‘ಉಚಿತ ಹಣ ನೀಡಲು ಸರಕಾರದ ಬಳಿ ಹಣವಿಲ್ಲವಂತೆ!’

ಶಿಮ್ಲಾ (ಹಿಮಾಚಲ ಪ್ರದೇಶ) – ಉಚಿತ ಉಡುಗೊರೆಗಳ ವಿತರಣೆ ಮಾಡಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರಕಾರದ ನಿಗಾ ಈಗ ದೇವಸ್ಥಾನಗಳ ಮೇಲಿದೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ ಸಿಂಗ್ ಸುಕ್ಖು ನೇತೃತ್ವದ ಕಾಂಗ್ರೆಸ್ ಸರಕಾರವು ರಾಜ್ಯದ ಪ್ರಮುಖ ದೇವಾಲಯಗಳಿಗೆ ಪತ್ರ ಬರೆದಿದ್ದು, ಸರಕಾರಿ ಯೋಜನೆಗಳನ್ನು ನಡೆಸಲು ಹಣ ನೀಡುವಂತೆ ಕೋರಿದೆ. ಸರಕಾರ ಅವರ 2 ಯೋಜನೆಗಳಿಗೆ ಹಣವನ್ನು ನೀಡಲು ವಿನಂತಿಸಿದೆ. ಇದನ್ನು ಭಾಜಪ ಸರಕಾರ ವಿರೋಧಿಸಿದೆ.
1. ಕಾಂಗ್ರೆಸ್ ಸರಕಾರದ ಭಾಷೆ ಮತ್ತು ಸಂಸ್ಕೃತಿ ಇಲಾಖೆಯು ಜನವರಿ 29 ರಂದು ದೇವಸ್ಥಾನಗಳ ಟ್ರಸ್ಟಗಳಿಗೆ ಪತ್ರ ಬರೆದಿದೆ. ಇದರಲ್ಲಿ, ದೇವಸ್ಥಾನ ಸಮಿತಿಗಳಿಗೆ ಅಗತ್ಯವಿರುವ ಮಕ್ಕಳಿಗೆ ಸಹಾಯ ಮಾಡಲು ವಿನಂತಿಸಿದೆ.
2. ಸರಕಾರದ ಮನವಿಯ ಮೇರೆಗೆ ಜಿಲ್ಲಾ ನ್ಯಾಯಾಧೀಶರು ದೇವಸ್ಥಾನಗಳ ಟ್ರಸ್ಟಗಳಿಗೆ ಪತ್ರಗಳನ್ನು ಕಳುಹಿಸಿದೆ. ಸರಕಾರದ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳು ‘ಮುಖ್ಯಮಂತ್ರಿ ಸುಖಾಶ್ರಯ’ ಮತ್ತು ‘ಮುಖ್ಯಮಂತ್ರಿ – ಸುಖ ಶಿಕ್ಷಾ’ ಯೋಜನೆಗಳಿಗೆ ಸಹಾಯ ಮಾಡುತ್ತವೆ, ಎಂದು ಪತ್ರದಲ್ಲಿ ತಿಳಿಸಲಾಗಿತ್ತು.
3. ಹಿಮಾಚಲ ಪ್ರದೇಶದಲ್ಲಿ, 36 ಪ್ರಮುಖ ಹಿಂದೂ ದೇವಸ್ಥಾನಗಳನ್ನು ಜಿಲ್ಲಾಡಳಿತ ನಿರ್ವಹಿಸುತ್ತದೆ. ಈ ದೇವಸ್ಥಾನಗಳು ಕೋಟ್ಯಂತರ ರೂಪಾಯಿ ಆದಾಯವನ್ನು ಗಳಿಸುತ್ತವೆ. ಆದಾಗ್ಯೂ, ಇದು ಒಂದು ಮನವಿಯಾಗಿತ್ತು ಮತ್ತು ಈ ಯೋಜನೆಗಳನ್ನು ಬೆಂಬಲಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ದೇವಸ್ಥಾನಗಳ ಸಮಿತಿಗಳಿಗೆ ಬಿಡಲಾಗಿತ್ತು.
ಸರಕಾರದಿಂದ ಈ ಉಚಿತ ಹಣ ವಿತರಣಾ ಯೋಜನೆಗಳನ್ನು ನಡೆಸಲಾಗುತ್ತದೆ !
‘ಮುಖ್ಯಮಂತ್ರಿ – ಸುಖ ಶಿಕ್ಷಾ’ ಯೋಜನೆಯಡಿ, ವಿಧವೆಯರು, ವಿಚ್ಛೇದಿತರು, ನಿರ್ಗತಿಕ ಮಹಿಳೆಯರು ಮತ್ತು ಅಂಗವಿಕಲ ಪೋಷಕರ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕಾಂಶಕ್ಕಾಗಿ ಆರ್ಥಿಕ ನೆರವು ನೀಡಲಾಗುತ್ತಿದೆ. ಇದಕ್ಕೆ ಅರ್ಹತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಇದರ ಅಡಿಯಲ್ಲಿ, ಅಂತಹ ಪ್ರತಿ ಮಗುವಿಗೆ ತಿಂಗಳಿಗೆ 1,000 ರೂ.ಗಳನ್ನು ನೀಡಲಾಗುತ್ತಿದೆ.
