ಫ್ರಾನ್ಸ್‌ನಲ್ಲಿ ಇಸ್ಲಾಮಿಕ್ ಭಯೋತ್ಪಾದಕರಿಂದ ‘ಅಲ್ಲಾಹು ಅಕ್ಬರ್’ ಘೋಷಣೆ ಕೂಗುತ್ತಾ ದಾಳಿ

1 ವ್ಯಕ್ತಿ ಸಾವು, ಪೋಲಿಸ ಸಹಿತ ಹಲವರಿಗೆ ಗಾಯ

ಪ್ಯಾರಿಸ್ (ಫ್ರಾನ್ಸ್): ಫ್ರಾನ್ಸ್‌ನ ಮುಲ್ಹೌಸ್ ನಗರದಲ್ಲಿ ನಡೆದ ಪ್ರತಿಭಟನೆಯ ವೇಳೆ, ‘ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗುತ್ತಾ ವ್ಯಕ್ತಿಯೊಬ್ಬನು ಅನೇಕರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಈ ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. 2 ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಇತರ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದಾಳಿಯ ನಂತರ, ಪೊಲೀಸರು ಸಂಪೂರ್ಣ ಪ್ರದೇಶವನ್ನು ಸುತ್ತುವರೆದು ಇಸ್ಲಾಮಿಕ್ ಭಯೋತ್ಪಾದಕನನ್ನು ವಶಕ್ಕೆ ತೆಗೆದುಕೊಂಡರು. ಅವನು ಅಲ್ಜೀರಿಯಾದವನು. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಇದನ್ನು ‘ಇಸ್ಲಾಮಿಕ್ ಭಯೋತ್ಪಾದಕ ದಾಳಿ’ ಎಂದು ಕರೆದಿದ್ದಾರೆ. “ನಮ್ಮ ಸರಕಾರ ಫ್ರೆಂಚ್ ನೆಲದಿಂದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡಲು ಬದ್ಧವಾಗಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

1. ಘಟನೆ ನಡೆದ ಸಮಯದಲ್ಲಿ, ದಾಳಿಕೋರನು ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದನು. ಪೊಲೀಸ್ ಅಧಿಕಾರಿಗಳನ್ನು ರಕ್ಷಿಸಲು 69 ವರ್ಷದ ಪೋರ್ಚುಗೀಸ್ ಪ್ರಜೆ ಮುಂದೆ ಬಂದರು; ಆದರೆ ದಾಳಿಕೋರನು ಅವರನ್ನು ಚಾಕುವಿನಿಂದ ಇರಿದನು, ಅದರಲ್ಲಿ ಆ ವ್ಯಕ್ತಿ ಮೃತಪಟ್ಟರು.

2. ದಾಳಿಕೋರನು ಈಗಾಗಲೇ ಫ್ರಾನ್ಸ್‌ನ ಭಯೋತ್ಪಾದಕ ಪಟ್ಟಿಯಲ್ಲಿದ್ದನು. 2015 ರಲ್ಲಿ ಚಾರ್ಲಿ ಹೆಬ್ದೊ ಕಚೇರಿ ಮತ್ತು ಯಹೂದಿ ಸೂಪರ್‌ಮಾರ್ಕೆಟ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಶಂಕಿತ ಇಸ್ಲಾಮಿಕ್ ಭಯೋತ್ಪಾದಕರ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು.

3. ಈ ದಾಳಿಕೋರನನ್ನು ಈ ಹಿಂದೆ ಭಯೋತ್ಪಾದಕ ಕೃತ್ಯ ಅಥವಾ ಗುಂಪನ್ನು ಬೆಂಬಲಿಸಿದ ಅಪರಾಧಗಳಲ್ಲಿ ದೋಷಿ ಎಂದು ಪರಿಗಣಿಸಲಾಗಿತ್ತು. ಅವನನ್ನು ಅಲ್ಜೀರಿಯಾಕ್ಕೆ ಕಳುಹಿಸಲಾಗುತ್ತಿತ್ತು; ಆದರೆ ಆತನ ದೇಶವು ಇಲ್ಲಿಯವರೆಗೆ 10 ಬಾರಿ ಅವರನ್ನು ಸ್ವೀಕರಿಸಲು ನಿರಾಕರಿಸಿದೆ. ಇಸ್ಲಾಮಿಕ್ ಭಯೋತ್ಪಾದನೆಯ ಹಿಂದಿನ ಕಾರಣ ವಲಸೆಯ ಸಮಸ್ಯೆಯಾಗಿದೆ.

ಸಂಪಾದಕೀಯ ನಿಲುವು

ಯೂರೋಪಿನಲ್ಲಿ ಅತಿ ಹೆಚ್ಚು ಮುಸ್ಲಿಮರು ಫ್ರಾನ್ಸ್‌ನಲ್ಲಿರುವುದರಿಂದ ಫ್ರಾನ್ಸ್‌ನಲ್ಲಿ ಜಿಹಾದಿ ದಾಳಿಗಳು ಅಥವಾ ಗಲಭೆಗಳು ಹೆಚ್ಚಾಗಿ ಕಂಡುಬರುತ್ತವೆ. ಈಗ ಪಾಶ್ಚಿಮಾತ್ಯ ದೇಶಗಳು ಜಾಗತಿಕವಾಗಿ ಜಿಹಾದಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಸಂಘಟಿತವಾಗುವುದು ಅಗತ್ಯವಾಗಿದೆ!