ವಾಹನಗಳ ಭದ್ರತೆಯ ದೃಷ್ಟಿಯಿಂದ ‘ಹೆಚ್ಚಿನ ಭದ್ರತಾ ನೋಂದಣಿ ಫಲಕ’ (ಊಶ್ಖಫ್) !

ಶ್ರೀ. ಯಜ್ಞೇಶ ಸಾವಂತ

ಸದ್ಯ ವಾಹನಗಳ ‘ಹೆಚ್ಚಿನ ಭದ್ರತಾ ನೋಂದಣಿ ಫಲಕ’ಗಳ ವಿಷಯದಲ್ಲಿ ಅಂದರೆ ಊಶ್ಖಫ್ ವಿಷಯದಲ್ಲಿ ಚರ್ಚೆ ನಡೆಯುತ್ತಿದೆ. ೧ ಎಪ್ರಿಲ್‌ ೨೦೧೯ ಕ್ಕಿಂತ ಹಿಂದಿನ ಎಲ್ಲ ವಾಹನಗಳಿಗೆ ಅಂದರೆ ದ್ವಿಚಕ್ರ, ಚತುಶ್ಚಕ್ರ, ಸರಕು ಸಾಗಿಸುವ ವಾಹನಗಳಿಗೆ ಹೊಸ ಪದ್ಧತಿಯ ಕ್ರಮಾಂಕಗಳ ಫಲಕಗಳನ್ನು ಅಳವಡಿಸುವುದು ಕಡ್ಡಾಯ ವಾಗಿದೆ. ಈ ಪದ್ಧತಿ ಕರ್ನಾಟಕ, ದೆಹಲಿ ಹಾಗೂ ದೇಶದ ಹಲವು ರಾಜ್ಯಗಳಲ್ಲಿ ಅನ್ವಯಗೊಳಿಸಲಾಗಿದೆ. ಈ ಫಲಕಗಳ ವಿಷಯದಲ್ಲಿ ಜನರಲ್ಲಿ ಇದುವರೆಗೂ ಸಂಶಯ, ವಾಹನ ಫಲಕದ ಅವಶ್ಯಕತೆ ಇಂತಹ ಅನೇಕ ಪ್ರಶ್ನೆಗಳಿವೆ, ಇದಕ್ಕೆ ಸಂಬಂಧಿಸಿ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

೧. ಹೆಚ್ಚಿನ ಭದ್ರತಾ ನೋಂದಣಿ ಫಲಕದ ಅವಶ್ಯಕತೆ !

ಹೆಚ್ಚಿನ ಭದ್ರತಾ ನೋಂದಣಿ ಫಲಕದ ಮುಖ್ಯ ಉದ್ದೇಶ ವಾಹನದ ಭದ್ರತೆ, ಕಳ್ಳತನ ಅಥವಾ ಅನಧಿಕೃತವಾಗಿ ವಾಹನದ ಮಾರಾಟವನ್ನು ತಡೆಯುವುದು, ವಾಹನದ ಫಲಕ ‘ಫ್ಯಾನ್ಸಿ’, ಅಂದರೆ ವಿವಿಧ ಪ್ರಕಾರಗಳ ಸಂಖ್ಯೆಗಳನ್ನು ಬರೆದು ಅದು ಸಹಜವಾಗಿ ಕಾಣಿಸದಂತೆ ಮಾಡುವುದು, ವಾಹನಗಳ ಕ್ರಮಾಂಕದ ಫಲಕವನ್ನು ತೆಗೆದು ಅದನ್ನು ಬೇರೆ ವಾಹನಕ್ಕೆ ಅಳವಡಿಸುವುದು ಇತ್ಯಾದಿ, ಅದರ ಮೂಲಕ ಸಾರಿಗೆ ಇಲಾಖೆಗೆ ವಾಹನಗಳನ್ನು ಗುರುತಿಸುವಾಗ ಆಗುವ ಗೊಂದಲಗಳನ್ನು ತಪ್ಪಿಸಿ ಫಲಕದ ಮೂಲಕವೇ ವಾಹನದ ಸಂಪೂರ್ಣ ಮಾಹಿತಿ ಉದಾ. ವಾಹನದ ನಿರ್ಮಾಣ, ವಿಧ, ಚಾಸಿಸ್‌ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ಡಿಜಿಟಲ್‌ ಸ್ವರೂಪದಲ್ಲಿ ದೊರಕಿಸಿಕೊಡುವುದು, ಇಂತಹ ಅನೇಕ ಉದ್ದೇಶಗಳು ಈ ಹೆಚ್ಚಿನ ಭದ್ರತಾ ನೋಂದಣಿ ಫಲಕದಲ್ಲಿದೆ. ಆದ್ದರಿಂದ ಇನ್ನು ಮುಂದೆ ಇಂತಹ ಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ. ೨೦೧೯ ರಲ್ಲಿ ಮತ್ತು ಅದರ ನಂತರ ರಸ್ತೆಗೆ ಬರುವ ವಾಹನಗಳಿಗೆ ವಾಹನಗಳ ಕಂಪನಿಯವರೆ ಫಲಕವನ್ನು ಅಳವಡಿಸಿ ಕೊಡುತ್ತಿದ್ದಾರೆ; ಆದರೆ ಹಳೆಯ ಎಲ್ಲ ವಾಹನಗಳಿಗೆ ಅದನ್ನು ಅಳವಡಿಸಿಕೊಳ್ಳಬೇಕಾಗಿದೆ.

೨. ವಾಹನಗಳ ಫಲಕಗಳ ಇನ್ನಿತರ ವೈಶಿಷ್ಟ್ಯಗಳು !

ಈ ಫಲಕಗಳನ್ನು ಅಲ್ಯುಮಿನಿಯಮ್‌ನಿಂದ ಸಿದ್ಧಪಡಿಸ ಲಾಗಿರುತ್ತದೆ ಹಾಗೂ ಕನಿಷ್ಟ ೨ ‘ಸ್ನ್ಯಾಪ್‌ ಲಾಕ್‌’ನ ಮೂಲಕ ಅಳವಡಿಸಲಾಗುತ್ತದೆ, ‘ಸ್ನ್ಯಾಪ್‌ ಲಾಕ್‌’ಅಂದರೆ ವಿಶಿಷ್ಟ ಸ್ಕ್ರೂ ಮೂಲಕ ಅದನ್ನು ವಾಹನಕ್ಕೆ ಅಳವಡಿಸಲಾಗುತ್ತದೆ, ಇದನ್ನು ವಾಹನದಿಂದ ಸಹಜವಾಗಿ ಬೇರ್ಪಡಿಸಲು ಸಾಧ್ಯವಿಲ್ಲ ಹಾಗೂ ಒಮ್ಮೆ ತೆಗೆದರೆ ಪುನಃ ಅಳವಡಿಸಲು ಸಾಧ್ಯವಿಲ್ಲ. ಇದರಿಂದ ಒಂದು ವಾಹನದ ಫಲಕ ಇನ್ನೊಂದು ವಾಹನಕ್ಕೆ ಅಳವಡಿಸಲು ಸಾಧ್ಯವಿಲ್ಲ. ಈ ಫಲಕದ ಎಡಬದಿಯಲ್ಲಿ ಮೇಲೆ ನೀಲಿ ಬಣ್ಣದ ಆಶೋಕ ಚಕ್ರದ ‘ಹಾಟ್‌ ಸ್ಟಮ್‌ ಕ್ರೋಮಿಯಮ್‌ ಹೊಲೋಗ್ರಾಮ್’

ಇರುತ್ತದೆ. ಅದರ ಕೆಳಗೆ ದೇಶಕ್ಕೆ ನೀಡಿದ ಅಂತಾರಾಷ್ಟ್ರೀಯ ಕ್ರಮಾಂಕ ಉದಾ. ಭಾರತಕ್ಕೆ ‘ಈಓಆ’ ಕೊಡಲಾಗಿದೆ. ಅದರ ಕೆಳಗೆ ೧೦ ಅಂಕೆಗಳ ‘ಯುನಿಕ್‌ ಐಡೆಂಟಿಫಿಕೇಶನ್‌ ಕ್ರಮಾಂಕ’ (ಗುರುತಿನ ಕ್ರಮಾಂಕ) ಇರುತ್ತದೆ. ಈ ಫಲಕದ ಅಕ್ಷರ ಮತ್ತು ಅಂಕೆಗಳ ಮೇಲೆ ‘ಹಾಟ್‌ ಸಟ್ಯಾಂಪ್‌ ಫಿಲ್ಮ’ನ ಒಂದು ಪದರವನ್ನು ಕೊಡಲಾಗಿದೆ. ಈ ಫಲಕವನ್ನು ಯಾವ ವಾಹನಕ್ಕೆ ಅಳವಡಿಸಲಾಗುತ್ತದೆಯೋ, ಆ ವಾಹನಕ್ಕೆ ಸಂಬಂಧಿಸಿದ ಇಲೆಕ್ಟ್ರಾನಿಕ್‌ ಸಂಪರ್ಕಕ್ಕೆ ಜೋಡಿಸಲಾಗಿರುತ್ತದೆ.

೩. ಹೊಸ ಪದ್ಧತಿಯ ವಾಹನ ಫಲಕ ರಚನೆಯಿಂದಾಗುವ ಅನೇಕ ಲಾಭಗಳು

ಅ. ಕಳುವಾದ ವಾಹನವನ್ನು ಪತ್ತೆ ಹಚ್ಚುವುದು : ಮೇಲೆ ಉಲ್ಲೇಖಿಸಿರುವಂತೆ ಇದರ ಮೂಲಕ ಕಳುವಾದ ವಾಹನವನ್ನು ತಕ್ಷಣ ಗುರುತಿಸಬಹುದು.

ಆ. ಬದಲಾವಣೆಯನ್ನು ಗುರುತಿಸಬಹುದು : ಕ್ರಮಾಂಕದ ಫಲಕದಲ್ಲಿ ಯಾರಾದರೂ ಯಾವುದೇ ಉದ್ದೇಶದಿಂದ ಬದಲಾವಣೆ ಮಾಡಿದರೆ ಅದನ್ನು ತಕ್ಷಣ ಗುರುತಿಸಬಹುದು.

ಇ. ಕಾನೂನು ಕ್ರಮದಲ್ಲಿ ಅನಿಯಮಿತತೆಯನ್ನು ಗುರುತಿಸಲು ಸಹಾಯವಾಗುತ್ತದೆ : ಇತ್ತೀಚೆಗೆ ನೋಡುತ್ತಿರುವ ಹಾಗೆ ಕಾನೂನು ಪ್ರಕಾರ ವಾಹನಗಳ ಕ್ರಮಾಂಕ ಹೇಗಿರಬೇಕು ? ಎಂಬುದರ ಪ್ರಮಾಣೀಕರಣ ಮಾಡಲಾಗಿದೆ. ಆದರೂ ಜನರು ತಮಗೆ ಇಷ್ಟವಾಗುವಂತಹ ಕಲಾತ್ಮಕತೆಯನ್ನು ಆ ಕ್ರಮಾಂಕದಲ್ಲಿ ಮಾಡುವುದನ್ನು ತಪ್ಪಿಸಬಹುದು. ಕೆಲವೆಡೆ ಅನೇಕ ವಾಹನಗಳ ಕ್ರಮಾಂಕ ಹೇಗೆ ಬರೆದಿದ್ದಾರೆಂದರೆ, ಅದನ್ನು ಓದುವಾಗ ವಾಹನ ಕ್ರಮಾಂಕ ತಿಳಿಯದಿದ್ದರೆ ಆ ವಾಹನದ ಫಲಕದಲ್ಲಿನ ಕ್ರಮಾಂಕದ ಬದಲು ‘ದಾದಾ’, ಬಾಬಾ’, ‘ಕಾಕಾ’, ‘ಮಾಮಾ’, ‘ರಾಜೆ’ ಹೀಗೆ ಬರೆದಿರುವುದನ್ನು ನಾವು ನೋಡುತ್ತೇವೆ. ಈ ಕಲಾತ್ಮಕತೆಗೆ ಈಗ ಇನ್ನಿತರ ನಗರಗಳಲ್ಲಿಯೂ ಬೇಡಿಕೆ ಬರುತ್ತಿರುವುದಿಂದ ವಾಹನ ಕ್ರಮಾಂಕಗಳನ್ನು ಗುರುತಿಸುವುದು ಕಠಿಣವಾಗುತ್ತಿದೆ. ಇದನ್ನು ಈಗ ತಪ್ಪಿಸಬಹುದು.

