ಇರಾನ್‌ನಿಂದ ಅಮೆರಿಕದ ದಾಳಿಗಳಿಗೆ ತೀವ್ರ ಪ್ರತಿದಾಳಿ

ಕತಾರ, ಕುವೈತ, ಬಹ್ರೇನನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ

ತೆಹರಾನ (ಇರಾನ) – ಅಮೆರಿಕವು ಇರಾನ ಮೇಲೆ ನಡೆಸಿದ ದಾಳಿಗಳಿಗೆ ಪ್ರತಿಯಾಗಿ ಇರಾನ ದೇಶವು ಕತಾರ, ಕುವೈತ ಮತ್ತು ಬಹ್ರೇನ ದೇಶಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಡ್ರೋನ್ ಮೂಲಕ ದಾಳಿ ನಡೆಸುವ ಮೂಲಕ ಕೇವಲ ೨೪ ಗಂಟೆಗಳಲ್ಲಿ ಅಮೇರಿಕಕ್ಕೆ ತೀವ್ರ ಪ್ರತ್ಯುತ್ತರ ನೀಡಿದೆ. ಇರಾನಿ ಸೈನ್ಯವು ನೀಡಿರುವ ಮಾಹಿತಿಯ ಅನುಸಾರ, ಈ ದಾಳಿಗಳಲ್ಲಿ ಕುವೈತಿನಲ್ಲಿನ ‘ಪೇಟ್ರಿಯಟ್’ ಕ್ಷಿಪಣಿ ವ್ಯವಸ್ಥೆ, ಕತಾರಿನಲ್ಲಿನ ‘ಅರ್ಲಿ ವಾರ್ನಿಂಗ್ ಸ್ಯಾಟಲೈಟ್ ಆಂಟೆನಾ’ ಮತ್ತು ಬಹ್ರೇನನಲ್ಲಿರುವ ಅಮೆರಿಕ ಸೇನೆಯ ಇಂಧನ ಟ್ಯಾಂಕ್ ಅನ್ನು ಗುರಿಯಾಗಿಸಲಾಗಿತ್ತು. ಈ ದಾಳಿಗಳಿಗಾಗಿ ಭಾರಿ ಸಂಖ್ಯೆಯಲ್ಲಿ ಡ್ರೋನ್‌ಗಳನ್ನು ಬಳಸಲಾಯಿತು.

‘ಅಮೆರಿಕವು ನಮ್ಮ ಮೇಲೆ ದಾಳಿ ಮಾಡಿದರೆ ನಾವು ಅದಕ್ಕೆ ಪ್ರತ್ಯುತ್ತರ ನೀಡಿಯೇ ತೀರುತ್ತೇವೆ,’ ಎಂದು ಇರಾನ ಸಂಸತ್ತಿನ ಸ್ಪೀಕರ್ ಮೊಹಮ್ಮದ ಬಾಗೇರ ಗಾಲಿಬಾಫರವರು ಎಚ್ಚರಿಸಿದ್ದಾರೆ. ‘ಹಾರ್ಮುಜ್ ಜಲಸಂಧಿಯು (ಎರಡು ಜಲರಾಶಿಗಳನ್ನು ಸಂಪರ್ಕಿಸುವ ಜಲಮಾರ್ಗ) ಅಮೆರಿಕದ ಒತ್ತಡಕ್ಕೆ ಮಣಿದು ಅಲ್ಲ, ಬದಲಿಗೆ ಇರಾನ್ ವಿಧಿಸುವ ಷರತ್ತುಗಳ ಮೇಲಷ್ಟೇ ಮುಕ್ತವಾಗಿರಲಿದೆ,’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.