ಆಧ್ಯಾತ್ಮಿಕ ತೊಂದರೆ ಇರುವ ವ್ಯಕ್ತಿಯು ತಯಾರಿಸಿದ ಆಹಾರವನ್ನು ಸೇವಿಸಿದಾಗ ಆಗುವ ತೊಂದರೆ ಮತ್ತು ಅವರಲ್ಲಿರುವ ಗುಣಗಳಿಂದಾಗಿ ಆಗುವ ಒಳ್ಳೆಯ ಪರಿಣಾಮ !

‘೨೭.೭.೨೦೨೦ ಈ ದಿನದಂದು ನನ್ನ ತಾಯಿಯು ಮನೆಯಲ್ಲಿ ತಯಾರಿಸಿದ ಆಹಾರವನ್ನು ನನಗಾಗಿ ಆಶ್ರಮಕ್ಕೆ ಕಳುಹಿಸಿದ್ದಳು. ಆ ಆಹಾರವನ್ನು ಸೇವಿಸಿದ ನಂತರ ನನಗಾದ ತೊಂದರೆ ಮತ್ತು ನನ್ನ ಮೇಲಾದ ಒಳ್ಳೆಯ ಪರಿಣಾಮವನ್ನು ಇಲ್ಲಿ ಕೊಟ್ಟಿದ್ದೇನೆ.

೧. ಅರಿವಾದ ತೊಂದರೆ

೧ ಅ. ತಾಯಿಯು ತಯಾರಿಸಿದ ಆಹಾರವನ್ನು ಸೇವಿಸಿದಾಗ ನನ್ನ ಆಧ್ಯಾತ್ಮಿಕ ತೊಂದರೆ ಹೆಚ್ಚಾಗಿ ಅದರ ಪರಿಣಾಮ ಮರುದಿನದವರೆಗೆ ಉಳಿಯುವುದು : ನನ್ನ ತಾಯಿಗೆ ತೀವ್ರ ಆಧ್ಯಾತ್ಮಿಕ ತೊಂದರೆ ಇದೆ. ‘ಅವಳಿಗಾಗುತ್ತಿರುವ ಆಧ್ಯಾತ್ಮಿಕ ತೊಂದರೆಯಿಂದಾಗಿ ಅವಳು ತಯಾರಿಸಿದ ಆಹಾರವನ್ನು ಸೇವಿಸಿದ ನಂತರ ನನ್ನ ಆಧ್ಯಾತ್ಮಿಕ ತೊಂದರೆ ಹೆಚ್ಚಾಯಿತು’, ಎಂದು ನನಗೆ ಅರಿವಾಯಿತು. ಮರುದಿನ ಬೆಳಗ್ಗೆ ವರೆಗೆ ನಾನು ಆಧ್ಯಾತ್ಮಿಕ ತೊಂದರೆಯನ್ನು ಅನುಭವಿಸಿದೆನು.