ಈ. ಕ್ರಮಾಂಕವನ್ನು ತಕ್ಷಣ ಗುರುತಿಸಬಹುದು : ಬಹಳಷ್ಟು ಸಲ ವಾಹನದ ಕ್ರಮಾಂಕ ಸಂಪೂರ್ಣ ಕಾಣಿಸುವುದಿಲ್ಲ ಅಥವಾ ಗುರುತಿಸಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ ವಾಹನ ಮಹಾಮಾರ್ಗಗಳಲ್ಲಿ ವೇಗವಾಗಿ ಹೋಗುತ್ತಿರುವಾಗ ಸಿಸಿಟಿವಿ ಅಥವಾ ಉಚ್ಚ ಕ್ಷಮತೆಯ ಕ್ಯಾಮೆರಾದಲ್ಲಿಯೂ ವಾಹನಗಳ ಕ್ರಮಾಂಕವನ್ನು ಸೆರೆಹಿಡಿಯಲು ಆಗುವುದಿಲ್ಲ. ಆದ್ದರಿಂದ ಅದನ್ನು ಗುರುತಿಸಿ ಸಂಬಂಧಪಟ್ಟ ವಾಹನದ ವಿರುದ್ಧ ಕ್ರಮ ತೆಗೆದುಕೊಳ್ಳಲಿಕ್ಕಿದ್ದರೆ, ಅದು ಸಾಧ್ಯವಾಗುವುದಿಲ್ಲ; ಆದರೆ ಈ ಫಲಕದಿಂದ ಆ ಕಾರ್ಯ ಸುಲಭವಾಗುವುದು. ಸಂಪೂರ್ಣ ಭಾರತದಲ್ಲಿ ಒಂದೇ ತರಹದ ನೊಂದಣಿ ಕ್ರಮಾಂಕವಿರುವುದು.

ಉ. ವಾಹನಗಳಿಗೆ ಸಂಬಂಧಿಸಿದ ಅಪರಾಧಗಳು ಕಡಿಮೆಯಾಗುವುದು : ಕಳ್ಳತನದ, ನೋಂದಣಿ ರದ್ದಾಗಿರುವ ವಾಹನಗಳನ್ನು ಉಪ ಯೋಗಿಸುವುದನ್ನು ಈ ಪದ್ಧತಿಯಿಂದ ತಪ್ಪಿಸಬಹುದು.

ಊ. ನಕಲಿಯಿಂದ ರಕ್ಷಣೆ : ನಕಲಿ ಕ್ರಮಾಂಕ ಉಪಯೋಗಕ್ಕೆ ಇದರಿಂದ ಕಡಿವಾಣ ಬೀಳುವುದು.

೪. ಹೊಸ ಫಲಕವನ್ನು ಅಳವಡಿಸುವಾಗ ಆಗುವ ಮೋಸದಿಂದ ತಪ್ಪಿಸಿಕೊಳ್ಳಿ !

