ಹಿಂದೂಗಳ ಹತ್ಯೆಗಳ ವಿರುದ್ಧ ಆಕ್ರೋಶ ಆವಶ್ಯಕ !

ಕರ್ನಾಟಕದ ಬಜರಂಗ ದಳದ ನಾಯಕ ಮತ್ತು ೨೦೨೨ ರ ಫಾಝಿಲ್‌ ಹತ್ಯಾಕಾಂಡದ ಪ್ರಮುಖ ಆರೋಪಿ ಸುಹಾಸ ಶೆಟ್ಟಿ ಇವರ ಮೇ ೧ ರಂದು ಮಂಗಳೂರಿನಲ್ಲಿ ನಡೆದ ಹತ್ಯೆ ಪ್ರಕರಣದ ತನಿಖೆಯನ್ನು ಈಗ ರಾಷ್ಟ್ರೀಯ ತನಿಖಾ ದಳವು (ಓಈಂ) ನಡೆಸಲಿದೆ. ಈ ಪ್ರಕರಣದಲ್ಲಿ ಪೊಲೀಸರು ಈವರೆಗೆ ೧೬ ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಅಬ್ದುಲ್‌ ಸಫವಾನ್, ನಿಯಾಜ್, ಮಹಮ್ಮದ್‌ ಮುಝಮ್ಮಿಲ್, ಖಲಂದರ್‌ ಶಫಿ, ಆದಿಲ್‌ ಮೆಹರೂಫ್, ನಾಗರಾಜ, ರಣಜಿತ್‌ ಮತ್ತು ರಿಜ್ವಾನ್‌ ಸೇರಿದ್ದಾರೆ. ಈ ತನಿಖೆಯನ್ನು ಸ್ಥಳೀಯ ಪೊಲೀಸರು ಅಂದರೆ ರಾಜ್ಯ ಅಪರಾಧ ತನಿಖಾ ವಿಭಾಗ, ವಿಶೇಷ ತನಿಖಾ ತಂಡ, ಸ್ಥಳೀಯ ಅಪರಾಧ ತನಿಖಾ ದಳದ ಮೂಲಕವೂ ನಡೆಸಬಹುದಿತ್ತು; ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದೆ ಮತ್ತು ಈ ಅಪರಾಧದಲ್ಲಿನ ಆರೋಪಿಗಳು ಮತಾಂಧ ಮುಸಲ್ಮಾನರಾಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗಿನಿಂದ ಇಂದಿನವರೆಗೂ, ಕಾಂಗ್ರೆಸ್‌ ಆಡಳಿತವಿರುವ ರಾಜ್ಯದಲ್ಲಿ ಯಾವುದಾದರೊಂದು ಪ್ರಕರಣದಲ್ಲಿ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮೇಲೆ ದೌರ್ಜನ್ಯ ನಡೆದಾಗ ಹಿಂದೂಗಳಿಗೆ ನ್ಯಾಯ ಸಿಕ್ಕಿದ ಉದಾಹರಣೆ ಇಲ್ಲ. ಇದಕ್ಕೆ ಏಕೈಕ ಕಾರಣವೆಂದರೆ ಕಾಂಗ್ರೆಸ್‌ನ ಮುಸಲ್ಮಾನ ಓಲೈಕೆ ನೀತಿ ! ಕರ್ನಾಟಕ ರಾಜ್ಯದ ಪೊಲೀಸರು ಈ ಪ್ರಕರಣವನ್ನು ಎಷ್ಟು ಗಂಭೀರವಾಗಿ ತನಿಖೆ ಮಾಡುತ್ತಾರೆ ಎಂಬುದು ಎಲ್ಲಾ ಹಿಂದೂಗಳಿಗೆ ತಿಳಿದಿದೆ. ಒಂದು ವೇಳೆ, ಯಾವುದಾದರೂ ಪೊಲೀಸ್‌ ಅಧಿಕಾರಿಯು ಧೈರ್ಯ ಮತ್ತು ಪರಿಶ್ರಮದಿಂದ ಈ ಪ್ರಕರಣದ ತನಿಖೆ ನಡೆಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ವರದಿ ನೀಡಿದರೂ, ಅದರಂತೆ ಕ್ರಮ ಕೈಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಇದೆ. ಆದ್ದರಿಂದ, ಸ್ಥಳೀಯ ಪೊಲೀಸರ ಮೇಲೆ ವಿಶ್ವಾಸವಿಲ್ಲದ ಕಾರಣ, ಈಗ ಈ ಪ್ರಕರಣದ ತನಿಖೆಯನ್ನು ‘ರಾಷ್ಟ್ರೀಯ ತನಿಖಾ ದಳ’ದ ವತಿಯಿಂದ ನಡೆಸಲಾಗುವುದು.

