Murshidabad Violence SIT Report : ಮುರ್ಷಿದಾಬಾದ ಹಿಂಸಾಚಾರದ ಹಿಂದೆ ತೃಣಮೂಲ ಕಾಂಗ್ರೆಸ್ಸಿನ ಮುಸ್ಲಿಂ ಕಾರ್ಪೊರೇಟರ್: ಹಿಂದೂಗಳನ್ನು ಗುರಿಯಾಗಿಸಲಾಯಿತು !

  • ಕೋಲಕಾತಾ ಉಚ್ಚನ್ಯಾಯಾಲಯ ಸ್ಥಾಪಿಸಿದ ತನಿಖಾ ಸಮಿತಿಯ ವರದಿ ಬಹಿರಂಗ

  • 113 ಮನೆಗಳಿಗೆ ಅತ್ಯಧಿಕ ಹಾನಿ!

ಕೋಲಕಾತಾ (ಬಂಗಾಳ): ರಾಜ್ಯದ ಮುರ್ಷಿದಾಬಾದ ಜಿಲ್ಲೆಯಲ್ಲಿ ಏಪ್ರಿಲ್ 11 ಮತ್ತು 12 ರಂದು ನಡೆದ ಹಿಂಸಾಚಾರದ ಕುರಿತು ಕೋಲಕಾತಾ ಉಚ್ಚನ್ಯಾಯಾಲಯ ರಚಿಸಿದ ತನಿಖಾ ಸಮಿತಿಯು ವರದಿಯನ್ನು ಪ್ರಕಟಿಸಿದೆ. ವರದಿಯ ಪ್ರಕಾರ, ಈ ಹಿಂಸಾಚಾರದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ ಮೆಹಬೂಬ್ ಆಲಂ ಎಂಬ ಕಾರ್ಪೊರೇಟರನ ಪ್ರಮುಖ ಪಾತ್ರವಿದೆ. ಅಲ್ಲದೆ, ಈ ಹಿಂಸಾಚಾರದಲ್ಲಿ ವಿಶೇಷವಾಗಿ ಹಿಂದೂ ಸಮುದಾಯವನ್ನು ಗುರಿಯಾಗಿಸಲಾಗಿತ್ತು. ಈ ಸಮಯದಲ್ಲಿ ಸ್ಥಳೀಯ ಪೊಲೀಸರು ಸಂಪೂರ್ಣವಾಗಿ ನಿಷ್ಕ್ರಿಯರಾಗಿದ್ದರು. ಸಂತ್ರಸ್ತರು ಹಲವು ಬಾರಿ ಪೊಲೀಸರನ್ನು ಸಂಪರ್ಕಿಸಿದರೂ ಯಾವುದೇ ಸಹಾಯ ಪೂರೈಸಲಿಲ್ಲ. ಏಪ್ರಿಲ್ 17 ರಂದು ಕೋಲಕಾತಾ ಉಚ್ಚನ್ಯಾಯಾಲಯವು ಮೂವರು ಸದಸ್ಯರ ಸಮಿತಿಯನ್ನು ರಚಿಸಿತ್ತು. ಇದರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಬಂಗಾಳ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ತಲಾ ಒಬ್ಬ ಸದಸ್ಯರಿದ್ದರು. ಈ ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದೆ.

ವರದಿಯ ಕೆಲವು ಪ್ರಮುಖ ಅಂಶಗಳು

1. ಶುಕ್ರವಾರ, ಏಪ್ರಿಲ್ 11 ರಂದು ನಮಾಜ ನಂತರ ಮಧ್ಯಾಹ್ನ 2:30 ಗಂಟೆಯ ನಂತರ ಹಿಂದೂಗಳ ಮೇಲೆ ವ್ಯಾಪಕ ಪ್ರಮಾಣದಲ್ಲಿ ದಾಳಿ ನಡೆಯಿತು. ಕಾರ್ಪೊರೇಟರ್ ಮೆಹಬೂಬ್ ಆಲಂ ದಾಳಿಕೋರರ ಜೊತೆಗಿದ್ದನು. ಈ ಸಮಯದಲ್ಲಿ ಬೆಟಬೊನಾ ಗ್ರಾಮಕ್ಕೆ ಅತ್ಯಧಿಕ ಹಾನಿಯಾಗಿದೆ. ಇದರಲ್ಲಿ 113 ಮನೆಗಳು ಸೇರಿವೆ.