ವಾಹನದ ಈ ಕ್ರಮಾಂಕದ ಫಲಕವನ್ನು ಅಳವಡಿಸುವಾಗ ಅನೇಕ ಸ್ಥಳಗಳಲ್ಲಿ ಹೆಚ್ಚು ಹಣ ವಸೂಲು ಮಾಡುತ್ತಾರೆ, ಎನ್ನುವ ದೂರುಗಳು ವಾಹನ ಮಾಲೀಕರಿಂದ ಬಂದಿವೆ. ಹೊಸ ಫಲಕಗಳನ್ನು ಆನ್‌ಲೈನ್‌ ಮೂಲಕ ಪೂರೈಸುವ ಕೆಲವು ನಕಲಿ ಜಾಲತಾಣಗಳು ನಿರ್ಮಾಣವಾಗಿದ್ದು ಅದರಲ್ಲಿ ಎಲ್ಲ ಮಾಹಿತಿ ನೀಡಿ ಹಣ ತುಂಬಿಸಿದಾಗ ಅದರ ಯಾವುದೇ ರಸೀದಿ ಸಿಗುವುದಿಲ್ಲ, ಆಗ ಗ್ರಾಹಕರಿಗೆ ಮೋಸ ಹೋಗಿರುವುದು ಗೊತ್ತಾಗುತ್ತದೆ. ಆದ್ದರಿಂದ ಅಧಿಕೃತ ಸರಕಾರಿ ಜಾಲತಾಣದಲ್ಲಿಯೆ ಅರ್ಜಿ ತುಂಬಿಸಬೇಕು. ಭಾರತದ ಹೊರತು ಕೆಲವು ದೇಶಗಳು ಈ ಕ್ರಮಾಂಕದ ಫಲಕಗಳಲ್ಲಿ ‘ಲಾಕಿಂಗ್‌ ಸಿಸ್ಟಮ್’ ಉಪಯೋಗಿಸುತ್ತವೆ. ಜಪಾನ್, ಕೊರಿಯಾ, ವಿಯೇಟ್ನಾಮ್‌ ಮತ್ತು ಇಂಡೋನೇಷ್ಯಾದಂತಹ ದೇಶಗಳಲ್ಲಿ ‘ಲಾಕಿಂಗ್‌ ಸಿಸ್ಟಮ್’ ಉಪಯೋಗಿಸಲಾಗುತ್ತಿದೆ. ಭಾರತದಲ್ಲಿ ಈ ಹೊಸ ಪದ್ಧತಿಯ ಫಲಕಗಳನ್ನು ವಾಹನಗಳಿಗೆ ಅಳವಡಿಸುವುದು ಈಗ ಕಡ್ಡಾಯವಾಗಿದೆ.

ಈ ಫಲಕಗಳಿಲ್ಲದೆ ವಾಹನ ನಡೆಸಿದರೆ ಕನಿಷ್ಟ ೫ ರಿಂದ ೧೦ ಸಾವಿರ ರೂಪಾಯಿಯ ವರೆಗೆ ದಂಡ ತೆರ ಬೇಕಾಗಬಹುದು ಹಾಗೂ ವಾಹನ ಜಪ್ತಿಯೂ ಆಗಬಹುದು. ಒಮ್ಮೆ ಸಾರಿಗೆ ಇಲಾಖೆ ನೀಡಿರುವ ಹೆಚ್ಚುವರಿ ಅವಧಿ ಮುಗಿದರೆ ಆ ಇಲಾಖೆ ಕ್ರಮತೆಗೆದು ಕೊಳ್ಳಲು ಆರಂಭಿಸುವುದು.

೫. ವಾಹನಗಳಿಗೆ ಕ್ರಮಾಂಕ ಅಳವಡಿಸುವ ಪ್ರಕ್ರಿಯೆ ಮತ್ತು ಇನ್ನಿತರ ವಿಷಯಗಳು

ಅ. transport.karnataka.gov.in ಇದು ಸರಕಾರಿ ಜಾಲತಾಣವಾಗಿದೆ. ಇದರ ಮೂಲಕ ಆನ್‌ಲೈನ್‌ ಅರ್ಜಿ ಮಾಡಬೇಕಾಗುತ್ತದೆ. ಪ್ರತಿಯೊಂದು ರಾಜ್ಯದ ಜಾಲತಾಣ ಬೇರೆಯೆ ಆಗಿರುತ್ತದೆ.

