ಚೀನಿ ತಂತ್ರಜ್ಞಾನದ ಅಧ್ಯಯನಕ್ಕೆ ಆಸಕ್ತಿ
ನವದೆಹಲಿ: ಭಾರತವು ನಡೆಸಿದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದ ಡ್ರೋನ್ ಗಳು ಮತ್ತು ಕ್ಷಿಪಣಿಗಳನ್ನು ಆಕಾಶದಲ್ಲೇ ನಾಶಪಡಿಸಿತ್ತು. ಅವುಗಳ ಅವಶೇಷಗಳು ಭಾರತದಲ್ಲಿ ಬಿದ್ದಿದ್ದು, ಭಾರತೀಯ ಸೇನೆಯು ಅವುಗಳನ್ನು ವಶಪಡಿಸಿಕೊಂಡಿದೆ. ಈಗ ಈ ಅವಶೇಷಗಳಿಗೆ ಅಮೆರಿಕ, ಬ್ರಿಟನ್, ಕೆನಡಾ, ನ್ಯೂಜಿಲೆಂಡ್, ಫ್ರಾನ್ಸ್, ಜಪಾನ್ ಸೇರಿದಂತೆ ಹಲವು ದೇಶಗಳು ಬೇಡಿಕೆ ಮಾಡುತ್ತಿವೆ. ಇದರಲ್ಲಿ ಪಿಎಲ್-15ಇ (PL-15E) ಹೆಸರಿನ ಕ್ಷಿಪಣಿಯು ಚೀನಾದಿಂದ ತಯಾರಿಸಲ್ಪಟ್ಟಿದೆ. ಆ ಕ್ಷಿಪಣಿಯಲ್ಲಿ ಚೀನಾ ಯಾವ ತಂತ್ರಜ್ಞಾನವನ್ನು ಬಳಸಿದೆ ಎಂಬುದನ್ನು ಅಧ್ಯಯನ ಮಾಡಲು ಈ ದೇಶಗಳಿಗೆ ಮಾಹಿತಿ ಬೇಕಾಗಿದೆ.
🇮🇳💥 China's destroyed PL-15 missile remnants are in high demand!
France, Japan & Five Eyes nations are seeking the fragments found in Punjab to study its technology 🤔🔬 #OperationSindoor #Technology #DefenceTech pic.twitter.com/1ZtVwhyOxu
— Sanatan Prabhat (@SanatanPrabhat) May 21, 2025
ಮೇ 9 ರಂದು ಪಂಜಾಬ್‌ದ ಹೋಶಿಯಾರಪುರ ಜಿಲ್ಲೆಯ ಒಂದು ಹೊಲದಲ್ಲಿ ಪಿಎಲ್-15ಇ ಕ್ಷಿಪಣಿಯ ತುಣುಕುಗಳು ಪತ್ತೆಯಾಗಿದ್ದವು. ಇದರ ನಂತರ, ಮೇ 12 ರಂದು ರಕ್ಷಣಾ ಪಡೆಗಳು ಪತ್ರಿಕಾಗೋಷ್ಠಿಯಲ್ಲಿ ಇದೇ ಮೊದಲ ಬಾರಿಗೆ ಈ ಅವಶೇಷಗಳನ್ನು ಪ್ರದರ್ಶಿಸಿತ್ತು.