
ರಾಮನಾಥಿ (ಗೋವಾ) ಯಲ್ಲಿನ ಸನಾತನ ಆಶ್ರಮ ದಲ್ಲಿ ಸಾಧಕರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಮೂಲ್ಯ ಸತ್ಸಂಗ ಲಭಿಸಿತು. ಅದರಲ್ಲಿ ಅವರು ಸಾಧಕರಿಗೆ ಮಾಡಿದ ಮಾರ್ಗದರ್ಶನದ ಕೆಲವು ಅಂಶಗಳನ್ನು ಇಲ್ಲಿ ಕೊಡಲಾಗಿದೆ. ೨೬/೩೭ ನೇ ಸಂಚಿಕೆಯಲ್ಲಿ ಈ ಮಾರ್ಗದರ್ಶನದ ಕೆಲವು ಅಂಶಗಳನ್ನು ನೋಡಿದೆವು. ಈ ವಾರ ಅದರ ಮುಂದಿನ ಅಂಶಗಳನ್ನು ನೋಡೋಣ. (ಭಾಗ ೩)
೧೨. ಯಾವುದೇ ಪ್ರಸಂಗದಲ್ಲಿ ಮಾನಸಿಕ ತೊಂದರೆಯಾದರೆ ಕೆಟ್ಟ ಶಕ್ತಿಗಳ ತೊಂದರೆ ಇರುವವರು ‘ನಾಮಜಪಾದಿ ಉಪಾಯ ಮತ್ತು ಸ್ವಯಂಸೂಚನೆಗಳನ್ನು ಕೊಡುವುದು’, ಇವೆರಡನ್ನೂ ಮಾಡಬೇಕು ಹಾಗೂ ತೊಂದರೆ ಇಲ್ಲದವರು ಕೇವಲ ಸ್ವಯಂಸೂಚನೆಗಳನ್ನು ಕೊಡಬೇಕು !
ಓರ್ವ ಸಾಧಕ : ರಾಮನಾಥಿ ಆಶ್ರಮಕ್ಕೆ ಬರುವ ಮೊದಲು ನನಗೆ ತುಂಬಾ ಮಾನಸಿಕ ತೊಂದರೆ ಆಗುತ್ತಿತ್ತು. ಇದಕ್ಕೂ ಮೊದಲು ನನಗೆ ಇಂತಹ ತೊಂದರೆ ಯಾವಾಗಲೂ ಆಗಿರಲಿಲ್ಲ. ನಾನು ಸಾಧನೆಗೆ ಬಂದು ಸುಮಾರು ೩ ವರ್ಷಗಳಾದವು. ನನ್ನ ಮಾನಸಿಕ ತೊಂದರೆ ಯನ್ನು ನೋಡಿ ನಾನು ಜವಾಬ್ದಾರ ಸಾಧಕರಿಗೆ, ”ಅಣ್ಣ ನನಗೆ ರಾಮನಾಥಿಗೆ ಹೋಗಲಿಕ್ಕಿಲ್ಲ’’ ಎಂದು ಹೇಳಿದೆ. ನನಗೆ ಏನೂ ತಿಳಿಯುತ್ತಿರಲಿಲ್ಲ. ನನ್ನ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುತ್ತಿದ್ದವು. ನನಗೆ ಕಾರ್ಯಾಲಯದಲ್ಲಿಯೂ ಕುಳಿತುಕೊಳ್ಳಲು ಆಗುತ್ತಿರಲಿಲ್ಲ. ನಾನು ೧೫ ನಿಮಿಷ ನಾಮಜಪ ಮಾಡಬೇಕೆಂದು ನಿರ್ಧರಿಸಿದಾಗ ನನ್ನಿಂದ ಕೇವಲ ೫ ನಿಮಿಷ ನಾಮಜಪ ಆಗುತ್ತಿತ್ತು, ನಂತರ ನಾನು ಅಲ್ಲಿಂದ ಎದ್ದು ಎಲ್ಲಿಯಾದರು ಹೋಗುತ್ತಿದ್ದೆನು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹೀಗಾದರೆ ಏನು ಮಾಡಬೇಕು ?’, ಎಂಬುದರ ಉತ್ತರ ನಿಮಗೆ ತಿಳಿದಿರಬೇಕು. ಯಾವಾಗಲೂ ಏನಾದರೂ ಅಯೋಗ್ಯವಾದರೆ ‘ಕೆಟ್ಟ ಶಕ್ತಿ’, ಎಂಬ ‘ಲೇಬಲ್’ ಹಚ್ಚುವುದು ಸರಿಯಲ್ಲ. ‘ಕೆಟ್ಟ ಶಕ್ತಿಯ ತೊಂದರೆ ಇದೆಯೋ ಅಥವಾ ಇಲ್ಲ’, ಎಂಬುದನ್ನು ಜವಾಬ್ದಾರ ಸಾಧಕರಲ್ಲಿ ಕೇಳಿ. ತೊಂದರೆ ಇಲ್ಲದಿದ್ದರೆ ಸ್ವಭಾವದೋಷ-ನಿರ್ಮೂಲನೆಗಾಗಿ ಮನಸ್ಸಿಗೆ ಸ್ವಯಂಸೂಚನೆಗಳನ್ನು ಕೊಡಬೇಕು. ತೊಂದರೆ ಇದ್ದರೆ ಸ್ವಯಂಸೂಚನೆಗಳೊಂದಿಗೆ ನಾಮಜಪಾದಿ ಉಪಾಯ ವನ್ನೂ ಮಾಡಬೇಕು. ತೊಂದರೆ ಇಲ್ಲದವರು ಕೇವಲ ಸ್ವಯಂಸೂಚನೆಗಳಿಗೆ ಒತ್ತು ಕೊಡಬೇಕು.
೧೩. ಸ್ಥೂಲಕ್ಕಿಂತ ಸೂಕ್ಷ್ಮ ಶ್ರೇಷ್ಠ ಆಗಿರುವುದರಿಂದ ದೇಹಧಾರಿ ಗುರುಗಳನ್ನು ನೆನಪಿಸುವುದಕ್ಕಿಂತ ದೇವತೆಯ ನಾಮಜಪ ಮಾಡುವುದು ಮಹತ್ವದ್ದಾಗಿದೆ !
ಓರ್ವ ಸಾಧಕ : ನಾನು ಸತ್ಸಂಗ ತೆಗೆದುಕೊಳ್ಳಲು ಹೋಗುವಾಗ ‘ನೀವು ನನ್ನ ಜೊತೆಗಿದ್ದೀರಿ’, ಎಂದು ಅರಿವಾಗಿ ನನ್ನ ಭಾವ ಜಾಗೃತವಾಗುತ್ತದೆ. ಉಳಿದ ಸಮಯದಲ್ಲಿ ‘ಕಠಿಣ ಪರಿಸ್ಥಿತಿಯಲ್ಲಿ ನೀವು ಹೇಗೆ ಸಹಾಯ ಮಾಡುತ್ತಿದ್ದೀರಿ ? ಹೇಗೆ ಅನುಭೂತಿ ನೀಡುತ್ತಿದ್ದೀರಿ ?’, ಎಂಬುದನ್ನು ನೆನಪಿಸಿದರೆ ನನಗೆ ಭಾವಜಾಗೃತಿಯಾಗುತ್ತದೆ; ಆದರೆ ಈಗ ರಾಮನಾಥಿ ಆಶ್ರಮದಲ್ಲಿ ಬಂದ ನಂತರ ಹಾಗೆ ನಿಮ್ಮ ನೆನಪಾಗುವುದಿಲ್ಲ ಅಥವಾ ನಿಮ್ಮನ್ನು ನೋಡಿಯೂ ನನ್ನ ಭಾವಜಾಗೃತಿ ಆಗುವುದಿಲ್ಲ. ಆಗ ‘ನಾನು ನಿಮ್ಮಿಂದ ದೂರ ಹೋಗಿದ್ದೇನೆ’, ಎಂದು ಅನಿಸುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನೆನಪು ಇತ್ಯಾದಿ ಎಲ್ಲವೂ ಮನಸ್ಸಿನ ಸ್ತರದ್ದಾಯಿತು. ನನ್ನ ನೆನಪಾಗದಿರುವಾಗ ನಿಮ್ಮ ಮನಸ್ಸಿಗೆ ಏನನಿಸುತ್ತದೆ ?
