ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖೊಮೇನಿ ಘೋಷಣೆ

ಟೆಲ್ ಅವಿವ್ (ಇಸ್ರೇಲ್) – ಯುದ್ಧ ಆರಂಭವಾಗಿದೆ. ನಾವು ಭಯೋತ್ಪಾದಕ ಯಹೂದಿ ಸರ್ಕಾರಕ್ಕೆ ತಕ್ಕ ಉತ್ತರ ನೀಡುತ್ತೇವೆ. ನಾವು ಅವರಿಗೆ ಯಾವುದೇ ದಯೆ ತೋರುವುದಿಲ್ಲ ಎಂದು ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುವ ಮೂಲಕ ಘೋಷಿಸಿದರು. ಇದರಿಂದಾಗಿ ಈಗ ಇರಾನ್-ಇಸ್ರೇಲ್ ನಡುವಿನ ಸಂಘರ್ಷವನ್ನು ‘ಯುದ್ಧ’ ಎಂದು ಕರೆಯಲಾಗುತ್ತಿದೆ. ಖಮೇನಿ ಅವರ ಘೋಷಣೆಯ ನಂತರ, ಇರಾನ್ ಇಸ್ರೇಲ್ ಮೇಲೆ 25 ಕ್ಷಿಪಣಿಗಳನ್ನು ಹಾರಿಸಿತು.
We must give a strong response to the terrorist Zionist regime.
We will show the Zionists no mercy.— Khamenei.ir (@khamenei_ir) June 17, 2025
ಈ ಯುದ್ಧದಲ್ಲಿ ಅಮೇರಿಕಾ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ. ಜೂನ್ 17 ರಂದು ಕೆನಡಾದಲ್ಲಿ ನಡೆದ ‘ಜಿ-7’ ಶೃಂಗಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಅಮೇರಿಕಾಗೆ ಮರಳಿದ ಅಧ್ಯಕ್ಷ ಟ್ರಂಪ್, ವೈಟ್ ಹೌಸ್ ನಲ್ಲಿ ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಭೆ ನಡೆಸಿ, ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಯುದ್ಧ ವಿಮಾನಗಳನ್ನು ಕಳುಹಿಸಲು ಅಮೇರಿಕಾ ನಿರ್ಧರಿಸಿತು. ಇದರಿಂದ ಈ ಯುದ್ಧದಲ್ಲಿ ಅಮೇರಿಕಾ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಳೆದ 6 ದಿನಗಳಲ್ಲಿ ಈ ಯುದ್ಧದಲ್ಲಿ 224 ಇರಾನ್ ನಾಗರಿಕರು ಸಾವನ್ನಪ್ಪಿದ್ದು, 1,481 ಜನರು ಗಾಯಗೊಂಡಿದ್ದಾರೆ. ಇನ್ನೊಂದೆಡೆ, ಇಸ್ರೇಲ್ ನಲ್ಲಿ ಇದುವರೆಗೆ 24 ಜನರು ಸಾವನ್ನಪ್ಪಿದ್ದು, 600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಖಮೇನಿ ಎಲ್ಲಿ ಅಡಗಿದ್ದಾರೆಂದು ನಮಗೆ ತಿಳಿದಿದ್ದರೂ, ನಾವು ಅವರನ್ನು ಕೊಲ್ಲುವುದಿಲ್ಲ! – ಡೊನಾಲ್ಡ್ ಟ್ರಂಪ್

ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ ಹೀಗೆ ಹೇಳಿದ್ದಾರೆ: “ತಥಾಕಥಿತ ಸರ್ವೋಚ್ಚ ನಾಯಕ (ಅಯತೊಲ್ಲಾ ಅಲಿ ಖಮೇನಿ) ಎಲ್ಲಿ ಅಡಗಿದ್ದಾರೆಂದು ನಮಗೆ ಚೆನ್ನಾಗಿ ತಿಳಿದಿದೆ. ಅವರು ಸುಲಭವಾದ ಗುರಿಯಾಗಿದ್ದಾರೆ; ಆದರೆ ಅವರು ಅಲ್ಲಿ ಸುರಕ್ಷಿತರಾಗಿದ್ದಾರೆ. ನಾವು ಅವರನ್ನು ಹೊರಗೆ ಕರೆತರುವುದಿಲ್ಲ. ಕನಿಷ್ಠ ಸದ್ಯಕ್ಕಂತೂ ಇಲ್ಲ; ಏಕೆಂದರೆ ನಾವು ನಾಗರಿಕರ ಮೇಲೆ ಅಥವಾ ಸೈನಿಕರ ಮೇಲೆ ಕ್ಷಿಪಣಿಗಳನ್ನು ಹಾರಿಸಲು ಬಯಸುವುದಿಲ್ಲ; ಆದರೆ ನಮ್ಮ ತಾಳ್ಮೆ ಕ್ಷೀಣಿಸುತ್ತಿದೆ” ಎಂದು ಅವರು ಎಚ್ಚರಿಕೆ ನೀಡಿದರು.
— Donald J. Trump (@realDonaldTrump) June 17, 2025
ಇರಾನಿನ ಆಕಾಶದ ಮೇಲೆ ನಮ್ಮ ಸಂಪೂರ್ಣ ನಿಯಂತ್ರಣವಿದೆ! – ಟ್ರಂಪ್
ಟ್ರಂಪ್ ತಮ್ಮ ಮಾತನ್ನು ಮುಂದುವರೆಸಿ, “ಈಗ ಇರಾನಿನ ಆಕಾಶದ ಮೇಲೆ ನಮ್ಮ ಸಂಪೂರ್ಣ ನಿಯಂತ್ರಣವಿದೆ. ಇರಾನ್ ಬಳಿ ಉತ್ತಮ ‘ಸ್ಕೈ ಟ್ರ್ಯಾಕರ್ ಗಳು’ ಮತ್ತು ಇತರ ರಕ್ಷಣಾತ್ಮಕ ಸಾಧನಗಳು ಸಾಕಷ್ಟು ಇದ್ದವು; ಆದರೆ ಅವುಗಳನ್ನು ಅಮೇರಿಕಾ ನಿರ್ಮಿಸಿದ ಅಸ್ತ್ರಗಳೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಅಮೇರಿಕಾಕ್ಕಿಂತ ಉತ್ತಮವಾಗಿ ಯಾರೂ ಅಸ್ತ್ರಗಳನ್ನು ಮಾಡಲು ಸಾಧ್ಯವಿಲ್ಲ” ಎಂದು ಟ್ರಂಪ್ ನುಡಿದರು.
— Donald J. Trump (@realDonaldTrump) June 17, 2025
ಇಸ್ರೇಲ್ ಜಗತ್ತನ್ನು ಅಣುಯುದ್ಧದ ಅಂಚಿಗೆ ತಂದಿದೆ! – ರಷ್ಯಾ
“ಇಸ್ರೇಲ್ ನಿಂದ ಇರಾನಿನ ಶಾಂತಿಯುತ ಪರಮಾಣು ನೆಲೆಗಳ ಮೇಲೆ ನಡೆಯುತ್ತಿರುವ ದಾಳಿಗಳು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ. ಇದರಿಂದ ಅಂತರರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯ ಎದುರಾಗಿದೆ. ಇಸ್ರೇಲ್ ದಾಳಿಗಳು ಜಗತ್ತನ್ನು ಅಣುಯುದ್ಧದ ಅಂಚಿಗೆ ತಂದಿವೆ” ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಟೀಕಿಸಿದೆ.
ಇರಾನಿನ ಪರಮಾಣು ಕಾರ್ಯಕ್ರಮ ಸಂಪೂರ್ಣ ನಾಶವಾಗುವ ಹಾದಿಯಲ್ಲಿದೆಯೇ?
“ಇರಾನಿನ ಸಂಪೂರ್ಣ ಪರಮಾಣು ಕಾರ್ಯಕ್ರಮವೇ ನಾಶದ ಅಂಚಿನಲ್ಲಿದೆ” ಎಂದು ಇಸ್ರೇಲ್ ಹೇಳಿಕೊಂಡಿದೆ. ಇಸ್ರೇಲ್ ಇರಾನಿನ ನೆತಾಂಜ ಪರಮಾಣು ನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸಿ ಭಾರಿ ವಿಧ್ವಂಸವನ್ನುಂಟುಮಾಡಿರುವುದು ಉಪಗ್ರಹ ಚಿತ್ರಗಳಿಂದ ಸ್ಪಷ್ಟವಾಗಿದೆ; ಆದರೆ ಈ ಪರಮಾಣು ನೆಲೆಗಳಲ್ಲಿ ಹೆಚ್ಚಿನ ಯಂತ್ರೋಪಕರಣಗಳು ಮತ್ತು ಇತರ ಸಾಮಗ್ರಿಗಳು ಭೂಮಿಯ ಅಡಿಯಲ್ಲಿ ಆಳವಾಗಿರುವುದರಿಂದ, ಅವುಗಳಿಗೆ ಎಷ್ಟು ಹಾನಿಯಾಗಿದೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.
ನಾವು ಕೂಡ ಇರಾನಿನ ಆಡಳಿತಗಾರರ ದೌರ್ಜನ್ಯದ ಬಲಿಪಶುಗಳಾಗಿದ್ದೇವೆ! – ಜರ್ಮನಿ
“ಇಸ್ರೇಲ್ ಇರಾನಿಗೆ ತಕ್ಕ ಪಾಠ ಕಲಿಸುವ ಕೆಲಸವನ್ನು ನಮಗಾಗಿ ಮಾಡುತ್ತಿದೆ. ನಾವು ಸಹ ಇರಾನಿನ ಆಡಳಿತಗಾರರ ದೌರ್ಜನ್ಯಗಳ ಬಲಿಪಶುಗಳಾಗಿದ್ದೇವೆ. ಇರಾನಿನ ಆಡಳಿತಗಾರರು ವಿಶ್ವದಾದ್ಯಂತ ಸಾವು ಮತ್ತು ವಿನಾಶವನ್ನು ತಂದಿದ್ದಾರೆ” ಎಂದು ಜರ್ಮನ್ ಚಾನ್ಸಲರ್ ಫ್ರೆಡ್ರಿಕ್ ಮಾರ್ಜ್ ಪ್ರತಿಕ್ರಿಯಿಸಿದ್ದಾರೆ.
ಇರಾನಿನ ನಾಗರಿಕರು ವ್ಹಾಟ್ಸ ಆಪ್ ಅನ್ನು ತೆಗೆದುಹಾಕಬೇಕು! – ಇರಾನ್ ಸರಕಾರದ ಆದೇಶ
ಇರಾನ್ ಸರಕಾರವು ತನ್ನ ನಾಗರಿಕರಿಗೆ ತಮ್ಮ ಸ್ಮಾರ್ಟ್ ಫೋನ್ ಗಳಿಂದ ವ್ಹಾಟ್ಸ್ ಆಪ್ ಅನ್ನು ತೆಗೆದುಹಾಕಲು ಆದೇಶಿಸಿದೆ. “ವ್ಹಾಟ್ಸ್ ಆಪ್ ನಲ್ಲಿನ ಮಾಹಿತಿಯನ್ನು ಇಸ್ರೇಲ್ ಗೆ ರವಾನೆಯಾಗುವ ಸಾಧ್ಯತೆಯಿದೆ” ಎಂದು ಈ ಆದೇಶದಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಟೆಲಿಗ್ರಾಮ್ ಮತ್ತು ಇತರ ಅಪ್ಲಿಕೇಶನ್ ಗಳನ್ನು ಸಹ ತೆಗೆದುಹಾಕುವಂತೆ ಸರಕಾರ ಸೂಚಿಸಿದೆ.
“ಇರಾನ್ ಸರಕಾರವು ವ್ಹಾಟ್ಸ್ ಆಪ್ ಅಥವಾ ಅದರ ಮಾಲೀಕರಾದ ‘ಮೆಟಾ’ ಸಂಸ್ಥೆಯ ಯಾವುದೇ ವಿಚಾರಣೆ ನಡೆಸಿಲ್ಲ” ಎಂದು ಮೆಟಾ ಹೇಳಿದೆ. “ವ್ಹಾಟ್ಸ್ ಆಪ್ ನಲ್ಲಿ ನಡೆಯುವ ಚಾಟ್ ಗಳು ಮತ್ತು ಅವುಗಳಲ್ಲಿನ ಮಾಹಿತಿಯನ್ನು ಯಾವುದೇ ಮಧ್ಯವರ್ತಿ ಓದಲು ಸಾಧ್ಯವಿಲ್ಲ. ನಾವು ಯಾವುದೇ ಸರಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಮಾಹಿತಿ ನೀಡುವುದಿಲ್ಲ” ಎಂದೂ ‘ಮೆಟಾ’ ಸ್ಪಷ್ಟಪಡಿಸಿದೆ.
ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ
ಲೆಬನಾನ್: ಹಿಜ್ಬುಲ್ಲಾ ಮೇಲೆ ಇಸ್ರೇಲ್ ದಾಳಿ; ಟ್ರಂಪ್-ನೆತನ್ಯಾಹು ನಡುವೆ ವಾಗ್ವಾದ!
ಇರಾನ್: ಅಧ್ಯಕ್ಷರ ರಾಜೀನಾಮೆ; ವದಂತಿ ನಿರಾಕರಣೆ