2. ಅಲ್ಲಿನ ಹಿಂದೂಗಳ ಅಂಗಡಿಗಳು ಮತ್ತು ಮಾಲ್ ಗಳನ್ನು ಗುರಿಯಾಗಿಸಿ ಬೆಂಕಿ ಹಚ್ಚುವುದು ಮತ್ತು ಲೂಟಿ ನಡೆಸಲಾಯಿತು.

3. ಏಪ್ರಿಲ್ 11 ಮತ್ತು 12 ರಂದು ಸೂತಿ, ಶಮಶೇರಗಂಜ್ ಮತ್ತು ರಘುನಾಥಗಂಜ್ ಗ್ರಾಮಗಳಲ್ಲಿ ಹಲವು ಕಡೆ ಅಂಗಡಿಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಲಾಯಿತು.

4. ಹಿಂಸಾಚಾರ ಪ್ರಕರಣದಲ್ಲಿ ಒಟ್ಟು 100 ಕ್ಕೂ ಹೆಚ್ಚು ಅಪರಾಧಗಳು ದಾಖಲಾಗಿದ್ದು, 276 ಜನರನ್ನು ಬಂಧಿಸಲಾಗಿದೆ.

5. ಬಂಗಾಳ ಪೊಲೀಸರ ವಿಶೇಷ ತನಿಖಾ ದಳವು ಏಪ್ರಿಲ್ 21 ರಂದು ಒಡಿಶಾದ ಝಾರಸುಗುಡಾದಿಂದ ಹಿಂಸಾಚಾರ ಎಸಗಿದ 16 ಜನರನ್ನು ಬಂಧಿಸಿತ್ತು.

 

ಮುರ್ಷಿದಾಬಾದ ಹಿಂಸಾಚಾರದ ಇತಿಹಾಸವನ್ನು ತಿಳಿದುಕೊಳ್ಳಿರಿ!

1. ಮುರ್ಷಿದಾಬಾದ ಜಿಲ್ಲೆಯಲ್ಲಿ ಶೇ.70 ಜನರು ಮುಸ್ಲಿಮರಾಗಿದ್ದಾರೆ. ಇದು ಬಂಗಾಳದಲ್ಲಿ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಜಿಲ್ಲೆಯಾಗಿದೆ.

2. ಇಲ್ಲಿ ಡಿಸೆಂಬರ್ 2019 ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ರೈಲ್ವೆ ನಿಲ್ದಾಣಗಳು ಮತ್ತು ಬಸ್ಸುಗಳನ್ನು ಗುರಿಯಾಗಿಸಿ ಬೆಂಕಿ ಹಚ್ಚುವಿಕೆ ಮತ್ತು ರೈಲು ಹಳಿಗಳಿಗೆ ಹಾನಿ ಮಾಡಲಾಗಿತ್ತು.

3. 2024 ರ ರಾಮನವಮಿಯ ಸಮಯದಲ್ಲಿ ನಗರದ ಶಕ್ತಿಪುರ ಪ್ರದೇಶದಲ್ಲಿ ಹಿಂಸಾಚಾರ ನಡೆದಿತ್ತು. ಇದರಲ್ಲಿ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

15 ದಿನಗಳ ಹಿಂದೆ ಬಂಗಾಳದ ರಾಜ್ಯಪಾಲರೂ ಮತ್ತೊಂದು ವರದಿ ಸಲ್ಲಿಸಿದ್ದರು!

ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ್ ಬೋಸ್

ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಮೇ 4 ರಂದು ಮುರ್ಷಿದಾಬಾದ ಗಲಭೆಗಳ ಕುರಿತು ಗೃಹ ಸಚಿವಾಲಯಕ್ಕೆ ಒಂದು ವರದಿಯನ್ನು ಸಲ್ಲಿಸಿದ್ದರು. ಇದರಲ್ಲಿ ಕಟ್ಟರವಾದವು ಬಂಗಾಳಕ್ಕೆ ದೊಡ್ಡ ಅಪಾಯ ಎಂದು ವಿವರಿಸಲಾಗಿತ್ತು. ಬಾಂಗ್ಲಾದೇಶದ ಗಡಿಯಲ್ಲಿರುವ ಮುರ್ಷಿದಾಬಾದ ಮತ್ತು ಮಾಲ್ದಾ ಜಿಲ್ಲೆಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ ಎಂದು ರಾಜ್ಯಪಾಲರು ಹೇಳಿದ್ದರು. ಅವರು ಉತ್ತರ ದಿನಾಜಪುರ ಅನ್ನು ಸಹ ಸೂಕ್ಷ್ಮ ಜಿಲ್ಲೆ ಎಂದು ವಿವರಿಸಿದ್ದರು. ಬಾಂಗ್ಲಾದೇಶಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಗಳಲ್ಲಿ ಕೇಂದ್ರ ಪಡೆಗಳ ಠಾಣೆಗಳನ್ನು ಸ್ಥಾಪಿಸಬೇಕು ಎಂದು ಅವರು ಸೂಚಿಸಿದ್ದರು. ಅಲ್ಲದೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕೇಂದ್ರ ಸರಕಾರವು ‘ಸಾಂವಿಧಾನಿಕ ಆಯ್ಕೆ’ಗಳನ್ನು ಪರಿಗಣಿಸಬೇಕು ಎಂದೂ ಅವರು ಹೇಳಿದ್ದರು.

ಸಂಪಾದಕೀಯ ನಿಲುವು

  • ಹಿಂದೂ ವಿರೋಧಿ ತೃಣಮೂಲ ಕಾಂಗ್ರೆಸ್ಸಿನ ಮೇಲೆ ಈಗ ನಿಷೇಧವನ್ನೇ ಹೇರಬೇಕು!
  • ಕಾಶ್ಮೀರದ ಹಾದಿ ಹಿಡಿಯುತ್ತಿರುವ ಬಂಗಾಳದಲ್ಲಿ ಈಗ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವುದು ಅತ್ಯಗತ್ಯವಾಗಿದೆ. ಇದಕ್ಕಾಗಿ ಮುಂದಿನ ವರ್ಷ ನಡೆಯುವ ಬಂಗಾಳ ವಿಧಾನಸಭಾ ಚುನಾವಣೆಗಳನ್ನು ರದ್ದುಗೊಳಿಸಬೇಕಾದರೂ ಅಡ್ಡಿಯಿಲ್ಲ, ಆದರೆ ಅಲ್ಲಿನ ಹಿಂದೂಗಳ ರಕ್ಷಣೆ ಖಚಿತಪಡಿಸುವವರೆಗೆ ಮತ್ತು ಎಲ್ಲಾ ಬಾಂಗ್ಲಾದೇಶಿ ನುಸುಳಯಕೋರರನ್ನು ಹೊರಹಾಕುವವರೆಗೆ ಬಂಗಾಳವನ್ನು ಕೇಂದ್ರ ಸರಕಾರದ ಸುಪರ್ದಿಯಡಿಯಲ್ಲಿ ತೆಗೆದುಕೊಳ್ಳಬೇಕು ಎಂದು ದೇಶಾದ್ಯಂತದ ಹಿಂದೂಗಳು ಈಗ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು.