ಉತ್ತರ ಪ್ರದೇಶದ ಕೌಶಂಬಿಯಿಂದ ಖಲಿಸ್ತಾನಿ ಭಯೋತ್ಪಾದಕನ ಬಂಧನ

  • ಹ್ಯಾಂಡ್ ಗ್ರೆನೇಡ್, ಮತ್ತು ಸ್ಫೋಟಕಗಳು ವಶಕ್ಕೆ

  • ಕಳೆದ ವರ್ಷ ಪೊಲೀಸರ ಕಸ್ಟಡಿಯಿಂದ ಓಡಿ ಹೋಗಿದ್ದ

ಕೌಶಂಬಿ (ಉತ್ತರ ಪ್ರದೇಶ) – ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್’ ನ ಲಾಜರ್ ಮಸಿಹ್ ಹೆಸರಿನ ಒಬ್ಬ ಭಯೋತ್ಪಾದಕನನ್ನು ಇಲ್ಲಿಂದ ಬಂಧಿಸಲಾಗಿದೆ. ಆತನಿಂದ 3 ಹ್ಯಾಂಡ್ ಗ್ರೆನೇಡ್‌ಗಳು, 2 ಡಿಟೋನೇಟರ್‌ಗಳು, 1 ವಿದೇಶಿ ಪಿಸ್ತೂಲ್ ಮತ್ತು 13 ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ ಗಾಜಿಯಾಬಾದ್ ನ ವಿಳಾಸವಿರುವ ಆಧಾರ್ ಕಾರ್ಡ್ ಹಾಗೂ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅವನು ‘ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್’ ನ ಜರ್ಮನ್ ಮೂಲದ ಗುಂಪಿನ ಮುಖ್ಯಸ್ಥ ಸ್ವರ್ಣ ಸಿಂಗ್ ಅಲಿಯಾಸ್ ಜೀವನ್ ಫೌಜಿಗೆ ಕೆಲಸ ಮಾಡುತ್ತಿದ್ದನು. ಹಾಗೆಯೇ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ನೊಂದಿಗೆ ನೇರ ಸಂಪರ್ಕದಲ್ಲಿದ್ದನು. ಈತನು ಪಂಜಾಬ್‌ನ ಅಮೃತಸರ ಜಿಲ್ಲೆಯ ಕುರ್ಲಿಯಾನ ಗ್ರಾಮದ ನಿವಾಸಿ. ಕಳೆದ ವರ್ಷ ಸೆಪ್ಟೆಂಬರ್ 24 ರಂದು ಪಂಜಾಬ್ ಪೊಲೀಸರ ಕಸ್ಟಡಿಯಿಂದ ಲಾಜರಸ್ ಮಸಿಹ್ ಓಡಿ ಹೋಗಿದ್ದನು. (ಇದಕ್ಕೆ ಕಾರಣರಾದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು!- ಸಂಪಾದಕರು)

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾದಕರಂತೆ, ಖಲಿಸ್ತಾನಿ ಭಯೋತ್ಪಾದಕರನ್ನು ಹದ್ದುಬಸ್ತಿನಲ್ಲಿಡಲು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ!