WB Maheshtala Temple Vandalized : ದೇವಸ್ಥಾನದ ಭೂಮಿ ಕಬಳಿಸಲು ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮೇಲೆ ದಾಳಿ

  • ದಕ್ಷಿಣ 24 ಪರಗಣ (ಬಂಗಾಳ)ಇಲ್ಲಿನ ಘಟನೆ

  • 5 ಮಂದಿ ಗಾಯಗೊಂಡಿದ್ದು, 4 ಗಲಭೆಕೋರರ ಬಂಧನ

ಈ ಚಿತ್ರ ಬಾಂಗ್ಲಾದೇಶದ್ದಲ್ಲ, ಬದಲಾಗಿ ಪಶ್ಚಿಮ ಬಂಗಾಳದ ಮಹೇಶತಲದಿಂದ!

ದಕ್ಷಿಣ 24 ಪರಗಣ (ಬಂಗಾಳ) – ಇಲ್ಲಿನ ಬಜ್-ಬಜ್ ಪ್ರದೇಶದ ಮಹೇಶತಲಾ ಪ್ರದೇಶದಲ್ಲಿರುವ ಶಿವದೇವಸ್ಥಾನದ ಭೂಮಿಯನ್ನು ಮುಸಲ್ಮಾನರು ಒತ್ತುವರಿ ಮಾಡಿಕೊಳ್ಳುವುದನ್ನು ವಿರೋಧಿಸಿದ ಹಿಂದೂಗಳ ಮೇಲೆ ಜೂನ್ 10 ರಂದು ಮುಸಲ್ಮಾನರು ದಾಳಿ ನಡೆಸಿದ್ದಾರೆ. ಈ ದಾಳಿಯ ಸಮಯದಲ್ಲಿ ಮುಸಲ್ಮಾನರು ದೇವಸ್ಥಾನವನ್ನು ಧ್ವಂಸಗೊಳಿಸಿದ್ದಾರೆ, ಅಲ್ಲದೆ ಅವರು ನಡೆಸಿದ ಕಲ್ಲುತೂರಾಟದಿಂದ 5 ಹಿಂದೂಗಳು ಮತ್ತು ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೆ 4 ಜನರನ್ನು ಬಂಧಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕೋಲಕಾತಾ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆಯ ಸೈನಿಕರನ್ನು ನಿಯೋಜಿಸಲಾಗಿದೆ.

ಇಲ್ಲಿನ ಹಿಂದೂಗಳು ಗಮನಿಸಿದ್ದರು,

1. ಹಳೆಯ ಶಿವದೇವಸ್ಥಾನದ ಆವರಣದಲ್ಲಿರುವ ಕೊಳದ ಮೇಲೆ ಮಣ್ಣುಗಳನ್ನು ತೆಗೆದು ನಿಧಾನವಾಗಿ ನಿಯಂತ್ರಣ ಸಾಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಇಲ್ಲಿನ ಹಿಂದೂಗಳು ಅರಿತಿದ್ದರು. ಈ ಒತ್ತುವರಿ ಕುರಿತು ಜನರು ಅಧಿಕಾರಿಗಳಿಗೆ ದೂರು ನೀಡಿದ್ದರು; ಆದರೆ ಆಡಳಿತ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

2. ಜೂನ್ 10 ರಂದು ಇಲ್ಲಿ ಕೆಲವು ಮುಸಲ್ಮಾನರು ಶಿವದೇವಸ್ಥಾನದ ಭೂಮಿಯ ಮೇಲೆ ಹಣ್ಣಿನ ಅಂಗಡಿಗಳನ್ನು ಸ್ಥಾಪಿಸಲು ಪ್ರಯತ್ನಿಸಿದರು. ಇದನ್ನು ನೋಡಿ ಹಿಂದೂಗಳು ಅವರನ್ನು ತಡೆದರು. ಇದರಿಂದ ಹಿಂದೂಗಳು ಮತ್ತು ಮುಸಲ್ಮಾನರ ನಡುವೆ ವಾಗ್ವಾದ ನಡೆದು, ನಂತರ ಹೊಡೆದಾಟಕ್ಕೆ ತಿರುಗಿತು. ಇದರ ನಂತರ ಮುಸಲ್ಮಾನರು ದೇವಸ್ಥಾನವನ್ನು ಧ್ವಂಸಗೊಳಿಸಿ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದರು. ಪೊಲೀಸರು ಸ್ಥಳಕ್ಕೆ ತಲುಪಿದ ನಂತರ ಮುಸಲ್ಮಾನರು ಅವರ ಮೇಲೂ ದಾಳಿ ಮಾಡಿದರು. ಈ ಸಮಯದಲ್ಲಿ ಮತಾಂಧ ಮುಸಲ್ಮಾನರು ಪೊಲೀಸ್ ಠಾಣೆಯ ಹೊರಗೆ ಕಲ್ಲು ತೂರಾಟ ನಡೆಸಿದರು, ಟೈರ್ ಗಳನ್ನು ಸುಟ್ಟುಹಾಕಿದರು ಮತ್ತು ಒಂದು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದರು.

