ಸಂಕಷ್ಟದಲ್ಲಿದ್ದ ಭಾರತೀಯ ವಿಮಾನಕ್ಕೆ ಪಾಕಿಸ್ಟಾನದ ವಾಯುಪ್ರದೇಶ ಬಳಸಲು ಮತ್ತು ಅಲ್ಲಿ ಇಳಿಯಲು ಅನುಮತಿ ನಿರಾಕರಣೆ!

ನವದೆಹಲಿ – ಮೇ 21 ರಂದು ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಆಲಿಕಲ್ಲು ಮಳೆಯಿಂದಾಗಿ ಉದ್ವಿಗ್ನ ಮತ್ತು ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂಡಿಗೋ ವಿಮಾನವು ಅಮೃತಸರದಿಂದ ಹಾದು ಹೋಗುತ್ತಿದ್ದಾಗ, ಪೈಲಟ್‌ಗೆ ತುರ್ತು ಪರಿಸ್ಥಿತಿಯ ಅರಿವಾಯಿತು. ಪೈಲಟ್ ಲಾಹೋರ್‌ನ ವಾಯು ಸಂಚಾರ ನಿಯಂತ್ರಣ ಕಚೇರಿಯನ್ನು ಸಂಪರ್ಕಿಸಿ, ಕೆಟ್ಟ ಹವಾಮಾನವನ್ನು ತಪ್ಪಿಸಲು ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಲು ಅನುಮತಿ ಕೇಳಿದರು; ಆದರೆ ಲಾಹೋರ್ ವಾಯು ಸಂಚಾರ ನಿಯಂತ್ರಣ ಕಚೇರಿ ಸ್ಪಷ್ಟವಾಗಿ ನಿರಾಕರಿಸಿತು.

1.ಈ ವಿಮಾನಕ್ಕೆ ತೀವ್ರ ಅಡಚಣೆ ಎದುರಿಸಬೇಕಾಯಿತು. ವಿಮಾನ ನಡುಗಲು ಪ್ರಾರಂಭಿಸಿತು. ಈ ವಿಮಾನದಲ್ಲಿ ಸುಮಾರು 227 ಪ್ರಯಾಣಿಕರಿದ್ದರು. ಪೈಲಟ್ ಶ್ರೀನಗರ ವಾಯು ಸಂಚಾರ ನಿಯಂತ್ರಣ ಕಚೇರಿಗೆ ಮಾಹಿತಿ ನೀಡಿ, ವಿಮಾನವನ್ನು ತುರ್ತು ‘ಲ್ಯಾಂಡಿಂಗ್’ ಮಾಡಿದರು.

2.ವಿಮಾನ ಇಳಿದ ನಂತರ, ವಿಮಾನದ ಮುಂಭಾಗದ ಭಾಗ (ನೋಸ್ ಕೋನ್) ಮುರಿದಿರುವುದು ಕಂಡುಬಂದಿದೆ.

3.ವಿಮಾನದೊಳಗಿನ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಜನರು ತಮ್ಮ ಜೀವಕ್ಕಾಗಿ ಪ್ರಾರ್ಥಿಸುವುದು ಈ ವಿಡಿಯೋದಲ್ಲಿ ಕಂಡುಬರುತ್ತಿದೆ. ಮಕ್ಕಳ ಅಳುವ ಶಬ್ದಗಳೂ ಕೇಳಿಸುತ್ತಿವೆ.

4.ಶ್ರೀನಗರದಲ್ಲಿ ಇಳಿಯುವ ಸುಮಾರು 20-30 ನಿಮಿಷಗಳ ಮೊದಲು ಪ್ರಯಾಣಿಕರಿಗೆ ‘ಸೀಟ್ ಬೆಲ್ಟ್’ ಹಾಕಿಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಆಗ ವಿಮಾನದಲ್ಲಿ ತುಂಬಾ ಆಘಾತಗಳಾದವು. ಘೋಷಣೆಯಾದ ಎರಡು-ಮೂರು ನಿಮಿಷಗಳಲ್ಲಿ ವಿಮಾನ ಎಷ್ಟು ಜೋರಾಗಿ ನಡುಗಿತು ಎಂದರೆ, ಇದು ತಮ್ಮ ಕೊನೆಯ ವಿಮಾನಯಾನ ಎಂದು ಎಲ್ಲರಿಗೂ ಅನಿಸಿತು.

ಸಂಪಾದಕೀಯ ನಿಲುವು

ಇಂತಹ ಪಾಕಿಸ್ತಾನಕ್ಕೆ ಯಾವುದೇ ರೀತಿಯ ದಯೆ, ಕನಿಕರ ತೋರುವುದು ಭಾರತ ಆತ್ಮಹತ್ಯೆ ಮಾಡಿಕೊಂಡಂತೆ !

ಶತ್ರುಗಳು ನಾಚುವಂತಹ ಪಾಕಿಸ್ತಾನದ ಮನಸ್ಥಿತಿ