
ರಾಮನಾಥಿಯ (ಗೋವಾ) ಸನಾತನ ಆಶ್ರಮದಲ್ಲಿ ಸಾಧಕರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಅಮೂಲ್ಯ ಸತ್ಸಂಗ ಲಭಿಸಿತು. ಅದರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನದ ಅಂಶಗಳನ್ನು ಇಲ್ಲಿ ಕೊಡಲಾಗಿದೆ.
(ಭಾಗ ೧)
೧. ‘ಅಂತರ್ಮನಸ್ಸಿನಲ್ಲಿ ನಾಮಜಪವಾಗುವುದು’, ಇದು ಸಮಾಧಿ ಸ್ಥಿತಿಯ ಹಾಗೆ ಇರುವುದರಿಂದ ಇದರಲ್ಲಿ ನಾಮಜಪ ಮಾಡಲು ಪ್ರಯತ್ನಿಸುವ ಅವಶ್ಯಕತೆಯಿಲ್ಲ !
ಓರ್ವ ಸಾಧಕ : ಪರಮ ಪೂಜ್ಯರೆ, ನಾನು ಪ್ರತಿದಿನ ಮುಂಜಾನೆ ೪ ಗಂಟೆಗೆ ಎದ್ದು ನಾಮಜಪ ಮಾಡುತ್ತೇನೆ. ನಾಮಜಪ ಆರಂಭಿಸಿದಾಗ ನನಗೆ ಅರ್ಧ ಗಂಟೆ ಆನಂದವೆನಿಸುತ್ತದೆ. ನಾಮಜಪ ಮಾಡುವಾಗ ನನ್ನ ಮನಸ್ಸಿನಲ್ಲಿ ಯಾವುದೇ ವಿಚಾರ ಇರುವುದಿಲ್ಲ, ಆಗ ನನಗೆ ಶರೀರದ ಅರಿವು ಇರುವುದಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಚೆನ್ನಾಗಿದೆ ! ‘ಅಂತರ್ಮಸ್ಸಿನಲ್ಲಿ ನಾಮಜಪವಾಗುವುದು’, ಇದು ಮುಂದಿನ ಅವಸ್ಥೆಯಾಗಿದೆ. ಇದು ಒಂದು ರೀತಿಯಲ್ಲಿ ಸಮಾಧಿ ಸ್ಥಿತಿಗೆ ಹೋಗುವಂತಿದೆ. ನಿಮ್ಮ ಮನಸ್ಸು ನಿರ್ವಿಚಾರವಾಯಿತು.
ಓರ್ವ ಸಾಧಕ : ಆಗ ಪ್ರಯತ್ನಪೂರ್ವಕ ನಾಮಜಪ ಮಾಡುವ ಅವಶ್ಯಕತೆ ಇದೆಯೆ ?
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅಗತ್ಯವಿಲ್ಲ. ನಮಗೆ ಆ ಸ್ಥಿತಿಗೆ ಹೋಗಲು ಸಾಧ್ಯವಾಗುವುದಿಲ್ಲವೆಂದು ನಾವು ಪ್ರಯತ್ನಪೂರ್ವಕ ನಾಮಜಪ ಮಾಡುತ್ತೇವೆ. ಅಲ್ಲಿಯವರೆಗೆ ಹೋಗಲು ಸಾಧ್ಯವಾಯಿತೆಂದರೆ ಇನ್ನೇನುಬೇಕು ?