ಓರ್ವ ಸಾಧಕ : ಏನೂ ಅನಿಸುವುದಿಲ್ಲ. ನಾಮಜಪ ನಡೆಯುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನಾಮಜಪ ಆಗುವುದೇ ಮಹತ್ವದ್ದಾಗಿದೆ. ಸಗುಣಕ್ಕಿಂತ ನಿರ್ಗುಣ ಶ್ರೇಷ್ಠವಾಗಿದೆ. ದೇಹ ನಾಮಕ್ಕಿಂತ ಸಗುಣವಾಗಿದೆ. ರಾಮ, ಕೃಷ್ಣ, ವಿಷ್ಣು ಇತ್ಯಾದಿ ದೇವತೆಗಳು ದೇಹಧಾರಿಯಲ್ಲ. ಅವರೆಲ್ಲರೂ ಸೂಕ್ಷ್ಮದಲ್ಲಿದ್ದಾರೆ. ಆದ್ದರಿಂದ ನಾಮಜಪ ಮಾಡುವುದೇ ಮಹತ್ವದ್ದಾಗಿದೆ. ಇದು ಮುಂದಿನ ಹಂತವಾಗಿದೆ. ನನ್ನ ನೆನಪಲ್ಲ, ಕೃಷ್ಣನ ನೆನಪಾಗಬೇಕು; ಏಕೆಂದರೆ ಅವನು ಯುಗಾನುಯುಗಗಳಿಂದ ಇದ್ದಾನೆ. ನಾವು ದೇಹಧಾರಿ ಮನುಷ್ಯರಾಗಿದ್ದೇವೆ. ಇಂದು ಇದ್ದೇವೆ, ನಾಳೆ ಇಲ್ಲ.
೧೪. ಪ್ರಾರಬ್ಧ ಮತ್ತು ಈಶ್ವರೇಚ್ಛೆ
ಓರ್ವ ಸಾಧಕ : ಯಾವುದಾದರೂ ಘಟನೆಯಲ್ಲಿ ಈಶ್ವರೇಚ್ಛೆಯೋ ಅಥವಾ ಪ್ರಾರಬ್ಧವಿದೆಯೋ ಎಂಬುದನ್ನು ಹೇಗೆ ಗುರುತಿಸುವುದು?
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಕರ್ಮಯೋಗಿಗಳ ಭಾಷೆಯಲ್ಲಿ ಪ್ರಾರಬ್ಧ, ಸಂಚಿತ ಕರ್ಮ ಹಾಗೂ ಕ್ರಿಯಾಮಾಣ ಕರ್ಮ ಇರುತ್ತದೆ. ಭಕ್ತಿಯೋಗಿಗಳ ಭಾಷೆಯಲ್ಲಿ ಸ್ವೇಚ್ಛೆ ಹಾಗೂ ಈಶ್ವರೇಚ್ಛೆ ಇರುತ್ತದೆ. ಯೋಗಮಾರ್ಗಕ್ಕನುಸಾರ ಈಶ್ವರೇಚ್ಛೆ ಯೆಂದರೆ ಒಂದು ರೀತಿಯಲ್ಲಿ ಪ್ರಾರಬ್ಧವೇ ಆಗಿರುತ್ತದೆ. ಅದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ.
೧೫. ಆಧ್ಯಾತ್ಮಿಕ ಭಾವದ ಹಂತಗಳು
ಓರ್ವ ಸಾಧಕ : ಮಧ್ಯಾಹ್ನ ನಾನು ಕಲಿಯಲು ಸಿಕ್ಕಿದ ಅಂಶಗಳನ್ನು ಬರೆಯುತ್ತಿರುವಾಗ ನಿಮ್ಮ ನೆನಪಾಗಿ ನನಗೆ ತುಂಬಾ ಅಳು ಬರುತ್ತಿತ್ತು. ಈಗ ಕೂಡ ಹಾಗೆಯೆ ಆಗುತ್ತಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಭಾವವನ್ನು ನಿರ್ಮಾಣ ಮಾಡುವುದು ತುಂಬಾ ಕಠಿಣವಾಗಿದೆ. ಆಧ್ಯಾತ್ಮಿಕ ಭಾವದ ಹಂತಗಳು ಈ ಮುಂದಿನಂತಿವೆ.
