ಢಾಕಾ ರಾಜಶಾಹಿ ಬಸ್ ನಲ್ಲಿ ೨ ಹಿಂದೂ ಮಹಿಳೆಯರ ಮೇಲೆ ಸಾಮೂಹಿಕ ಬಲತ್ಕಾರ

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯದ ಘಟನೆಗಳು ಮುಂದುವರಿಕೆ !

ಢಾಕಾ – ಬಾಂಗ್ಲಾದೇಶದಲ್ಲಿನ ಢಾಕಾ ರಾಜಶಾಹಿ ಬಸ್ ನಲ್ಲಿ ಮುಸಲ್ಮಾನ ರೌಡಿಗಳಿಂದ ೨ ಹಿಂದೂ ಮಹಿಳೆಯರನ್ನು ಗುರಿ ಮಾಡುತ್ತಾ ಅವರ ಆಭರಣಗಳು ಮತ್ತು ಮೊಬೈಲ್ ಗಳನ್ನು ಲೂಟಿ ಮಾಡಿದರು ಮತ್ತು ಅದರ ನಂತರ ಬಸ್ ನಲ್ಲಿ ಇತರ ಪ್ರಯಾಣಿಕರ ಎದುರಿನಲ್ಲಿ ಅವರ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದರು. ಈ ಮಹಿಳೆಯರಿಗೆ ಅವರ ಗಂಡನಿಂದ ಬೇರೆ ಮಾಡಿ ಹಿಂದಿನ ಸೀಟಿಗೆ ಕರೆದುಕೊಂಡು ಹೋಗಿ ಅವರ ಮೇಲೆ ಬರಕ್ಕಾರ ಮಾಡಿದ್ದಾರೆ. ಅವರ ಪತಿ ವಿರೋಧಿಸಿದಾಗ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಾಂಗ್ಲಾದೇಶ ಸರಕಾರದಿಂದ ಈ ಘಟನೆಯ ವಿಸ್ತೃತ ವಿಚಾರಣೆ ನಡೆಸಬೇಕೆಂದು ಆಗ್ರಹಿಸಲಾಗುತ್ತಿದೆ.

೧. ಬಸ್ ನಲ್ಲಿ ಇತರ ಪ್ರಯಾಣಿಕರ ಎದುರಿನಲ್ಲಿ ದರೋಡೆಕೋರರ ಗುಂಪಿಗೆ ಮೇಲಿಂದ ಮೇಲೆ ವಿರೋಧಿಸುವ ಪ್ರಯತ್ನ ಮಾಡಿದರು, ಆಗ ಅವರಿಗೆ ಜೀವ ಬೆದರಿಕೆ ನೀಡಲಾಯಿತು. ಈ ಮತಾಂಧ ಗುಂಪಿನಿಂದ ಕೇವಲ ಹಿಂದೂ ಮಹಿಳೆಯರನ್ನು ಗುರಿ ಮಾಡಿ ಬಲತ್ಕಾರ ಮಾಡಿದರು.

೨. ಇಬ್ಬರು ಸಂತ್ರಸ್ತ ಮಹಿಳೆಯರು ಬರಾಯಿಗ್ರಾಮದಲ್ಲಿ ಇಳಿದ ನಂತರ ಬರಾಯಿಗ್ರಾಮ ಪೋಲಿಸರಿಗೆ ಅವರ ಮೇಲಿನ ದೌರ್ಜನ್ಯದ ಮಾಹಿತಿ ನೀಡಿದರು. ಈ ಘಟನೆಯಲ್ಲಿ ಬಸ್ ಚಾಲಕ, ಸಹಾಯಕ ಮತ್ತು ಮೇಲ್ವಿಚಾರಕ ಇವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಇನ್ನೂ ಎಷ್ಟು ದೌರ್ಜನ್ಯ ನಡೆದ ಮೇಲೆ ಭಾರತ ಸರಕಾರ ಅಲ್ಲಿಯ ಹಿಂದುಗಳಿಗಾಗಿ ಆಕ್ರಮಣಕಾರಿ ನಿಲುವು ತಾಳುವುದು ?