ಆ. ಈ ಮೇಲಿನ ಜಾಲತಾಣಗಳಿಗೆ ಹೋದಾಗ ಎಚ್‌.ಎಸ್‌.ಆರ್‌.ಪಿ. ಎಂಬ ಹೆಸರಿನ ‘ಬ್ಲಾಕ್’ ಜಾಲತಾಣದದಲ್ಲಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ ಮುಂದಿನ ಪ್ರಕ್ರಿಯೆಯನ್ನು ಮಾಡ ಬಹುದು. ಇದರಲ್ಲಿ ಮೊದಲು ಪ್ರಾದೇಶಿಕ ಸಾರಿಗೆಯ ಎಲ್ಲ ಕಾರ್ಯಾಲಯಗಳ ಹೆಸರು ಕಾಣಿಸುತ್ತವೆ. ವಾಹನ ಯಾವ ನಗರ / ಪರಿಸರದ್ದಾಗಿದೆಯೆಂಬುದನ್ನು ಆರಿಸಿ ಅಲ್ಲಿ ಅರ್ಜಿ ಮಾಡಬೇಕು.

ಇ. ತನ್ನಲ್ಲಿರುವ ವಾಹನದ ಆರ್‌.ಸಿ. ಪುಸ್ತಕದಿಂದ ‘ರಿಜಿಸ್ಟ್ರೇಶನ್‌ ಕ್ರಮಾಂಕ, ಚೇಸಿ ಕ್ರಮಾಂಕ, ಇಂಜಿನ್‌ ಕ್ರಮಾಂಕದ ಕೊನೆಯ ೫ ಸಂಖ್ಯೆಗಳನ್ನು ಬರೆಯಬೇಕು ಹಾಗೂ ಸಂಚಾರಿವಾಣಿ ಕ್ರಮಾಂಕ ನೀಡಬೇಕು.

ಈ. ‘ಕ್ಯಾಪ್ಚಾ’ (ಅರ್ಜಿಯು ಯಂತ್ರಮಾನವನ ಮೂಲಕ ತುಂಬಿಸಿಲ್ಲದಿರುವುದನ್ನು ನಿರ್ಧರಿಸಲು ಇರುವ ಸಣ್ಣ ಕೋಡ್‌ಗಳು ಅಥವಾ ಸಂಖ್ಯೆಗಳು) ನೀಡಿದ ನಂತರ ಅಲ್ಲಿ ವಾಹನ ಯಾರ ಹೆಸರಿನಲ್ಲಿದೆಯೋ ಅವರ ಹೆಸರು ಕಾಣಿಸುತ್ತದೆ.

ಉ. ಅನಂತರ ಶುಲ್ಕ ತುಂಬಿಸಲು ಒಂದು ವಿಂಡೋ ಕಾಣಿಸುತ್ತದೆ. ಅದರಲ್ಲಿ ನೀಡಿರುವ ‘ಕ್ಯೂ.ಆರ್‌.ಕೋಡ್‌ ಸ್ಕ್ಯಾನ್’ ಮಾಡಿ ಹಣ ತುಂಬಿಸಬಹುದು. ಅದರಲ್ಲಿಯೂ ವಾಹನಕ್ಕನುಸಾರ ಶುಲ್ಕ ನಿರ್ಧರಿಸಲಾಗಿದೆ.

ಊ. ಶುಲ್ಕ ತುಂಬಿಸಿದ ನಂತರ ವಾಹನ ಮಾಲೀಕನ ಸಂಚಾರಿವಾಣಿಗೆ ಓಟಿಪಿ ಬರುತ್ತದೆ. ಅದನ್ನು ನೀಡಿದಾಗ ಮನೆಗೆ ಕಳುಹಿಸುವುದೇ ಅಥವಾ ಕೇಂದ್ರಕ್ಕೆ ಹೋಗಿ ಫಲಕ ಅಳವಡಿಸುವುದೇ ಎಂಬುದರ ಪರ್ಯಾಯ ಆರಿಸಬೇಕು.

