Bangladesh Hindu Temple Attack : ಬಾಂಗ್ಲಾದೇಶದಲ್ಲಿ ಅಜ್ಞಾತರಿಂದ ಹಿಂದೂ ದೇವಾಲಯದ ಮೇಲೆ ಬಾಂಬ್ ದಾಳಿ ಮತ್ತು ಮೂರ್ತಿಗಳು ಧ್ವಂಸ!

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಸಿರಾಜ್‌ಗಂಜ್‌ನ ಕಾಜಿಪುರ ಉಪಜಿಲ್ಲೆಯಲ್ಲಿ ‘ಶಿಖಾ ಸ್ಮೃತಿ ಸರ್ವ ಜನ ದುರ್ಗಾ ಮಂದಿರ’ದ ಮೇಲೆ ದಾಳಿ ನಡೆಸಿ, ಅಲ್ಲಿನ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ. ಈ ಘಟನೆ ಮಾರ್ಚ್ ೧ ರ ರಾತ್ರಿ ನಡೆದಿದೆ.

೧. ದೇವಾಲಯದ ಉಸ್ತುವಾರಿ ಜತಿನ್ ಕುಮಾರ್ ಕರ್ಮಾಕರ್ ಅವರು, ಯಾರೋ ಹೊರಗಿನಿಂದ ದೇವಾಲಯದ ಒಳಗೆ ಬಾಂಬ್ ಎಸೆದು ಮೂರ್ತಿಗಳನ್ನು ಒಡೆದಿದ್ದಾರೆ. ಪ್ರತಿ ಭಾನುವಾರ ಬೆಳಿಗ್ಗೆ ನಾನು ದೇವಸ್ಥಾನದಲ್ಲಿ ಪೂಜೆ ಮಾಡಲು ಹೋಗುತ್ತೇನೆ. ಮಾರ್ಚ್ ೨ ರಂದು ನಾನು ಅಲ್ಲಿಗೆ ಹೋದಾಗ ಮೂರ್ತಿಗಳು ಒಡೆದಿರುವುದು ಕಂಡುಬಂತು. ಈ ಬಗ್ಗೆ ಆಡಳಿತಕ್ಕೆ ಮಾಹಿತಿ ನೀಡಲಾಗಿದೆ.

೨. ಕಾಜಿಪುರ ಉಪಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ದಿವಾನ್ ಅಕ್ರಮುಲ್ ಹಕ್ ಮತ್ತು ಕಾಜಿಪುರ ಪೊಲೀಸ್ ಠಾಣೆಯ ಅಧಿಕಾರಿ ನೂರಿ ಆಲಂ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನೂರಿ ಆಲಂ ಅವರು ಘಟನಾ ಸ್ಥಳವನ್ನು ಪರಿಶೀಲಿಸಲಾಗಿದೆ ಎಂದು ಹೇಳಿದರು. ರಾತ್ರಿಯ ಸಮಯದಲ್ಲಿ ದೇವಾಲಯದ ಪವಿತ್ರ ಮೂರ್ತಿಗಳಿಗೆ ಹಾನಿ ಮಾಡಲಾಗಿದೆ. ಇದರಲ್ಲಿ ಭಾಗಿಯಾದವರನ್ನು ಗುರುತಿಸಲು ತನಿಖೆ ನಡೆಯುತ್ತಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡುವವರು ಜಿಹಾದಿ ಮುಸ್ಲಿಮರಲ್ಲದೆ ಬೇರೆ ಯಾರಾಗಿರಲು ಸಾಧ್ಯ?
  • ಭಾರತದಲ್ಲಿ ಯಾವುದೇ ಮಸೀದಿ ಅಥವಾ ಚರ್ಚ್ ಮೇಲೆ ದಾಳಿಯಾದರೆ, ಆಕಾಶ-ಪಾತಾಳ ಒಂದು ಮಾಡುತ್ತಾರೆ; ಆದರೆ ಜಗತ್ತಿನಾದ್ಯಂತ ಹಿಂದೂ ದೇವಾಲಯಗಳ ಮೇಲೆ ದಾಳಿಯಾದರೂ ಹಿಂದೂಗಳು ಸುಮ್ಮನಿರುತ್ತಾರೆ. ಇಂತಹ ನಿಷ್ಕ್ರಿಯ ಹಿಂದೂಗಳನ್ನು ದೇವರು ಏಕೆ ರಕ್ಷಿಸಬೇಕು?