ಕೇವಲ ಹಿಂದೂ ನಾಯಕರ ವಿರುದ್ಧವೇ ಪ್ರಕರಣಗಳು !

ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ಈ ಹತ್ಯೆಯ ಆರೋಪಿಗಳು ನಿಷೇಧಿತ ಸಂಘಟನೆಯಾದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (‘ಪಿಎಫ್⃈’) ಜೊತೆ ಸಂಪರ್ಕ ಹೊಂದಿದ್ದಾರೆ. ‘ಜನರಲ್ಲಿ ಭಯವನ್ನು ಹರಡುವುದು ಈ ಹತ್ಯೆಯ ಉದ್ದೇಶ ವಾಗಿತ್ತು’ ಎಂದು ಅವರು ಹೇಳುತ್ತಿದ್ದರೂ, ಒಂದು ರೀತಿಯಲ್ಲಿ ಹಿಂದೂ ಸಂತರು ಮತ್ತು ನಾಯಕರನ್ನು ಹತ್ಯೆ ಮಾಡುವ ಷಡ್ಯಂತ್ರವು ಹಲವು ವರ್ಷಗಳಿಂದ ನಡೆಯುತ್ತಿದೆ. ಸುಹಾಸ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ಸರಿಯಾದ ತನಿಖೆ ನಡೆಸದೆ, ಅನೇಕ ಧಾರ್ಮಿಕ ಮತ್ತು ರಾಜಕೀಯ ನಾಯಕರ ಒತ್ತಡದಿಂದಾಗಿ ಹಿಂದೂ ನಾಯಕರ ವಿರುದ್ಧವೇ ಪ್ರಕರಣಗಳನ್ನು ದಾಖಲಿಸಿದ್ದಾರೆ. ಹಿಂದುತ್ವನಿಷ್ಠ ನಾಯಕರ ಹತ್ಯೆಯ ನಂತರ ಪೊಲೀಸರು ಹಿಂದುತ್ವನಿಷ್ಠರ ವಿಚಾರಣೆ ನಡೆಸಿ ಅವರಿಗೆ ತೊಂದರೆ ನೀಡುವುದು, ಪ್ರಕರಣಗಳನ್ನು ದಾಖಲಿಸುವುದು ಮತ್ತು ಹತ್ಯೆಗೈದವರಿಗೆ ಮುಕ್ತ ಅವಕಾಶ ನೀಡುವುದು, ಇಂತಹ ಕ್ರೂರ ಪದ್ಧತಿಯನ್ನು ಪೊಲೀಸ್‌ ವ್ಯವಸ್ಥೆಯು ಅನುಸರಿಸುತ್ತಿದೆ.

ಹಿಂದುತ್ವವಾದಿಗಳೊಂದಿಗೆ ಅಪರಾಧಿಗಳ ತರ ವರ್ತನೆ !

ಮೇ ೨೭ ರಂದು ಬಂಟ್ವಾಳದಲ್ಲಿ ಅಬ್ದುಲ್‌ ರೆಹಮಾನ್‌ ಎಂಬಾತನ ಹತ್ಯೆಯ ನಂತರ, ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ನಾಯಕರನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಯಿತು. ಪೊಲೀಸರು ಮಧ್ಯರಾತ್ರಿಯಲ್ಲಿ ಹಿಂದುತ್ವವಾದಿ ಸಂಘಟನೆಗಳ ನಾಯಕರ ಮನೆಗಳಿಗೆ ಹೋಗಿ ಅವರನ್ನು ಅಪರಾಧಿಗಳಂತೆ ನಡೆಸಿಕೊಂಡಿದ್ದಾರೆ ಮತ್ತು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ೧೫ ಹಿಂದುತ್ವನಿಷ್ಠ ಕಾರ್ಯಕರ್ತರ ವಿರುದ್ಧ ಅಪರಾಧವನ್ನು ದಾಖಲಿಸಲಾಗಿದೆ. ಅನೇಕ ಹಿಂದುತ್ವನಿಷ್ಠ ನಾಯಕರನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ; ಆದರೆ, ದ್ವೇಷಪೂರಿತ ಭಾಷಣಗಳನ್ನು ಮಾಡುವ ‘ಎಸ್‌.ಡಿ.ಪಿ.ಐ.’ಯ ಮತಾಂಧ ನಾಯಕರ ಮೇಲೆ ಈವರೆಗೆ ಯಾವುದೇ ಅಪರಾಧವನ್ನು ದಾಖಲಿಸಲಾಗಿಲ್ಲ. ಕೋಮು ಹಿಂಸಾಚಾರ ತಡೆ ದಳವನ್ನು ಕೇವಲ ಹಿಂದೂ ಸಂಘಟನೆಗಳ ವಿರುದ್ಧ ಬಳಸಲಾಗುತ್ತಿದೆ. ‘ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ಹಿಂದೂ ನಾಯಕರಿಗೆ ‘ಜೈಶ್‌-ಎ-ಮೊಹಮ್ಮದ್’ ಎಂಬ ಭಯೋತ್ಪಾದಕ ಸಂಘಟನೆಯ ಹೆಸರಿನಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಸೌದಿ ಅರೇಬಿಯಾದಿಂದ ಬೆದರಿಕೆಗಳು ಬರುತ್ತಿವೆ. ‘ಪಿಎಫ್⃈’ನ ಸದಸ್ಯರು ಇಂದಿಗೂ ಸಕ್ರಿಯರಾಗಿದ್ದು, ಅವರು ‘ಎಸ್‌.ಡಿ.ಪಿ.ಐ.’ ಮೂಲಕ ಕಾರ್ಯನಿರ್ವಹಿಸುತ್ತಿದ್ದರೂ, ಸರಕಾರ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ.

ಹಿಂದುತ್ವನಿಷ್ಠರು ಮತ್ತು ಸಂತರ ಹತ್ಯೆಯ ಷಡ್ಯಂತ್ರ !

ದೆಹಲಿಯಲ್ಲಿ ಶ್ರೀರಾಮಜನ್ಮಭೂಮಿ ಮಂದಿರಕ್ಕಾಗಿ ನಿಧಿ ಸಂಗ್ರಹಿಸುತ್ತಿದ್ದ ರಿಂಕು ಶರ್ಮಾ ಎಂಬ ಹಿಂದೂ ಯುವಕನನ್ನು ಮುಸಲ್ಮಾನ ಯುವಕರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು. ದೇಶದ ರಾಜಧಾನಿಯಲ್ಲೇ ಇಂತಹ ಘಟನೆಗಳು ಹಗಲಿನಲ್ಲಿ ನಡೆಯುತ್ತಿದ್ದರೆ, ಬೇರೆಡೆ ಪರಿಸ್ಥಿತಿ ಹೇಗಿರಬಹುದು ? ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ನಂತರ, ಕೇರಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಹುಲ ಕೃಷ್ಣ ಅಲಿಯಾಸ್‌ ನಂದು ಎಂಬುವವರನ್ನು ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ’ದ ಕಾರ್ಯಕರ್ತರು ಹತ್ಯೆ ಮಾಡಿದ್ದರು. ೩೦ ಜುಲೈ ೨೦೨೪ ರಂದು ಮುಂಬಯಿಯ ಧಾರಾವಿಯಲ್ಲಿ ಬಜರಂಗ ದಳದ ಪದಾಧಿಕಾರಿ ಅರವಿಂದ ವೈಶ್ಯ ಇವರ ಹತ್ಯೆಯ ನಂತರ, ಅವರ ಅಂತಿಮ ಯಾತ್ರೆಯ ಸಮಯದಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು. ಭಾಜಪದ ಮಾಜಿ ವಕ್ತಾರೆ ನೂಪುರ ಶರ್ಮಾ, ಭಾಜಪ ಶಾಸಕ ಟಿ. ರಾಜಾ ಸಿಂಗ್, ‘ಸುದರ್ಶನ ನ್ಯೂಸ್‌’ನ ಮುಖ್ಯ ಸಂಪಾದಕ ಸುರೇಶ ಚವ್ಹಾಣಕೆ ಮತ್ತು ಹಿಂದೂ ಸನಾತನ ಸಂಘದ ರಾಷ್ಟ್ರೀಯ ಅಧ್ಯಕ್ಷ ಉಪದೇಶ ರಾಣಾ ಸೇರಿದಂತೆ ಅನೇಕ ನಾಯಕರನ್ನು ಕೊಲ್ಲುವ ಸಂಚಿನಲ್ಲಿದ್ದ ಮಹಮ್ಮದ್‌ ಅಲಿಯನ್ನು ಬಂಧಿಸಲಾಗಿದೆ. ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಹಿಂದೂ ನಾಯಕರೇ ಅಸುರಕ್ಷಿತರಾಗಿದ್ದಾರೆ ಎಂಬುದು ಪದೇ ಪದೇ ನಡೆಯುತ್ತಿರುವ ಇಂತಹ ಘಟನೆಗಳಿಂದ ಸ್ಪಷ್ಟವಾಗಿದೆ. ಆದ್ದರಿಂದ, ‘ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ’ ಎಂದು ಕೂಗೆಬ್ಬಿಸುವವರನ್ನು ಈಗ ತರಾಟೆಗೆ ತೆಗೆದುಕೊಳ್ಳಬೇಕು. ಕಳೆದ ಕೆಲವು ವರ್ಷಗಳಲ್ಲಿ, ದೇಶದಾದ್ಯಂತ ವಿವಿಧ ಹಿಂದುತ್ವನಿಷ್ಠ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವುದು, ಅವರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆ. ಹಿಂದೂ ನಾಯಕರ ಹತ್ಯೆಯ ಪ್ರಮಾಣವು ವಿಶೇಷವಾಗಿ ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಬಂಗಾಳ ರಾಜ್ಯಗಳಲ್ಲಿ ಹೆಚ್ಚಾಗಿದೆ. ಈ ಪಿಡುಗು ದೆಹಲಿ, ಉತ್ತರಪ್ರದೇಶ, ಮಧ್ಯಪ್ರದೇಶ ಇತ್ಯಾದಿ ರಾಜ್ಯಗಳಿಗೂ ಹರಡಿದ್ದು, ಕೇವಲ ಹಿಂದುತ್ವದ ಕಾರ್ಯ ಮಾಡುವ ಕಾರ್ಯಕರ್ತರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸ ಲಾಗುತ್ತಿದೆ. ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗುಜರಾತ ರಾಜ್ಯಗಳಲ್ಲಿ ಜೈನ ಧಾರ್ಮಿಕ ನಾಯಕರನ್ನು ಗುರಿಯಾಗಿಸಿಕೊಂಡು ಅವರ ಕ್ರೂರ ಹತ್ಯೆಗಳನ್ನು ಮಾಡಲಾಗಿದೆ. ಜೈನ ಧರ್ಮಗುರುಗಳ ಹತ್ಯೆಯನ್ನು ಖಂಡಿಸಿ ಇತ್ತೀಚೆಗೆ ಮುಂಬಯಿಯಲ್ಲಿ ಜೈನ ಸಮುದಾಯದ ೧೫ ಸಾವಿರ ಜನರು ಪ್ರತಿಭಟನೆ ನಡೆಸಿದ್ದರು. ಪ್ರತಿವರ್ಷ ಪಾದಯಾತ್ರೆ ಕೈಗೊಳ್ಳುವ ಜೈನ ಧರ್ಮಗುರುಗಳು ಯಾತ್ರೆಯ ಸಮಯದಲ್ಲಿ ೩ ರಾಜ್ಯಗಳಲ್ಲಿ ಸಂಶಯಾಸ್ಪದ ಪರಿಸ್ಥಿತಿಯಲ್ಲಿ ಅಪಘಾತಕ್ಕೀಡಾಗುತ್ತಾರೆ ಎಂದು ಮುಂಬಯಿ ಜೈನ ಸಂಘಟನೆಯ ಸಂಯೋಜಕ ಶ್ರೀ ನಿತಿನ್‌ ಬೋರಾ ಇವರು ಮಾಹಿತಿ ನೀಡಿದ್ದಾರೆ.

ಸಮಾಜವು ಬಂಡಾಯ ಏಳುವುದು ಅವಶ್ಯಕ !

ಒಟ್ಟಾರೆ, ಜೈನ ಸಮಾಜದ ಸಂತರು, ನಾಯಕರಾಗಿರಲಿ ಅಥವಾ ಹಿಂದೂ ಸಮಾಜದ ಸಂತರು ಮತ್ತು ಹಿಂದುತ್ವನಿಷ್ಠ ನಾಯಕರಾಗಿರಲಿ, ಎಲ್ಲರನ್ನೂ ಮತಾಂಧರು ವಿವಿಧ ರೀತಿಯಲ್ಲಿ ಷಡ್ಯಂತ್ರ ರೂಪಿಸಿ ಹತ್ಯೆ ಮಾಡುತ್ತಿದ್ದಾರೆ. ಮತಾಂಧರ ದೃಷ್ಟಿಯಲ್ಲಿ, ಈ ಎಲ್ಲಾ ಸಂತರು ಮತ್ತು ನಾಯಕರು ‘ಕಾಫಿರ್‌’ಗಳು. ಕಠಿಣ ಕಾನೂನುಗಳನ್ನು ಜಾರಿಗೆ ತರಲು ಆಡಳಿತಗಾರರ ಮೇಲೆ ಕಾನೂನುಬದ್ಧವಾಗಿ ಒತ್ತಡ ಹೇರಬೇಕು. ಇತರ ಸಮಾಜಗಳಲ್ಲಿ ಹತ್ಯೆಯಾಗುತ್ತಿರುವವರು ನಮ್ಮ ಬಂಧುಗಳೇ ಆಗಿದ್ದಾರೆ. ಇನ್ನಾರೂ ಹತ್ಯೆಯಾಗಬಾರದು ಎಂಬ ದೃಷ್ಟಿಕೋನವನ್ನು ಇಟ್ಟುಕೊಂಡು ವಿವಿಧ ಜಾತಿಗಳ ಜನರು ಪರಸ್ಪರ ಸಹಾಯ ಮಾಡಬೇಕು. ಹೀಗೆ ಮಾಡಿದಾಗ ಇಡೀ ವಿಶ್ವವೇ ನನ್ನ ಮನೆ ಎಂಬಂತೆ ಎಲ್ಲರಲ್ಲೂ ಆತ್ಮೀಯತೆ ಬೆಳೆದು, ಒಂದು ದೊಡ್ಡ ಸಂಘಟನೆ ಮತ್ತು ಶಕ್ತಿ ತಾನಾಗಿಯೇ ನಿರ್ಮಾಣವಾಗುತ್ತದೆ. ಈ ಶಕ್ತಿಯೇ ಸಮಾಜದಿಂದ ದೊಡ್ಡ ದಂಗೆಯನ್ನು ಹುಟ್ಟುಹಾಕಿ ದುಷ್ಟ ಪ್ರವೃತ್ತಿಗಳನ್ನು ನಾಶಪಡಿಸುತ್ತದೆ, ಹಾಗೂ ಸೊಕ್ಕಿನಿಂದ ಮೆರೆಯುತ್ತಿರುವ ಜನಪ್ರತಿನಿಧಿಗಳು ಸಂಘಟಿತ ಸಮಾಜದ ಮುಂದೆ ಶರಣಾಗುವಂತೆ ಮಾಡುತ್ತದೆ. ಸಮಾಜದಿಂದ ಬರುವ ಬೇಡಿಕೆಗಳನ್ನು ಪೂರೈಸುವುದನ್ನು ಬಿಟ್ಟು ಅವರಿಗೆ ಬೇರೆ ದಾರಿಯೇ ಉಳಿಯುವುದಿಲ್ಲ.