ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ) – ಕಳೆದ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿಯಲ್ಲಿ ಭವ್ಯ ಹಿಂದೂ ದೇವಾಲಯವನ್ನು ನಿರ್ಮಿಸಿದ ನಂತರ, ‘ಸ್ವಾಮಿನಾರಾಯಣ ಸಂಪ್ರದಾಯ’ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಅದೇ ರೀತಿಯ ಭವ್ಯ ದೇವಾಲಯವನ್ನು ನಿರ್ಮಿಸಲಿದೆ. ಇಲ್ಲಿನ ಅತ್ಯಂತ ಜನನಿಬಿಡ ಮತ್ತು ಸುಂದರವಾದ ‘ಲ್ಯಾನ್ಸೇರಿಯಾ ಕಾರಿಡಾರ್’ ನಲ್ಲಿ 37 ಸಾವಿರ ಚದರ ಮೀಟರ್ ವಿಸ್ತೀರ್ಣದ ಭೂಮಿಯಲ್ಲಿ ದೇವಾಲಯದ ನಿರ್ಮಾಣದ ಮೊದಲ ಹಂತ ಪೂರ್ಣಗೊಂಡಿದ್ದು, ಮುಂದಿನ 3 ವರ್ಷಗಳಲ್ಲಿ, ಅಂದರೆ 2027 ರವರೆಗೆ ಪೂರ್ಣಗೊಳ್ಳುವ ಈ ದೇವಾಲಯ ದಕ್ಷಿಣ ಗೋಳಾರ್ಧದ ಅತಿದೊಡ್ಡ ಹಿಂದೂ ದೇವಾಲಯವಾಗಲಿದೆ ಎಂದು ಹೇಳಲಾಗಿದೆ.
1. ಸಂಪ್ರದಾಯದ ಪ್ರಸ್ತುತ ಗುರು ಮಹಂತ ಸ್ವಾಮಿ ಮಹಾರಾಜ್ ಅವರ ಸಮ್ಮುಖದಲ್ಲಿ ದೇವಾಲಯದ ಸಾಂಸ್ಕೃತಿಕ ಸಂಕೀರ್ಣದ ಉದ್ಘಾಟನೆ ನಡೆಯಿತು.
2. ಎರಡನೇ ಹಂತದಲ್ಲಿ 2 ಸಾವಿರದ 500 ಚದರ ಮೀಟರ್ ವಿಸ್ತೀರ್ಣದ ಸಂಕೀರ್ಣದಲ್ಲಿ ಸಾಂಪ್ರದಾಯಿಕ ದೇವಾಲಯದ ಕೆಲಸ ಪ್ರಾರಂಭವಾಗಲಿದೆ. ಈ ದೇವಾಲಯವು ದಕ್ಷಿಣ ಆಫ್ರಿಕಾದ ಸ್ವಾಮಿನಾರಾಯಣ ಸಂಪ್ರದಾಯದ ಮಾನವೀಯ ಕಾರ್ಯಗಳ ಕೇಂದ್ರವಾಗಲಿದೆ.
3. ಸಂಪ್ರದಾಯದ ದಕ್ಷಿಣ ಆಫ್ರಿಕಾದ ವಕ್ತಾರ ಹೇಮಾಂಗ್ ದೇಸಾಯಿ ಮಾತನಾಡಿ, ಕೊರೊನಾ ಸಮಯದಲ್ಲಿ ಯಾವುದೇ ಅಡಚಣೆ ಉಂಟಾಗದಿದ್ದರೆ, ನಾವು ಈ ದೇವಾಲಯವನ್ನು ಬಹಳ ಹಿಂದೆಯೇ ನಿರ್ಮಿಸುತ್ತಿದ್ದೆವು. ಭಾರತದ ಜೈಪುರ ಮತ್ತು ತಿರುಪತಿ ಸೇರಿದಂತೆ ವಿವಿಧ ಭಾರತೀಯ ನಗರಗಳಿಂದ ಇಲ್ಲಿಗೆ ದೇವತೆಗಳ ವಿಗ್ರಹಗಳನ್ನು ತರಲಾಗಿದ್ದು, ಅವುಗಳ ಪ್ರಾಣಪ್ರತಿಷ್ಠಾಪನೆಯೂ ಆಗಿದೆ, ಎಂದು ಹೇಳಿದರು.