3. ಭಾಜಪ ನಾಯಕ ಮತ್ತು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಪ್ರಕಾರ, ಮುಸಲ್ಮಾನರು ದೇವಸ್ಥಾನದ ಮೇಲೆ ಮಾತ್ರವಲ್ಲದೆ ಪವಿತ್ರ ತುಳಸಿ ವೃಂದಾವನ, ಹಿಂದೂಗಳ ಅಂಗಡಿಗಳು ಮತ್ತು ಮನೆಗಳ ಮೇಲೂ ದಾಳಿ ಮಾಡಿದ್ದಾರೆ. ದೇವಸ್ಥಾನದ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನು ಎಸೆದಿದ್ದಾರೆ. ಇದರಿಂದ ಅಲ್ಲಿನ ಅನೇಕ ವಸ್ತುಗಳಿಗೆ ಹಾನಿಯಾಗಿದೆ.

ಪೊಲೀಸರು ಉದ್ದೇಶಪೂರ್ವಕವಾಗಿ ಗಲಭೆಯನ್ನು ತಡೆಯುವುದನ್ನು ತಪ್ಪಿಸಿದರು! –  ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯವರ ಆರೋಪ

ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಕೋಲಕಾತಾ ಪೊಲೀಸ್ ಪ್ರಧಾನ ಕಚೇರಿ ಮುಂದೆ ಧರಣಿ ನಡೆಸಿದರು ಮತ್ತು ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸುವಂತೆ ಆಗ್ರಹಿಸಿದರು. ಅವರು ರಾಜ್ಯಪಾಲ ಡಾ. ಸಿ.ವಿ. ಆನಂದ ಬೋಸ್ ಅವರಿಗೆ ರವೀಂದ್ರನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುಕುಲ್ ಮಿಯಾ ಅವರನ್ನು ಅಮಾನತುಗೊಳಿಸಲು ಮತ್ತು ಅವರ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಸುವೇಂದು ಅಧಿಕಾರಿ ಮಾತನಾಡಿ, ‘ಮುಕುಲ್ ಮಿಯಾ ಅವರು ಹಿಂಸಾಚಾರದ ಸಮಯದಲ್ಲಿ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ತೋರಿದ್ದಾರೆ ಮತ್ತು ಗಲಭೆಕೋರರಿಗೆ ಸಂಘಟಿತರಾಗಲು ಅವಕಾಶ ನೀಡಿದ್ದಾರೆ.’ ಎಂದು ಆರೋಪಿಸಿದ್ದಾರೆ. ಈ ಸಮಯದಲ್ಲಿ ಅವರು ಮುಕುಲ್ ಮಿಯಾ ಅವರ ಒಂದು ಛಾಯಾಚಿತ್ರವನ್ನು ಸಹ ಪ್ರಸಾರ ಮಾಡಿದ್ದಾರೆ. ಇದರಲ್ಲಿ ಮುಕುಲ್ ಮಿಯಾ ತೃಣಮೂಲ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಕಾಣುತ್ತಿದೆ.