೧ ಆ. ತಾಯಿಯು ಕಳುಹಿಸಿದ ಆಹಾರವನ್ನು ಸೇವಿಸಿದ ನಂತರ ನನ್ನ ವರ್ತನೆ ತಾಯಿಯಂತಾಗುವುದು ಮತ್ತು ಯಜಮಾನರು ಏನೋ ಹೇಳುತ್ತಿರುವಾಗ ಅವರಿಗೆ ಪ್ರತ್ಯುತ್ತರ ನೀಡುವುದು : ತಾಯಿಯು ಕಳುಹಿಸಿದ ಆಹಾರವನ್ನು ಸೇವಿಸಿದ ನಂತರ ನನ್ನ ವರ್ತನೆಯಲ್ಲಿಯೂ ಬದಲಾವಣೆ ಆಯಿತು. ನನ್ನ ಯಜಮಾನರು ನನಗೆ ಏನೋ ಹೇಳುತ್ತಿರುವಾಗ ನಾನು ಅವರ ಮಾತುಗಳನ್ನು ಶಾಂತವಾಗಿ ಕೇಳಿಸಿಕೊಳ್ಳದೇ ಅವರಿಗೆ ಪ್ರತ್ಯುತ್ತರ ನೀಡುತ್ತಿದ್ದೆ. ಸಾಮಾನ್ಯವಾಗಿ ನಾನು ಅವರಿಗೆ ಪ್ರತಿಯೊಂದು ವಾಕ್ಯಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ‘ಇಂದು ನಾನು ಅವರ ಪ್ರತಿಯೊಂದು ವಾಕ್ಯವನ್ನು ಕೇಳಿದ ನಂತರ ಅವರಿಗೆ ವಿರುದ್ಧ ಉತ್ತರಗಳನ್ನು ನೀಡುತ್ತಿದ್ದೇನೆ’, ಎಂದು ನನಗೆ ಅರಿವಾಯಿತು; ಆದರೆ ನನಗೆ ಅದನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗಲಿಲ್ಲ. ನಾನು ನನ್ನ ತಾಯಿಯಂತೆ ಮಾತನಾಡುತ್ತಿದ್ದೆನು. ಅವಳು ಇತರರು ಮಾತನಾಡುವುದನ್ನು ಪೂರ್ತಿ ಕೇಳಿಸಿಕೊಳ್ಳುವುದಿಲ್ಲ ಮತ್ತು ಅವಳು ಯಾವಾಗಲೂ ಇತರರಿಗೆ ಕಲಿಸುತ್ತಿರುತ್ತಾಳೆ. ‘ನನ್ನ ನಡೆ-ನುಡಿ ಅವಳಂತೆ ಆಗಿದೆ’, ಎಂದು ನನ್ನ ಗಮನಕ್ಕೆ ಬಂದಿತು. ‘ಅವಳಿಗಿರುವ ಆಧ್ಯಾತ್ಮಿಕ ತೊಂದರೆ ಮತ್ತು ಅವಳಲ್ಲಿರುವ ಸ್ವಭಾವದೋಷಗಳ ಪರಿಣಾಮ ನನ್ನ ಮೇಲಾಗಿದೆ’, ಎಂದು ನನಗೆ ಅರಿವಾಯಿತು.

೧ ಇ. ನಕಾರಾತ್ಮಕತೆ ಹೆಚ್ಚಾಗುವುದು : ಆ ದಿನ ಮಧ್ಯಾಹ್ನದ ನಂತರ ನನ್ನ ಮನಸ್ಸಿನ ನಕಾರಾತ್ಮಕ ವಿಚಾರಗಳ ಪ್ರಮಾಣವೂ ಹೆಚ್ಚಾಯಿತು. ಯಜಮಾನರು ಮತ್ತು ಸಹೋದರಿ ಇವರೊಂದಿಗೆ ಮಾತನಾಡುವಾಗ ನಾನು ಇತರರ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದೆ.

೨. ತಾಯಿಯು ಕಳುಹಿಸಿದ ಆಹಾರವನ್ನು ಸೇವಿಸಿದ ನಂತರ ಆದ ಒಳ್ಳೆಯ ಪರಿಣಾಮ

ಅ. ಮರುದಿನ ‘ನಾನು ಕ್ರಿಯಾಶೀಲನಾಗಿದ್ದೇನೆ’, ಎಂದು ನನಗೆ ಅರಿವಾಯಿತು. ಸಾಮಾನ್ಯವಾಗಿ ನಾನು ಎಲ್ಲವನ್ನೂ ನಿಧಾನವಾಗಿ ಮಾಡುತ್ತೇನೆ.

ಆ. ಸಾಮಾನ್ಯವಾಗಿ ಬೇಗನೆ ಏಳಬೇಕೆಂದು ನಿರ್ಧರಿಸಿದರೂ ನನಗೆ ಬೆಳಗ್ಗೆ ಬೇಗ ಏಳಲು ಸಾಧ್ಯವಾಗುವುದಿಲ್ಲ. ತಾಯಿಯು ಕಳುಹಿಸಿದ ಆಹಾರವನ್ನು ಸೇವಿಸಿದ ನಂತರ ಮರುದಿನ ಬೆಳಗ್ಗೆ ನಾನು ಎಂದಿಗಿಂತಲೂ ಬೇಗ ಎದ್ದೆನು.

