
ಹಾಸ್ಯವೆಂದರೆ ಶುದ್ಧ ನಗು, ಆನಂದ; ಆದರೆ ಹಾಸ್ಯದ ವಿಕೃತಿ ಎಂದರೆ ‘ಸ್ಟ್ಯಾಂಡ್ಪ್ ಕಾಮೆಡಿ (ಎದ್ದು ನಿಂತು ಮಾಡಲಾಗುವ ಏಕಪಾತ್ರ ಹಾಸ್ಯ ಕಾರ್ಯಕ್ರಮ) ಎಂದು ಹೇಳುವ ಸಮಯ ಬಂದಿದೆ !

ಮನೋರಂಜನೆಯ ಪ್ರತಿಯೊಂದು ಕ್ಷೇತ್ರದಲ್ಲಿ ವಿದೇಶಿ ಅನುಕರಣೆ ನಡೆದಿರುವುದರಿಂದ ಭಾರತಲ್ಲಿಯೂ ಕೆಲವು ವರ್ಷಗಳಿಂದ ‘ಸ್ಟ್ಯಾಂಡ್ಪ್ ಕಾಮೆಡಿ’ ಎಂಬ ವಿಧ ಹೆಚ್ಚಾಗಿರುವುದು ಕಾಣಿಸುತ್ತಿದೆ. ಸದ್ಯ ಮಾತ್ರ ಈ ಮನೋರಂಜನಾ ಕಾರ್ಯಕ್ರಮಗಳಲ್ಲಿ ಕೆಳಮಟ್ಟಕ್ಕೆ ಇಳಿದು ದ್ವೇಷಪೂರಿತ ಟೀಕೆಗಳನ್ನು ಮಾಡಿ ಹಾಸ್ಯ ಮಾಡುವ ಪ್ರಮಾಣ ಬಹಳ ಹೆಚ್ಚಾಗಿದೆ. ಅದರಿಂದ ಸಮಾಜದ ಮನಸ್ಸು ಕಲುಷಿತವಾಗುತ್ತದೆ. ಈ ಏಕಪಾತ್ರ ಹಾಸ್ಯ ಕಾರ್ಯಕ್ರಮಗಳ ಮೂಲಕ ಮುನವ್ವರ್ ಫಾರುಕಿಯಿಂದ ಹಿಡಿದು ಸಮಯ್ ರೈನಾ ಮತ್ತು ರಣವೀರ ಅಲಾಹಾಬಾದಿಯಾ, ಹಾಗೆಯೇ ಕುಣಾಲ ಕಾಮರಾ ಇವರೆಲ್ಲರೂ ಸಮಾಜದಲ್ಲಿ ಕೆಟ್ಟ, ವಿಕೃತ ವಿಚಾರಗಳನ್ನು ಹರಡುತ್ತಿದ್ದಾರೆ. ‘ಅಶ್ಲೀಲತೆ ಎಂದರೆ ಹಾಸ್ಯ’, ‘ಸ್ವೈರಾಚಾರ ಎಂದರೆ ಹಾಸ್ಯ’, ಎಂಬಂತಹ ಹಾಸ್ಯದ ಚಿತ್ರಣವನ್ನು ನೀಡುವ ಈ ಕಲಾವಿದರು ಇಂದಿನ ಪೀಳಿಗೆಯನ್ನು ಒಂದು ರೀತಿಯಲ್ಲಿ ಹಾಳು ಮಾಡುತ್ತಿದ್ದಾರೆ. ಸರಿ, ಇವರ ಹಾಸ್ಯಕ್ಕೆ ಯಾವುದೇ ಗುಣಮಟ್ಟ ಅಥವಾ ಸಂಸ್ಕೃತಿ ಇದೆ ಎಂದೇನಿಲ್ಲ. ಇವರ ಹಾಸ್ಯವೆಂದರೆ ದ್ವೇಷದ ವಿಷಕಾರುವಿಕೆ, ಇವರ ಹಾಸ್ಯವೆಂದರೆ ಹಿಂದೂ ದೇವತೆಗಳ ವಿಡಂಬನೆ, ಅಂದರೆ ಒಂದು ರೀತಿಯಲ್ಲಿ ಹಾಸ್ಯದ ಹೆಸರಿನಲ್ಲಿ ಹಿಂದೂದ್ವೇಷ ! ಇತ್ತೀಚೆಗಷ್ಟೇ ಹಾಸ್ಯ ಕಲಾವಿದ ಕುಣಾಲ ಕಾಮರಾ ಇವರು ರಾಜಕೀಯ ಟೀಕೆ ಮತ್ತು ವಿಡಂಬನಾತ್ಮಕ ಹಾಡು ಹಾಡಿದುದರಿಂದ ಅವರ ವಿರುದ್ಧ ಮಹಾರಾಷ್ಟ್ರ ದಲ್ಲಿ ರಾಜಕೀಯ ವಾತಾವರಣವು ಬಿಸಿಯಾಗಿತ್ತು. ಕುಣಾಲಕಾಮರಾ ಇವರ ಪರವಾಗಿ ಈಗ ಹಾಸ್ಯ ಕಲಾವಿದ ಅಭಿಜಿತ ಗಾಂಗುಲಿ ಇವರೂ ಮುಂದೆ ಬಂದಿದ್ದಾರೆ. ‘ಭಾರತದಲ್ಲಿ ಈಗ ಹಾಸ್ಯ ಮಾಡುವುದು ಹೇಗೆ ?’, ಎಂದು ಅವರು ಪ್ರಶ್ನಿಸಿದ್ದಾರೆ. ಅವರು, ”ಜನಸಂದಣಿಗಾಗಿ ಹಾಸ್ಯ ಮಾಡಿದರೆ, ಬುದ್ಧಿಜೀವಿಗಳು ‘ಅದು ನಿಜವಾದ ಹಾಸ್ಯವಲ್ಲ’. ಹೆಂಡತಿಯ ಬಗ್ಗೆ ಹಾಸ್ಯ ಮಾಡಿದರೆ ಜನರು ‘ಲೈಂಗಿಕವಾದಿ’ ಎಂದು ಹೇಳುತ್ತಾರೆ. ತಾಯಿ-ತಂದೆಯ ಬಗ್ಗೆ ಹಾಸ್ಯ ಮಾಡಿದರೆ ‘ಸಂಸ್ಕಾರವಿಲ್ಲದವರು’ ಎಂದು ಹೇಳುತ್ತಾರೆ. ಹಾಗಾದರೆ ಈಗ ಆನೆ ಮತ್ತು ಇರುವೆ’ಗಳು ಪುನಃ ಬರಬೇಕು”, ಎಂದು ಹೇಳಿದರು. ಇದರಿಂದ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಅವಮಾನಿಸು ವವರ ಪರವಾಗಿ ಮಾತನಾಡುವವರು ಮುಂದೆ ಬರತೊಡಗಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಹಾಸ್ಯಕಲಾವಿದರಿಗೆ ಯಾರೇ ಏನೇ ಹೇಳಿದರೂ ಇದರರ್ಥ ಅವರು ದೇವರು, ಧರ್ಮ, ಸಂಸ್ಕೃತಿಯ ಬಗ್ಗೆ ಟೀಕಿಸಬೇಕು ಎಂದೇನೂ ಇಲ್ಲ. ಇದರಿಂದ ಮುಂದಿನ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಅಲ್ಲದೇ ಆ ಕಲಾವಿದನಿಗೂ ಪಾಪ ತಟ್ಟುತ್ತದೆ. ಈ ಹಾಸ್ಯ ಕಲಾವಿದರು ಮತ್ತು ಅವರ ಪ್ರೇಕ್ಷಕರು ಯಾರನ್ನು ಹೆಚ್ಚಾಗಿ ಅನುಸರಿಸುತ್ತಾರೋ, ಆ ಪಾಶ್ಚಿಮಾತ್ಯರೇ ಇಂದು ಭಾರತೀಯ ಸಂಸ್ಕೃತಿಯಿಂದ ಪ್ರಭಾವಿತರಾಗುತ್ತಿದ್ದಾರೆ. ಯಾವ ಸಂಸ್ಕೃತಿಯಲ್ಲಿ ನಾವು ಬೆಳೆದಿದ್ದೇವೋ, ಯಾರಿಂದ ಇಂದು ನಾವು ನಿಂತಿದ್ದೇವೆಯೋ, ಅದೇ ಸಂಸ್ಕೃತಿಯನ್ನು ಹಾಸ್ಯ ಮಾಡಿ ಹಣ ಸಂಪಾದಿಸುವುದು, ಎಷ್ಟರ ಮಟ್ಟಿಗೆ ಸರಿಯಿದೆ ? ಇಂತಹ ಕಾರ್ಯಕ್ರಮಗಳಿಂದ ಸಮಾಜಕ್ಕೆ ಆಗುವ ಹಾನಿಗಳನ್ನು ನೋಡಿದರೆ ಈ ‘ಸ್ಟ್ಯಾಂಡ್ಪ್’ನ ಈಗ ‘ಎಂಡ್ಪ್’ (ಕೊನೆ) ಆಗಬೇಕು, ಎಂದೆನಿಸುತ್ತದೆ !
– ಶ್ರೀ. ವೈಭವ ಆಫಳೆ, ಗೋವಾ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು