ಭಯ ಹುಟ್ಟಿಸದೆ ಪ್ರೀತಿ ಹುಟ್ಟಲು ಸಾಧ್ಯವಿಲ್ಲ!

ನವದೆಹಲಿ – ‘ಬಿನಯ ನ ಮಾನತ ಜಲಧಿ ಜಡ, ಗಯೇ ತೀನಿ ದಿನ ಬೀತಿ। ಬೋಲೆ ರಾಮ ಸಕೋಪ ತಬ, ಭಯ ಬಿನು ಹೋಇ ನ ಪ್ರೀತಿ’ (೩ ದಿನಗಳು ಕಳೆದರೂ, ಸಮುದ್ರವು ಶ್ರೀರಾಮನ ವಿನಂತಿಯನ್ನು ಸ್ವೀಕರಿಸಲಿಲ್ಲ, ಆಗ ಭಗವಾನ್ ಶ್ರೀರಾಮನು ಕೋಪದಿಂದ, ಭಯ ಹುಟ್ಟಿಸದೆ ಪ್ರೀತಿ ಹುಟ್ಟಲು ಸಾಧ್ಯವಿಲ್ಲ, ಎಂದು ನುಡಿದನು.) ಈ ಮಾತುಗಳಲ್ಲಿ ಭಾರತೀಯ ರಕ್ಷಣಾ ಪಡೆಗಳು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಇನ್ನು ವಿನಂತಿಯಲ್ಲ, ಯುದ್ಧವಾಗಲಿದೆ. ‘ಜಾಣರಿಗೆ ಒಂದು ಸೂಚನೆ ಸಾಕು,’ ಎಂದು ಹೇಳುತ್ತಾ ‘ಯಾವುದೇ ರೀತಿಯ ತಂತ್ರಜ್ಞಾನ ಬಂದರೂ, ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ನಾವು ಮಾತನಾಡಬೇಕಾಗಿಲ್ಲ. ನೀವು ಸ್ವತಃ ನೋಡಿದ್ದೀರಿ,’ ಎಂದು ರಕ್ಷಣಾ ಪಡೆಗಳು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿವೆ. ಈ ಪತ್ರಿಕಾಗೋಷ್ಠಿಯಲ್ಲಿ ಲೆಫ್ಟಿನೆಂಟ್ ಜನರಲ್ ರಾಜೀವ್ ಘೈ, ವೈಸ್ ಅಡ್ಮಿರಲ್ ಎ.ಎನ್. ಪ್ರಮೋದ ಮತ್ತು ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರತಿ ಉಪಸ್ಥಿತರಿದ್ದರು. ನಿನ್ನೆ ಈ ಮೂವರು ಪತ್ರಿಕಾಗೋಷ್ಠಿ ನಡೆಸಿದ್ದರು. ಇದರ ನಂತರ ಪಾಕಿಸ್ತಾನದ ಸೈನ್ಯವು ತಡರಾತ್ರಿ ಪತ್ರಿಕಾಗೋಷ್ಠಿ ನಡೆಸಿತ್ತು. ಇಂದು ಮೇ ೧೨ ರಂದು ಮಧ್ಯಾಹ್ನ ಭಾರತ ಮತ್ತು ಪಾಕಿಸ್ತಾನದ ಸೇನಾಧಿಕಾರಿಗಳ ನಡುವೆ ಕದನ ವಿರಾಮದ ಕುರಿತು ಚರ್ಚೆ ನಡೆಯಬೇಕಿತ್ತು; ಆದರೆ ಅದು ಮುಂದೂಡಲ್ಪಟ್ಟ ನಂತರ ಭಾರತೀಯ ರಕ್ಷಣಾ ಪಡೆಗಳು ಪತ್ರಿಕಾಗೋಷ್ಠಿ ನಡೆಸಿ ಆಪರೇಷನ್ ಸಿಂಧೂರ್ ಕುರಿತು ಮಾಹಿತಿ ನೀಡಿತು.
🇮🇳⚔️🇮🇩 Indian armed forces warn Pakistan with a Ramcharitmanas verse: Fear must precede love! 🙏
For too long, India's Gandhian approach led to self-destructive non-violence & immense loss. 🤔
Glad Indians are finally realizing this!#ceasefirevoilation #OperationSindoor… pic.twitter.com/iF7hr2KLoH
— Sanatan Prabhat (@SanatanPrabhat) May 12, 2025
೧. ಭಾರತದ ಡಿಜಿಎಂಒ (‘ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್’ – ಸೈನ್ಯ ಕಾರ್ಯಾಚರಣೆಯ ಮಹಾನಿರ್ದೇಶಕ) ಹಾಗೂ ಲೆಫ್ಟಿನೆಂಟ್ ಜನರಲ್ ರಾಜೀವ್ ಘೈ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುತ್ತಾ, ಮುಂದಿನ ಯುದ್ಧ ವಿಭಿನ್ನವಾಗಿರುತ್ತದೆ. ಹಿಂದಿನ ಯುದ್ಧದಂತಿರಲ್ಲ; ಏಕೆಂದರೆ ತಂತ್ರಜ್ಞಾನವು ಬಹಳ ಮುಂದುವರೆದಿದೆ, ಎಂದರು.
೨. ಅವರು ಮಾತು ಮುಂದುವರೆಸಿ, ದೇವರು ಕಾಪಾಡಲಿ ಯುದ್ಧವಾಗಬಾರದು; ಆದರೆ ಯಾವುದೇ ಪರಿಸ್ಥಿತಿಗೂ ನಾವು ಸಿದ್ಧರಿದ್ದೇವೆ. ನಾವು ಎದುರಿಸಲು ಸಮರ್ಥರಾಗಿದ್ದೇವೆ. ನಮ್ಮ ಹೋರಾಟ ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧವಾಗಿತ್ತು. ಅದಕ್ಕಾಗಿಯೇ ನಾವು ಮೇ ೭ ರಂದು ಕೇವಲ ಭಯೋತ್ಪಾದಕರ ಮೇಲೆ ಮಾತ್ರ ದಾಳಿ ಮಾಡಿದೆವು. ಪಾಕಿಸ್ತಾನವು ಭಯೋತ್ಪಾದಕರಿಗೆ ಬೆಂಬಲ ನೀಡಿತು.
೩. ಕಳೆದ ಹಲವು ವರ್ಷಗಳಿಂದ ಸೈನ್ಯ ಹಾಗೂ ಸಾಮಾನ್ಯ ನಾಗರಿಕರ ಮೇಲೂ ದಾಳಿಗಳನ್ನು ಮಾಡಲಾಗಿದೆ. ಕಳೆದ ಕೆಲವು ದಿನಗಳಲ್ಲಿ ಭಯೋತ್ಪಾದಕರ ಕೃತ್ಯಗಳ ವಿಧಾನ ಬದಲಾಗಿದೆ. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಲಾಗಿತ್ತು. ೨೦೨೪ ರಲ್ಲಿ ಶಿವಖೋರಿ ದೇವಸ್ಥಾನಕ್ಕೆ ಹೋಗುವ ಭಕ್ತರ ಮೇಲಿನ ದಾಳಿಗಳು ಅಪಾಯಕಾರಿಯಾಗಿದ್ದವು. ಪಹಲ್ಗಾಮ್‌ನ ದಾಳಿಯು ಪಾಕಿಸ್ತಾನದ ಪಾಪದ ಕೊಡ ತುಂಬಿದ ಸಂಕೇತವಾಗಿತ್ತು ಎಂದೂ ಅವರು ಹೇಳಿದರು.
ಪಾಕಿಸ್ತಾನದ ಹಾನಿಗೆ ಪಾಕಿಸ್ತಾನದ ಸೈನ್ಯವೇ ಹೊಣೆ!
ಏರ್ ಮಾರ್ಷಲ್ ಅವಧೇಶ್ ಕುಮಾರ್ ಭಾರತಿ ಅವರು ಮಾತನಾಡಿ, ಭಾರತದ ಕ್ರಮದಿಂದ ಪಾಕಿಸ್ತಾನಕ್ಕೆ ಆಗಿರುವ ಹಾನಿಗೆ ಪಾಕಿಸ್ತಾನದ ಸೈನ್ಯವೇ ಹೊಣೆಯಾಗಿದೆ. ನಮ್ಮ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸುವುದು ಪಾಕಿಸ್ತಾನಕ್ಕೆ ಅಸಾಧ್ಯವಾಗಿತ್ತು. ಭಾರತೀಯ ಸೇನಾ ಪಡೆಗಳ ಬಳಿ ಹಲವು ಹಂತಗಳ ವಾಯು ರಕ್ಷಣಾ ವ್ಯವಸ್ಥೆಯಿದೆ. ಇದರಲ್ಲಿ ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಯ ವ್ಯವಸ್ಥೆ ಇದೆ ಎಂದು ಅವರು ಮಾಹಿತಿ ನೀಡಿದರು.
ಸಂಪಾದಕೀಯ ನಿಲುವುಗಾಂಧಿವಾದಿ ಧೋರಣೆಯಿಂದಲೇ ಭಾರತವು ಭಯ ತೋರಿಸುವ ಬದಲು ಆತ್ಮಘಾತುಕ ಅಹಿಂಸೆಯನ್ನು ಪೋಷಿಸಿಕೊಂಡು ಬಂದಿದ್ದರಿಂದ ಭಾರತಕ್ಕೆ ಇಲ್ಲಿಯವರೆಗೆ ವಿಪರೀತ ಹಾನಿಯಾಗಿದೆ. ಈಗ ಭಾರತೀಯರಿಗೆ ಇದು ಅರ್ಥವಾಗುತ್ತಿದೆ, ಇದು ವಿಶೇಷ! |
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