ಪಾಕಿಸ್ತಾನದ ಸರಕಾರಕ್ಕೆ ಅಲ್ಲಿನ ಪತ್ರಕರ್ತರೊಬ್ಬರ ಪ್ರಶ್ನೆ!

ಇಸ್ಲಾಮಾಬಾದ್ (ಪಾಕಿಸ್ತಾನ): ಭಾರತವು ‘ಆಪರೇಷನ್ ಸಿಂದೂರ್’ ಅಡಿಯಲ್ಲಿ ಪಾಕಿಸ್ತಾನದ ಬೆನ್ನು ಮುರಿದ ನಂತರವೂ, ‘ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬ ಗಾದೆಯಂತೆ ಪಾಕಿಸ್ತಾನವು, ನಾವು ಭಾರತಕ್ಕೆ ಪಾಠ ಕಲಿಸಿದ್ದೇವೆ ಎಂಬ ಕಲ್ಪನೆಯಲ್ಲಿ ರಾಷ್ಟ್ರೀಯ ಉತ್ಸವವನ್ನು ಆಚರಿಸಿತು. ಆದರೆ ಪಾಕಿಸ್ತಾನದ ಕೆಲವು ಪತ್ರಕರ್ತರು, ಯೂಟ್ಯೂಬ್ ಚಾನೆಲ್ ನವರು ಹಾಗೂ ರಕ್ಷಣಾ ತಜ್ಞರು ಪಾಕಿಸ್ತಾನಕ್ಕೆ ಕನ್ನಡಿ ಹಿಡಿದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ‘ಒಂದು ವೇಳೆ ಪಾಕಿಸ್ತಾನವು ಭಾರತಕ್ಕೆ ಪಾಠ ಕಲಿಸಿದ್ದೇ ಆದಲ್ಲಿ, ಭಾರತಕ್ಕೆ ಹಾನಿ ಮಾಡಿದ್ದಲ್ಲಿ, ಅದರ ಪುರಾವೆಗಳನ್ನು ತೋರಿಸಿ’ ಎಂದು ಅನೇಕರು ಅಲ್ಲಿನ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಭಾರತದಲ್ಲಾದ ಹಾನಿಯ ಸಾಕ್ಷಿಗಳಿವೆಯೇ? – ಯೂಟ್ಯೂಬ್ ಚಾನೆಲ್‌ನ ಪತ್ರಕರ್ತ ಅಹ್ಮನ್ ನೂರಾನಿ ಪಾಕ್ ಸರಕಾರಕ್ಕೆ ಪ್ರಶ್ನೆ
‘ಅವರು (ಭಾರತ) ನಿಮ್ಮ (ಪಾಕಿಸ್ತಾನದ) 4 ಪ್ರಮುಖ ನಗರಗಳ ಮೇಲೆ ದಾಳಿ ಮಾಡಿದ್ದಾರೆ, 12ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾರೆ. ಹೀಗಿರುವಾಗ ನಾವು ಅವರ ಗುರಿಗಳನ್ನು ನಾಶಪಡಿಸಿದ್ದೇವೆ ಎಂದು ಹೇಳಿಕೊಳ್ಳುವುದು ವಿಚಿತ್ರವಾಗಿದೆ. ನೀವು ನಿಮ್ಮ ಮಕ್ಕಳನ್ನು ಮೂರ್ಖರನ್ನಾಗಿಸುತ್ತಿದ್ದೀರಿ. ಭಾರತವು ನಮ್ಮ ವಾಯುಪಡೆಯ ನೆಲೆಗಳ ಮೇಲೆ ದಾಳಿ ಮಾಡಿದಾಗ, ನೀವೂ ದಾಳಿ ಮಾಡಿದ್ದೀರಿ; ಆದರೆ ನೀವು ಗುರಿಗಳನ್ನು ತಲುಪಿದ್ದೀರಾ? ಅದರ ಬಗ್ಗೆ ಏನಾದರೂ ಮಾಹಿತಿ ಇದೆಯೇ?, ಅದರ ಯಾವುದೇ ಸಾಕ್ಷಿಗಳಿವೆಯೇ? ಇನ್ನೊಂದೆಡೆಯ ಹಾನಿಯ ಬಗ್ಗೆ ಪುರಾವೆಗಳಿವೆಯೇ?’ ಎಂದು ಪಾಕಿಸ್ತಾನಿ ಪತ್ರಕರ್ತ ಮತ್ತು ಯೂಟ್ಯೂಬ್ ಚಾನೆಲ್‌ನ ಅಹ್ಮದ್ ನೂರಾನಿ ಪ್ರಶ್ನಿಸಿದ್ದಾರೆ. ವಿಚಿತ್ರವೆಂದರೆ ನೂರಾನಿ ಅವರ ಕೆಲ ವಿಡಿಯೋಗಳನ್ನು ಪಾಕಿಸ್ತಾನ ಸರಕಾರವು ನಿರ್ಬಂಧಿಸಿದೆ.
