
ರಾವಲ್ಪಿಂಡಿ (ಪಾಕಿಸ್ತಾನ) – ಭಾರತವು ಎಷ್ಟೇ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ ಅಥವಾ ಎಷ್ಟೇ ದೊಡ್ಡ ಸೈನ್ಯವನ್ನು ಹೊಂದಿದೆ ಎಂದು ಹೇಳಿಕೊಂಡರೂ ಸಹ, ಅದು ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ. ಇತಿಹಾಸದಲ್ಲಿ ಇಂತಹ ಅನೇಕ ಉದಾಹರಣೆಗಳಿವೆ. ನಮ್ಮ ಸೈನ್ಯ ಮತ್ತು ಪಾಕಿಸ್ತಾನದ ಜನರು ಯಾವುದೇ ಆಕ್ರಮಣದ ವಿರುದ್ಧ ಉಕ್ಕಿನ ಗೋಡೆಯಂತೆ ಒಟ್ಟಾಗಿ ನಿಲ್ಲುತ್ತಾರೆ. ಪಾಕಿಸ್ತಾನ ಸ್ವಂತದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಸಂಪೂರ್ಣವಾಗಿ ಸಮರ್ಥವಾಗಿದೆ. ಕುರಾನ್ ನಲ್ಲಿ ಹೇಳಿರುವಂತೆ, ಸಣ್ಣ ಸೈನ್ಯವು ಅನೇಕ ವೇಳೆ ದೊಡ್ಡ ಸೈನ್ಯವನ್ನು ಸೋಲಿಸುತ್ತದೆ, ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಇಲ್ಲಿ ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡಿದ್ದಾರೆ. ಭಾರತದ ‘ಆಪರೇಷನ್ ಸಿಂದೂರ’ ದಾಳಿಯಲ್ಲಿ ಗಾಯಗೊಂಡ ಪಾಕಿಸ್ತಾನಿ ಸೈನಿಕರನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋದಾಗ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವುಭಾರತ ಪಾಕಿಸ್ತಾನವನ್ನು ಹೆದರಿಸಲು ಸಾಧ್ಯವಿಲ್ಲ, ಆದರೆ ಅದನ್ನು ನಾಶಮಾಡಬಲ್ಲದು, ಅಷ್ಟೊಂದು ಸಾಮರ್ಥ್ಯ ಭಾರತಕ್ಕೆ ಇದೆ. ಈಗ ಭಾರತವು ಈ ಸಾಮರ್ಥ್ಯವನ್ನು ಬಳಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ, ಭಾರತೀಯರು ಸರಕಾರದ ಮೇಲೆ ಒತ್ತಡ ಹೇರುವುದು ಅವಶ್ಯಕವಾಗಿದೆ! |