‘ಮುಖ್ಯಮಂತ್ರಿ ಸುಖಾಶ್ರಯ’ ಯೋಜನೆಯಡಿಯಲ್ಲಿ, ಸರಕಾರವು 6 ಸಾವಿರ ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ‘ರಾಜ್ಯದ ಮಕ್ಕಳು’ ಎಂಬ ಸ್ಥಾನಮಾನವನ್ನು ನೀಡಿದೆ.
ಭಾಜಪದಿಂದ ತೀವ್ರ ವಿರೋಧ ವ್ಯಕ್ತ

ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಜಯರಾಮ ಠಾಕೂರ ಮಾತನಾಡಿ, ಕಾಂಗ್ರೆಸ್ ಸರಕಾರ ಸನಾತನ ಧರ್ಮ ಮತ್ತು ಹಿಂದೂ ಧರ್ಮವನ್ನು ವಿರೋಧಿಸುತ್ತದೆ ಮತ್ತು ಮತ್ತೊಂದೆಡೆ ದೇವಸ್ಥಾನಗಳಿಂದ ಹಣವನ್ನು ಪಡೆದು ಯೋಜನೆಗಳನ್ನು ನಡೆಸಲು ಬಯಸುತ್ತದೆ’, ಎಂದು ಹೇಳಿದರು. ದೇವಸ್ಥಾನಗಳಿಂದ ಹಣ ಸಂಗ್ರಹಿಸಿ ಸರಕಾರಕ್ಕೆ ತ್ವರಿತವಾಗಿ ಕಳುಹಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ. ಇದನ್ನು ವಿರೋಧಿಸುವಂತೆ ಠಾಕೂರ್ ಜನರಲ್ಲಿ ಮನವಿ ಮಾಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಕೇವಲ 2 ದೇವಸ್ಥಾನಗಳಲ್ಲಿ ಮಾತ್ರ ಇಂತಹ ದೇವನಿಧಿ ಇದೆ!
ಹಿಮಾಚಲ ಪ್ರದೇಶ ಸರಕಾರದ ಅಧೀನದಲ್ಲಿರುವ 36 ದೇವಾಲಯಗಳಲ್ಲಿ ಅತ್ಯಂತ ಶ್ರೀಮಂತ ದೇವಾಲಯವೆಂದರೆ ಉನಾ ಜಿಲ್ಲೆಯಲ್ಲಿರುವ ಮಾ ಚಿಂತಾಪೂರ್ಣಿ ದೇವಸ್ಥಾನ. ಈ ದೇವಸ್ಥಾನದ ಖಜಾನೆಯಲ್ಲಿ 100 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಠೇವಣಿ, 1 ಸಾವಿರ 98 ಕೆಜಿಗೂ ಹೆಚ್ಚು ಚಿನ್ನ ಮತ್ತು 72 ಸಾವಿರ ಕೆಜಿ ಬೆಳ್ಳಿ ಇದೆ.
ಬಿಲಾಸಪುರದ ಶಕ್ತಿಪೀಠ ನೈನಾ ದೇವಿ ದೇವಾಲಯವು 11 ಕೋಟಿ ರೂಪಾಯಿ ನಗದು ಮತ್ತು ಬ್ಯಾಂಕಿನಲ್ಲಿ 58 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಸ್ಥಿರ ಠೇವಣಿ ಹೊಂದಿದೆ. 1 ಸಾವಿರ 80 ಕೆಜಿ ಚಿನ್ನ ಮತ್ತು 72 ಸಾವಿರ ಕೆಜಿಗೂ ಹೆಚ್ಚು ಬೆಳ್ಳಿಯೂ ಇದೆ. ಇದಲ್ಲದೆ, ಇತರ ಹಲವು ಶಕ್ತಿ ಪೀಠಗಳು ಸಹ ಕೋಟ್ಯಂತರ ರೂಪಾಯಿಗಳ ಆಸ್ತಿಯನ್ನು ಹೊಂದಿವೆ.
The Congress government of Himachal Pradesh has asked Hindu temples for money to fund its schemes!
“The government no longer has any funds left for its free-money schemes!”
If the Congress government needs money, why doesn’t it seek funds from mosques, churches, or other… pic.twitter.com/FEIKcTvqqc
— Sanatan Prabhat (@SanatanPrabhat) February 28, 2025
ಸಂಪಾದಕೀಯ ನಿಲುವು
|