ಓರ್ವ ಸಾಧಕ : ಅದರಲ್ಲಿ ಆನಂದ ಸಿಗುತ್ತದೆ ಹಾಗೂ ಪ್ರಯತ್ನಪೂರ್ವಕ ಧ್ಯಾನಾವಸ್ಥೆಗೆ ಹೋದರೆ ಧ್ಯಾನವೂ ತಗಲುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನಿಮಗೆ ಅರ್ಧ ಗಂಟೆ ಧ್ಯಾನ ಸ್ಥಿತಿ ತಗಲುತ್ತದೆ. ಸಾಧನೆಯ ಧ್ಯೇಯವೇನಿದೆ ? ಯಾವುದೇ ಪ್ರಯತ್ನವನ್ನು ಮಾಡದೆ ಆ ಸ್ಥಿತಿ (ಧ್ಯಾನದ ಸ್ಥಿತಿ) ಅನುಭವಿಸಲು ಸಾಧ್ಯವಾಗಬೇಕು. ಧ್ಯಾನ ಸ್ಥಿತಿಯಲ್ಲಿರಿ ಅಥವಾ ಸಮಾಧಿ ಸ್ಥಿತಿಯಲ್ಲಿರಿ. ಸಮಾಧಿ ಸ್ಥಿತಿಗೆ ಹೋದಾಗ ಮನಸ್ಸಿನಲ್ಲಿ ಯಾವುದೇ ವಿಚಾರವಿರುವುದಿಲ್ಲ. ನಿರ್ವಿಚಾರದ ಸ್ಥಿತಿಯಿರುತ್ತದೆ. ನಮಗೆ ಅಲ್ಲಿಯ ವರೆಗೆ ಹೋಗಲು ಆಗುವುದಿಲ್ಲ, ಆದ್ದರಿಂದ ನಾವು ಬಾಹ್ಯಮನಸ್ಸಿನಿಂದ ಪ್ರಯತ್ನ ಮಾಡುತ್ತೇವೆ ಹಾಗೂ ಬಾಹ್ಯ ಮನಸ್ಸಿನಿಂದ ಪ್ರಯತ್ನ ಮಾಡುತ್ತಾ ಆ ಸ್ಥಿತಿಗೆ ಹೋಗುತ್ತೇವೆ. ಹಾಗಾದರೆ ಎಲ್ಲವೂ ಪೂರ್ಣವಾದ ಹಾಗಾಯಿತು.
೨. ಬೌದ್ಧಿಕ ಕೃತಿ ಮಾಡುವಾಗ ನಾಮಜಪವಾಗದಿರುವುದರಿಂದ ಶಾರೀರಿಕ ಕೃತಿ ಮಾಡುವಾಗ ನಾಮಜಪ ಮಾಡಬೇಕು !
ಓರ್ವ ಸಾಧಕ : ಯಾವುದೇ ಕೃತಿ ಮಾಡುವಾಗ ನಾಮಜಪ ತನ್ನಿಂತಾನೇ ಆರಂಭವಾಗುತ್ತದೆ; ಆದರೆ ಬುದ್ಧಿಯಿಂದ ಯಾವುದೇ ಕೃತಿ ಮಾಡುವಾಗ ನಾಮಜಪ ಆಗುವುದಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಬುದ್ಧಿಗೆ ಒಂದೇ ಸಮಯದಲ್ಲಿ ಎರಡು ಕೆಲಸ ಮಾಡಲು ಹೇಗೆ ಸಾಧ್ಯ ? ಏನಾದರೂ ಬರೆಯಲಿಕ್ಕಿದ್ದರೆ, ಅದೇ ಸಮಯದಲ್ಲಿ ನಾಮಜಪವನ್ನೂ ಮಾಡಲಿಕ್ಕಿದ್ದರೆ ಅದು ಎರಡೂ ಒಂದೇ ಸಮಯದಲ್ಲಿ ಮಾಡಲು ಸಾಧ್ಯವಿಲ್ಲ. ಸ್ಥೂಲದೇಹದಿಂದ ಶಾರೀರಿಕ ಕೃತಿ ಮಾಡುವಾಗ ಉದಾ. ಸ್ನಾನ ಮಾಡುವಾಗ, ಬಟ್ಟೆ ಒಗೆಯುವಾಗ, ಇಸ್ತ್ರಿ ಮಾಡುವಾಗ ಬುದ್ಧಿಯ ಕೆಲಸ ಇರುವುದಿಲ್ಲ. ಈ ಕೃತಿ ಯಾಂತ್ರಿಕವಾಗಿ ತನ್ನಷ್ಟಕ್ಕೆ ಆಗುತ್ತಿರುತ್ತದೆ. ಆ ಕೃತಿ ಮಾಡುವಾಗ ನಾಮಜಪ ಮಾಡಬೇಕು. ಮನೆಯ ಹೊರಗೆ ಹೋದಾಗ ಮತ್ತು ಪ್ರವಾಸದಲ್ಲಿರುವಾಗ ಜಪ ಮಾಡಬೇಕು.
೩. ಸಾಧನೆಯಲ್ಲಿ ತಳಮಳಕ್ಕೆ ಶೇ. ೮೦ ರಷ್ಟು ಮಹತ್ವವಿದೆ !