೧೫ ಅ. ವ್ಯಕ್ತ ಭಾವ
೧೫ ಅ ೧. ಮೊದಲ ಹಂತ : ಯಾರು ನಮ್ಮ ಪರಿಚಯದವರಾಗಿರು ತ್ತಾರೊ, ಯಾರನ್ನು ನಾವು ನೋಡಿರುತ್ತೇವೆಯೋ, ಯಾರ ಬಗ್ಗೆ ನಮಗೆ ತಿಳಿದಿರುತ್ತದೆಯೋ, ಯಾರ ಲೇಖನಗಳನ್ನು ನಾವು ಓದಿರುತ್ತೇವೆಯೋ, ಪ್ರಾರಂಭದಲ್ಲಿ ಅವರ ಬಗ್ಗೆ ನಮ್ಮ ಮನಸ್ಸಿನಲ್ಲಿ ಸ್ವಲ್ಪ ಭಾವ ಉತ್ಪನ್ನ ಆಗುತ್ತದೆ, ಯಾರು ನಮ್ಮ ಪರಿಚಯದವರಿರುತ್ತಾರೆ, ಅವರ ಬಗ್ಗೆ ನಮ್ಮ ಮನಸ್ಸಿನಲ್ಲಿ ಭಾವ ಮೂಡುತ್ತದೆ. ಸಂತರು ಮತ್ತು ಗುರುಗಳು ದೇಹಧಾರಿ ಆಗಿರುತ್ತಾರೆ. ಅವರನ್ನು ಭೇಟಿಯಾಗಬಹುದು, ಅವರೊಂದಿಗೆ ಮಾತನಾಡಬಹುದು, ಅವರಿಗೆ ಪ್ರಶ್ನೆಗಳನ್ನೂ ಕೇಳಬಹುದು. ಈ ರೀತಿ ನಾವು ಅವರನ್ನು ಅನುಭವಿಸಬಹುದು.
೧೫ ಅ ೨. ಎರಡನೆಯ ಹಂತ : ದೇಹಧಾರಿ ಸಂತರು ಇಲ್ಲದಿದ್ದರೂ ಕೇವಲ ಅವರ ನೆನಪಾದರೂ, ಭಾವಜಾಗೃತಿಯಾಗುತ್ತದೆ.
೧೫ ಅ ೩. ಮೂರನೆಯ ಹಂತ : ಇನ್ನೂ ಮುಂದೆ ಹೋದಾಗ ದೇಹಧಾರಿ ಸಂತರ ನೆನಪಾಗುವುದಿಲ್ಲ. ಆಗ ದೇವರ, ಕೃಷ್ಣನ ನೆನಪಾಗುತ್ತದೆ.
೧೫ ಆ. ಅವ್ಯಕ್ತ ಭಾವ : ಇನ್ನೂ ಮುಂದೆ ಹೋದಾಗ ಇಂತಹ ವ್ಯಕ್ತ ಭಾವ ನಿರ್ಮಾಣವಾಗುವುದಿಲ್ಲ. ಆಗ ನಾವು ಅವ್ಯಕ್ತ ಭಾವದ ಹಂತಕ್ಕೆ ಹೋಗಿರುತ್ತೇವೆ. ಆ ಭಾವಾವಸ್ಥೆ ೨೪ ಗಂಟೆ ಅಂತರ್ಮನಸ್ಸಿ ನಲ್ಲಿರುತ್ತದೆ. ನಮಗೆ ಹೊರಗೆ ಏನೂ ತಿಳಿಯುವುದಿಲ್ಲ, ಆದರೂ ಆ ಸ್ಥಿತಿ ಮಹತ್ವದ್ದಾಗಿದೆ. ಆಗ ದೇವರು ನಮಗೆ ಸಹಾಯ ಮಾಡುತ್ತಾನೆ. ಆ ಅವ್ಯಕ್ತ ಭಾವವೆಂದರೆ ಈಶ್ವರನೊಂದಿಗೆ ಅನುಸಂಧಾನ ! ಅದು ಇದ್ದರೆ ಸಾಧನೆಯಲ್ಲಿ ಪ್ರಗತಿ ಆಗುತ್ತದೆ. ತಾತ್ಕಾಲಿಕ ಭಾವ ಇದ್ದರೆ, ದೇವರು ಸ್ವಲ್ಪ ಸಹಾಯ ಮಾಡುತ್ತಾರೆ. ಮುಂದಿನ ಹಂತಕ್ಕೆ ಹೋಗುವುದು ಮಹತ್ವದ್ದಾಗಿದೆ. (ಮುಂದುವರಿಯುವುದು)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !