ಪಾಕಿಸ್ತಾನ ಪ್ರಧಾನಮಂತ್ರಿ ಶಹಬಾಜ ಷರೀಫ್ ಅವರು ಟರ್ಕಿಯ ಅಧ್ಯಕ್ಷ ಎರ್ಡೊಗಾನ್ ಅವರನ್ನು ಭೇಟಿ ಬಳಿಕ ಎರ್ಡೊಗಾನ್ ಹೇಳಿಕೆ

ಇಸ್ತಂಬುಲ (ಟರ್ಕಿ) – ಟರ್ಕಿ ಮತ್ತು ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡಲಿವೆ. ಎರಡೂ ದೇಶಗಳು ತರಬೇತಿ, ಬುದ್ಧಿಮತ್ತೆ ಮತ್ತು ತಂತ್ರಜ್ಞಾನದ ಮೂಲಕ ಪರಸ್ಪರ ಬೆಂಬಲ ನೀಡುತ್ತವೆ. ಇದು ಎರಡೂ ದೇಶಗಳಿಗೆ ಪ್ರಯೋಜನವಾಗಲಿದೆ ಎಂದು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಪ್ ಎರ್ಡೊಗಾನ್ ಹೇಳಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಮೇ 25ರ ರಾತ್ರಿ ಇಸ್ತಂಬುಲನಲ್ಲಿ ಅಧ್ಯಕ್ಷ ಎರ್ಡೊಗಾನ್ ಅವರನ್ನು ಭೇಟಿಯಾದಾಗ ಎರ್ಡೊಗಾನ್ ಈ ಮಾತುಗಳನ್ನು ಹೇಳಿದರು. ಈ ಸಂದರ್ಭದಲ್ಲಿ, ಎರಡೂ ನಾಯಕರು ದ್ವಿಪಕ್ಷೀಯ ಸಂಬಂಧಗಳು, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದರು.
ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಟರ್ಕಿ, ಇರಾನ್, ಅಜೆರ್ಬೈಜಾನ್ ಮತ್ತು ತಜಕಿಸ್ತಾನ ದೇಶಗಳ ಪ್ರವಾಸದಲ್ಲಿದ್ದಾರೆ. ಈ ದೇಶಗಳಲ್ಲಿ ಭಾರತದೊಂದಿಗಿನ ಉದ್ವಿಗ್ನ ಪರಿಸ್ಥಿತಿ ಕುರಿತು ಪಾಕಿಸ್ತಾನದ ನಿಲುವನ್ನು ವಿವರಿಸಲಿದ್ದಾರೆ. ಪಹಲ್ಗಾಮನಲ್ಲಿ ನಡೆದ ದಾಳಿಯ ನಂತರ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾದಾಗ, ಟರ್ಕಿ ಮತ್ತು ಅಜೆರ್ ಬೈಜಾನ್ ಬಹಿರಂಗವಾಗಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದವು. ಟರ್ಕಿಯು ಡ್ರೋನ್‌ಗಳು ಮತ್ತು ಅವುಗಳನ್ನು ನಿರ್ವಹಿಸಲು ತರಬೇತಿ ಪಡೆದ ಜನರನ್ನು ಸಹ ಭಾರತದ ವಿರುದ್ಧ ಬಳಸಲು ಪಾಕಿಸ್ತಾನಕ್ಕೆ ಕಳುಹಿಸಿತ್ತು. ‘ಆಪರೇಷನ್ ಸಿಂದೂರ್’ ನಂತರ, ಎರ್ಡೊಗಾನ್ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ದೂರವಾಣಿ ಕರೆ ಮಾಡಿ, ದಾಳಿಯಲ್ಲಿ ಪ್ರಾಣ ಕಳೆದುಕೊಂಡ ತಮ್ಮ ಸಹೋದರರ ಮೇಲೆ ಅಲ್ಲಾಹ್ ದಯೆ ತೋರಲಿ ಎಂದು ನಾನು ಪ್ರಾರ್ಥಿಸುತ್ತೇನೆ, ಪಾಕಿಸ್ತಾನದ ಜನರಿಗೆ ಮತ್ತು ದೇಶಕ್ಕೆ ನನ್ನ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ’, ಎಂದು ತಿಳಿಸಿದ್ದರು.
ಸಂಪಾದಕೀಯ ನಿಲುವು“ಇಬ್ಬರು ಕಳ್ಳರು ಪೊಲೀಸರ ಕೆಲಸ ಮಾಡುತ್ತೇವೆ’ ಎನ್ನುವಂತಿದೆ ಅವರ ಹೇಳಿಕೆ! |
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!