‘ಪಾಕಿಸ್ತಾನದಲ್ಲಿ ಸುಂದರ ಹಿಂದೂ ಹೆಣ್ಣುಮಕ್ಕಳು ಅಥವಾ ಮಹಿಳೆಯರನ್ನು ಬಲವಂತವಾಗಿ ಅಪಹರಿಸಿ ಮದುವೆಯಾಗಿ, ಅವರಿಗೆ ಹಿಂಸೆ ನೀಡಲಾಗುತ್ತದೆ. ಉಪಯೋಗಿಸಿಕೊಂಡ ನಂತರ ಅವರನ್ನು ಕೊಲ್ಲಲಾಗುತ್ತದೆ. ಅಲ್ಲಿ ಹಿಂದೂ ಪುರುಷರ ಪ್ರಾಣಕ್ಕೂ ಯಾವುದೇ ಬೆಲೆಯಿಲ್ಲ. ಹಾಗಾಗಿ, ಅಲ್ಲಿನ ಹಿಂದೂಗಳು ಸದಾ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಿಂದ ಹೊರಬರಲು, ಭಾರತಕ್ಕೆ ವಲಸೆ ಬರುವುದು ಅವರಿಗೆ ಏಕೈಕ ಆಯ್ಕೆಯಾಗಿರುತ್ತದೆ. ಇಂತಹ ಸಮಯದಲ್ಲಿ, ಅಲ್ಲಿನ ಹಿಂದೂಗಳನ್ನು ಪಾಕಿಸ್ತಾನದಿಂದ ಅಧಿಕೃತವಾಗಿ ಹೊರತಂದು ಭಾರತದಲ್ಲಿ ಹೊಸ ಜೀವನ ನೀಡುವ ಮಹತ್ತರ ಕಾರ್ಯವನ್ನು ಭಾರತದವರೇ ಆದ ಡಾ. ಓಮೇಂದ್ರ ರತ್ನೂ ಮಾಡುತ್ತಿದ್ದಾರೆ. ಅವರು ೨೦೧೨ರಲ್ಲಿ ಪಾಕಿಸ್ತಾನಿ ಹಿಂದೂಗಳ ರಕ್ಷಣೆ ಮತ್ತು ಪುನರ್ವಸತಿಗಾಗಿ ಶ್ರೀ. ಜೈ ಆಹುಜಾ ಅವರೊಂದಿಗೆ ‘ನಿಮಿತ್ತೇಕಮ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಡಾ. ರತ್ನೂ ಅವರು ಪಾಕಿಸ್ತಾನದಲ್ಲಿ ಪೀಡಿತ ಹಿಂದೂಗಳನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರುವ ಮಾನವೀಯ ಕಾರ್ಯವನ್ನು ಮಾಡುತ್ತಿದ್ದಾರೆ.

ವಿಶೇಷ ಮಾಲಿಕೆ

ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು
೧. ಡಾ. ಓಮೇಂದ್ರ ರತ್ನೂ ಅವರ ಪರಿಚಯ
ಡಾ. ಓಮೇಂದ್ರ ರತ್ನೂ ಅವರು ಕಿವಿ, ಮೂಗು ಮತ್ತು ಗಂಟಲು ತಜ್ಞರು (ENT Specialist). ಅವರು ಕಳೆದ ೧೫ ವರ್ಷಗಳಿಂದ ತಮ್ಮ ಆಸ್ಪತ್ರೆಯನ್ನು ನಡೆಸುತ್ತಿದ್ದಾರೆ. ಅವರು ರಾಜಸ್ಥಾನದ ಜೈಪುರದಲ್ಲಿರುವ ಕ್ಷತ್ರಿಯ ಕುಟುಂಬದಲ್ಲಿ ಜನಿಸಿದರು. ಅವರ ಅಜ್ಜ ರಾಜಸ್ಥಾನಿ ಭಾಷೆಯ ಪ್ರಸಿದ್ಧ ಕವಿಯಾಗಿದ್ದರು. ಅವರು ಡಾ. ರತ್ನೂ ಅವರಲ್ಲಿ ಮಾತೃಭೂಮಿ ಮತ್ತು ಧರ್ಮದ ಬಗ್ಗೆ ಪ್ರೀತಿಯನ್ನು ಬೆಳೆಸಿದರು. ಅವರ ತಂದೆ ಪ್ರಸಿದ್ಧ ಮೂತ್ರಪಿಂಡ ತಜ್ಞರು (Nephrologist) ಮತ್ತು ಧರ್ಮಾಭಿಮಾನಿ ಹಿಂದೂಗಳಾಗಿದ್ದರು. ಹಾಗಾಗಿ, ರಾಷ್ಟ್ರ, ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಪ್ರೀತಿ ಡಾ. ರತ್ನೂ ಅವರಿಗೆ ಆನುವಂಶಿಕವಾಗಿ ಬಂದಿದೆ. ಈ ಕುರಿತು ಅವರು ವೃತ್ತಪತ್ರಿಕೆಗಳು ಮತ್ತು ‘ವೆಬ್ ಪೋರ್ಟಲ್’ಗಳಲ್ಲಿ ಅಂಕಣಗಳನ್ನು ಬರೆಯುತ್ತಾರೆ. ಅವರಿಗೆ ರಾಜಸ್ಥಾನದ ಇತಿಹಾಸದ ಬಗ್ಗೆ ಕುತೂಹಲವಿದೆ. ಅವರು ಮೇವಾಡ ಇತಿಹಾಸದ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ಅವರು ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ದುರಾವಸ್ಥೆಯ ಬಗ್ಗೆ ಒಂದು ಸಣ್ಣ ಪುಸ್ತಕವನ್ನೂ ಬರೆದಿದ್ದಾರೆ.
(ವೆಬ್‌ಸೈಟ್‌ಗೆ ಭೇಟಿ ನೀಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ)
೨. ‘ನಿಮಿತ್ತೇಕಮ್’ ಹೆಸರಿನ ಅರ್ಥ
‘ನಿಮಿತ್ತೇಕಮ್’ ಎಂದರೆ ‘ನಿಮಿತ್ತ ಮಾತ್ರವಾಗಿರುವುದು’ ಎಂದರ್ಥ. ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಅರ್ಜುನನಿಗೆ, ‘…ನಿಮಿತ್ತಮಾತ್ರಂ ಭವ ಸವ್ಯಸಾಚಿನ್।’ ಎಂದು ಕಲಿಸಿದ್ದಾನೆ. ಇದರ ಅರ್ಥ ‘ನೀನು ಕೇವಲ ನಿಮಿತ್ತ ಮಾತ್ರನಾಗು’ ಎಂಬುದಾಗಿದೆ. ಅದರಂತೆಯೇ ಡಾ. ರತ್ನೂ ಅವರ ಭಾವ ಇದೆ. ಈಶ್ವರನ ಸೇವೆ ಎಂದು ಅವರು ಈ ಕಾರ್ಯವನ್ನು ಮಾಡುತ್ತಿದ್ದಾರೆ.

೩. ನಿರಾಶ್ರಿತ ಹಿಂದೂಗಳ ಪುನರ್ವಸತಿಗೆ ಹೇಗೆ ತೊಡಗಿಸಿಕೊಂಡರು?
ಡಾ. ರತ್ನೂ ಅವರು ರಾಜಸ್ಥಾನದವರಾಗಿರುವುದರಿಂದ, ಪಾಕಿಸ್ತಾನದಿಂದ ಬರುವ ನಿರಾಶ್ರಿತ ಹಿಂದೂಗಳು ಅವರನ್ನು ಭೇಟಿಯಾಗುತ್ತಿದ್ದರು. ಅವರಿಂದ ಪಾಕಿಸ್ತಾನದಲ್ಲಿನ ಹಿಂದೂಗಳ ಆಘಾತಕಾರಿ ನೋವುಗಳನ್ನು ಕೇಳುತ್ತಿದ್ದರು. ಆರಂಭದಲ್ಲಿ ಡಾ. ರತ್ನೂ ಅವರಿಗೆ ಆರ್ಥಿಕ ಸಹಾಯವನ್ನೂ ಮಾಡುತ್ತಿದ್ದರು. ೨೦೧೪ರಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪಾಕಿಸ್ತಾನಿ ಹಿಂದೂಗಳ ವಿಷಯವನ್ನು ಪ್ರಸ್ತಾಪಿಸಿತು. ಇದರಿಂದ ಅವರಿಗೆ ಪಾಕಿಸ್ತಾನಿ ಹಿಂದೂ ವಲಸಿಗರಿಗಾಗಿ ಕೆಲಸ ಮಾಡುವುದು ಸ್ವಲ್ಪ ಸುಲಭವಾಯಿತು.
೪. ೧೪ ಸಾವಿರ ಹಿಂದೂಗಳಿಗೆ ಭಾರತದಲ್ಲಿ ಗೌರವದಿಂದ ಆಶ್ರಯ

ಭಾರತದಲ್ಲಿ ೧೦೦ ಕೋಟಿ ಹಿಂದೂಗಳು ವಾಸಿಸುತ್ತಿದ್ದಾರೆ; ಆದರೆ ಅವರಲ್ಲಿ ಎಷ್ಟು ಜನರಿಗೆ ಪಾಕಿಸ್ತಾನದಲ್ಲಿ ಹಿಂಸೆಗೊಳಗಾದ ಹಿಂದೂಗಳ ಬಗ್ಗೆ ಆತ್ಮೀತೆ ಇದೆ ಎಂಬುದು ಪ್ರಶ್ನೆಯಾಗಿದೆ. ಭಾರತಕ್ಕೆ ಬರಲು ಬಯಸುವ ಹಿಂದೂಗಳು ‘ನಿಮಿತ್ತೇಕಮ್’ ಅನ್ನು ಸಂಪರ್ಕಿಸುತ್ತಾರೆ. ಈ ಸಂಸ್ಥೆಯು ಅವರ ದಾಖಲೆಗಳನ್ನು ಸಿದ್ಧಪಡಿಸುವುದು, ಅವರಿಗೆ ಪ್ರಾಯೋಜಕರನ್ನು ಹುಡುಕುವುದು, ಗೆಜೆಟೆಡ್ ಅಧಿಕಾರಿಯಿಂದ ಅವರ ದಾಖಲೆಗಳಿಗೆ ಸಹಿ ಪಡೆಯುವುದು; ಪೊಲೀಸ್, ಗುಪ್ತಚರ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ ನಂತರ ಅವರನ್ನು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ಗೆ ಕಳುಹಿಸುವುದು, ಇಂತಹ ಕೆಲಸಗಳನ್ನು ಮಾಡುತ್ತದೆ. ಅಲ್ಲಿ ವ್ಯಕ್ತಿಗೆ ‘ವೀಸಾ’ ದೊರೆಯುತ್ತದೆ ಮತ್ತು ನಂತರ ಅಟಾರಿ ಗಡಿಯನ್ನು ದಾಟಿ ಗೌರವದಿಂದ ಭಾರತಕ್ಕೆ ಪ್ರವೇಶ ನೀಡಲಾಗುತ್ತದೆ. ಕಳೆದ ೧೦ ವರ್ಷಗಳಲ್ಲಿ ‘ನಿಮಿತ್ತೇಕಮ್’ ಮೂಲಕ ಡಾ. ರತ್ನೂ ಅವರು ೧೪ ಸಾವಿರ ಪಾಕಿಸ್ತಾನಿ ಹಿಂದೂಗಳಿಗೆ ಭಾರತಕ್ಕೆ ಪ್ರವೇಶ ದೊರಕಿಸಿಕೊಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಇನ್ನೂ ಲಕ್ಷಾಂತರ ಹಿಂದೂಗಳಿದ್ದು, ಅವರು ಅಲ್ಲಿ ನರಕಸದೃಶ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದಾರೆ.
೫. ಪೌರತ್ವ ತಿದ್ದುಪಡಿ ಕಾಯಿದೆ (ಸಿ.ಎ.ಎ.) ಜಾರಿಗೊಳಿಸುವ ಅಗತ್ಯ!
‘ಸರಕಾರವು ಪೌರತ್ವ ತಿದ್ದುಪಡಿ ಕಾಯಿದೆ (ಸಿ.ಎ.ಎ.) ಅನ್ನು ತಕ್ಷಣ ಜಾರಿಗೊಳಿಸಬೇಕು’ ಎಂದು ಡಾ. ರತ್ನೂ ಅವರಿಗೆ ಅನಿಸುತ್ತದೆ. ಈ ಕಾಯಿದೆ ಜಾರಿಯಾದರೆ ಅವರ ಕಾರ್ಯ ಇನ್ನಷ್ಟು ಸುಗಮವಾಗಲಿದೆ. ‘ಮೋದಿ ಸರಕಾರವು ಪಾಕಿಸ್ತಾನದಲ್ಲಿನ ಹಿಂದೂಗಳ ನೋವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಈ ಕಾಯಿದೆಯನ್ನು ಜಾರಿಗೊಳಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂಬುದು ಅವರ ನಿರೀಕ್ಷೆಯಾಗಿದೆ. ಡಾ. ರತ್ನೂ ಒಂದು ಪುಸ್ತಕವನ್ನು ಬರೆಯುತ್ತಿದ್ದಾರೆ. ಅದರಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿನ ಹಿಂಸೆಗೊಳಗಾದ ಹಿಂದೂಗಳನ್ನು ತಕ್ಷಣ ರಕ್ಷಿಸುವ ಅಗತ್ಯವನ್ನು ವಿವರಿಸಲಾಗಿದೆ.
Call For A Pakistani Hindus Rehabilitation Board | Powerful Interview with Dr. Omendra Ratnu🚩 A Historic Demand for Hindu Survival & Dignity! 🚩 A strong voice has emerged from Mahakumbh 2025, calling for the formation of a Hindu Rehabilitation Board. This initiative aims to protect displaced Hindus, restore their rights, and ensure their socio-economic upliftment. Yes! Sanatan Prabhat interviewed Dr. Omendra Ratnu, an ENT surgeon by profession and the founder of “Nimittekam”, an organization which works for the benefit of Pakistani Hindus. Dr. Ratnu shed light upon… 🔸 Why is a Hindu Rehabilitation Board necessary? Really a powerful eye-opener by Dr. Ratnu! 🔥 Watch this crucial discussion and join the movement for Hindu justice! 📢 Like, Share & Subscribe for more updates on Hindu rights and Sanatan resurgence! |
೬. ಪಾಕಿಸ್ತಾನಿ ಹಿಂದೂಗಳನ್ನು ಭಾರತಕ್ಕೆ ಕರೆತರುವ ಮಹತ್ತರ ಕಾರ್ಯ