ಇ. ಬೇಗ ಎದ್ದರೂ ನನಗೆ ಮಂಪರು ಅಥವಾ ಇತರ ಯಾವುದೇ ತೊಂದರೆಯಾಗುತ್ತಿರಲಿಲ್ಲ.

ಈ. ನನ್ನ ಮೇಲೆ ಕೆಟ್ಟ (ತೊಂದರೆದಾಯಕ) ಶಕ್ತಿಗಳ ಆವರಣ ವಿದ್ದರೂ ನಾನು ಕೃತಿಯ ಸ್ತರದಲ್ಲಿ ಅದನ್ನು ನಿವಾರಿಸಲು ಪ್ರಯತ್ನಿಸಿದೆನು.

ಉ. ನಾನು ವ್ಯಾಯಾಮ ಮತ್ತು ಬಾಕಿ ಉಳಿದ ವಿಷಯವನ್ನೂ ಪೂರ್ಣಗೊಳಿಸಿದೆನು.

ಊ. ತಾಯಿ ಬಹಳ ಗತಿಶೀಲ(ನಿರಂತರ ಚಲನೆಯಲ್ಲಿರುವುದು) ಮತ್ತು ಕ್ರಿಯಾಶೀಲಳಿದ್ದಾಳೆ. ಅವಳು ನಿರಂತರ ಏನಾದರೊಂದು ಕೃತಿ ಮಾಡುತ್ತಿರುತ್ತಾಳೆ. ಅದೇ ರೀತಿಯ ಪರಿಣಾಮ ನನ್ನ ಮೇಲಾಯಿತು. ನಾನು ಸೇವೆಯನ್ನು ಮಾಡುವಾಗ ಕೃತಿ ಮತ್ತು ಮನಸ್ಸು ಈ ಎರಡೂ ಸ್ತರಗಳಲ್ಲಿ ಕ್ರಿಯಾಶೀಲಳಾಗಿದ್ದೆನು. ಕಳೆದ ೨-೩ ದಿನಗಳಿಂದ ನಾನು ಬಹಳ ನಿಧಾನಳಾಗಿದ್ದೆ; ಆದರೆ ಇಂದು ನಾನು ಪ್ರತಿಯೊಂದು ಕೃತಿಯನ್ನು ವೇಗವಾಗಿ ಮಾಡುತ್ತಿದ್ದೆನು.

ಎ. ತಾಯಿಯು ಮುಕ್ತಮನಸ್ಸಿನವಳು ಮತ್ತು ಹೆಚ್ಚು ಮಾತನಾಡುವ ಸ್ವಭಾವವನ್ನು ಹೊಂದಿದ್ದಾಳೆ. ಅವಳು ಎಲ್ಲರೊಂದಿಗೆ ಮನ ಮುಕ್ತತೆಯಿಂದ ಮಾತನಾಡುತ್ತಾಳೆ. ‘ಅದೇ ರೀತಿಯ ಬದಲಾವಣೆ ನನ್ನಲ್ಲೂ ಆಗಿದೆ’, ಎಂದು ನನಗೆ ಅರಿವಾಯಿತು.

ತಾಯಿಯು ತಯಾರಿಸಿದ ಆಹಾರವನ್ನು ಸೇವಿಸಿದ ನಂತರ ಅವಳ ಆಧ್ಯಾತ್ಮಿಕ ತೊಂದರೆ, ಸ್ವಭಾವದೋಷ ಮತ್ತು ಗುಣಗಳ ಪರಿಣಾಮ ನನ್ನ ಮೇಲೆ ಯಾವ ರೀತಿಯ ಆಯಿತು ಎಂದು ನಾನು ಅನುಭವಿಸಿದೆನು. ಆಗ ಒಬ್ಬ ವ್ಯಕ್ತಿಯು ತಯಾರಿಸಿದ ಆಹಾರದಿಂದ ಇತರರ ಮೇಲೆ ಸಹ ಯಾವ ರೀತಿ ಪರಿಣಾಮ ಆಗಬಹುದು ?’, ಎಂದು ನನಗೆ ಅರಿವಾಯಿತು.’

– ಓರ್ವ ಸಾಧಕಿ, ಸನಾತನ ಆಶ್ರಮ, ರಾಮನಾಥಿ, ಗೋವಾ.