‘ಆಪರೇಷನ್ ಸಿಂದೂರ’ : ಇದು ಬದಲಾಗುತ್ತಿರುವ ಭಾರತದ ಚಿತ್ರ !

‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ

ನವದೆಹಲಿ – ಇಂದು ಪ್ರತಿಯೊಬ್ಬರೂ ದೇಶಭಕ್ತಿಯ ಭಾವನೆಗಳಿಂದ ತುಂಬಿದ್ದಾರೆ. ‘ಆಪರೇಷನ್ ಸಿಂದೂರ’ವು ಕೇವಲ ಸೈನ್ಯ ಕಾರ್ಯಾಚರಣೆಯಾಗಿರದೇ ನಮ್ಮ ದೃಢ ಸಂಕಲ್ಪ, ಧೈರ್ಯ ಮತ್ತು ಬದಲಾಗುತ್ತಿರುವ ಭಾರತದ ಚಿತ್ರಣವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಆಕಾಶವಾಣಿಯ ಮಾಸಿಕ ‘ಮನ ಕಿ ಬಾತ’ ಕಾರ್ಯಕ್ರಮದ 122 ನೇ ಸಂಚಿಕೆಯಲ್ಲಿ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾತು ಮುಂದುವರೆಸಿ,

1. ಇಡೀ ದೇಶವೇ ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿರುವುದನ್ನು ಕಾಣಬಹುದು. ಪ್ರತಿಯೊಬ್ಬರಿಗೂ ಭಯೋತ್ಪಾದನೆ ಕೊನೆಗೊಳ್ಳಬೇಕು ಎಂದು ಅನಿಸುತ್ತಿತ್ತು. ನಮ್ಮ ಸೈನ್ಯವು ಗಡಿಯ ಆಚೆಗಿನ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿತು.

2.’ಆಪರೇಷನ್ ಸಿಂದೂರ’ ಈಗ ಅನೇಕ ಭಾರತೀಯರ ಜೀವನದ ಭಾಗವಾಗಿದೆ. ಬಿಹಾರದ ಕಟಿಹಾರ, ಉತ್ತರಪ್ರದೇಶದ ಕುಶೀನಗರ ಮತ್ತು ಇತರ ಹಲವು ಸ್ಥಳಗಳಲ್ಲಿ ಜನಿಸಿದ ಮಕ್ಕಳಿಗೆ ಸಿಂದೂರ ಎಂದು ನಾಮಕರಣ ಮಾಡಲಾಗಿದೆ.

3.ಭಾರತೀಯ ಸೈನ್ಯವು ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಿದ್ದು ಅವರ ಶೌರ್ಯವು ಅತುಲನೀಯವಾಗಿತ್ತು. ಇದಕ್ಕಾಗಿ ಅವರು ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನವನ್ನು ಬಳಸಿದರು.

4.ಮಾವೋವಾದದ ವಿರುದ್ಧ ಸಾಮೂಹಿಕ ಹೋರಾಟ ನಡೆಯುತ್ತಿದೆ ಮತ್ತು ಗಡಚಿರೋಲಿಯಂತಹ ಪ್ರದೇಶಗಳಲ್ಲಿನ ನಾಗರಿಕರಿಗೆ ಮೂಲಭೂತ ಸೌಲಭ್ಯಗಳು ತಲುಪುತ್ತಿವೆ. ಇಲ್ಲಿನ ಕಾಟೆಝಾರಿ ಗ್ರಾಮಕ್ಕೆ ಮೊದಲ ಬಾರಿಗೆ ಬಸ್ ತಲುಪಿತು. ಗ್ರಾಮಸ್ಥರು ಡೋಲು ಬಾರಿಸಿ ಬಸ್ಸನ್ನು ಸ್ವಾಗತಿಸಿದರು, ಎಂದು ಹೇಳಿದರು.