ಎ. ಅನಂತರ ಫಲಕ ಅಳವಡಿಸುವ ದಿನಾಂಕ ಹಾಗೂ ಸಮಯವನ್ನು ನೀಡಲಾಗುತ್ತದೆ. ಅದರ ರಸೀದಿ ನಿಮ್ಮ ಸಂಚಾರಿವಾಣಿಗೆ ಬರುತ್ತದೆ.

ಏ. ಸಾರಿಗೆ ಇಲಾಖೆಯಿಂದ ಸಹಾಯ ಕೇಂದ್ರಗಳನ್ನೂ ಅಲ್ಲಲ್ಲಿ ನಿರ್ಮಿಸಲಾಗಿದೆ. ಯಾರಿಗೆ ಆನ್‌ಲೈನ್‌ ಅರ್ಜಿ ತುಂಬಿಸಲು ಅಡಚಣೆ ಇದೆಯೊ, ಅವರು ಅಲ್ಲಿಗೆ ಹೋಗಿ ಈ ಮೇಲಿನ ಎಲ್ಲ ಪ್ರಕ್ರಿಯೆಯನ್ನು ಮಾಡಿಸಬಹುದು.

– ಶ್ರೀ. ಯಜ್ಞೇಶ ಸಾವಂತ, ಸನಾತನ ವಸತಿ ಸಂಕೀರ್ಣ, ದೇವದ ಪನವೇಲ. (೧೫.೪.೨೦೨೫)