ಅಧಿಕಾರಿ ಅವರು ಆರೋಪಿಸಿ,

‘ಈ ಸಂಪೂರ್ಣ ಘಟನೆಯು ಪೊಲೀಸರ ಉಪಸ್ಥಿತಿಯಲ್ಲಿ ನಡೆಯಿತು; ಆದರೆ ಅವರು ಆ ಗಲಭೆಕೋರರನ್ನು ತಡೆಯಲು ಸಾಧ್ಯವಾಗಲಿಲ್ಲ.’ ಅವರು ಒಂದು ವಿಡಿಯೋವನ್ನು ಪ್ರಸಾರ ಮಾಡಿದ್ದು, ಅದರಲ್ಲಿ ಭಾರೀ ಜನಸಮೂಹ ಹಿಂಸಾಚಾರದಲ್ಲಿ ತೊಡಗಿರುವುದು ಕಾಣುತ್ತಿದೆ. ಎದುರಿನ ರಸ್ತೆಯ ಇನ್ನೊಂದು ಬದಿಯಲ್ಲಿರುವ ಧ್ವಂಸಗೊಂಡ ದೇವಸ್ಥಾನ ಮತ್ತು ಪೊಲೀಸ್ ಚೌಕಿ ಸಹ ಕಾಣಿಸುತ್ತಿದೆ. ಇದರಲ್ಲಿ ಒಬ್ಬ ಸ್ಥಳೀಯ ಹಿಂದೂ ಮಾತನಾಡುತ್ತಾ, ಮುಸಲ್ಮಾನರು ತಮ್ಮನ್ನು ದೇವಸ್ಥಾನವನ್ನು ಮುಚ್ಚಲು ಕೇಳಿದ್ದಾರೆ; ಆದರೆ ಹಿಂದೂಗಳು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.

ಪೊಲೀಸರಿಂದ ಗಲಭೆಕೋರರ ಬದಲಿಗೆ ಸಂತ್ರಸ್ತರ ಮೇಲೆ ಕ್ರಮ! – ಭಾಜಪ

ಕೇಂದ್ರ ಸಚಿವ ಮತ್ತು ಭಾಜಪ ನಾಯಕ ಸುಕಾಂತ ಮಜುಂದಾರ್ ಅವರು ರಾಜ್ಯ ಸರಕಾರವು ತುಷ್ಟೀಕರಣದ ರಾಜಕೀಯ ಮಾಡುತ್ತಿದೆ ಮತ್ತು ಪೊಲೀಸರು ಗಲಭೆಕೋರರ ಬದಲಿಗೆ ಸಂತ್ರಸ್ತರ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಭಾಜಪ ಸ್ಥಳೀಯ ವಿವಾದಕ್ಕೆ ಧಾರ್ಮಿಕ ಬಣ್ಣ ನೀಡುತ್ತಿದೆ! – ತೃಣಮೂಲ ಕಾಂಗ್ರೆಸ್

ತೃಣಮೂಲ ಕಾಂಗ್ರೆಸ್ ಭಾಜಪ ಆರೋಪಗಳನ್ನು ನಿರಾಕರಿಸಿದ್ದು, ಇದು ಒಂದು ಸ್ಥಳೀಯ ವಿವಾದವಾಗಿದ್ದು, ಅದನ್ನು ಭಾಜಪ ಧಾರ್ಮಿಕ ಬಣ್ಣ ನೀಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ.

(ಈ ಛಾಯಾಚಿತ್ರಗಳು/ವೀಡಿಯೊಗಳನ್ನು ಪೋಸ್ಟ್ ಮಾಡುವುದರ ಹಿಂದಿನ ನಮ್ಮ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೂ ನೋವುಂಟು ಮಾಡುವುದು ಅಲ್ಲ, ಬದಲಾಗಿ ಹಿಂದೂ ವಿರೋಧಿಗಳು ಮಾಡುವ ವಿಡಂಬನೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು. – ಸಂಪಾದಕ)

ಸಂಪಾದಕೀಯ ನಿಲುವು

ಬಂಗಾಳವು ಇನ್ನೊಂದು ಬಾಂಗ್ಲಾದೇಶವಾಗಿದೆ ಎಂಬುದು ಇದರಿಂದ ಮತ್ತೊಮ್ಮೆ ಸ್ಪಷ್ಟವಾಗುತ್ತದೆ! ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆಗಾಗಿ ಕೇಂದ್ರ ಮಟ್ಟದಿಂದ ಏನೂ ಮಾಡದಂತೆಯೇ, ಬಂಗಾಳದಲ್ಲಿಯೂ ಅದೇ ಚಿತ್ರಣ ಕಂಡುಬರುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂಗಳು ಪ್ರಯತ್ನಿಸುವುದು ಅವಶ್ಯಕವಾಗಿದೆ!