ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಕ್ಲೇನ್ ಮುಷ್ತಾಕ್ ತಮ್ಮ ಪೂರ್ವಜರು ‘ಹಿಂದೂ’ ಎಂದು ಸ್ವೀಕೃತಿ !

ಇಂಜಮಾಮ್ ಉಲ್ ಹಕ್ ತಮ್ಮ ಪೂರ್ವಜರು ಹರಿಯಾಣದವರು ಎಂದು ಮಾಹಿತಿ ನೀಡಿದ್ದಾರೆ!

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಕ್ಲೇನ್ ಮುಷ್ತಾಕ್ ಟಿವಿ ಚರ್ಚೆಯೊಂದರಲ್ಲಿ ತಮ್ಮ ಪೂರ್ವಜರು ಹಿಂದೂಗಳು ಎಂದು ಒಪ್ಪಿಕೊಂಡಿದ್ದಾರೆ. ಸಕ್ಲೇನ್ ನ ಮುತ್ತಜ್ಜ ರೂಡ್ ಸಿಂಗ್ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಮತ್ತು ನಂತರ ಮೌಲಾನಾ (ಇಸ್ಲಾಂ ವಿದ್ವಾಂಸ) ಆದ ಇಂಜಮಾಮ್ ಉಲ್ ಹಕ್ ಭಾರತದ ಹರಿಯಾಣದ ಹಿಸಾರ್ ನಗರದೊಂದಿಗಿನ ತನ್ನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಇಂಜಮಾಮ್ ಉಲ್ ಹಕ್, ತನ್ನ ಮೂಲ ಕುಟುಂಬ ಹಿಸಾರ್‌ನಿಂದ ಬಂದಿದ್ದು, ಅವರ ತಂದೆ ಹಿಸಾರ್‌ನಲ್ಲಿರುವ ತಮ್ಮ ಮನೆಯನ್ನು ನೋಡಿದ್ದಾರೆ, ಎಂದು ಹೇಳಿದ್ದಾರೆ.

1. ಸಕ್ಲೇನ್ ಮುಷ್ತಾಕ್, “ನಟ ಕಪಿಲ್ ಶರ್ಮಾ ನನ್ನ ಗ್ರಾಮದವರು. ನಾನು ಅಮೃತಸರದವನು. ನನ್ನ ಅಜ್ಜ ಅಮೃತಸರದವರು. ರೂಡ್ ಸಿಂಗ್ ನನ್ನ ಮುತ್ತಜ್ಜ. ಅವರು ಮತಾಂತರಗೊಂಡರು ಮತ್ತು ನಾವು ಮುಸ್ಲಿಮರಾದೆವು. ನಂತರ ನಾವು ಪಾಕಿಸ್ತಾನಕ್ಕೆ ಬಂದೆವು” ಎಂದು ಹೇಳಿದ್ದಾರೆ.

2. ಇಂಜಮಾಮ್, “ನನ್ನ ದತ್ತು ಅತ್ತೆಯ ಹೆಸರು ಪುಷ್ಪಾ” ಎಂದು ಹೇಳಿದ್ದಾರೆ. ಈಗ ಜನರು, “ಇತರ ಧರ್ಮಗಳ ಜನರನ್ನು ಮತಾಂತರ ಮಾಡಲು ಕುಖ್ಯಾತಿ ಪಡೆದ ಇಂಜಮಾಮ್‌ಗೆ ಪುಷ್ಪಾ ಅತ್ತೆಯ ನೆನಪು ಬರುತ್ತಿದೆಯೇ?” ಎಂದು ಪ್ರಶ್ನಿಸುತ್ತಿದ್ದಾರೆ.

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮತ್ತು ನಂತರ ಪಾಕಿಸ್ತಾನದ ಕ್ರಿಕೆಟ್ ತರಬೇತುದಾರರಾದ ಬಾಬ್ ಬುಲ್ಮರ್ ಅವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಇಂಜಮಾಮ್ ಮತ್ತು ಸಕ್ಲೇನ್ ಜೋಡಿ ಸಂಚು ರೂಪಿಸಿತ್ತು ಎಂಬ ಆರೋಪವಿದೆ.

 

ಸಂಪಾದಕೀಯ ನಿಲುವು

ಭಾರತ ಮತ್ತು ಪಾಕಿಸ್ತಾನ ಮಾತ್ರವಲ್ಲದೆ, ಅಫ್ಘಾನಿಸ್ತಾನ ಸೇರಿದಂತೆ ಬಹುತೇಕ ಇಸ್ಲಾಮಿಕ್ ದೇಶಗಳ ಜನರು ಹಿಂದೆ ಹಿಂದೂಗಳಾಗಿದ್ದರು. ಕತ್ತಿಯ ಬಲದಿಂದ ಅವರನ್ನು ಮತಾಂತರ ಮಾಡಲಾಗಿದೆ. ಈಗ ಅವರು ಅದನ್ನು ಬಹಿರಂಗವಾಗಿ ಹೇಳಲು ಪ್ರಾರಂಭಿಸಿದ್ದಾರೆ. ಭವಿಷ್ಯದಲ್ಲಿ ಅವರು ಮತ್ತೆ ಹಿಂದೂ ಧರ್ಮಕ್ಕೆ ಮರಳಿದರೆ ಆಶ್ಚರ್ಯವಿಲ್ಲ!