
‘ಪರಾತ್ಪರ ಗುರು ಡಾ. ಆಠವಲೆಯವರು ಕಲಿಯುಗ ವನ್ನು ಅನುಸರಿಸಿ ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ‘ಗುರುಕೃಪಾಯೋಗ’ ಈ ಯೋಗಮಾರ್ಗವನ್ನು ನಿರ್ಮಿಸಿದರು. ಗುರುಕೃಪೆಯಿಂದ ಅದರ ಬಗ್ಗೆ ನನಗೆ ಅರಿವಾದ ಕೆಲವು ವೈಶಿಷ್ಟ್ಯಗಳನ್ನು ಇಲ್ಲಿ ಕೊಡಲಾಗಿದೆ.

೧. ಗುರುಕೃಪಾಯೋಗದಲ್ಲಿ ಮನುಷ್ಯ ಜೀವನದ ಧ್ಯೇಯ ಸ್ಪಷ್ಟವಾಗುತ್ತದೆ
ಗುರುಕೃಪಾಯೋಗದಲ್ಲಿ ‘ಮನುಷ್ಯ ಜೀವನದ ಧ್ಯೇಯ ಹಿಂದಿನ ಜನ್ಮಗಳ ಪ್ರಾರಬ್ಧವನ್ನು ಭೋಗಿಸಿ ಮುಗಿಸುವುದು ಹಾಗೂ ಸಾಧನೆ ಮಾಡಿ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದೇ ಆಗಿದೆ’, ಎಂದು ಹೇಳಲಾಗಿದೆ. ಆದ್ದರಿಂದ ಜಿಜ್ಞಾಸು ಹಾಗೂ ಸಾಧಕರಿಗೆ ‘ಮೊಟ್ಟ ಮೊದಲು ತಮ್ಮ ಜೀವನದ ಧ್ಯೇಯ ಏನು ?’, ಎಂಬುದು ಸ್ಪಷ್ಟವಾಗುತ್ತದೆ. ಈ ಸ್ಪಷ್ಟತೆಯು ಇನ್ನೆಲ್ಲಿಯೂ ಕಾಣಿಸುವುದಿಲ್ಲ. ಜೀವನದ ಧ್ಯೇಯ ಸ್ಪಷ್ಟವಾಗುವುದರಿಂದ ಸಾಧಕನಿಗೆ ಸಾಧನೆ ಯೊಂದಿಗೆ ಸಾಮರಸ್ಯ ಹೊಂದಲು ಸುಲಭವಾಗುತ್ತದೆ.

೨. ಪರಾತ್ಪರ ಗುರು ಡಾ. ಆಠವಲೆಯವರು ಗುರುಕೃಪಾಯೋಗಾನುಸಾರ ಸಾಧನೆಯ ಸಾರಾಂಶವನ್ನು ಹೇಳಿ ಸಾಧಕರಿಗೆ ಈಶ್ವರಪ್ರಾಪ್ತಿ ಹೇಗೆ ಸಾಧಿಸುವುದು ?’, ಎಂಬುದರ ದೃಷ್ಟಿಕೋನ ನೀಡಿದ್ದಾರೆ
ಸನಾತನ ಧರ್ಮದಲ್ಲಿ ೪ ವೇದಗಳು, ೧೮ ಪುರಾಣಗಳು, ೧೦೮ ಉಪನಿಷತ್ತುಗಳು, ಋಷಿಮುನಿಗಳು ಮತ್ತು ಸಂತರು ಬರೆದಿರುವ ಬಹಳಷ್ಟು ಗ್ರಂಥಗಳಿವೆ. ಇವುಗಳಲ್ಲಿ ಈಶ್ವರನ ಗುಣ, ಕಾರ್ಯ, ಧರ್ಮಶಾಸ್ತ್ರ, ಸಾಧನೆ ಹಾಗೂ ಅಧ್ಯಾತ್ಮದ ವಿವಿಧ ಅಂಗಗಳ ವಿಷಯದಲ್ಲಿ ಸಾಕಷ್ಟು ಜ್ಞಾನವಿದೆ. ಈ ಜ್ಞಾನವನ್ನು ತಿಳಿದುಕೊಳ್ಳಲು ವ್ಯಕ್ತಿಗೆ ಹಲವಾರು ವರ್ಷಗಳು ಬೇಕಾಗುತ್ತವೆ. ಈ ಜ್ಞಾನ ತಿಳಿದರೂ ‘ನಾನು ಜೀವನದಲ್ಲಿ ನಿಜವಾಗಿಯೂ ಏನು ಮಾಡಬೇಕು ? ಈ ಜನ್ಮದಲ್ಲಿಯೆ ಈಶ್ವರನ ವರೆಗೆ ಹೇಗೆ ತಟಉಪುವುದು ?’, ಇತ್ಯಾದಿ ಆ ವ್ಯಕ್ತಿಯ ಮನಸ್ಸಿನಲ್ಲಿರುವ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ ಅಥವಾ ಈ ವಿಷಯದಲ್ಲಿ ಅವನ ಮನಸ್ಸಿನಲ್ಲಿ ಗೊಂದಲವುಂಟಾಗುತ್ತದೆ. ಈ ಗೊಂದಲ ಗುರುಕೃಪಾಯೋಗದ ಮುಂದಿನ ಪ್ರಕ್ರಿಯೆಯಿಂದ ದೂರವಾಗುತ್ತದೆ.
೨ ಅ. ಅಧ್ಯಾತ್ಮದ ಸಾರಾಂಶ : ಈಶ್ವರನು ಪರಾತ್ಪರ ಗುರು ಡಾಕ್ಟರರ ರೂಪದಲ್ಲಿ ಜಿಜ್ಞಾಸು ಹಾಗೂ ಸಾಧಕರಿಗೆ ಗುರುಕೃಪಾಯೋಗಾನುಸಾರ ಸಾಧನೆಯ ಮಾರ್ಗವನ್ನು ತೋರಿಸಿದ್ದಾನೆ. ಅದರಲ್ಲಿ ಸನಾತನ ಧರ್ಮದಲ್ಲಿನ ಈಶ್ವರಪ್ರಾಪ್ತಿಗಾಗಿ ಆವಶ್ಯಕವಿರುವ ಜ್ಞಾನದ ಸಾರಾಂಶವನ್ನು ಹೇಳಿದ್ದಾರೆ. ಆದ್ದರಿಂದ ಸಾಧಕರು ಅಧ್ಯಾತ್ಮವನ್ನು ತಿಳಿದುಕೊಳ್ಳುವುದರಲ್ಲಿನ ಅನೇಕ ವರ್ಷಗಳು ಉಳಿಯುತ್ತವೆ. ಕಲಿಯುಗದಲ್ಲಿ ವ್ಯಕ್ತಿಯ ಆಯುಷ್ಯ ಸೀಮಿತವಾಗಿದೆ.
೨ ಆ. ದೃಷ್ಟಿಕೋನ : ಗುರುಕೃಪಾಯೋಗದಲ್ಲಿ ಅಷ್ಟಾಂಗ ಸಾಧನೆ ಯನ್ನು (ಟಿಪ್ಪಣಿ) ಹೇಳಲಾಗಿದೆ. ಇದರಲ್ಲಿ ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ‘ಈಶ್ವರಪ್ರಾಪ್ತಿಯನ್ನು ಹೇಗೆ ಸಾಧಿಸುವುದು ?’, ಎಂಬುದರ ದೃಷ್ಟಿಕೋನ ನೀಡಿದ್ದಾರೆ.
ಟಿಪ್ಪಣಿ : ೧. ಸ್ವಭಾವದೋಷ-ನಿರ್ಮೂಲನೆ ಹಾಗೂ ಗುಣ-ಸಂವರ್ಧನೆ ೨. ಅಹಂ-ನಿರ್ಮೂಲನೆ
೩. ನಾಮಜಪ ೪. ಭಾವಜಾಗೃತಿಗಾಗಿ ಪ್ರಯತ್ನ ೫. ಸತ್ಸಂಗ ೬. ಸತ್ಸೇವೆ
೭. ಸತ್‌ಗಾಗಿ ತ್ಯಾಗ ೮. ಪ್ರೀತಿ (ಇತರರ ಬಗ್ಗೆ ನಿರಪೇಕ್ಷ ಪ್ರೇಮ)
೨ ಇ. ಪರಾತ್ಪರ ಗುರು ಡಾ. ಆಠವಲೆಯವರು ‘ಅಷ್ಟಾಂಗ ಸಾಧನೆ ಯನ್ನು ಹಂತಹಂತವಾಗಿ ಹೇಗೆ ಕೃತಿ ಮಾಡಬೇಕು ?’, ಎಂಬುದನ್ನು ಸುಲಭವಾಗಿ ಹೇಳಿದ್ದರಿಂದ ಶೀಘ್ರವಾಗಿ ಸಾಧಕರ ಉನ್ನತಿಯಾಗುತ್ತದೆ : ಪರಾತ್ಪರ ಗುರು ಡಾ. ಆಠವಲೆಯವರು ‘ಅಷ್ಟಾಂಗ ಸಾಧನೆಯನ್ನು ಹಂತಹಂತವಾಗಿ ಹೇಗೆ ಕೃತಿಗಿಳಿಸಬೇಕೆಂದು ಮಾರ್ಗದರ್ಶನ ಮಾಡಿದ್ದಾರೆ. ಆದ್ದರಿಂದ ಸಾಧಕರಿಗೆ ಈ ಜ್ಞಾನವನ್ನು ಕೃತಿ ಗಿಳಿಸಲು ಸುಲಭವಾಗುತ್ತದೆ. ಅಷ್ಟಾಂಗ ಸಾಧನೆಯನ್ನು ಕೃತಿ ಗಿಳಿಸುವುದರಿಂದ ಇಷ್ಟರ ವರೆಗೆ ಅನೇಕ ಸಾಧಕರು ಜನನ-ಮರಣದ ಚಕ್ರದಿಂದ ಮುಕ್ತರಾಗಿದ್ದಾರೆ. ಅವರು ಮೊದಲು ಸಂತಪದವಿ ಅನಂತರ ಸದ್ಗುರು ಪದವಿಯವರೆಗೆ ಶೀಘ್ರಗತಿ ಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಪರಾತ್ಪರ ಗುರು ಡಾ. ಆಠವಲೆ ಯವರು ಸಾಧಕರಿಗಾಗಿ ಗುರುಕೃಪಾಯೋಗ ನಿರ್ಮಿಸಿ ಅನೇಕ
ಜೀವಗಳ ಕಲ್ಯಾಣ ಹಾಗೂ ಉದ್ಧಾರ ಮಾಡಿದ್ದಾರೆ’, ಅದಕ್ಕಾಗಿ ಕೃತಜ್ಞತೆಗಳು.
– ಶ್ರೀ. ರಾಮ ಹೊನಪ (೧೪.೨.೨೦೨೫)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !