ಸನಾತನದ ೧೦೦ ನೇ ಸಂತ ಪೂ. (ಶ್ರೀಮತಿ) ಸೀತಾಬಾಯಿ ಶ್ರೀಧರ ಜೋಶಿ (ವಯಸ್ಸು ೯೯ ವರ್ಷಗಳು) ಮತ್ತು ಅವರ ಕುಟುಂಬದವರ ಪರಾತ್ಪರ ಗುರು ಡಾ. ಆಠವಲೆರೊಂದಿಗಿನ ಸಂವಾದ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಹುಬ್ಬಳ್ಳಿಯ ಶ್ರೀಮತಿ ಸೀತಾಬಾಯಿ ಶ್ರೀಧರ ಜೋಶಿ (೨೦೨೫ ರಲ್ಲಿ ವಯಸ್ಸು ೯೯ ವರ್ಷಗಳು) ಇವರು ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮಕ್ಕೆ ಬಂದಿದ್ದರು. ಅವರ ಜೊತೆಗೆ ಅವರ ಮಗಳು ಶ್ರೀಮತಿ ಮೀರಾ ಕರಿ (೨೦೨೪ ರಲ್ಲಿ ಆಧ್ಯಾತ್ಮಿಕ ಮಟ್ಟ ಶೇ. ೬೪ ಮತ್ತು ವಯಸ್ಸು ೬೭ ವರ್ಷಗಳು), ಜೋಶಿ ಅಜ್ಜಿಯವರ ಚಿರಂಜೀವ ಮಗ ಮತ್ತು ಅವರ ಸೊಸೆ ಬಂದಿದ್ದರು. ಅವರ ಜೊತೆಗೆ ಜೋಶಿ ಅಜ್ಜಿಯವರ ಮೊಮ್ಮಗಳ ಗಂಡ ಶ್ರೀ. ವಿನಾಯಕ ಶಾನಭಾಗ (೨೦೨೪ ರಲ್ಲಿ ಆಧ್ಯಾತ್ಮಿಕ ಮಟ್ಟ ಶೇ. ೬೮ ಮತ್ತು ವಯಸ್ಸು ೪೨ ವರ್ಷಗಳು) ಮತ್ತು ಮೊಮ್ಮಗಳು ಸೌ. ವಿದ್ಯಾ ಶಾನಭಾಗ ಇವರೂ ಇದ್ದರು. ಇವರೆಲ್ಲರಿಗೂ ಪರಾತ್ಪರ ಗುರು ಡಾ. ಆಠವಲೆಯವರ ಅಮೂಲ್ಯ ಸತ್ಸಂಗ ಲಭಿಸಿತು. ಸತ್ಸಂಗದಲ್ಲಿ ನಡೆದ ಸಂಭಾಷಣೆಯನ್ನು ಮುಂದೆ ಕೊಡಲಾಗಿದೆ.

ಶ್ರೀಮತಿ ಸೀತಾಬಾಯಿ ಜೋಶಿ

ಇದರ ನಂತರ ಎರಡೇ ದಿನಗಳಲ್ಲಿ ರಾಮನಾಥಿ ಆಶ್ರಮದಲ್ಲಿ ಶ್ರೀಮತಿ ಸೀತಾಬಾಯಿ ಜೋಶಿ ಇವರ ಸನ್ಮಾನ ಮಾಡಲಾಯಿತು ಮತ್ತು ಅವರು ‘ಸನಾತನದ ೧೦೦ ನೇ ಸಂತ’ರೆಂದು ಸಂತಪದವಿಯಲ್ಲಿ ವಿರಾಜಮಾನರಾದ ಬಗ್ಗೆ ಘೋಷಿಸಲಾಯಿತು.

೨೬/೩೪ ನೆಯ ಸಂಚಿಕೆಯಲ್ಲಿ ಸಂವಾದಲ್ಲಿನ ಸ್ವಲ್ಪ ಭಾಗವನ್ನು ನೋಡಿದೆವು. ಇಂದು ಅದರ ಮುಂದಿನ ಸಂವಾದವನ್ನು ಇಲ್ಲಿ ನೀಡಲಾಗಿದೆ.

(ಭಾಗ ೩)

೬. ಕೆಲವು ದಿನಗಳ ಮಟ್ಟಿಗೆ ಆಶ್ರಮಕ್ಕೆ ಬಂದಾಗ ಸಾಧಕರಿಂದ ಕಲಿಯುವ ಪೂ. ಅಜ್ಜಿ ಮತ್ತು ‘ಸ್ವತಃದ ಉದ್ಧಾರವನ್ನು ಹೇಗೆ ಮಾಡಿಕೊಳ್ಳಬೇಕು ?’, ಎಂದು ಅಜ್ಜಿಯವರಿಂದ ಕಲಿಯಬೇಕು, ಎಂದು ಹೇಳುವ ಪರಾತ್ಪರ ಗುರು ಡಾಕ್ಟರ್‌ !

ಪೂ. ಅಜ್ಜಿ : ಇಂದು ನನಗೆ ಬಹಳ ಆನಂದವಾಗಿದೆ. ನೀವು ಎಲ್ಲರ ಉದ್ಧಾರಕರಾಗಿರುವಿರಿ. ನೀವು ಎಲ್ಲರಿಗೂ ಆಶೀರ್ವಾದ ನೀಡುತ್ತೀರಿ ಮತ್ತು ಎಲ್ಲರನ್ನೂ ಉದ್ಧರಿಸುತ್ತೀರಿ !

ಪರಾತ್ಪರ ಗುರು ಡಾ. ಆಠವಲೆ : ನಾನು ಎಲ್ಲರಿಗೂ ಏನು ಕಲಿಸಬಲ್ಲೆ ? ‘ಸ್ವತಃದ ಉದ್ಧಾರವನ್ನು ಹೇಗೆ ಮಾಡಿಕೊಳ್ಳಬೇಕು ?’, ಎಂದು ಎಲ್ಲರೂ ಅಜ್ಜಿಯವರಿಂದ ಕಲಿಯಬೇಕು !

ಪೂ. ಅಜ್ಜಿ : ಈಗ ನಾನು ಇಲ್ಲಿ ಆಶ್ರಮದಲ್ಲಿದ್ದೇನೆ, ಸಾಧಕರಿಂದ ಕಲಿಯುತ್ತಿದ್ದೇನೆ. ಸಾಧಕರು ಎಷ್ಟು ಸೇವೆಯನ್ನು ಮಾಡುತ್ತಾರೆ ! ನಾನು ಇಲ್ಲಿಗೆ ಬಂದದ್ದು ಸಾರ್ಥಕವಾಯಿತು. ನಿಮ್ಮ ಕೃಪೆಯಿಂದ ನನಗೆ ಎಲ್ಲವೂ ಸಿಕ್ಕಿತು. ನಿಮ್ಮ ಆಶೀರ್ವಾದವಿರಲಿ. ನಾನು ಈಗ ಮಾತನಾಡುವುದನ್ನು ಕಡಿಮೆ ಮಾಡಬೇಕು; ಆದರೆ ಅದು ನನ್ನ ಕೈಯಲ್ಲಿಲ್ಲ.

ಪರಾತ್ಪರ ಗುರು ಡಾ. ಆಠವಲೆ : ಈಗ ಸ್ವತಃಕ್ಕಾಗಿ ಮಾತನಾಡುವುದು ಬೇಡ, ಆದರೆ ಬೇರೆಯವರಿಗೆ ಕಲಿಸಲು ಮಾತನಾಡಬೇಕು.

ಶ್ರೀಮತಿ ಮೀರಾ ಕರಿ

೭. ಪರಾತ್ಪರ ಗುರು ಡಾಕ್ಟರರು ‘ಆಶ್ರಮದಲ್ಲಿದ್ದು ನೀವು ಸಾಧಕರಿಗೆ ಭಕ್ತಿಯೋಗವನ್ನು ಕಲಿಸಿ’, ಎಂದು ಪೂ. ಅಜ್ಜಿಯವರಿಗೆ ಹೇಳುವುದು

ಶ್ರೀಮತಿ ಮೀರಾ ಕರಿ (ಪೂ. ಅಜ್ಜಿಯವರ ಮಗಳು) : ತಾಯಿಯವರ ಆರೋಗ್ಯ ಸೂಕ್ಷ್ಮ ಇದೆ. ಅವರಲ್ಲಿ ಶಕ್ತಿಯೇ ಇಲ್ಲ. ಆದುದರಿಂದ ಅವರಿಗೆ ಹೆಚ್ಚು ಸಮಯ ಕುಳಿತುಕೊಳ್ಳಲು ಆಗುವುದಿಲ್ಲ. ಆಶ್ರಮದ ಚೈತನ್ಯದ ಬಲದಿಂದಾಗಿ ಅವರ ಎಲ್ಲ ಕೃತಿಗಳು ನಡೆದಿವೆ. ಭಗವಂತನ ಚೈತನ್ಯದಿಂದಾಗಿಯೇ ಎಲ್ಲವೂ ನಡೆದಿದೆ.