ಭಾರತೀಯ ಡ್ರೋನ್‌ಗಳಿಂದ ಅಸಂಖ್ಯಾತ ಜನರ ಪ್ರಾಣಹಾನಿ!

ನೂರಾನಿ ಅವರ ಪ್ರಕಾರ, ನಮ್ಮ ಬಳಿ ಸಾಕ್ಷಿಗಳಿಲ್ಲದಿದ್ದರೂ, ಇನ್ನೊಂದು ಕಡೆಯಿಂದ (ಭಾರತದಿಂದ) ನಡೆದ ದಾಳಿಯಿಂದಾದ ಹಾನಿಯ ಸಾಕ್ಷಿಗಳಿವೆ. ನೂರಾರು ಭಾರತೀಯ ಡ್ರೋನ್‌ಗಳು ಪಾಕಿಸ್ತಾನದ ಎಲ್ಲಾ ಸಣ್ಣ-ದೊಡ್ಡ ನಗರಗಳಿಗೆ ಬಂದವು, ಅವು ತಮ್ಮ ಕೆಲಸವನ್ನು ಮಾಡುತ್ತಿದ್ದವು, ಈ ಡ್ರೋನ್‌ಗಳು ಅವರಿಗೆ ಬೇಕಾದಲ್ಲಿಗೆ ತಲುಪಿದವು. ರಾವಲ್ಪಿಂಡಿಯ ಸ್ಟೇಡಿಯಂ ಆಗಿರಲಿ ಅಥವಾ ಅಟಕ್ ಬಳಿಯಿರಲಿ – ಅಲ್ಲಿ ಅನೇಕ ಜನರು ಕೊಲ್ಲಲ್ಪಟ್ಟರು. ಡ್ರೋನ್‌ಗಳಿಂದ ಅಸಂಖ್ಯಾತ ಜನರ ಪ್ರಾಣ ಹೋಯಿತು. ಇಡೀ ಪಾಕಿಸ್ತಾನದಲ್ಲಿ ಭಯದ ವಾತಾವರಣವಿತ್ತು. ನಾನು ನಿಮಗೆ ಒಂದು ಸತ್ಯವನ್ನು ಹೇಳಲು ಬಯಸುತ್ತೇನೆ, ನೀವು ನನ್ನನ್ನು ದೇಶದ್ರೋಹಿ ಎಂದು ಕರೆಯಬಹುದು, ಸಾವಿರಾರು ಬಾರಿ ಕರೆಯಬಹುದು. ವಿಷಯವೇನೆಂದರೆ, ನೀವು ಸತ್ಯವನ್ನು ಅನುಸರಿಸದಿದ್ದರೆ, ನೀವು ಯಾವುದೇ ಸುಧಾರಣೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ನೂರಾನಿ ಪಾಕ್ ಸರ್ಕಾರದ ಕಿವಿ ಹಿಂಡಿದ್ದಾರೆ.
ಸಂಪಾದಕೀಯ ನಿಲುವುಪಾಕಿಸ್ತಾನದ ಬಳಿ ತೋರಿಸಲು ಏನೂ ಇಲ್ಲ; ಏಕೆಂದರೆ ಅಂತಹದ್ದೇನೂ ನಡೆದಿಲ್ಲ. ಪಾಕಿಸ್ತಾನ ಜಗತ್ತಿನ ಅತಿ ದೊಡ್ಡ ಸುಳ್ಳು ಹೇಳುವ ದೇಶ. ಅದರ ಸುಳ್ಳನ್ನು ಆ ದೇಶದ ಪತ್ರಕರ್ತರೇ ಬಯಲು ಮಾಡುತ್ತಿದ್ದಾರೆ! |
Teesta River Project : ಭಾರತವನ್ನು ಬದಿಗೊತ್ತಿ ಚೀನಾಕ್ಕೆ ೯ ಸಾವಿರ ಕೋಟಿ ರೂಪಾಯಿಗಳ ತೀಸ್ತಾ ನದಿ ಯೋಜನೆ ಒಪ್ಪಿಸಿದ ಬಾಂಗ್ಲಾದೇಶ !
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump