗಿದ್ದರೂ ಬುದ್ಧಿವಂತ ಜನರು ಅರಣ್ಯದಲ್ಲಿನ ಗುರುಕುಲಕ್ಕೆ ಅವರ ಮಕ್ಕಳನ್ನು ಏಕೆ ಕಳುಹಿಸುತ್ತಾರೆ ?’, ಎಂದು ಓರ್ವ ಶಿಷ್ಯನು ಪ್ರಶ್ನೆಯನ್ನು ಕೇಳಿದನು.
ಶೌರ್ಯ ಮತ್ತು ಆತ್ಮಬಲ ಇವುಗಳೊಂದಿಗೆ ಇನ್ನಿತರ ಗುಣಗಳ ವಿಕಾಸ ಗುರುಕುಲದಲ್ಲಿ ಆಗುತ್ತದೆ. ಗುರು ಅಗಸ್ತ್ಯಋಷಿಗಳು ಮುಂದಿನಂತೆ ಹೇಳುತ್ತಾರೆ, ‘ವತ್ಸ ! ಆ ಬುದ್ಧಿವಂತ ಜನರು ಮನೆಯಲ್ಲಿನ ಭೋಗವಾಸನೆಯ ವಾತಾವರಣದಲ್ಲಿ ತಮ್ಮ ಹಾಗೂ ನೆರೆಮನೆಯವರಲ್ಲಿರುವ ದೌರ್ಬಲ್ಯಗಳನ್ನು ಹಾಗೂ ಧೂರ್ತತನವನ್ನು ತಿಳಿದುಕೊಂಡಿರು ತ್ತಾರೆ. ಕೋಮಲ ಚಿತ್ತದ ಮಕ್ಕಳಲ್ಲಿ ಅವುಗಳಿಂದ ಕೆಟ್ಟ ಸಂಸ್ಕಾರವಾಗಬಹುದು. ಎಷ್ಟು ವಿದ್ಯೆ ಕಲಿತರೂ ಹೃದಯದಲ್ಲಿ ಶಾಂತಿ ಹಾಗೂ ಬುದ್ಧಿಯಲ್ಲಿ ಪವಿತ್ರತೆ ಬರಲಿಕ್ಕಿಲ್ಲ ಹಾಗೂ ಚಿತ್ತದಲ್ಲಿ ಚೈತನ್ಯದ ಪ್ರಕಾಶ ಕಾಣಿಸಲಿಕ್ಕಿಲ್ಲ. ಗುರುಗಳಲ್ಲಿ ಚೈತನ್ಯದ ಪ್ರಕಾಶ ಇರುತ್ತದೆ ಮತ್ತು ಬುದ್ಧಿಯಲ್ಲಿ ಸಾತ್ತ್ವಿಕತೆಯಿರು ತ್ತದೆ ಹಾಗೂ ಹೃದಯದಲ್ಲಿ ಶಾಂತಿ ಇರುತ್ತದೆ. ದಶರಥ ರಾಜನು ತನ್ನ ಸುಪುತ್ರರಿಗೆ ಅರಮನೆಯಲ್ಲಿಯೇ ಕಲಿಸಬಹುದಿತ್ತು, ಶಿಕ್ಷಕರನ್ನಿಡಬಹುದಿತ್ತು; ಆದರೆ ಅವನು ತನ್ನ ಪುತ್ರರನ್ನು ಮಹರ್ಷಿ ವಸಿಷ್ಠರಲ್ಲಿಗೆ ಕಳುಹಿಸಿದನು. ವಸಿಷ್ಠರು ರಾಮ, ಲಕ್ಷ್ಮಣ, ಭರತ ಮತ್ತು ಶತ್ರುಘ್ನರಿಗೆ ಶಿಕ್ಷಣದ ಜೊತೆಗೆ ನೀಡಿದ ಬ್ರಹ್ಮರಸ, ಓಜಸ್ಸು, ಅರಮನೆಯ ವಿಲಾಸಿ ವಾತಾವರಣದಲ್ಲಿ ಸಿಗಲು ಸಾಧ್ಯವಿಲ್ಲ; ಆದ್ದರಿಂದ ಆ ದೂರದರ್ಶಿಗಳು ತಮ್ಮ ಮಕ್ಕಳನ್ನು ಕಲಿಯಲು ಬ್ರಹ್ಮರ್ಷಿ ಋಷಿಮುನಿಗಳ ನಿರ್ವಹಣೆಯಲ್ಲಿಡುತ್ತಾರೆ. ವಿದ್ಯಾರ್ಥಿದೆಶೆಯಲ್ಲಿ ಅಡಚಣೆಗಳಿಂದ, ಸಂಯಮ-ಸದಾಚಾರ ಹಾಗೂ ಸಾದಾತನದಿಂದ ಮುಂದುವರಿಯುತ್ತಿರುವಾಗ ವಿದ್ಯಾರ್ಥಿಗಳಲ್ಲಿ ಸಹನಶಕ್ತಿ, ಅನುಮಾನ, ಕ್ಷಮೆ, ಶೌರ್ಯ ಮತ್ತು ಆತ್ಮಬಲ ಇವುಗಳ ವಿಕಾಸವಾಗುತ್ತದೆ; ಆದರೆ ಸುಖಸೌಲಭ್ಯಗಳ ಭೋಗವಿಲಾಸದಲ್ಲಿದ್ದು ಪದವಿಗಳನ್ನು ಪಡೆಯುವ ಆ ಬಡಪಾಯಿಗಳು ಒಳಗಿನಿಂದ ದುರ್ಬಲರಾಗಿರುವುದರಿಂದ ಬುದ್ಧಿವಂತರು ತಮ್ಮ ಸುಪುತ್ರರನ್ನು ಅರಮನೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ತಾತ್ಪರ್ಯವೇನೆಂದರೆ ಹೇಗೆ ಶರೀರಿದಲ್ಲಿ ಪ್ರಾಣ (ಜೀವ) ಇಲ್ಲದಿದ್ದರೆ ಶರೀರ ವ್ಯರ್ಥವಾಗುತ್ತದೆಯೋ, ಹಾಗೆ ಆಶ್ರಮದಲ್ಲಿ ಮತ್ತು ಮಂದಿರಗಳಲ್ಲಿ ಸಂತರ ಆಗಮನ ಅಥವಾ ವಾಸ, ಸತ್ಸಂಗವಿಲ್ಲದಿದ್ದರೆ ಅಲ್ಲಿ ಕೇವಲ ೪ ಗೋಡೆಗಳಷ್ಟೆ ಇರುತ್ತವೆ. ಗುರುಕುಲ ಶಿಕ್ಷಣಪದ್ಧತಿ ವ್ಯಕ್ತಿಗೆ ವಿಕಸಿತ ಜೀವನ ನಡೆಸಲು ದೃಷ್ಟಿ ನೀಡುತ್ತದೆ. ಗುರುಕುಲ ಪರಂಪರೆಯ ಶಿಕ್ಷಣದಿಂದ ದೇಶದ ಹಾಗೂ ಮಾನವತೆಯ ಸದ್ಭಾಗ್ಯವಾಗುವುದು.’
(ಆಧಾರ : ಮಾಸಿಕ ‘ಋಷಿಪ್ರಸಾದ’, ಮೇ ೨೦೨೧)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು