‘ಜ್ಞಾನಗುರು’, ‘ಗ್ರಂಥಗುರು’ ಮತ್ತು ‘ಮೋಕ್ಷಗುರು’ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ‘ಮನುಕುಲದ ಸರ್ವತೋಮುಖ ಉದ್ಧಾರದ’ ದೈವೀ ಕಾರ್ಯದ ಆಧ್ಯಾತ್ಮಿಕ ವಿವೇಚನೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅತ್ಯಂತ ಶ್ರೇಷ್ಠವಾಗಿರುವ ಗುರುಪದವಿಯಲ್ಲಿ ಪದವಿಯಲ್ಲಿದ್ದು ಧರ್ಮನಿಷ್ಠರಿಗೆ ಧರ್ಮಗುರು, ಸಾಧಕರಿಗೆ ಮಾರ್ಗದರ್ಶಕ ಗುರು, ಸಾಧಕರಿಗೆ ಸದ್ಗುರು, ಶಿಷ್ಯರಿಗೆ ಆತ್ಮಗುರು ಮತ್ತು ಇಡೀ ವಿಶ್ವಕ್ಕೆ ವಿಶ್ವಗುರು ಎಂದು ನಿರಂತರವಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಅವರು ಇಡೀ ವಿಶ್ವಕ್ಕೆ ಆತ್ಮಜ್ಞಾನ ಮತ್ತು ಬ್ರಹ್ಮಜ್ಞಾನವನ್ನು ನೀಡುವ ಜ್ಞಾನಗುರು ಮತ್ತು ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುವ ಜೀವಗಳಿಗೆ ಜೀವನ್ಮುಕ್ತಿಯನ್ನು ಮತ್ತು ಮೋಕ್ಷವನ್ನು ಪ್ರದಾನಿಸುವ ‘ಮೋಕ್ಷಗುರು’ಗಳಾಗಿದ್ದಾರೆ. ಸನಾತನ ಸಂಸ್ಥೆಯ ಗ್ರಂಥಗಳಿಗೆ ಸಂಬಂಧಿಸಿದಂತೆ ಕಾರ್ಯ ಮಾಡುತ್ತಿರುವಾಗ ಅವರು ‘ಜ್ಞಾನಗುರು’ವಾಗಿ ಈ ಅವತಾರಿ ಕಾರ್ಯವನ್ನು ಪೂರ್ಣತ್ವಕ್ಕೆ ಕೊಂಡೊಯ್ಯುತ್ತಾರೆ. ಅವರ ‘ಜ್ಞಾನಗುರು’ ಈ ರೂಪದ ದೈವೀ ಕಾರ್ಯದ ಸವಿಸ್ತಾರ ವಿವೇಚನೆಯನ್ನು ಈ ಲೇಖನದಲ್ಲಿ ಮಾಡಲಾಗಿದೆ. ಕಳೆದ ಸಂಚಿಕೆಯಲ್ಲಿ ಇದರ ಕೆಲವು ಭಾಗ ನೋಡಿದೆವು ಈ ವಾರದ ಅದರ ಮುಂದಿನ ಭಾಗ ನೋಡೋಣ.

ಸುಶ್ರೀ (ಕು.) ಮಧುರಾ ಭೋಸಲೆ

೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ಕಾರ್ಯನಿರತವಾಗಿರುವ ವಿವಿಧ ಪ್ರಕಾರದ ದೈವೀ ಬುದ್ಧಿಗಳಿಂದಾಗಿ ಸನಾತನದ ಗ್ರಂಥಗಳಿಗೆ ಸಂಬಂಧಿಸಿದಂತೆ ನಡೆಯವ ಕಾರ್ಯ

‘ಸಾಧಕರಿಗೆ ಸೂಕ್ಷ್ಮದಿಂದ ದೊರಕಿದ ಜ್ಞಾನವು ಯೋಗ್ಯವಾಗಿದೆಯೋ ಅಥವಾ ಅಯೋಗ್ಯವೋ ? ಹಾಗೆಯೇ ಈ ಜ್ಞಾನವನ್ನು ಯಾವ ಗ್ರಂಥದಲ್ಲಿ ತೆಗೆದುಕೊಳ್ಳಬೇಕು ? ಈ ಪ್ರಕ್ರಿಯೆಯು ಪ್ರತ್ಯಕ್ಷ ಸೂಕ್ಷ್ಮ ಜ್ಞಾನವನ್ನು ಪಡೆಯುವುದಕ್ಕಿಂತ ಹೆಚ್ಚು ಶ್ರೇಷ್ಠ ಮತ್ತು ಮಹತ್ವದ್ದಾಗಿದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ಕಾರ್ಯನಿರತವಾಗಿರುವ ವಿವಿಧ ಪ್ರಕಾರದ ದೈವೀ ಬುದ್ಧಿಗಳಿಂದಾಗಿ ಸನಾತನದ ಗ್ರಂಥಗಳಿಗೆ ಸಂಬಂಧಿಸಿದಂತೆ ಮುಂದಿನ ಕಾರ್ಯವು ಸುಲಭವಾಗಿ ನಡೆಯಬಲ್ಲದು.

ಭಗವಂತನು ಶಬ್ದಗಳ ಮಟ್ಟದ ಕಾರ್ಯವನ್ನು ಸೂಕ್ಷ್ಮ-ಜ್ಞಾನಪ್ರಾಪ್ತಿಮಾಡಿಕೊಳ್ಳುವ ಸಾಧಕರಿಗೆ ಸೂಕ್ಷ್ಮದಲ್ಲಿನ ಜ್ಞಾನವನ್ನು ನೀಡಿ ಮತ್ತು ಸಮಷ್ಪಿ ಸ್ತರದ ಜ್ಞಾನದಿಂದ ಚೈತನ್ಯವನ್ನು ಪ್ರಕ್ಷೇಪಿಸಿ ಸಾಧನೆಯ ಬೀಜವನ್ನು ಬಿತ್ತುವ ಕಾರ್ಯವನ್ನು ಮಾಡುತ್ತಾನೆ. ಅದರಂತೆ ಶಬ್ದಜನ್ಯ ಕಾರ್ಯವೆಂದರೆ ಜ್ಞಾನದ ಸತ್ಯತೆ ಪರಿಶೀಲಿಸಿ ಆ ಜ್ಞಾನಕ್ಕನುಸಾರ ಜಿಜ್ಞಾಸು ಮತ್ತು ಮುಮುಕ್ಷುಗಳಿಗೆ ಅನುಭೂತಿಯನ್ನು ನೀಡುವ ಕಾರ್ಯ ! ಇದನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಜ್ಞಾನಗುರುಗಳ ರೂಪದಿಂದ ಮಾಡುತ್ತಿದ್ದಾರೆ. ಅವರು ಸಂಪೂರ್ಣವಾಗಿ ಶಿವಾತ್ಮಾದೆಶೆಗೆ ಹೋದಾಗ ಅವರ ಕಾರ್ಯವು ಶಬ್ದಾತೀತವಾಗಲಿದೆ. ಹಾಗಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಎಲ್ಲಿಯ ವರೆಗೆ ಶಿವಾತ್ಮಾ-ಶಿವದೆಶೆಯಲ್ಲಿರುವರೋ, ಅಲ್ಲಿಯವರೆಗೆ ದೇವರು ಅವರಿಂದ ಹೆಚ್ಚೆಚ್ಚು ಗ್ರಂಥಗಳ ಸಂಕಲನ ಮಾಡಿಸಿ ಮನುಕುಲಕ್ಕೆ ತಲುಪಿಸುವ ದೈವೀಜ್ಞಾನಕಾರ್ಯ ಮಾಡುತ್ತಿದ್ದಾನೆ.

೪. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಗ್ರಂಥದ ವಿಷಯದಲ್ಲಿ ಜ್ಞಾನಗುರು, ಗ್ರಂಥಗುರು ಮತ್ತು ಮೋಕ್ಷಗುರು ಈ ಸ್ವರೂಪದ ಅವತಾರಿ ಕಾರ್ಯ

ಮೇಲಿನ ಎಲ್ಲ ಕಾರಣಗಳಿಂದಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಂದ ಗ್ರಂಥಬರವಣಿಗೆಯ ಕಾರ್ಯವು ಹೆಚ್ಚು ಪ್ರಮಾಣದಲ್ಲಿ ಆಗಬೇಕೆಂದು, ದೇವರು ಅವರಿಗೆ ಸೂಕ್ಷ್ಮದಿಂದ ಜ್ಞಾನವನ್ನು ನೀಡದೇ ಅವನು ಸಾಧಕರ ಮಾಧ್ಯಮದಿಂದ ನೀಡುತ್ತಿದ್ದಾನೆ.

೫. ಕೃತಜ್ಞತೆ : ಇಂತಹ ಜ್ಞಾನಾವತಾರರೂಪಿ ‘ಜ್ಞಾನಗುರು’, ‘ಗ್ರಂಥಗುರು’ ಮತ್ತು ‘ಮೋಕ್ಷಗುರು’ ಇವರಿಗೆ ಸಂಬಂಧಿಸಿದಂತೆ ವೈಶ್ವಿಕ ಕಾರ್ಯದ ಜ್ಞಾನ ಸಿಕ್ಕಿತು’, ಇದಕ್ಕಾಗಿ ಅವರ ಚರಣಗಳಲ್ಲಿ ಕೃತಜ್ಞತೆಯ ಕೋಟಿಶಃ ಜ್ಞಾನಕಮಲಗಳನ್ನು ಅರ್ಪಿಸುತ್ತೇನೆ.’

ಸುಶ್ರೀ. (ಕು.) ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೫), ಸನಾತನ ಆಶ್ರಮ, ರಾಮನಾಥಿ, ಗೋವಾ. (೨೨.೨.೨೦೨೫)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.