ಮಾಜಿ ಸಾರಿಗೆ ಅಧಿಕಾರಿಯ ಅನುಭವ

ಈ ಹಿಂದೆ ‘ಆರ್‌.ಟಿ.ಒ.’ದಲ್ಲಿ (ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ) ನಡೆದಿರುವ ಪ್ರಕರಣದ ವಿಷಯವನ್ನು ನಾನು ಹೇಳಲು ಬಯಸುತ್ತೇನೆ. ಅಂದರೆ ೧೯೯೫ ರಲ್ಲಿ ಒಂದು ಪ್ರಕರಣ ರತ್ನಾಗಿರಿಯಲ್ಲಿ (ಮತ್ತು ಸಂಪೂರ್ಣ ಮಹಾರಾಷ್ಟ್ರದಲ್ಲಿ) ನಡೆದಿತ್ತು. ಮಹಾರಾಷ್ಟ್ರದಲ್ಲಿನ ಕೆಲವು ವಾಹನಗಳನ್ನು ಕಳ್ಳತನ ಮಾಡಿ ಅವುಗಳನ್ನು ಬೇರೆ ರಾಜ್ಯಗಳಲ್ಲಿ ಅವುಗಳ ದಾಖಲೆಯಾಗಿರುವಂತಹ ನಕಲಿ ಕಾಗದಪತ್ರಗಳನ್ನು ತಯಾರಿಸಿ ನಂತರ ಅವುಗಳನ್ನು ಪುನಃ ಮಹಾರಾಷ್ಟ್ರದಲ್ಲಿಯೆ ಮಾರಾಟ ಮಾಡಲಾಯಿತು. ಇಂತಹ ಇನ್ನೂ ಅನೇಕ ಪ್ರಕರಣಗಳು ಅಂದರೆ ಒಂದೇ ಕ್ರಮಾಂಕದ ೨ ಫಲಕಗಳನ್ನು ಉಪಯೋಗಿಸುವಂತಹ ಅಪರಾಧಗಳು ನಡೆಯುತ್ತಿದ್ದವು. ಅದರಲ್ಲಿ ಹಿಂದಿನ ಕ್ರಮಾಂಕದ ಫಲಕದಿಂದ ಅದು ನಿಜವೇ ಅಥವಾ ನಕಲಿಯೇ, ಎಂಬುದನ್ನು ಗುರುತಿಸಲು ಆಗುತ್ತಿರಲಿಲ್ಲ. ಒಂದೇ ಕ್ರಮಾಂಕದ ಒಂದು ವಾಹನ ನಾಗಪುರದಲ್ಲಿ ಇನ್ನೊಂದು ಪುಣೆಯಲ್ಲಿ ನಡೆಯುತ್ತಿದ್ದರೆ ಅದು ಯಾರಿಗೂ ತಿಳಿಯುತ್ತಿರಲಿಲ್ಲ. ಅದಕ್ಕಾಗಿ ಆ ಕ್ರಮಾಂಕದ ವಿವರಣೆಯನ್ನು (ರಿಕಾರ್ಡ್‌) ತೆಗೆದು ಚಾಸಿಸ್, ಇಂಜಿನ್‌ ಕ್ರಮಾಂಕವನ್ನು ಪ್ರತ್ಯಕ್ಷ ವಾಹನದಲ್ಲಿ ತಪಾಸಣೆ ಮಾಡಬೇಕು. ವಾಹನದ ನಿರ್ಮಾಣ (ಮೇಕ್‌), ಮಾಡೆಲ್, ಟೈಪ್‌ ಇತ್ಯಾದಿ ಬೇರೆ ಬೇರೆ ಆಗಿದ್ದರೆ ಆಗ ತಿಳಿಯುತ್ತದೆ; ಆದರೆ ಒಂದೇ ಮೇಕ್, ಮಾಡೆಲ್, ಟೈಪ್‌ನ ಅಂದರೆ ಒಂದೇ ಕಂಪನಿಯ ೨ ವಾಹನಗಳನ್ನು ೨ ಸ್ಥಳಗಳಲ್ಲಿ ಉಪಯೋಗಿಸಲು ಸಾಧ್ಯವಾಗುತ್ತಿತ್ತು. ಚಾಸಿಸ್‌ ಸಂಖ್ಯೆ ತಪಾಸಣೆ ಮಾಡಿದರೆ ಮಾತ್ರ ಸತ್ಯ ತಿಳಿಯುತ್ತಿತ್ತು. ಈಗಿನ ‘ಎಚ್‌.ಎಸ್‌.ಆರ್‌.ಪಿ.’ ಪದ್ಧತಿ ಸಂರ್ಪೂಣ ಭಾರತದಲ್ಲಿ ಅನ್ವಯಗೊಳಿಸಲಾಗುತ್ತಿದೆ. ಈ ಪದ್ಧತಿಯ  ಕ್ರಮಾಂಕದ ಫಲಕದಲ್ಲಿ ಎಲ್ಲ ಮಾಹಿತಿಗಳಿರುತ್ತವೆ, ಅಂದರೆ ನಂಬರ್‌ ಪ್ಲೇಟ್‌ ಸ್ಕ್ಯಾನ್‌ ಮಾಡಿದಾಗ ಅದರಿಂದ ವಾಹನದ ಸಂಪೂರ್ಣ ಮಾಹಿತಿ ಸಿಗುತ್ತದೆ. ಆ ವಾಹನ ಆ ಮಾಹಿತಿಯೊಂದಿಗೆ ಹೊಂದಾಣಿಕೆಯಾಗದಿದ್ದರೆ, ಅದು ನಕಲಿಯಾಗಿದೆಯೆಂಬುದು ತಕ್ಷಣ ತಿಳಿಯುತ್ತದೆ. ‘ಎಚ್‌.ಎಸ್‌.ಆರ್‌.ಪಿ. ನಂಬರ್‌ ಪ್ಲೇಟ್‌’ನಿಂದ ಕಳ್ಳತನ ಮಾಡಿದ ವಾಹನ, ನಕಲಿ ಕ್ರಮಾಂಕದ ವಾಹನಗಳನ್ನು ಗುರುತಿಸಲು ಸುಲಭವಾಗಲಿಕ್ಕಿದೆ. ಇದು ಈ ಫಲಕಗಳ ವೈಶಿಷ್ಟ್ಯವಾಗಿದೆ.

– ಶ್ರೀ. ಅನೀಲ್‌ ಜಠಾರ, ಮಾಜಿ ಸಾರಿಗೆ ಅಧಿಕಾರಿ, ಮಹಾರಾಷ್ಟ್ರ.