ಓರ್ವ ಸಾಧಕಿ : ಸಾಧಕರಿಗೆ ಸಾಧನೆಗಾಗಿ ರಾಮನಾಥಿ (ಗೋವಾ) ಆಶ್ರಮಕ್ಕೆ ಬರುವಾಗ ವಿರೋಧವಾಗಿತ್ತು. ಆದರೂ ಅವರು ಆಶ್ರಮಕ್ಕೆ ಬಂದಿದ್ದಾರೆ. ಅವರಿಗೆ ವಿರೋಧದ ಬಗ್ಗೆ ಏನೂ ಅನಿಸಲಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಇದಕ್ಕೆ ‘ತಳಮಳ’ವೆನ್ನುತ್ತಾರೆ. ಸಾಧನೆಯಲ್ಲಿ ತಳಮಳಕ್ಕೆ ಶೇ. ೮೦ ರಷ್ಟು ಮಹತ್ವವಿದೆ. ತಳಮಳವಿದ್ದರೆ ಸಾಧನೆಯಲ್ಲಿ ಪ್ರಗತಿಯಾಗುತ್ತದೆ.
ಓರ್ವ ಸಾಧಕಿ : ಎಲ್ಲ ಸಾಧಕರು ಹೇಳುತ್ತಾರೆ, ”ಮಧ್ಯಾಹ್ನ ವಿಶ್ರಾಂತಿ ಪಡೆಯದೆ ನಾವು ಸತ್ಸಂಗ ತೆಗೆದುಕೊಂಡು ನಮ್ಮ ಪ್ರಯತ್ನವನ್ನು ಹೆಚ್ಚಿಸೋಣ.” ವಿಶ್ರಾಂತಿ ಪಡೆಯುವಾಗ ಕೂಡ ಅವರು ‘ಪರಸ್ಪರ ಸಾಧನೆಯ ವಿಷಯದಲ್ಲಿ ಮಾತನಾಡುವುದು, ಮಾನಸಪೂಜೆ ಹಾಗೂ ನಾಮಜಪ ಮಾಡುವುದು’, ಹೀಗೆ ಪ್ರಯತ್ನ ಮಾಡುತ್ತಾರೆ. ಎಲ್ಲ ಸಾಧಕರು ಒಟ್ಟಾಗಿ ಪರಸ್ಪರರಿಂದ ಕಲಿಯುವ ಪ್ರಯತ್ನ ಮಾಡುತ್ತಾರೆ.
೪. ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ !
೪ ಅ. ಸಾಧಕಿಯು ಕೇವಲ ಗ್ರಂಥ ಓದುವುದಲ್ಲ; ಓದಿದ್ದನ್ನು ಕೃತಿ ಮಾಡಲು ಪ್ರಯತ್ನಿಸುವುದು
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ೩-೪ ವರ್ಷಗಳ ಹಿಂದೆ ರಾಮನಾಥಿ ಆಶ್ರಮದಲ್ಲಿ ಸೌ. ಅಂಜಲಿ ಗಾಡಗೀಳರು (ಈಗಿನ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ) ಸತ್ಸಂಗ ತೆಗೆದುಕೊಳ್ಳುತ್ತಿದ್ದರು. ಒಮ್ಮೆ ಅವರು ಸತ್ಸಂಗದಲ್ಲಿ ಹೇಳಿದರು, ”ಮುಂದಿನ ವಾರ ‘ಭಾವಜಾಗೃತಿಯ ವಿಷಯ ತೆಗೆದುಕೊಳ್ಳೋಣ. ನೀವೆಲ್ಲರೂ ‘ಭಾವಜಾಗೃತಿಗಾಗಿ ಸಾಧನೆ’, ಈ ಗ್ರಂಥವನ್ನು ಓದಿಕೊಂಡು ಬನ್ನಿರಿ.” ಮುಂದಿನ ಸತ್ಸಂಗದಲ್ಲಿ ಅವರು ಕೇಳಿದರು, ”ಎಲ್ಲರೂ ಗ್ರಂಥ ಓದಿದ್ದೀರಾ ?” ಎಲ್ಲರೂ ಗ್ರಂಥ ಓದಿದ್ದರು; ಆದ್ದರಿಂದ ಎಲ್ಲರೂ ಕೈ ಎತ್ತಿದರು. ಕೇವಲ ಓರ್ವಳು ಕೈ ಎತ್ತಲಿಲ್ಲ. ಆಗ ಸೌ. ಗಾಡಗೀಳರು ಅವಳಿಗೆ ಕೇಳಿದರು, ”ನಿನ್ನ ಆರೋಗ್ಯ ಸರಿಯಿಲ್ಲವೇ ? ಹೆಚ್ಚು ಸೇವೆ ಇತ್ತೇ ?” ಆದರೂ ಅವಳು ಮಾತನಾಡುತ್ತಿರಲಿಲ್ಲ. ಪುನಃ ಅವಳಿಗೆ ಕೇಳಿದರು, ”ಸ್ವಲ್ಪವಾದರೂ ಓದಿರಬಹುದಲ್ಲ !” ಆಗ ಅವಳು ಹೇಳಿದಳು, ”ನಾನು ೧೦ ಪುಟಗಳನ್ನು ಓದಿದೆ, ಓದಿರುವ ಆ ವಿಷಯಗಳನ್ನು ಕೃತಿಯಲ್ಲಿ ತರಲು ಪ್ರಯತ್ನಿಸುತ್ತಿದ್ದೆನು.” ಅಧ್ಯಾತ್ಮದಲ್ಲಿ ಓದಿರುವುದನ್ನು ಕೃತಿ ಮಾಡಲಿಕ್ಕಿರುತ್ತದೆ.
