ಒಡಿಶಾದ ಶ್ರೀ. ಅನಿಲ ಧೀರ ಅವರು ಉತ್ಕೃಷ್ಟ ಸಂಶೋಧಕರು ಮತ್ತು ಲೇಖಕರಾಗಿದ್ದು, ಐತಿಹಾಸಿಕ ಸಂಶೋಧನೆಗೆ ಹೆಸರುವಾಸಿಯಾಗಿದ್ದಾರೆ. ಅವರು ಭಾರತದಲ್ಲಿ ನಡೆಯುವ ಬಾಂಗ್ಲಾದೇಶಿಗರ ಅಕ್ರಮ ನುಸುಳುವಿಕೆಯ ವಿರುದ್ಧ ಜಾಗೃತಿ ಮೂಡಿಸುವ ‘ಭಾರತ ರಕ್ಷಾ ಮಂಚ್’ನ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ. ಅವರು ಪರಂಪರೆಯ ತಾಣಗಳ ಸಂರಕ್ಷಣಾ ಸಂಸ್ಥೆಯಾದ ‘ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್’ (ಇನ್ ಟೆಕ್ ) ನ ಆಡಳಿತ ಮಂಡಳಿಯ ಪ್ರಮುಖ ಸದಸ್ಯರಾಗಿದ್ದಾರೆ. ಇದರ ಜೊತೆಗೆ, ಅವರು ಪ್ರಾಚೀನ ದೇವಸ್ಥಾನಗಳು, ಸಂಸ್ಕೃತಿ, ನಾಗರಿಕತೆ ಮತ್ತು ಪರಂಪರೆಗೆ ಸಂಬಂಧಿಸಿದ ಸಂಸ್ಥೆಗಳಿಗಾಗಿ ಕೆಲಸ ಮಾಡುತ್ತಾರೆ, ಹಾಗೆಯೇ ಈ ಕುರಿತು ಸಂಶೋಧನೆಗಳನ್ನು ಸಹ ನಡೆಸುತ್ತಾರೆ. ಈ ಮೂಲಕ ಅವರು ದೇವಸ್ಥಾನಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಾರೆ. ಈ ಕಾರ್ಯಗಳಿಗಾಗಿ ಅವರು ಇಡೀ ಭಾರತದಾದ್ಯಂತ ವ್ಯಾಪಕವಾಗಿ ಪ್ರಯಾಣಿಸಿದ್ದಾರೆ. ಶ್ರೀ. ಧೀರ ಅವರು ಒಡಿಶಾದ ಇತಿಹಾಸ ಮತ್ತು ಸಂಸ್ಕೃತಿಯ ಕುರಿತು ಬರೆದಿದ್ದಾರೆ. ಅವರು ಒಡಿಶಾದ ಆದಿವಾಸಿ ಮತ್ತು ಮೀನುಗಾರರ ಸಮುದಾಯಗಳಲ್ಲಿ ಕೆಲಸ ಮಾಡಿ ಅನೇಕ ಹೊಸ ಅಜ್ಞಾತ ಅಂಶಗಳನ್ನು ಕಂಡುಹಿಡಿದಿದ್ದಾರೆ. ಈ ಕುರಿತು ಅವರು ‘ಕಾನ್ಫ್ಲೂಯೆನ್ಸಸ್: ಜರ್ನಿ ಇನ್ ಟು ದಿ ಹಾರ್ಟ್ ಅಂಡ್ ಸೋಲ್ ಆಫ್ ಒಡಿಶಾ’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಅವರು ಒಟ್ಟು 11 ಪುಸ್ತಕಗಳನ್ನು ಬರೆದಿದ್ದು, ಅವುಗಳಲ್ಲಿ ಕೆಲವು ಒಡಿಶಾ ಸರಕಾರ (ರಾಜ್ಯ ದಾಖಲೆ ಇಲಾಖೆ) ಪ್ರಕಟಿಸಿದೆ.

ಶ್ರೀ. ಧೀರ ಅವರು ಕಾಲೇಜು ಜೀವನದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸಕ್ರಿಯರಾಗಿದ್ದರು. ಅವರು ಸಂಘದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಒಡಿಶಾ ರಾಜ್ಯದ ರಾಷ್ಟ್ರೀಯ ಸ್ವಯಂಸೇವಕ ಸಂಘದ ‘ಭಾರತ ಇತಿಹಾಸ ಸಂಕಲನ ಸಮಿತಿ’ಯ ಪದಾಧಿಕಾರಿಗಳಾಗಿದ್ದಾರೆ. ಅವರು ಕೋನಾರ್ಕ್ ನ ಪ್ರಸಿದ್ಧ ಸೂರ್ಯ ದೇವಾಲಯದ ‘ಸುರಕ್ಷಾ ಸಮಿತಿ’ಯ ಸದಸ್ಯರೂ ಆಗಿದ್ದಾರೆ. ಅವರು ‘ಉದಯ ಇಂಡಿಯಾ’ ಎಂಬ ಆಂಗ್ಲ ವಾರಪತ್ರಿಕೆಯ ವಿಶೇಷ ಪ್ರತಿನಿಧಿ, ಅಂದರೆ ಒಬ್ಬ ಶೋಧ ಪತ್ರಕರ್ತರಾಗಿದ್ದಾರೆ. “ದೇಶದಲ್ಲಿ ಪಾಳುಬಿದ್ದಿರುವ ಪ್ರಾಚೀನ ದೇವಸ್ಥಾನಗಳ ಸಂಖ್ಯೆ ಬಹಳ ದೊಡ್ಡದಾಗಿದೆ. ಅವುಗಳ ಜೀರ್ಣೋದ್ಧಾರವಾಗಬೇಕು” ಎಂಬುದೇ ಶ್ರೀ. ಧೀರ ಅವರ ಆಕಾಂಕ್ಷೆಯಾಗಿದೆ.

ವಿಶೇಷ ಮಾಲಿಕೆ

ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯಕ್ಕಾಗಿ ಮಾವಳೆಯರು ಮತ್ತು ಶಿಲೆದಾರರು (ಸೈನಿಕರು) ಮಾಡಿದ ತ್ಯಾಗ ಸರ್ವೋಚ್ಚವಾಗಿದೆ, ಅದೇ ರೀತಿ ಇಂದು ಕೂಡ ಅನೇಕ ಹಿಂದುತ್ವನಿಷ್ಠರು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ಧರ್ಮ-ರಾಷ್ಟ್ರದ ರಕ್ಷಣೆಗಾಗಿ ‘ಶಿಲೆದಾರ’ರಂತೆಯೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಹಾಗೂ ಅವರ ಹಿಂದೂ ಧರ್ಮ ರಕ್ಷಣೆಯ ಸಂಘರ್ಷದ ಮಾಹಿತಿಯನ್ನು ನೀಡುವ ‘ಹಿಂದುತ್ವದ ಶಿಲೆದಾರ’ ಈ ಲೇಖನಮಾಲೆಯ ಮೂಲಕ ಉಳಿದವರಿಗೂ ಪ್ರೇರಣೆ ಸಿಗಬಹುದು ! – ಸಂಪಾದಕರು
1. ಉನ್ನತ ಶಿಕ್ಷಣದಿಂದ ದೇವಸ್ಥಾನಗಳ ರಕ್ಷಣೆಯ ಪ್ರಯಾಣ
ಶ್ರೀ. ಅನಿಲ ಧೀರ ಅವರು ಮೂಲತಃ ಪಂಜಾಬಿನವರು; ಆದರೆ ಅವರ ಜನ್ಮಭೂಮಿ ಮತ್ತು ಕರ್ಮಭೂಮಿ ಒಡಿಶಾ ಆಗಿದೆ. ಶ್ರೀ. ಅನಿಲ ಧೀರ ಅವರು 1961ರಲ್ಲಿ ಒಡಿಶಾದ ಕಟಕನಲ್ಲಿ ಜನಿಸಿದ್ದು, ರಾಜಧಾನಿ ಭುವನೇಶ್ವರದಲ್ಲಿ ವಾಸವಾಗಿದ್ದಾರೆ. ‘ಸ್ಟೀವರ್ಟ್ ಸ್ಕೂಲ್’ನಲ್ಲಿ ಶಿಕ್ಷಣ ಪಡೆದ ನಂತರ, ಅವರು ಆಂಗ್ಲ ಸಾಹಿತ್ಯದಲ್ಲಿ ಪದವಿ ಪಡೆದು ಭುವನೇಶ್ವರದ ಉತ್ಕಲ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು. ಅಲ್ಲಿ 8 ವರ್ಷಗಳ ಕಾಲ ಅವರು ಆಂಗ್ಲ ಸಾಹಿತ್ಯ, ಇತಿಹಾಸ, ಮಾನವಶಾಸ್ತ್ರ ಮತ್ತು ಸಮಾಜಶಾಸ್ತ್ರ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರು 3 ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಇದೇ ವೇಳೆ ಅವರು ಭುವನೇಶ್ವರದ ‘ಫ್ಲೈಯಿಂಗ್ ಕ್ಲಬ್’ನಿಂದ ಖಾಸಗಿ ಪೈಲಟ್ ಪರವಾನಗಿಗಾಗಿ ವಿಮಾನಯಾನ ತರಬೇತಿಯನ್ನು ಸಹ ಪಡೆದಿದ್ದಾರೆ. ಆಗ ಅನಿಲ ಅವರು ಧರ್ಮ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಇರಲಿಲ್ಲ. ಕೋಲಕಾತಾದಲ್ಲಿನ ಹಣಕಾಸು ಸಂಸ್ಥೆಯೊಂದರಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ‘ಕಾರ್ಪೊರೇಟ್’ ಕ್ಷೇತ್ರದಲ್ಲಿ ಒಂದು ದೊಡ್ಡ ಹುದ್ದೆಯಲ್ಲಿದ್ದಾಗ 2014ರಲ್ಲಿ ಅವರು ಪರಂಪರೆಯ ತಾಣಗಳ ಸಂರಕ್ಷಣೆಗಾಗಿ ತಮ್ಮನ್ನು ಸಮರ್ಪಿಸಿಕೊಳ್ಳಲು ನಿರ್ಧರಿಸಿದರು. ಅಂದಿನಿಂದ ಅವರು ಪ್ರಾಚೀನ ದೇವಾಲಯಗಳ ಸಂಶೋಧನೆ, ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೂರಾರು ಎಕರೆಗಳಲ್ಲಿ ನಿರ್ಮಿಸಲಾದ ಭವ್ಯ ದೇವಸ್ಥಾನಗಳಿಂದ ಹಿಡಿದು ಕಾಡಿನಲ್ಲಿರುವ ಆದಿವಾಸಿಗಳ ಸಣ್ಣ ದೇವಾಲಯಗಳನ್ನೂ ಸಹ ಅವರು ಸಂಶೋಧನೆ ನಡೆಸಿದ್ದಾರೆ. ಅನಿಲ ಅವರು ಕೋಲಕಾತಾದಿಂದ ಜಗನ್ನಾಥ ಪುರಿಯವರೆಗಿನ ಪ್ರಾಚೀನ ‘ಜಗನ್ನಾಥ ಸಡಕ್’ (ಹಿಂದಿನ ಕಾಲದಲ್ಲಿ ಈ ರಸ್ತೆಯ ಮೂಲಕ ಅನೇಕ ಸಾಧುಸಂತರು ಭಗವಾನ್ ಜಗನ್ನಾಥನ ತೀರ್ಥಯಾತ್ರೆ ಮಾಡಿದ್ದರು) ಅನ್ನು ಕಂಡು ಹಿಡಿದಿದ್ದಾರೆ.
ದೇವಸ್ಥಾನಗಳ ರಕ್ಷಣೆ ಮತ್ತು ಸಂವರ್ಧನೆಯ ಅವರ ಕಾರ್ಯಕ್ಕೆ ಸಮರ್ಪಿತರಾಗಲು ಪ್ರೇರಣೆ

ಭುವನೇಶ್ವರವನ್ನು ‘ದೇವಸ್ಥಾನಗಳ ನಗರ’ ಎಂದು ಕರೆಯಲಾಗುತ್ತದೆ. ಸಾವಿರಾರು ದೇವಸ್ಥಾನಗಳಿರುವ ಭುವನೇಶ್ವರದಲ್ಲಿ ಇಂದಿಗೂ 600ಕ್ಕೂ ಹೆಚ್ಚು ಅತಿ ಪ್ರಾಚೀನ ದೇವಾಲಯಗಳಿವೆ. ಶ್ರೀ. ಧೀರ ಅವರ ಮನೆಯ ವಾತಾವರಣವು ಆಧ್ಯಾತ್ಮಿಕವಾಗಿತ್ತು. ಅವರಿಗೆ ಶಾಲಾ ಜೀವನದಿಂದಲೇ ಒಡಿಶಾದ ಹಿಂದೂ ದೇವಾಲಯಗಳಲ್ಲಿ ಆಸಕ್ತಿ ಇತ್ತು. ಆದ್ದರಿಂದ, ಅವರು ತಮ್ಮ ಬಿಡುವಿನ ವೇಳೆಯಲ್ಲಿ ದೇವಸ್ಥಾನಗಳ ಸಂರಕ್ಷಣಾ ಕಾರ್ಯವನ್ನು ಮಾಡುತ್ತಿದ್ದರು. ಕಾಲೇಜು ದಿನಗಳಲ್ಲಿ ಅವರು ಇತಿಹಾಸವನ್ನು ಅಧ್ಯಯನ ಮಾಡಿದರು.

2012ರಲ್ಲಿ ಅವರಿಗೆ ಸನಾತನ ಸಂಸ್ಥೆ ಮತ್ತು ಅದರ ಕಾರ್ಯಗಳ ಪರಿಚಯವಾಯಿತು. ನಂತರ ಅವರು ಗೋವಾದಲ್ಲಿರುವ ಸನಾತನ ಆಶ್ರಮದಲ್ಲಿ ವಿವಿಧ ಸಂತರನ್ನು ಭೇಟಿಯಾದರು. ಸಂತರು ನೀಡಿದ ಮಾರ್ಗದರ್ಶನದಿಂದ ಧೀರ ಅವರು ಅತ್ಯಂತ ಪ್ರಭಾವಿತರಾದರು. ನಂತರ ಅವರು ಕೋಲಕಾತಾದಲ್ಲಿನ ಹಣಕಾಸು ಸಂಸ್ಥೆಯೊಂದರಲ್ಲಿ ನಿರ್ವಹಿಸುತ್ತಿದ್ದ ಉಪಾಧ್ಯಕ್ಷರ ಹುದ್ದೆಯನ್ನು ತ್ಯಜಿಸಿ, ದೇವಸ್ಥಾನಗಳ ಸಂರಕ್ಷಣೆಗಾಗಿ ಪೂರ್ಣ ಸಮಯವನ್ನು ಮೀಸಲಿಡಲು ನಿರ್ಧರಿಸಿದರು. ತದನಂತರ ಅವರು ಜಗನ್ನಾಥ ಸಡಕ್ ಯೋಜನೆ, ಪ್ರಾಚಿ ಕಣಿವೆಯ ದೇವಸ್ಥಾನಗಳ ಸಂಶೋಧನೆ ಮತ್ತು ಮಹಾನದಿ ಪರಂಪರೆ ಮುಂತಾದ ಜೀವನ ಯೋಜನೆಗಳನ್ನು ಕೈಗೊಂಡರು. ಅವರು ಪ್ರತಿ ವರ್ಷ ಗೋವಾದಲ್ಲಿ ನಡೆಯುವ ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ನಿಯಮಿತವಾಗಿ ಭಾಗವಹಿಸುತ್ತಾರೆ.
2. ಪ್ರಾಚೀನ ದೇವಾಲಯಗಳು ಮತ್ತು ಪರಂಪರೆಯ ತಾಣಗಳ ಸಂರಕ್ಷಣೆ ಮತ್ತು ಸಂವರ್ಧನೆ

2 ಅ. ‘ಇನ್ ಟೆಕ್’ ಸಂಸ್ಥೆಯ ಮೂಲಕ 6,500 ದೇವಸ್ಥಾನಗಳ ಅನ್ವೇಷಣೆ: ಭಾರತೀಯ ಪರಂಪರೆಯ ತಾಣಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಸಂರಕ್ಷಿಸಲು ಮತ್ತು ಜೀರ್ಣೋದ್ಧಾರ ಮಾಡಲು 1984ರಲ್ಲಿ ‘ಇನ್ ಟೆಕ್’ (ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್) ಎಂಬ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯು ಪ್ರಾಚೀನ ದೇವಸ್ಥಾನಗಳು, ಅರಮನೆಗಳು ಮತ್ತು ಮಹಲುಗಳ ಸಂರಕ್ಷಣಾ ಕಾರ್ಯವನ್ನು ಮಾಡುತ್ತದೆ. ಈ ಸಂಸ್ಥೆಯ ಮೂಲಕ ಶ್ರೀ. ಧೀರ ಅವರು ಒಡಿಶಾದ 17 ಜಿಲ್ಲೆಗಳಲ್ಲಿ 300 ವರ್ಷಗಳಿಗಿಂತ ಹಳೆಯದಾದ 6,500 ದೇವಸ್ಥಾನಗಳನ್ನು ಕಂಡುಹಿಡಿದಿದ್ದಾರೆ ಮತ್ತು ಉಳಿದವುಗಳನ್ನು ಕಂಡುಹಿಡಿಯುವುದು ಇನ್ನೂ ಬಾಕಿ ಇದೆ.
| Odisha – A Powerhouse of Indian Culture | Anil Dhir | #SangamTalks
(ಸೌಜನ್ಯ – Sangam Talks) |
2 ಆ. ಪ್ರಾಚೀನ ವಿಗ್ರಹಗಳ ನೋಂದಣಿ: ಇಂದು ಕಳುವಾದ ಅನೇಕ ಪ್ರಾಚೀನ ವಿಗ್ರಹಗಳು ಮರಳಿ ದೊರೆತಿವೆ; ಆದರೆ ಅವು ಎಲ್ಲಿಂದ ಬಂದವು ಎಂಬ ದಾಖಲೆ ಇಲ್ಲದ ಕಾರಣ ಅವು ಆಡಳಿತದ ಸುಪರ್ದಿಯಲ್ಲಿವೆ. ಇದನ್ನು ಗಮನಿಸಿ, ಶ್ರೀ. ಧೀರ ಅವರು ಪ್ರತಿ ದೇವಸ್ಥಾನದಲ್ಲಿನ ವಿಗ್ರಹದ ಎಲ್ಲಾ ಮಾಹಿತಿಯನ್ನು ದಾಖಲಿಸುವ ಕಾರ್ಯವನ್ನು ಪ್ರಾರಂಭಿಸಿದರು.
2 ಇ. ಮಹಾನದಿ ಕಣಿವೆಯಲ್ಲಿ 700 ವರ್ಷಗಳ ಪ್ರಾಚೀನ 63 ದೇವಸ್ಥಾನಗಳ ಅನ್ವೇಷಣೆ: ಶ್ರೀ. ಧೀರ ಅವರು ಛತ್ತೀಸಗಢದಿಂದ ಒಡಿಶಾಕ್ಕೆ ಹರಿಯುವ ಮಹಾನದಿಯ ಎರಡೂ ದಡಗಳ 400 ಕಿಲೋಮೀಟರ್ ಪ್ರದೇಶದಲ್ಲಿ ಎತ್ತಿನಗಾಡಿಯ ಮೂಲಕ ಸಮೀಕ್ಷೆ ನಡೆಸಿದರು. ಈ ಸಮೀಕ್ಷೆಯಲ್ಲಿ ಅವರಿಗೆ ಕಳೆದ 80 ವರ್ಷಗಳಿಂದ ನೀರಿನಲ್ಲಿ ಮುಳುಗಿದ್ದ 700 ವರ್ಷಗಳಿಗೂ ಹೆಚ್ಚು ಪ್ರಾಚೀನ 63 ದೇವಸ್ಥಾನಗಳು ಕಂಡುಬಂದವು. “ಅವುಗಳಲ್ಲಿ ಕನಿಷ್ಠ 2-3 ದೇವಸ್ಥಾನಗಳನ್ನು ಹೊರತೆಗೆದು ಜೀರ್ಣೋದ್ಧಾರ ಮಾಡಬೇಕು” ಎಂದು ಅವರು ಭಾರತೀಯ ಪುರಾತತ್ವ ಇಲಾಖೆಗೆ ಮನವಿ ಮಾಡಿದರು. ಭಾರತದಲ್ಲಿ ನಾಗಾರ್ಜುನ ಅಣೆಕಟ್ಟು ನಿರ್ಮಾಣವಾಗುತ್ತಿದ್ದಾಗ ಅಂದಿನ ಪುರಾತತ್ವ ಇಲಾಖೆಯು 2 ದೇವಸ್ಥಾನಗಳನ್ನು ಬೇರೆಡೆಗೆ ಸ್ಥಳಾಂತರಿಸಿತ್ತು. ಅದೇ ಪ್ರಕ್ರಿಯೆಯನ್ನು ಈ ದೇವಾಲಯಗಳ ವಿಷಯದಲ್ಲೂ ಕೈಗೊಳ್ಳಬೇಕೆಂದು ಶ್ರೀ. ಧೀರ ಅವರ ಅಭಿಪ್ರಾಯವಾಗಿದೆ.
ಜಗಬಂಧು ಸಿಂಗ ಸ್ಮೃತಿ ಪ್ರಶಸ್ತಿ

ಪ್ರಸಿದ್ಧ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಜಗಬಂಧು ಸಿಂಗ್ ಅವರ 147ನೇ ಜಯಂತಿಯ ಸ್ಮರಣಾರ್ಥ, ‘ಒಡಿಶಾ ಸಾಹಿತ್ಯ ಅಕಾಡೆಮಿ’ ಮತ್ತು ‘ಜಗಬಂಧು ಸಿಂಗ್ ಮೆಮೋರಿಯಲ್ ಟ್ರಸ್ಟ್’ ವತಿಯಿಂದ ಫೆಬ್ರುವರಿ 15, 2023 ರಂದು ಶ್ರೀ. ಧೀರ ಅವರಿಗೆ 9ನೇ ಜಗಬಂಧು ಸಿಂಗ್ ಸ್ಮೃತಿ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
2 ಈ. ‘ಪ್ರಾಚಿ ಕಣಿವೆ’ ಪ್ರದೇಶದಲ್ಲಿನ ಮಠಗಳು, ದೇವಸ್ಥಾನಗಳು ಇತ್ಯಾದಿ ಪರಂಪರೆಯ ತಾಣಗಳ ನೋಂದಣಿ: ‘ಪ್ರಾಚಿ’ ನದಿಯು ಭುವನೇಶ್ವರದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿ ಹುಟ್ಟುತ್ತದೆ. ಈ ನದಿಯ ದಡದಲ್ಲಿ ಹರಪ್ಪಾ ಮತ್ತು ಮೊಹೆಂಜೊದಾರೋ ನಾಗರಿಕತೆಗಳಿಗಿಂತಲೂ ಪ್ರಾಚೀನ ಸಂಸ್ಕೃತಿಯು ವಿಕಸಿತವಾಗಿದೆ ಎಂದು ತಿಳಿದುಬಂದಿದೆ. ‘ಇನ್ ಟೆಕ್’ ಸಂಸ್ಥೆಯು ಪ್ರಾಚಿ ಕಣಿವೆಯಲ್ಲಿನ ಸ್ಮಾರಕಗಳನ್ನು ನೋಂದಾಯಿಸುವ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ, ಪ್ರಾಚಿ ನದಿಯ 60 ಕಿಲೋಮೀಟರ್ ಉದ್ದದ ಪ್ರದೇಶದಲ್ಲಿ 7 ರಿಂದ 15ನೇ ಶತಮಾನದ ನಡುವೆ ನಿರ್ಮಿಸಲಾದ ದೇವಸ್ಥಾನಗಳು, ಮಠಗಳು, ಘಾಟ್ ಗಳು, ವಾಸ್ತುಶಿಲ್ಪಗಳು ಮತ್ತು ಸ್ಥಳಗಳು ಸೇರಿದಂತೆ 350 ರಿಂದ 400 ಪರಂಪರೆಯ ತಾಣಗಳನ್ನು ಸರಿಯಾಗಿ ನೋಂದಾಯಿಸುವ ಕೆಲಸವನ್ನು ಶ್ರೀ. ಧೀರ ಮಾಡುತ್ತಿದ್ದಾರೆ.

3. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ‘ರಾಜ್ಯ ಅಧಿಕಾರಿ’ ಹುದ್ದೆಗೆ ನೇಮಕಾತಿ
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಶ್ರೀ. ಅನಿಲ ಧೀರ ಅವರನ್ನು ಒಡಿಶಾದ ‘ರಾಜ್ಯ ಕಲ್ಯಾಣ ಅಧಿಕಾರಿ’ಯಾಗಿ ನೇಮಿಸಿದೆ. ಇದರ ಅಡಿಯಲ್ಲಿ ಅವರ ಕಾರ್ಯವು ಒಡಿಶಾದಲ್ಲಿ ಪ್ರಾಣಿ ಕಲ್ಯಾಣ ಕಾನೂನುಗಳ ಅನುಸರಣೆಯನ್ನು ಖಚಿತಪಡಿಸುವುದು, ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ಅನುದಾನ ನೀಡುವುದು ಮತ್ತು ಕಲ್ಯಾಣ ಸೂತ್ರಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸಲಹೆ ನೀಡುವುದಾಗಿದೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ಕೇಂದ್ರ ಸರಕಾರದಿಂದ ‘ಟೆಂಪಲ್ ಬಾಂಡ್ಸ್’ ಯೋಜನೆ ಜಾರಿ !
ಬಕ್ರೀದ್ ದಿನದಂದು ಮುಗ್ಧ ಪ್ರಾಣಿಗಳ ಬಲಿಯಿಂದ ಬೇಸತ್ತ ಬಿಲಾಲ್ ‘ವಿಶಾಲ್’ ಆದನು!
ದೇವಸ್ಥಾನಗಳಲ್ಲಿನ ‘ವಿಐಪಿ ದರ್ಶನ’ದ ಕುರಿತು ಮದ್ರಾಸ್ ಉಚ್ಚ ನ್ಯಾಯಾಲಯದ ತೀವ್ರ ಅಸಮಾಧಾನ
ಉರೂಸ್ ನಿಮಿತ್ತ ವಿಶಾಲಗಡದಲ್ಲಿ ಪ್ರಾಣಿ ಬಲಿ ನೀಡಲು ನ್ಯಾಯಾಲಯದ ಅನುಮತಿ!