ಪೂ. ಅಜ್ಜಿ : ಈಗ ನನಗೆ ಯಾವುದೇ ಅಪೇಕ್ಷೆ ಉಳಿದಿಲ್ಲ. ಈಗ ನನ್ನ ಕೈಯಲ್ಲಿ ಏನೂ ಇಲ್ಲ.

ಪರಾತ್ಪರ ಗುರು ಡಾ. ಆಠವಲೆ : ನನಗೆ ನಿಮ್ಮಿಂದ ಮಾತ್ರ ಒಂದು ಅಪೇಕ್ಷೆ ಇದೆ. ಇಲ್ಲಿಯೇ (ಆಶ್ರಮದಲ್ಲಿ) ಇದ್ದು ನೀವು ಸಾಧಕರಿಗೆ ಭಕ್ತಿಯೋಗವನ್ನು ಕಲಿಸಬೇಕು !

ಪೂ. ಅಜ್ಜಿ : ಸರಿ. ನನಗೆ ಬಹಳ ಅನಿಸುತ್ತದೆ. ಯಾರಾದರೂ ಭೇಟಿಯಾದರೆ, ನಾನು ಅವರಿಗೆ ‘ಹೀಗೆ ಮಾಡಿ, ಭಜನೆ ಮಾಡಿ, ನೀವು ನಾಮಜಪವನ್ನು ಮಾಡಿ’, ಎಂದು ಹೇಳುತ್ತೇನೆ. ನನ್ನ ತಾಯಿಯವರು ಹೀಗೆ ಇದ್ದರು. ನಂತರ ನಾನಾದೆನು ಮತ್ತು ನಂತರ ಈ ನನ್ನ ಮಗಳು ಮತ್ತು ಮೊಮ್ಮಗಳೂ ಹೀಗೆ (ಭಕ್ತಿಮಾರ್ಗದವರು) ಆಗಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆ : ಅಂದರೆ ನಿಮಗೆ ಇದು ಅನುವಂಶಿಕವಾಗಿ ಬಂದಿದೆ. ಬಹಳ ಚೆನ್ನಾಗಿದೆ !

ಸೌ. ವಿದ್ಯಾ ಶಾನಭಾಗ

೮. ನಾಮಸ್ಮರಣೆ ಮತ್ತು ಭಜನೆಯನ್ನು ಮಾಡಿದರೆ ಭಗವಂತನು ಎಲ್ಲವನ್ನೂ ಕೊಡುತ್ತಾನೆ ! – ಪೂ. ಸೀತಾಬಾಯಿ ಜೋಶಿ

ಪೂ. ಅಜ್ಜಿ : ನಿಮ್ಮನ್ನು ಭೇಟಿಯಾಗಿ ನನ್ನ ಎಲ್ಲ ತೊಂದರೆಗಳು ದೂರವಾದವು, ಎಂಬುದು ಮಾತ್ರ ನಿಶ್ಚಿತವಿದೆ. ಉಳಿದವರೆಲ್ಲರಿಗೂ ಇದೇ ರೀತಿಯ ಆನಂದ ಸಿಗಲಿ. ನಾಮಸ್ಮರಣೆ ಮತ್ತು ಭಜನೆಯನ್ನು ಮಾಡಿದರೆ ಭಗವಂತನು ಎಲ್ಲವನ್ನೂ ಕೊಟ್ಟು ಬಿಡುತ್ತಾನೆ. ಅವನು ಎಲ್ಲರಿಗೂ ಆನಂದವನ್ನು ಹಂಚುತ್ತಾನೆ.

ಪರಾತ್ಪರ ಗುರು ಡಾ. ಆಠವಲೆ : ಹೌದು. ಎಲ್ಲರಿಗೂ ಇಂತಹ ಆನಂದ ಸಿಗಲಿ. ಮತ್ತೇ ಬನ್ನಿ (ಪುನರಾಗಮನಾಯಚ) !

ಪೂ. ಅಜ್ಜಿ : ನೀವು ಎಷ್ಟು ಚೆನ್ನಾಗಿ ಮಾತನಾಡುತ್ತೀರಿ ! ನಿಮಗೆ ದೀರ್ಘಾಯುಷ್ಯವು ಲಭಿಸಲಿ.

ಪರಾತ್ಪರ ಗುರು ಡಾ. ಆಠವಲೆ : ನನಗೂ ಆನಂದ ಸಿಕ್ಕಿತು. ನೀವು ನನಗೆ ಒಳ್ಳೆಯ ಆಶೀರ್ವಾದ ನೀಡಿದಿರಿ.

ಪೂ. ಅಜ್ಜಿ : ನನ್ನೊಳಗಿರುವ ದೇವರು ಮಾತನಾಡುತ್ತಾನೆ. ನೀವೇ ಇವೆಲ್ಲ ಮಾಡುತ್ತಿರುವಿರಿ. ಭಕ್ತರಿಗೆ ದಾರಿಯನ್ನು ತೋರಿಸುತ್ತಿರಲ್ಲ !

೯. ‘ಭಗವಂತನ ಜೊತೆಗೆ ನಡೆದರೆ ‘ಪುಣ್ಯ ಸಿಗುತ್ತದೆ’, ಎಂದು ಹೇಳಿ ಪರಾತ್ಪರ ಗುರು ಡಾಕ್ಟರರ ಜೊತೆಗೆ ಕೆಲವು ಹೆಜ್ಜೆಗಳಷ್ಟು ನಡೆಯಲು ಸಿದ್ಧತೆ ತೋರಿಸುವ ವಯೋವೃದ್ಧೆ ಪೂ. ಅಜ್ಜಿ !

ಪರಾತ್ಪರ ಗುರು ಡಾ. ಆಠವಲೆ : ಪೂ. ಅಜ್ಜಿ, ನೀವು ಕೇವಲ ಕೋಣೆಯಲ್ಲಿದ್ದರೂ ನಿಮ್ಮಿಂದ ಬಹಳ ಕಲಿಯಲು ಸಿಗುತ್ತದೆ. ನಿಮ್ಮಿಂದ ಚೈತನ್ಯ ಸಿಗುತ್ತದೆ. ಈಗ ಶಬ್ದಗಳಲ್ಲಿನ ಬೋಧನೆ ಬೇಡ. ನೀವು ಕೇವಲ ಕೋಣೆಗೆ ಹೋದರೂ, ಕುಳಿತರೂ ಅಥವಾ ಧ್ಯಾನಕ್ಕೆ ಕುಳಿತರೂ ಅಲ್ಲಿಗೆ ಬರುವ ಸಾಧಕರಿಗೆ ಚೈತನ್ಯ ಸಿಗುತ್ತದೆ. ಇಂದು ನನಗೆ ಇಲ್ಲಿಂದ ಹೋಗಬೇಕು ಎಂದೆನಿಸುವುದೇ ಇಲ್ಲ. ನಾನು ಜೀವನದಲ್ಲಿ ಇಷ್ಟು ಆನಂದವನ್ನು ಎಂದಿಗೂ ಅನುಭವಿಸಿರಲಿಲ್ಲ. ನನಗೆ ‘ನಿಮ್ಮನ್ನು ನೋಡುತ್ತಾ ನಡೆಯಬೇಕು’, ಎಂದೆನಿಸುತ್ತಿದೆ.

ಪೂ. ಅಜ್ಜಿ : ನಾನು ಸ್ವಲ್ಪ ದೂರದ ವರೆಗೆ ಗುರುದೇವರೊಂದಿಗೆ ನಡೆಯುತ್ತೇನೆ. ಭಗವಂತನ ಜೊತೆಗೆ ನಡೆದರೆ ‘ಪುಣ್ಯ ಸಿಗುತ್ತದೆ’, ಎಂದು ಹೇಳುತ್ತಾರೆ.

೧೦. ‘ವೃಂದಾವನಕ್ಕೆ ಹೋಗುತ್ತೇನೆ’, ಎಂದು ಹೇಳಿ ರಾಮನಾಥಿ ಆಶ್ರಮಕ್ಕೆ ಬಂದ ಮತ್ತು ಪರಾತ್ಪರ ಗುರು ಡಾಕ್ಟರರು ಬಳಸಿದ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಂಡಾಗ ‘ನನ್ನ ಎಲ್ಲ ಕಷ್ಟಗಳು ದೂರವಾದವು’, ಎಂದು ಹೇಳುವ ಪೂ. ಅಜ್ಜಿಯವರ ಗುರುದೇವರ ಮೇಲಿನ ಭಕ್ತಿ !

ಪೂ. ಅಜ್ಜಿ : ಇಂದು ಇಲ್ಲಿಗೆ ಬರುವ ಯೋಗವಿತ್ತು. ಏನಾದರೂ ಋಣಾನುಬಂಧವಿತ್ತು. ನೀವು ನನಗೆ ಭೇಟಿಯಾದಿರಿ. ‘ನಾನು ಬಹಳ ಪಾಪ ಮಾಡಿದ್ದೇನೆ’, ಎಂದು ನಮ್ಮ ಗುರುಗಳು ಹೇಳುತ್ತಿದ್ದರು. ನಾನು ಬಹಳ ಕಷ್ಟವನ್ನು ಅನುಭವಿಸಿದ್ದೇನೆ. ನನ್ನ ಸೊಸೆ ಅನ್ನಪೂರ್ಣಾದೇವಿಯಂತಿದ್ದಾಳೆ. ನನ್ನ ಮಗ ಶ್ರವಣಕುಮಾರ ನಂತೆ ನನ್ನ ಸೇವೆ ಮಾಡುತ್ತಾನೆ. ಕಲಿಯುಗದಲ್ಲಿ ಇಷ್ಟು ಯಾರೂ ಮಾಡುವುದಿಲ್ಲ. ಪ್ರಸ್ತುತ, ಮಕ್ಕಳು ತಮ್ಮ ತಾಯಿ-ತಂದೆಯರನ್ನೂ ನೋಡಿಕೊಳ್ಳುವುದಿಲ್ಲ. ನಾನು ವೃಂದಾವನಕ್ಕೆ ಹೋಗುತ್ತಿದ್ದೇನೆ’, ಎಂದು ಹೇಳಿ ಇಲ್ಲಿಗೆ ಬಂದಿದ್ದೇನೆ. ಈಗ ನನಗೆ ಎಲ್ಲವೂ ಸಿಕ್ಕಿತು. ನಮ್ಮಿಂದ ಎಷ್ಟೇ ತಪ್ಪುಗಳಾದರೂ ನೀವು ಅವುಗಳನ್ನು ಸಹಿಸಿಕೊಳ್ಳುತ್ತೀರಿ ಮತ್ತು ಸಮಾಧಾನದಿಂದ ಮಾತನಾಡುತ್ತೀರಿ.

ಸೌ. ವಿದ್ಯಾ ಶಾನಭಾಗ (ಪೂ ಅಜ್ಜಿಯವರ ಮೊಮ್ಮಗಳು, ಮಗಳ ಮಗಳು) : ಪೂ. ಅಜ್ಜಿಯವರು ದೈನಿಕ ‘ಸನಾತನ ಪ್ರಭಾತದಲ್ಲಿ ನಿಮ್ಮ ಛಾಯಾಚಿತ್ರವನ್ನು ನೋಡಿದ್ದರು. ಈಗ ಅವರಿಗೆ ನಿಮ್ಮ ನಿಜವಾದ ದರ್ಶನವಾಯಿತು. ಸೂಕ್ಷ್ಮ ಜಗತ್ತಿನ ಬಗೆಗಿನ ಪ್ರದರ್ಶನವನ್ನು ನೋಡುವಾಗ ಅಲ್ಲಿರುವ ಕನ್ನಡಿಯನ್ನು ನೋಡಿ ಪೂ. ಅಜ್ಜಿಯವರ ಭಾವಜಾಗೃತವಾಗಿತ್ತು.

ಪೂ. ಅಜ್ಜಿ : ಆ ಪ್ರದರ್ಶನದಲ್ಲಿ ನೀವು ಹಿಂದೆ ಬಳಸುತ್ತಿದ್ದ ಕನ್ನಡಿಯನ್ನು ಇಟ್ಟಿದ್ದಾರೆ. ನೀವು ನೋಡಿದ ಕನ್ನಡಿಯಲ್ಲಿ ನಾನು ನನ್ನನ್ನು ನೋಡಿಕೊಂಡೆನು. ಆಗ ‘ನನ್ನ ಎಲ್ಲ ಕಷ್ಟಗಳು ದೂರವಾದವು’, ಎಂದು ನನಗೆ ಅನಿಸಿತು. (ಆ ಸಮಯದಲ್ಲಿ ಪೂ ಅಜ್ಜಿಯವರ ಕಣ್ಣುಗಳಲ್ಲಿ ಭಾವಾಶ್ರುಗಳು ಬಂದವು.) ನಾನು ಆಶ್ರಮದಲ್ಲಿನ ಎಲ್ಲ ಕಾರ್ಯಗಳನ್ನು ನೋಡಿದೆನು. ನೀವು ಬಹಳ ದೊಡ್ಡ ಮತ್ತು ಮಹತ್ವದ ಕಾರ್ಯಗಳನ್ನು ಮಾಡಿದ್ದೀರಿ. ನನಗೆ ಆ ಬಗ್ಗೆ ಬಹಳ ಮೆಚ್ಚುಗೆ ಅನಿಸುತ್ತದೆ. ನಿಮ್ಮ ಪರಿವಾರ ಸಾಮಾನ್ಯವಿಲ್ಲ.    (ಮುಕ್ತಾಯ)