ಪ್ರಧಾನಮಂತ್ರಿ ಮೋದಿ ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪಾಕಿಸ್ತಾನಿ ಹಿಂದೂಗಳಿಗೆ ಭಾರತದಲ್ಲಿ ಪೌರತ್ವ ನೀಡುವ ವಿಷಯವನ್ನು ಸೇರಿಸಿಕೊಂಡಿದ್ದರು. ಇದರಿಂದ ಈ ಕಾರ್ಯವನ್ನು ಮಾಡುವುದು ಸುಲಭವಾಯಿತು. ಅಲ್ಲಿನ ಹಿಂದೂಗಳಿಗೆ ಭಾರತಕ್ಕೆ ಬರಲು ಪ್ರಾಯೋಜಕರಾಗಲು ಯಾರೂ ಸಿದ್ಧರಿರುವುದಿಲ್ಲ. ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನಿ ಹಿಂದೂಗಳು ಅದಕ್ಕೆ ಪ್ರಾಯೋಜಕರಾಗುತ್ತಾರೆ. ಡಾ. ರತ್ನೂ ಅವರು ಪೌರತ್ವ ವೀಸಾ ಅರ್ಜಿಗಳಿಗೆ ಗೆಜೆಟೆಡ್ ಅಧಿಕಾರಿಯ ಸಹಿ ಪಡೆಯಲು ವೈಯಕ್ತಿಕ ಪರಿಚಯ ಅಥವಾ ಕಟ್ಟರ ಹಿಂದುತ್ವನಿಷ್ಠರ ಸಹಾಯವನ್ನು ಪಡೆಯುತ್ತಾರೆ. ಹೊಸ ಕಾನೂನಿನ ಪ್ರಕಾರ, ಪೌರತ್ವ ದಾಖಲೆಗಳನ್ನು ಪಾಕಿಸ್ತಾನಕ್ಕೆ ನೇರವಾಗಿ ಅಂಚೆ ಮೂಲಕ ಕಳುಹಿಸಬೇಕಾಗುತ್ತದೆ. ಭಾರತದಿಂದ ಪಾಕಿಸ್ತಾನಕ್ಕೆ ನೇರವಾಗಿ ಅಂಚೆ ಹೋಗುವುದಿಲ್ಲ. ಹಾಗಾಗಿ, ಅವುಗಳನ್ನು ದುಬೈ ಮೂಲಕ ಕಳುಹಿಸಬೇಕಾಗುತ್ತದೆ, ಜೊತೆಗೆ ಪ್ರತಿ ಅರ್ಜಿಗೆ ೫೦೦ ರೂಪಾಯಿ ವೆಚ್ಚವಾಗುತ್ತದೆ. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರವೂ, ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ವೀಸಾ ನೀಡುವಲ್ಲಿ ವಿಳಂಬ ಮಾಡುತ್ತಾರೆ. ಅನೇಕ ಅಡೆತಡೆಗಳನ್ನು ದಾಟಿದ ನಂತರ, ಪಾಕಿಸ್ತಾನದಲ್ಲಿ ಪೀಡಿತ ಹಿಂದೂಗಳು ಅಧಿಕೃತವಾಗಿ ಭಾರತಕ್ಕೆ ಬರಬಹುದು. ಹಾಗಾಗಿ, ಡಾ. ರತ್ನೂ ಅವರಿಗೆ ಈ ಎಲ್ಲಾ ಪ್ರಕ್ರಿಯೆಯು ಒಂದು ದೊಡ್ಡ ತಪಸ್ಸಿನಂತಿದೆ.
ಡಾ. ಓಮೇಂದ್ರ ರತ್ನೂ ಇವರ ಪುಸ್ತಕಗಳು
|
೭. ಭಾರತೀಯ ಹಿಂದೂಗಳ ಆರ್ಥಿಕ ಸಹಾಯದಿಂದ ಪಾಕಿಸ್ತಾನಿ ಹಿಂದೂಗಳ ಪುನರ್ವಸತಿ
ಪಾಕಿಸ್ತಾನದಲ್ಲಿ ಪೀಡಿತ ಹಿಂದೂಗಳನ್ನು ಭಾರತದಲ್ಲಿ ಪುನರ್ವಸತಿ ಮಾಡಲು ಸರಕಾರ ಆರ್ಥಿಕ ಸಹಾಯವನ್ನು ನೀಡುವುದಿಲ್ಲ. ಹಿಂದುತ್ವನಿಷ್ಠರ ಹಣದಿಂದ ಈ ಕಾರ್ಯ ನಡೆಯುತ್ತದೆ. ಪಾಕಿಸ್ತಾನದಿಂದ ಬರುವ ಹಿಂದೂಗಳು ದಲಿತ, ಭೀಲ್, ಮೇಘವಾಲ್, ಕೋಲಿ, ರಜಪೂತ ಇತ್ಯಾದಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ಆಯಾ ಸಮುದಾಯದ ಹಿಂದೂಗಳನ್ನು ಆಯಾ ಸಮುದಾಯದ ನಿರಾಶ್ರಿತರಿಗೆ ಒಪ್ಪಿಸಲಾಗುತ್ತದೆ. ಜಾತಿ ಬಂಧುಗಳಾಗಿ ಅವರು ಅವರ ಕಾಳಜಿ ವಹಿಸುತ್ತಾರೆ. ಸದ್ಯ ಪಾಕಿಸ್ತಾನದಿಂದ ವಲಸೆ ಬಂದ ಹಿಂದೂಗಳಿಗೆ ಪ್ರತ್ಯೇಕ ಗ್ರಾಮವನ್ನು ನಿರ್ಮಿಸುವ ಡಾ. ರತ್ನೂ ಅವರ ಪ್ರಯತ್ನಗಳು ನಡೆಯುತ್ತಿವೆ.
| ಭೇಟಿ ನೀಡಿ : – Nimittekam ಫೇಸ್ಬುಕ್ ಪೇಜ್ ಲಿಂಕ್ https://www.facebook.com//Nimittekam/
Nimittekam(Working for Pakistani Hindus) https//x.com / Nimittekamindia |
೮. ಸರಕಾರವು ಪಾಕಿಸ್ತಾನಿ ಹಿಂದೂಗಳ ಪುನರ್ವಸತಿಗಾಗಿ ಸ್ವತಂತ್ರ ಮಂಡಳಿಯನ್ನು ನೇಮಿಸಬೇಕು! – ಡಾ. ಓಮೇಂದ್ರ ರತ್ನೂ
ಪಾಕಿಸ್ತಾನದಲ್ಲಿನ ೩ ಕೋಟಿ ಹಿಂದೂಗಳನ್ನು ಒಂದೇ ಸಂಸ್ಥೆಯ ಮೂಲಕ ಭಾರತದಲ್ಲಿ ಪುನರ್ವಸತಿ ಮಾಡುವುದು ಅಸಾಧ್ಯವಾಗಿದೆ. ಅದಕ್ಕಾಗಿ ಸರಕಾರವು ಒಂದು ಮಂಡಳಿಯನ್ನು (ಬೋರ್ಡ್) ಸ್ಥಾಪಿಸಬೇಕು. ಅದಕ್ಕಾಗಿ ಸ್ವತಂತ್ರ ವಿಭಾಗವನ್ನು ನಿರ್ಮಿಸಿ ಕನಿಷ್ಠ ೫ ಸಾವಿರ ಕೋಟಿ ರೂಪಾಯಿಗಳ ಅಂದಾಜು ಪಟ್ಟಿಯನ್ನು ಇಡುವುದು ಅವಶ್ಯಕವಾಗಿದೆ. ನಿರಾಶ್ರಿತರಿಗಾಗಿ ಸ್ವತಂತ್ರ ವಸಾಹತು ಇರಬೇಕು. ಇದರಿಂದ ಅವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಡಾ.ಓಮೇಂದ್ರ ರತ್ನೂ ಅವರಿಗೆ ಅನಿಸುತ್ತದೆ.
| ಇದನ್ನು ಓದಿ –
ಭಾರತದ ವೈಚಾರಿಕ ವಿಧ್ವಂಸದ ಸತ್ಯ ಇತಿಹಾಸ ! – https://sanatanprabhat.org/kannada/86943.html |

ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
Corporate Jihad: ಮತಾಂತರಕ್ಕೆ ನಿರಾಕರಿಸಿದ್ದಕ್ಕಾಗಿ ‘ವಿಪ್ರೋ’ದ ಹಿಂದೂ ಮಹಿಳಾ ಉದ್ಯೋಗಿಯನ್ನು ಕೆಲಸದಿಂದ ವಜಾ !
ಬ್ರಿಟಿಷ್ ಸಂಸತ್ತಿನಲ್ಲಿ ಸಂಸದರಿಂದ ‘ಗ್ರೂಮಿಂಗ್ ಗ್ಯಾಂಗ್’ ವಿಷಯ ಪ್ರಸ್ತಾಪ
ಮೃತರ ಹೆಸರಿನಲ್ಲಿ ಮೊಕದ್ದಮೆ ನಡೆಸಿ ಮಂದಿರ ಆಡಳಿತದ ವಿರುದ್ಧ ಅಚಲಪುರ ತಹಸೀಲ್ದಾರ್ ನೀಡಿದ್ದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ!
ಮುಂಬಯಿ: ಹಿಂದೂ ಯುವತಿಯನ್ನು ವಂಚಿಸಿದ ರಜ್ಜಾಕ್; ಮತಾಂತರಕ್ಕೆ ಒತ್ತಡ!