೪ ಆ. ಧರ್ಮರಾಜನು ತನಗೆ ಕೋಪ ಬರುವ ಸಂದರ್ಭದಲ್ಲಿ ಅಭ್ಯಾಸ ಮಾಡಿ ಕೋಪವನ್ನು ಜಯಿಸಿದನು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಮಹಾಭಾರತದಲ್ಲಿ ಒಂದು ಉದಾಹರಣೆಯಿದೆ. ಒಮ್ಮೆ ದ್ರೋಣಾಚಾರ್ಯರು ಪರವೂರಿಗೆ ಹೋಗುವವರಿದ್ದರು. ಅವರು ಕೌರವ ಮತ್ತು ಪಾಂಡವರಿಗೆ ಹೇಳಿದರು, ”ನಾನು ೮ ದಿನಗಳ ವರೆಗೆ ಇರುವುದಿಲ್ಲ. ನೀವು ಯಾವುದೇ ಅಭ್ಯಾಸ ಮಾಡಿ. ನಾನು ಬಂದನಂತರ ಪರೀಕ್ಷೆ ಮಾಡುತ್ತೇನೆ.” ೮ ದಿನಗಳ ನಂತರ ಅವರು ಹಿಂದಿರುಗಿ ಬಂದರು. ಅವರು ಭೀಮನಿಗೆ ಕೇಳಿದರು, ”ನೀನು ಗದೆ ಕಲಿಯಲು ಹೇಗೆ ಪ್ರಯತ್ನ ಮಾಡಿದೆ ?” ನಂತರ ಅರ್ಜುನನಿಗೆ ಕೇಳಿದರು. ”ನೀನು ಎಷ್ಟು ಬಾಣ ಹೊಡೆದು ತೋರಿಸಿದೆ ?” ಅವರಿಬ್ಬರೂ ಉತ್ತರಿಸಿದರು. ಅನಂತರ ಅವರು ಧರ್ಮರಾಜನಿಗೆ ಕೇಳಿದರು. ಆಗ ಅವನು ಏನೂ ಹೇಳಲಿಲ್ಲ. ದ್ರೋಣಾಚಾರ್ಯರಿಗೆ ಕೋಪ ಬಂತು. ‘ಧರ್ಮರಾಜನು ತುಂಬಾ ಒಳ್ಳೆಯ ಕಾರ್ಯ ಏನಾದರೂ ಮಾಡಿರಬಹುದು’, ಎಂದು ಅವರಿಗೆ ಅನಿಸಿತು; ಆದರೆ ಅವನು ಮಾತನಾಡದಿರುವುದರಿಂದ ಅವರಿಗೆ ಬೇಸರವಾಯಿತು ಹಾಗೂ ಅವರು ಕೋಪಗೊಂಡರು. ಅವರು ಧರ್ಮರಾಜನ ಕೆನ್ನೆಗೆ ಹೊಡೆದರು. ಆಗ ಧರ್ಮರಾಜ ಹೇಳಿದನು, ”ನಾನು ಯಾವುದೇ ಪ್ರಸಂಗದಲ್ಲಿ ಕೋಪಗೊಳ್ಳಬಾರದು’ ಈ ವಿಷಯದಲ್ಲಿ ಅಭ್ಯಾಸ ಮಾಡಿದೆನು; ಆದರೆ ಕೋಪ ಬರುವಂತಹ ಪ್ರಸಂಗವೇ ಘಟಿಸಲಿಲ್ಲ. ಈಗ ನೀವು ನನಗೆ ಹೊಡೆದಿರಿ, ಆದರೂ ನನಗೆ ಕೋಪ ಬರಲಿಲ್ಲ.”
(ಮುಂದುವರಿಯುವುದು)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !