ರಾಜಪ್ರಭುತ್ವದ ಪರವಾಗಿ ನಡೆಯುತ್ತಿರುವ ಚಳವಳಿಗೆ ಪ್ರೋತ್ಸಾಹ ನೀಡಿದ ಆರೋಪ!

ಕಾಠಮಾಂಡು – ನೇಪಾಳದ ಬಗ್ಗೆ ತಪ್ಪು ವರದಿ ಮಾಡಿದೆ ಎಂದು ಆರೋಪಿಸಿ ನೇಪಾಳದ ‘ಪತ್ರಿಕಾ ಮಂಡಳಿ’ ಭಾರತೀಯ ಸುದ್ದಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸುವಂತೆ ಶಿಫಾರಸು ಮಾಡಿದೆ. ಇದರೊಂದಿಗೆ ನೇಪಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಸುದ್ದಿ ವಾಹಿನಿಗಳ ಪ್ರತಿನಿಧಿಗಳಿಗೆ ನೀಡಲಾದ ಗುರುತಿನ ಚೀಟಿಗಳನ್ನು ತಕ್ಷಣವೇ ರದ್ದುಪಡಿಸುವಂತೆ ತಿಳಿಸಲಾಗಿದೆ. ನಿಷೇಧ ಹೇರಲು ಶಿಫಾರಸು ಮಾಡಲಾದ ಮಾಧ್ಯಮಗಳಲ್ಲಿ ಆಜ್ ತಕ್, ಎಬಿಪಿ, ಜೀ ನ್ಯೂಸ್, ನ್ಯೂಸ್ 18, ಟಿವಿ 9, ಎನ್ ಡಿಟಿವಿ, ರಿಪಬ್ಲಿಕ ಭಾರತ ಮುಂತಾದ ಭಾರತೀಯ ಸುದ್ದಿ ವಾಹಿನಿಗಳು ಸೇರಿವೆ ಎಂದು ನೇಪಾಳದ ‘ಪತ್ರಿಕಾ ಮಂಡಳಿ’ ಅಧ್ಯಕ್ಷ ಬಾಳಕೃಷ್ಣ ಬಸನೇತ ತಿಳಿಸಿದ್ದಾರೆ.
1. ನೇಪಾಳದ ‘ಪತ್ರಿಕಾ ಮಂಡಳಿ’ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಬರುವ ಮಾಹಿತಿ ಇಲಾಖೆಗೆ ನಿರ್ದೇಶನ ಪತ್ರ ಬರೆದು ಎಲ್ಲಾ ಪ್ರಮುಖ ಸುದ್ದಿ ವಾಹಿನಿಗಳ ಪ್ರಸಾರವನ್ನು ನಿಷೇಧಿಸುವಂತೆ ತಿಳಿಸಿದೆ.
2. ಈ ಸುದ್ದಿ ವಾಹಿನಿಗಳು ದೇಶದ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಸರಕಾರದ ವಿರುದ್ಧ ಸುದ್ದಿಗಳನ್ನು ತೋರಿಸಿವೆ ಮತ್ತು ರಾಜಪ್ರಭುತ್ವದ ಪರವಾಗಿ ನಡೆಯುತ್ತಿರುವ ಚಳವಳಿಗೆ ಪ್ರೋತ್ಸಾಹ ನೀಡಿವೆ ಎಂದು ಆರೋಪಿಸಲಾಗಿದೆ.
ಸಂಪಾದಕೀಯ ನಿಲುವು
|
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು