ಇರಾನ್‌ನ 140 ಮಿಲಿಟರಿ ನೆಲೆಗಳ ಮೇಲೆ ಅಮೆರಿಕಾ ದಾಳಿ

ನ್ಯೂಯಾರ್ಕ್ – ಜುಲೈ 11 ರ ತಡರಾತ್ರಿ ಅಮೆರಿಕಾ ಇರಾನ್ ಮೇಲೆ ಭಾರಿ ವೈಮಾನಿಕ ದಾಳಿ ನಡೆಸಿದೆ. ಅಮೆರಿಕಾದ ‘ಸೆಂಟ್ರಲ್ ಕಮಾಂಡ್’ ನೀಡಿರುವ ಮಾಹಿತಿ ಪ್ರಕಾರ, ಈ ದಾಳಿಯಲ್ಲಿ ಇರಾನ್‌ನ ಸುಮಾರು 140 ಮಿಲಿಟರಿ ನೆಲೆಗಳನ್ನು ಗುರಿಯಾಗಿಸಲಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ (ಎರಡು ಜಲರಾಶಿಗಳನ್ನು ಜೋಡಿಸುವ ಜಲಮಾರ್ಗದಲ್ಲಿ) ಸೈಪ್ರಸ್ ಧ್ವಜವಿರುವ ನೌಕೆಯೊಂದರ ಮೇಲೆ ನಡೆದ ದಾಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕಾ ಹೇಳಿದೆ. ಇರಾನ್ ನಡೆಸಿದ ಆ ದಾಳಿಯಿಂದಾಗಿ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು, ಇಂಜಿನ್ ವಿಫಲಗೊಂಡಿತ್ತು ಮತ್ತು ಅದರಲ್ಲಿದ್ದ ಒಬ್ಬ ಸಿಬ್ಬಂದಿ ನಾಪತ್ತೆಯಾಗಿದ್ದರು.

1. ಅಮೆರಿಕಾದ ಈ ವೈಮಾನಿಕ ದಾಳಿಯ ಕೆಲವೇ ಸಮಯದ ನಂತರ, ಇರಾನ್ ಮಿಲಿಟರಿ ಕೂಡ ಪ್ರತೀಕಾರವಾಗಿ ಕುವೈತ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕಾ ಮಿಲಿಟರಿ ನೆಲೆಗಳ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿರುವುದಾಗಿ ಮಾಹಿತಿ ನೀಡಿದೆ.

2. ಕುವೈತ್‌ನಲ್ಲಿರುವ ಅಮೆರಿಕಾದ ‘ಪೇಟ್ರಿಯಾಟ್’ ವೈಮಾನಿಕ ರಕ್ಷಣಾ ವ್ಯವಸ್ಥೆ, ಮದ್ದುಗುಂಡುಗಳ ಗೋದಾಮುಗಳು ಮತ್ತು ರಾಡಾರ್ ಕೇಂದ್ರಗಳು, ಅಲ್ಲದೇ ಬಹ್ರೇನ್‌ನಲ್ಲಿರುವ ಅಮೆರಿಕಾದ ಸಂಪರ್ಕ ವ್ಯವಸ್ಥೆ ಮತ್ತು ರಾಡಾರ್ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ ಎಂದು ಇರಾನ್ ಹೇಳಿದೆ. ಆದಾಗ್ಯೂ ಅಮೆರಿಕಾ, ಕುವೈತ್ ಅಥವಾ ಬಹ್ರೇನ್‌ನಿಂದ ಈ ದಾಳಿಗಳ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ.

ಇರಾನ್ ಪರಮಾಣು ನೆಲೆಗಳ ಪುನರ್ನಿರ್ಮಾಣ ಆರಂಭಿಸಿದೆ ಎಂದು ‘ಸಿ.ಎನ್.ಎನ್.’ ದಾವೆ .

ಉಪಗ್ರಹ ಚಿತ್ರಗಳನ್ನು ಆಧರಿಸಿ ‘ಸಿ.ಎನ್.ಎನ್.’ ಸುದ್ದಿ ಸಂಸ್ಥೆಯು, ಇರಾನ್ ‘ಪಾರ್ಚಿನ್’ ಸೇರಿದಂತೆ ಕೆಲವು ಪರಮಾಣು ನೆಲೆಗಳ ದುರಸ್ತಿ ಮತ್ತು ಪುನರ್ನಿರ್ಮಾಣ ಕೆಲಸ ಮಾಡುತ್ತಿದೆ ಎಂದು ತಿಳಿಸಿದೆ. ಇರಾನ್‌ನ ಈ ಕ್ರಮವನ್ನು ಅಮೆರಿಕಾ-ಇರಾನ್ ನಡುವಿನ ಸಾಮರಸ್ಯ ಒಪ್ಪಂದದ ಉಲ್ಲಂಘನೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.