ಪಾಕಿಸ್ತಾನ ಸರಕಾರ ದೇವಾಲಯಗಳು ಮತ್ತು ಗುರುದ್ವಾರಗಳ ಜೀರ್ಣೋದ್ಧಾರಕ್ಕಾಗಿ 1 ಅಬ್ಜ ರೂಪಾಯಿಗಳನ್ನು ಖರ್ಚು ಮಾಡಲಿದೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನ ಸರಕಾರವು ದೇಶದಲ್ಲಿನ ದೇವಾಲಯಗಳು ಮತ್ತು ಗುರುದ್ವಾರಗಳನ್ನು ಪುನಃಸ್ಥಾಪಿಸಲು ಮತ್ತು ಅಲಂಕರಿಸಲು ಪ್ರಮುಖ ಯೋಜನೆಯೊಂದನ್ನು ಪ್ರಾರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ, 100 ಪಾಕಿಸ್ತಾನಿ ಕೋಟಿ ರೂಪಾಯಿ ಖರ್ಚು ಮಾಡಿ ಈ ಧಾರ್ಮಿಕ ಸ್ಥಳಗಳನ್ನು ಸುಂದರಗೊಳಿಸಲಾಗುತ್ತದೆ ಮತ್ತು ನವೀಕರಣಗೊಳಿಸಲಾಗುವುದು. ಸೈಯದ್ ಅತೌರ ರೆಹಮಾನ್ ಇವರ ಅಧ್ಯಕ್ಷತೆಯಲ್ಲಿ ನಡೆದ ‘ಇವೇಕ್ಯುಯೇಟ್ ಟ್ರಸ್ಟ್ ಪ್ರಾಪರ್ಟಿ ಬೋರ್ಡ್’ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಈ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯಗಳ ಪ್ರಾರ್ಥನಾ ಸ್ಥಳಗಳಿಗೆ ವಿಶೇಷ ಗಮನ ನೀಡಲಾಗುವುದು ಮತ್ತು ಅಪಾರ ಪ್ರಮಾಣದ ಹಣವನ್ನು ಖರ್ಚು ಮಾಡಲಾಗುವುದು ಎಂದು ರೆಹಮಾನ್ ಹೇಳಿದರು.ಮಂಡಳಿಯು ಈ ವರ್ಷ 1 ಅಬ್ಜ ರೂಪಾಯಿಗಳಿಗಿಂತಲೂ ಅಧಿಕ ಆದಾಯ ಗಳಿಸಿದೆ ಎಂದರು.

ಸಂಪಾದಕೀಯ ನಿಲುವು

‘ನಾವು ಅಲ್ಪಸಂಖ್ಯಾತ ಸಮುದಾಯಕ್ಕಾಗಿ ಏನಾದರೂ ಮಾಡುತ್ತೇವೆ’ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸುವುದಕ್ಕಾಗಿ ಪಾಕಿಸ್ತಾನವು ನಾಟಕವಾಡುತ್ತಿದೆ. ಇದೇ ಇದರಿಂದ ಕಂಡು ಬರುತ್ತದೆ. ಇಂದಿಗೂ ಅಲ್ಲಿ ಹಿಂದೂಗಳ ಅಸಂಖ್ಯ ದೇವಾಲಯಗಳನ್ನು ಕೆಡವಲಾಗುತ್ತಿದೆ, ಅದರ ಬಗ್ಗೆ ಏನು ? ಪಾಕಿಸ್ತಾನಕ್ಕೆ ನಿಜವಾಗಿಯೂ ಅಲ್ಲಿನ ಅಲ್ಪಸಂಖ್ಯಾತರ ಬಗ್ಗೆ ಏನಾದರೂ ಮಾಡಲು ಬಯಸಿದರೆ, ಅದು ಮೊದಲು ಅಲ್ಲಿನ ಹಿಂದೂಗಳ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ನಿಲ್ಲಿಸಬೇಕು!