Donald Trump On KASHMIR : “ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುತ್ತೇವೆ!” – ಡೊನಾಲ್ಡ್ ಟ್ರಂಪ್

ವಾಷಿಂಗ್ಟನ – ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶ್ವೇತಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ “ನಾವು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುತ್ತೇವೆ” ಎಂದು ಹೇಳಿದ್ದಾರೆ. ಈ ಕುರಿತು ‘ಬಿಸಿನೆಸ್ ಸ್ಟ್ಯಾಂಡರ್ಡ್’ ದಿನಪತ್ರಿಕೆ ವರದಿ ಮಾಡಿದೆ. ಇದರೊಂದಿಗೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ತಾನು ತಡೆದಿದ್ದೇನೆ ಎಂದು ಟ್ರಂಪ್ ಮತ್ತೊಮ್ಮೆ ಪ್ರತಿಪಾದಿಸಿದರು. “ನಾನು ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಿದೆ ಮತ್ತು ಇದನ್ನು ನಾನು ವ್ಯಾಪಾರದ ಮೂಲಕ ಮಾಡಿದೆ” ಎಂದು ಅವರು ಹೇಳಿದರು.

ಭಾರತದ ನಿಲುವು ಸ್ಪಷ್ಟ!

ಭಾರತವು ಈ ಹಿಂದೆ ಅನೇಕ ಬಾರಿ ಕಾಶ್ಮೀರದ ಕುರಿತಾದ ತನ್ನ ನಿಲುವನ್ನು ಜಗತ್ತಿಗೆ ಸ್ಪಷ್ಟಪಡಿಸಿದೆ. ಕಾಶ್ಮೀರ ವಿಷಯವು ದ್ವಿಪಕ್ಷೀಯವಾಗಿದ್ದು, ಇದರಲ್ಲಿ ಮೂರನೇ ಪಕ್ಷದ ಮಧ್ಯಸ್ಥಿಕೆಯ ಅಗತ್ಯವಿಲ್ಲ ಎಂದು ಭಾರತ ನಿರಂತರವಾಗಿ ಹೇಳಿದೆ. ಆದ್ದರಿಂದ, ಭಾರತವು ಮೂರನೇ ದೇಶದ ಮಧ್ಯಸ್ಥಿಕೆಯನ್ನು ಸತತವಾಗಿ ತಿರಸ್ಕರಿಸಿದೆ ಮತ್ತು ಪಾಕಿಸ್ತಾನದೊಂದಿಗಿನ ಎಲ್ಲಾ ಸಮಸ್ಯೆಗಳನ್ನು ದ್ವಿಪಕ್ಷೀಯ ಮಾರ್ಗಗಳ ಮೂಲಕ ಬಗೆಹರಿಸಬೇಕು ಎಂಬ ನಿಲುವನ್ನು ಅನೇಕ ಬಾರಿ ಮಂಡಿಸಿದೆ.

ಸಂಪಾದಕೀಯ ನಿಲುವು

ಸ್ವಂತ ದೇಶದ ವಲಸಿಗರ ಸಮಸ್ಯೆಗಳೊಂದಿಗೆ ಇನ್ನಿತರೆ ಅನೇಕ ಪ್ರಶ್ನೆಗಳನ್ನು ಬಗೆಹರಿಸಲು ಸಾಧ್ಯವಾಗದ ಅಮೆರಿಕಾ, ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳುವುದು ದೊಡ್ಡ ಹಾಸ್ಯವಾಗಿದೆ. ಅಂದರೆ “ಕಾಶ್ಮೀರ ಭಾರತದ ಆಂತರಿಕ ವಿಷಯವಾಗಿದ್ದು, ಇದರಲ್ಲಿ ಅಮೆರಿಕಾ ಮೂಗು ತೂರಿಸುವ ಅವಶ್ಯಕತೆಯಿಲ್ಲ” ಎಂದು ಭಾರತವು ಅಮೆರಿಕಾಗೆ ಸ್ಪಷ್ಟವಾಗಿ ಹೇಳಬೇಕು!